ನಂಗೇನು ನೀವು ಬೇರೆ ಹುಡುಗೀರ ನೋಡಿದ್ರೆ ಹೊಟ್ಟೆಕಿಚ್ಚಿಲ್ಲಪ್ಪ: ಪತ್ನಿಯರು ಇದನ್ನು ಸತ್ಯವಾಗ್ಲೂ ಹೇಳ್ತಾರಾ?

First Published | Oct 14, 2023, 11:55 AM IST

ಗಂಡಸ್ರು ಹೆಚ್ಚಾಗಿ ಹೇಳ್ತಾರೆ ನನ್ನ ಹೆಂಡ್ತಿ ಯಾವಾಗ್ಲೂ ಸುಳ್ಳು ಹೇಳ್ತಾರೆ, ಅಥವಾ ನನ್ನ ಗೆಳತಿ ಹೆಚ್ಚಾಗಿ ಸುಳ್ಳು ಹೇಳ್ತಾಳೆ ಅಂತ. ನಿಮ್ಮ ಗೆಳತಿ ಅಥವಾ ಹೆಂಡತಿ ಯಾವ ಸಂದರ್ಭಗಳಲ್ಲಿ ನಿಮಗೆ ಸುಳ್ಳು ಹೇಳಬಹುದು ಎಂದು ನಿಮಗೆ ತಿಳಿದಿದೆಯೇ?
 

ಹುಡುಗೀರು ಹೆಚ್ಚಾಗಿ ಸುಳ್ಳು ಹೇಳ್ತಾರೆ ಎನ್ನುತ್ತಾರೆ ಗಂಡಸರು. ಆದರೆ ಸುಳ್ಳು ಹೇಳೊದಕ್ಕೂ ಒಂದು ಕಾರಣ ಇರುತ್ತೆ ಅಲ್ವಾ? ಹಾಗಿದ್ರೆ ಯಾವ ಸಂದರ್ಭದಲ್ಲಿ ಸುಳ್ಳು ಹೇಳ್ತಾರೆ ಅನ್ನೋ ಕುತೂಹಲ ನಿಮಗಿದ್ರೆ, ಇಲ್ಲಿದೆ ನೋಡಿ ಉತ್ತರ. 
 

ಸುಳ್ಳು ಹೇಳೊದಕ್ಕೆ ಅಚ್ಚರಿಯ ಕಾರಣಗಳು ಇಲ್ಲಿವೆ
ಮಹಿಳೆಯರು ಕೆಲವು ಸಂದರ್ಭಗಳಲ್ಲಿ ಅಥವಾ ಸಮಯದಲ್ಲಿ ತಮ್ಮ ಸಂಗಾತಿಗೆ ಸುಳ್ಳು (lies) ಹೇಳುತ್ತಾರೆ. ಅವರು ಸುಳ್ಳು ಹೇಳಲು ಕಾರಣಗಳ ಬಗ್ಗೆಯೂ ತಿಳಿದು ಕೊಳ್ಳೋಣ. 

Latest Videos


ನನಗೆ ಜೆಲಸ್ ಆಗೋದಿಲ್ಲಪ್ಪಾ
ಸಂಬಂಧದಲ್ಲಿದ್ದ ನಂತರವೂ ನೀವು ಇತರ ಯಾವುದೇ ಹುಡುಗಿ ಜೊತೆ ನೀವು ಮಾತನಾಡಿದ್ರೂ ತನಗೆ ಅಸೂಯೆಯಾಗುವುದಿಲ್ಲ ಎಂದು ಯಾವುದೇ ಹುಡುಗಿ ಹೇಳಿದರೆ, ಅವಳು ಸುಳ್ಳು ಹೇಳುತ್ತಿದ್ದಾಳೆ ಎನ್ನೋದು ತಿಳಿದಿರಲಿ.

ಸಂಗಾತಿಯನ್ನು ಟೆಸ್ಟ್ ಮಾಡೋದಕ್ಕೆ
ಹುಡುಗಿಯರು ತಮ್ಮ ಸಂಗಾತಿಯ (partner) ಮನೋ ಧರ್ಮವನ್ನು ಪರೀಕ್ಷಿಸಲು ಈ ರೀತಿ ಸುಳ್ಳು ಹೇಳುತ್ತಾರೆ. ಆದ್ದರಿಂದ, ನೀವು ಅವರ ಮುಂದೆ ಇತರ ಹುಡುಗಿಯರನ್ನು ಹೊಗಳುವುದನ್ನು ತಪ್ಪಿಸಬೇಕು. 

ರಿಲೇಶನ್ ಶಿಪ್ ಅಂದ್ರೆ ಇಷ್ಟ ಇಲ್ಲ ಅಂತಾರೆ, 
ಹೆಚ್ಚಿನ ಹುಡುಗಿಯರು ಸಂಬಂಧಕ್ಕೆ (relationship) ಬರುವ ಮೊದಲು ಅವರು ಇನ್ನೂ ಸಂಬಂಧಕ್ಕೆ ಸಿದ್ಧವಾಗಿಲ್ಲ ಎಂದು ಸುಳ್ಳು ಹೇಳುತ್ತಾರೆ. ಯಾಕಂದ್ರೆ ಅವರಿಗೆ ನೀವಂದ್ರೆ ಇಷ್ಟ, ಆದರೆ ನಿಮ್ಮ ಬಗ್ಗೆ ಸರಿಯಾಗಿ ತಿಳಿಯದೇ ಅವರು ಯಾವ ಸಂಬಂಧ ಒಪ್ಪೋದಕ್ಕೂ ರೆಡಿ ಇರೋದಿಲ್ಲ.

ತಾಳ್ಮೆಯ ಪರೀಕ್ಷೆ
ಕೆಲವೊಮ್ಮೆ ಹುಡುಗಿಯರು ನಿಮ್ಮ ತಾಳ್ಮೆಯ ಪರೀಕ್ಷೆ ನಡೆಸಲು ಸುಳ್ಳು ಹೇಳುತ್ತಾರೆ. ಒಂದು ವೇಳೆ ನೀವು ಯಾಮಾರಿದ್ರೆ ಅವರು ನಿಮ್ಮಿಂದ ದೂರ ಆಗೋದು ಗ್ಯಾರಂಟಿ. ಹಾಗಾಗಿ ತಾಳ್ಮೆ ಇರಲಿ.

ಹುಡುಗರ ಗುಣ ತಿಳಿಯಲು
ಕೆಲವೊಮ್ಮೆ ಹುಡುಗಿಯರು ಹೊಟೇಲ್ ಹೋದಾಗ, ಬಿಲ್ ಪೇ ಮಾಡುವ ಬಗ್ಗೆ ಸುಳ್ಳು ಹೇಳುತ್ತಾರೆ. ತಾವು ಪೇ ಮಾಡೋದಿಲ್ಲ ಎಂದು ಹೇಳುತ್ತಾರೆ. ಈ ಸುಳ್ಳಿನ ಸಹಾಯದಿಂದ, ಹುಡುಗಿಯರು ಹುಡುಗರ ಸ್ವಭಾವವನ್ನು ಪರಿಶೀಲಿಸುತ್ತಾರೆ. 

ಯಾವುದೇ ಸಮಸ್ಯೆ ಬಾರದಿರಲು ಸುಳ್ಳು ಹೇಳ್ತಾರೆ
ಸಂಬಂಧದಲ್ಲಿ ಯಾವುದೇ ರೀತಿಯ ತೊಡಕುಗಳನ್ನು ತಪ್ಪಿಸಲು, ಹುಡುಗಿಯರು ಇಲ್ಲಿವರೆಗೆ ನಾನು ಯಾರನ್ನು ಲವ್ ಮಾಡಿಲ್ಲ, ಇದೇ ನನ್ನ ಮೊದಲ ರಿಲೇಶನ್ ಶಿಪ್ ಎಂದು ಸುಳ್ಳು ಹೇಳುತ್ತಾರೆ. 

click me!