ಮದುವೆಯ ನಂತರ ಹುಡುಗಿಯರು ಈ ತಪ್ಪುಗಳನ್ನು ಮಾಡಬಾರದು!

First Published | Oct 14, 2023, 5:16 PM IST

ಮದುವೆಯ ನಂತರ ಸಂಭವಿಸುವ ಸಣ್ಣ ತಪ್ಪುಗಳು ಸಹ ನಿಮ್ಮ ವೈವಾಹಿಕ ಜೀವನವನ್ನು ಹಾಳು ಮಾಡಬಹುದು. ಇದಕ್ಕಾಗಿ, ಮದುವೆಯ ನಂತರ ನೀವು ಕೆಲವು ಪ್ರಮುಖ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. 
 

ಮದುವೆ ಅನ್ನೋದು ಜೀವನದ ಹೊಸ ಅಧ್ಯಾಯ. ಅಂತಹ ಪರಿಸ್ಥಿತಿಯಲ್ಲಿ, ಮದುವೆ ನಂತರ ಹುಡುಗಿಯರ ಜೀವನದಲ್ಲಿ ಅನೇಕ ಬದಲಾವಣೆಗಳಾಗೋದು ಸಾಮಾನ್ಯ. ಅವರ ಮನೆ ಮಾತ್ರವಲ್ಲ, ಅನೇಕ ವಿಷಯಗಳು ಬದಲಾಗುತ್ತವೆ. ಮದುವೆ ನಂತರ ಹೊಸ ಮನೆಯಲ್ಲಿ ಸ್ಥಾನ ಪಡೆಯುವುದು ಅಷ್ಟು ಸುಲಭವಲ್ಲ. ಆವಾಗ ಜೀವನದಲ್ಲಿ ಸಣ್ಣ ಪುಟ್ಟ ಬದಲಾವಣೆಗಳಾಗೋದು ಸಾಮಾನ್ಯ. 
 

ಮದುವೆಯಾದ ನಂತರ ಹೆಣ್ಣು ಮಕ್ಕಳು ಸಂಪೂರ್ಣವಾಗಿ ಬದಲಾಗಬೇಕು ಎಂದು ನಾವು ಹೇಳೋದಿಲ್ಲ. ಆದರೆ ಉತ್ತಮ ವೈವಾಹಿಕ ಜೀವನ ಮದುವೆಯ ನಂತರ (after marriage) ಎಲ್ಲಾ ಹುಡುಗಿಯರು ಯಾವ ತಪ್ಪುಗಳನ್ನು ತಪ್ಪಿಸಬೇಕು ಅನ್ನೋದನ್ನು ತಿಳಿಯೋಣ.
 

Tap to resize

ಹೆತ್ತವರನ್ನು ಮರೆಯಬೇಡಿ.
ಅನೇಕ ಹುಡುಗಿಯರು ಮದುವೆಯ ನಂತರ ತಮ್ಮ ಹೊಸ ಕುಟುಂಬ ಸದಸ್ಯರೊಂದಿಗೆ ಎಷ್ಟು ಕಾರ್ಯನಿರತರಾಗುತ್ತಾರೆ ಎಂದರೆ ಅವರು ತಮ್ಮ ಹೆತ್ತವರೊಂದಿಗೆ ಮಾತನಾಡಲು ಸಹ ಸಾಧ್ಯವಾಗುವುದಿಲ್ಲ. ಮದುವೆಯ ನಂತರ, ನೀವು ನಿಮ್ಮ ಮನೆಯನ್ನು ತೊರೆದಾಗ, ನಿಮ್ಮ ಪೋಷಕರು ನಿಮ್ಮನ್ನು ತುಂಬಾನೆ ಮಿಸ್ ಮಾಡುತ್ತಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ಕುಟುಂಬ ಸದಸ್ಯರೊಂದಿಗೆ ಮಾತನಾಡುತ್ತಲೇ ಇರಬೇಕು.

ಜೀವನಶೈಲಿಯಲ್ಲಿ ಬದಲಾವಣೆ
ನಾವು ಮದುವೆಯಾಗುವ ಮೊದಲು ಸಾಕಷ್ಟು ಮೋಜು ಮಸ್ತಿ ಮಾಡಿರುತ್ತೇವೆ. ನಿಮ್ಮ ಸ್ನೇಹಿತರೊಂದಿಗೆ ತಡರಾತ್ರಿ ಪಾರ್ಟಿ (late night party) ಮಾಡಿ ಅಥವಾ ಮದ್ಯಪಾನ ಮಾಡಿರಬಹುದು. ಮದುವೆಯ ನಂತರ ನೀವು ಈ ಎಲ್ಲ ವಿಷಯಗಳನ್ನು ನಿಯಂತ್ರಿಸಬೇಕು. ಈ ವಿಷಯಗಳಿಂದ ದೂರವಿರಲು ಪ್ರಯತ್ನಿಸಿ. 
 

ಕುಟುಂಬಕ್ಕಾಗಿ ಸಮಯ
ನಿಮ್ಮ ಅತ್ತೆ ಮಾವಂದಿರಿಗಾಗಿ ಸಹ ನೀವು ಸಮಯ ತೆಗೆದುಕೊಳ್ಳಬೇಕಾಗುತ್ತದೆ. ಈಗ ನಿಮ್ಮ ಜೀವನದಲ್ಲಿ ಕೆಲವು ಹೊಸ ಜನರು ಬಂದಿದ್ದಾರೆ. ನೀವು ಇದನ್ನು ಮರೆಯಬಾರದು. ವಾರಾಂತ್ಯದಲ್ಲಿ ನಿಮ್ಮ ಅತ್ತೆ ಮಾವಂದಿರೊಂದಿಗೆ ಸಮಯ ಕಳೆಯಿರಿ.

ಮನೆಕೆಲಸಗಳಲ್ಲಿ ಸಹಾಯ
ಮದುವೆಗೆ ಮೊದಲು, ಎಲ್ಲಾ ಕೆಲಸಗಳನ್ನು ನಿಮ್ಮ ತಾಯಿ ಮಾಡುತ್ತಾರೆ. ಮದುವೆಯ ನಂತರ ಎಲ್ಲವೂ ಬದಲಾಗುತ್ತದೆ. ನೀವು ಕೆಲಸ ಮಾಡುತ್ತಿದ್ದರೆ ಮತ್ತು ಹೆಚ್ಚು ಸಮಯವಿಲ್ಲದಿದ್ದರೆ, ಸಣ್ಣ ಪುಟ್ಟ ಕೆಲಸದಲ್ಲಾದರೂ ಮನೆಯವರಿಗೆ ಸಹಾಯ ಮಾಡೋದನ್ನು ಮರೆಯಬೇಡಿ.
 

ರಾತ್ರಿ ತಡವಾಗಿ ಮನೆಗೆ ಬರಬೇಡಿ
ಮದುವೆಯ ನಂತರ ನೀವು ತಡರಾತ್ರಿ (late night) ಮನೆಗೆ ಬಂದರೆ, ನಿಮ್ಮ ಅತ್ತೆ ಮಾವಂದಿರಿಗೆ ಈ ವಿಷಯ ಇಷ್ಟವಾಗದಿರಬಹುದು. ನೀವು ಎಂದಾದರೂ ತಡವಾಗಿ ಬಂದರೆ, ನೀವು ನಿಮ್ಮ ಕುಟುಂಬ ಸದಸ್ಯರಿಗೆ ಮುಂಚಿತವಾಗಿ ತಿಳಿಸಬೇಕು. 
 

ಕುಟುಂಬದ ಕಾರ್ಯಕ್ರಮಗಳಲ್ಲಿ ಭಾಗಿ 
ಮದುವೆಗೂ ಮುನ್ನ ನಿಮ್ಮ ಕುಟುಂಬದ ಎಲ್ಲಾ ಕಾರ್ಯಕ್ರಮಗಳಲ್ಲಿ  (family function) ನೀವು ಭಾಗಿಯಾಗಿರಬಹುದು. ಅದೇ ರೀತಿ ಮದುವೆಯಾದ ಬಳಿಕ ಸಹ ಗಂಡನ ಕುಟುಂಬದ ಕಾರ್ಯಕ್ರಮಗಳಲ್ಲಿ ಭಾಗಿಯಾಗೋದು ಉತ್ತಮ. ಇದರಿಂದ ಸಂಬಂಧ ಉತ್ತಮವಾಗಿರುತ್ತೆ. 
 

Latest Videos

click me!