ಹೆಚ್ಚು ಕಂಟ್ರೋಲ್ ಮಾಡುವ ಹುಡುಗ
ಕೆಲವು ಹುಡುಗರು ತಮ್ಮ ಸಂಗಾತಿಯ ಮೇಲೆ ಹೆಚ್ಚಿನ ಅಧಿಕಾರವನ್ನು ಹೊಂದಲು ಪ್ರಯತ್ನಿಸುತ್ತಾರೆ. ಹುಡುಗರು ತಮ್ಮ ಸಂಗಾತಿಯ ದೈನಂದಿನ ಜೀವನದಲ್ಲಿ ಸಾಕಷ್ಟು ವಿಷಯಗಳನ್ನು ಕಂಟ್ರೋಲ್ ಮಾಡಬಹುದು (controling people), ಉದಾಹರಣೆಗೆ ಹುಡುಗಿ ಯಾರೊಂದಿಗೆ ಮಾತನಾಡುತ್ತಾಳೆ, ಅವಳು ಎಲ್ಲಿಗೆ ಹೋಗುತ್ತಾಳೆ, ಅಥವಾ ಅವಳು ಏನು ಧರಿಸುತ್ತಾಳೆ ಅನ್ನೋದನೆಲ್ಲಾ, ಆದರೆ ಹುಡುಗಿಯರು ಇದು ಯಾವುದನ್ನು ಇಷ್ಟಪಡುವುದಿಲ್ಲ. ಈ ಅಭ್ಯಾಸವನ್ನು ಸುಧಾರಿಸಿ, ನಿಮ್ಮ ಸಂಗಾತಿಗೆ ಸ್ವಾತಂತ್ರ್ಯವನ್ನು ನೀಡಿ ಮತ್ತು ಅವರನ್ನು ನಂಬಿ. ಹುಡುಗಿಗೆ ತನ್ನದೇ ಆದ ಆಸೆಗಳು ಮತ್ತು ಆದ್ಯತೆಗಳು ಇರಬಹುದು. ಅದನ್ನು ಗೌರವಿಸಿ, ಇದರಿಂದ ಸಂಬಂಧ ಸ್ಟ್ರಾಂಗ್ ಆಗುತ್ತೆ.