ದಕ್ಷಿಣ ಭಾರತದ ಜನಪ್ರಿಯ ನಟಿ ಮಾಳವಿಕಾ ಅವಿನಾಶ್ ಅವರಿಗೆ ಲೇಖಕಿ, ರಾಜ್ಯ ಸಭಾ ಸದಸ್ಯೆ ಸುಧಾ ಮೂರ್ತಿ ಅವರು ಈ ಒಂದು ಕಾರಣದಿಂದ ನಟಿಗೆ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದು, ಸುಧಾ ಮೂರ್ತಿ ಪ್ರೀತಿಯಿಂದ ಕೊಟ್ಟ ಸೀರೆಯನ್ನು ಉಟ್ಟು ಸಂಭ್ರಮಿಸಿದ್ದಾರೆ ಮಾಳವಿಕಾ.
ದಕ್ಷಿಣ ಭಾರತದ ಜನಪ್ರಿಯ ನಟಿ ಮಾಳವಿಕಾ ಅವಿನಾಶ್ ಅವರಿಗೆ ಖಕಿ, ರಾಜ್ಯ ಸಭಾ ಸದಸ್ಯೆ ಸುಧಾ ಮೂರ್ತಿ ಅವರು ಸೀರೆ ನೀಡಿದ್ದು, ಪ್ರೀತಿಯಿಂದ ನೀಡಿದ ಸೀರೆಯ ಕುರಿತು ನಟಿ ಸೋಶಿಯಲ್ ಮಿಡಿಯಾದಲ್ಲಿ ಫೋಟೊಗಳನ್ನು ಶೇರ್ ಮಾಡಿದ್ದು, ಮಾಹಿತಿ ನೀಡಿದ್ದಾರೆ.
27
ಸೀರೆಗಿಂತ ಸೀರೆ ಕೊಟ್ಟವರು ಮುಖ್ಯ
ಮಾಳವಿಕಾ ತಾವು ಸೀರೆ ಉಟ್ಟಿರುವ ಫೋಟೊಗಳ ಜೊತೆಗೂ ಒಂದಷ್ಟು ಬರಹಗಳನ್ನು ಬರೆದಿದ್ದು, ಕೆಲವೊಮ್ಮೆ ಸೀರೆಗಿಂತ, ಸೀರೆ ಕೊಟ್ಟವರು ಮುಖ್ಯ ಎಂದಿದ್ದಾರೆ. ಸುಧಾ ಮೂರ್ತಿಯವರು ಯಾಕೆ ಅಷ್ಟು ಪ್ರೀತಿಯಿಂದ ಸೀರೆ ಕೊಟ್ಟರು ಎನ್ನುವ ಕುರಿತು ಬರೆದುಕೊಂಡಿದ್ದಾರೆ.
37
ಈ ಕಾರಣಕ್ಕೆ ಸೀರೆ ಕೊಟ್ಟ ಸುಧಾ ಮೂರ್ತಿ
ಗೃಹಭಂಗದ ನಂಜಮ್ಮನ ಪಾತ್ರವನ್ನು ಸಾವಿರಾರು ಜನರು ಪ್ರೀತಿಸಿದಂತೆ ಸುಧಾ ಮೂರ್ತಿಯವರು ಸಹ ಇಷ್ಟಪಟ್ಟರು. ಅವರು ರಾತ್ರಿಯಿಡೀ ಗೃಹಭಂಗ ನೋಡಿ, ತುಂಬಾ ನೊಂದು ಕೊಂಡು, ಒಂದು ದಿನ ಬೆಳಿಗ್ಗೆ 5.30 ಕ್ಕೆ ನನಗೆ ಕರೆ ಮಾಡಿ ನನ್ನ ನಟನೆಯನ್ನು ಅವರು ತುಂಬಾ ಇಷ್ಟಪಟ್ಟಿರುವುದಾಗಿಯೂ ಹಾಗೂ, ನನಗೆ ಒಂದು ಸೀರೆ ಕೊಡಲು ಬಯಸಿದ್ದಾರೆ ಅಂತಲೂ ಹೇಳಿದರು.
ಇಳಕಲ್‌ನ ಸೀರೆಯ ಸೌಂದರ್ಯ ಮತ್ತು ಅದಕ್ಕೆ ಹೊಂದಿಕೆಯಾಗುವ ಬ್ಲೌಸ್ ಅನ್ನು ನೋಡಿ. ಸುಧಾ ಮೂರ್ತಿ ಗದಗದವರು ಮತ್ತು ಆದ್ದರಿಂದ ಅವರ ಊರಿನಿಂದ ಬಂದ ಕೈಮಗ್ಗದ ಸೀರೆ ಇದಾಗಿದೆ. ಇದಕ್ಕಿಂತ ದೊಡ್ಡ ಪ್ರಶಸ್ತಿ ನನಗೆ ಇನ್ನೊಂದಿಲ್ಲ ಎಂದಿದ್ದಾರೆ ಮಾಳವಿಕಾ.
57
ಇದೇ ನನಗೆ ರಾಷ್ಟ್ರಪ್ರಶಸ್ತಿ
ವಾಲ್ಮಿಕಿ ಜಯಂತಿಯನ್ನು ನಟಿ ಇದೆ ಇಳಕಲ್ ಸೀರೆಯನ್ನು ಉಟ್ಟಿದ್ದು, ದೃದಯಪೂರ್ತಿಯಾದ ಪ್ರಶಂಸೆಗಿಂತ ದೊಡ್ಡ ಪ್ರಶಸ್ತಿ ಇನ್ನೊಂದಿಲ್ಲ ಎಂದಿದ್ದಾರೆ. ಇದು ನಟನೆಗಾಗಿ ನನಗೆ ಸಿಕ್ಕ ರಾಷ್ಟ್ರ ಪ್ರಶಸ್ತಿ ಅಂದ್ರೆ ಕಡಿಮೆಯೇ ಎಂದು ಹೇಳುವ ಮೂಲಕ ತಮ್ಮ ಸಂತಸವನ್ನು ವ್ಯಕ್ತ ಪಡಿಸಿ. ಧ್ಯನ್ಯೋಸ್ಮಿ ಎಂದಿದ್ದಾರೆ.
67
ಎಸ್.ಎಲ್ ಭೈರಪ್ಪನವರ ಗೃಹಭಂಗ
ಮಹಾನ್ ಲೇಖಕ ಡಾ. ಎಸ್.ಎಲ್. ಭೈರಪ್ಪ ಮತ್ತು ಅಪ್ರತಿಮ ಗಿರೀಶ್ ಕಾಸರವಳ್ಳಿ ಅವರನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ. ಇದನ್ನು ಹಾಲ್ಕೆರೆ ರಾಮಚಂದ್ರ ಚಿತ್ರೀಕರಿಸಿದ್ದಾರೆ ಎಂದು ಹಲವರಿಗೆ ತಿಳಿದಿಲ್ಲದಿರಬಹುದು ಎಂದು ಮಾಳವಿಕಾ ಬರೆದುಕೊಂಡಿದ್ದಾರೆ.
77
ಸೂಪರ್ ಹಿಟ್ ಧಾರಾವಾಹಿ
ಗೃಹಭಂಗ ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು. ಎಸ್.ಎಲ್. ಭೈರಪ್ಪ ಅವರ ಜನಪ್ರಿಯ ಕಾದಂಬರಿ ಗೃಹಭಂಗದ ಕಥೆಯೇ ಇದಾಗಿದ್ದು, ಮಾಳಾವಿಕಾ ಅವರ ನಂಜಿ ಪಾತ್ರ ಭಾರಿ ಪ್ರಶಂಸೆಗೆ ಪಾತ್ರವಾಗಿದ್ದು, ಕಣ್ಣಂಚಲ್ಲಿ ನೀರು ತಂದಿತ್ತು.