ಡಿಮಾರ್ಟ್ ಶಾಪಿಂಗ್‌ಗೆ ಹೋದ ಗಂಡನಿಗೆ ಎಚ್ಚರಿಕೆ ಸಂದೇಶ ಕಳುಹಿಸಿದ ಹೆಂಡತಿ!

Published : Oct 28, 2025, 11:45 AM IST

DMart Shopping: ಡಿ ಮಾರ್ಟ್‌ಗೆ ಶಾಪಿಂಗ್‌ಗೆ ಹೋದ ಗಂಡನಿಗೆ ಪತ್ನಿ ದಿನಸಿ ಪಟ್ಟಿಯ ಜೊತೆಗೆ ಒಂದು ಎಚ್ಚರಿಕೆಯ ಸಂದೇಶವನ್ನೂ ನೀಡಿದ್ದಾರೆ. ಪತ್ನಿಯ ಸಂದೇಶವಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

PREV
15
ಡಿ ಮಾರ್ಟ್

ಡಿ ಮಾರ್ಟ್ ಮಧ್ಯಮ ವರ್ಗದ ನೆಚ್ಚಿನ ಶಾಪಿಂಗ್ ತಾಣವಾಗಿದೆ. ಡಿ ಮಾರ್ಟ್‌ ಕಡಿಮೆ ದರದಲ್ಲಿ ಗುಣಮಟ್ಟದ ಸರಕುಗಳನ್ನು ನೀಡುವುದರಿಂದ ಸಂಬಳ ಆಗ್ತಿದ್ದಂತೆ ಜನರು ಡಿಮಾರ್ಟ್‌ಗೆ ಹೋಗುತ್ತಾರೆ. ಡಿ ಮಾರ್ಟ್ ಶಾಪಿಂಗ್‌ಗೆ ಹೋದ ಗಂಡನಿಗೆ ಮಹಿಳೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಹೆಂಡ್ತಿಯ ಸಂದೇಶ ಬರಹವುಳ್ಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

25
ಚೀಟಿ ಹಿಂದೆ ಪತ್ನಿಯ ಸಂದೇಶ

ವ್ಯಕ್ತಿಯೊಬ್ಬರು ಡಿಮಾರ್ಟ್‌ನಲ್ಲಿ ವಸ್ತುಗಳನ್ನು ಖರೀದಿಸುವಾಗ ಪತ್ನಿ ಬರೆದುಕೊಟ್ಟ ಚೀಟಿಯನ್ನು ಗೆಳೆಯನಿಗೆ ತೋರಿಸುತ್ತಾರೆ. ಹಾಗೆಯೇ ತಾವು ಖರೀದಿಸಿರುವ ವಸ್ತುಗಳ ಬಾಸ್ಕೆಟ್ ತೋರಿಸುತ್ತಾರೆ. ದಿನಸಿ ವಸ್ತುಗಳನ್ನು ಪಟ್ಟಿ ಮಾಡಿದ ಚೀಟಿ ಹಿಂದೆ ಪತ್ನಿಯ ಸಂದೇಶವಿತ್ತು. ಆ ಸಂದೇಶ ನೋಡಿ ವ್ಯಕ್ತಿ ನಕ್ಕು, ಬೇಗ ಇಲ್ಲಿಂಗ ಹೋಗೋಣ ಎಂದು ಗೆಳೆಯನಿಗೆ ಹೇಳುತ್ತಾರೆ.

35
ದಿನಸಿ ಚೀಟಿ

ಈ ವಿಡಿಯೋವನ್ನು travel_with_raghava ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಶೇರ್ Strict Wife ಶೀರ್ಷಿಕೆಯಡಿ ಮಾಡಿಕೊಳ್ಳಲಾಗಿದೆ. ಡಿಮಾರ್ಟ್‌ನಿಂದ ಯಾವೆಲ್ಲಾ ಏನು ತೆಗೆದುಕೊಂಡು ಬರಬೇಕೆಂದು ರಾಘವೇಂದ್ರ ಅಬರಿಗೆ ಪತ್ನಿ ತೇಜಶ್ರೀ ಪಟ್ಟಿಯೊಂದನ್ನು ಮಾಡಿಕೊಟ್ಟಿದ್ದಾರೆ. ದಿನಸಿ ಪದಾರ್ಥದ ಜೊತೆ ಶಾಂಪೂ, ಸೋಪ್ ಸೇರಿದಂತೆ ಎಲ್ಲಾ ವಸ್ತುಗಳ ಹೆಸರು ಮತ್ತು ಪ್ರಮಾಣವನ್ನು ಸ್ಪಷ್ಟವಾಗಿ ಚೀಟಿಯಲ್ಲಿ ನಮೂದಿಸಿದ್ದಾರೆ.

ಇದನ್ನೂ ಓದಿ: ಡಿ ಮಾರ್ಟ್‌ನಲ್ಲಿ ಸರ್ಪ್ರೈಸ್ ಆಫರ್; ಹಲವು ರೀತಿಯ ಆಫರ್, ಗೃಹಿಣಿಯರು ಫುಲ್ ಖುಷ್!

45
ಮನೆಗೆ ಸೇರಿಸುವದಿಲ್ಲ

ಚೀಟಿ ಹಿಂಭಾಗದಲ್ಲಿ ಬೇರೆ ಪ್ರೊಡಕ್ಟ್ ತೆಗೆದುಕೊಂಡು ಬಂದ್ರೆ ಮನೆಗೆ ಸೇರಿಸುವದಿಲ್ಲ ಎಂದು ಬರೆದಿದ್ದಾರೆ. ಈ ಚೀಟಿಯನ್ನು ಗೆಳೆಯ ಶೇಖರ್‌ಗೆ ತೋರಿಸುತ್ತಾ, ಇದು ತೇಜು ಬರೆದುಕೊಟ್ಟ ಪಟ್ಟಿ. ಹಿಂದೆ ಏನೋ ಬರೆದಿದೆ ಅಲ್ಲವಾ ಅಂತ ನೋಡಿದ್ರೆ ಈ ರೀತಿ ಬರೆದಿದ್ದಾರೆ. ಡಿಮಾರ್ಟ್‌ಗೆ ಬಂದಾಗೆಲ್ಲಾ ಕೆಲವೊಮ್ಮೆ ಬೇಡವಾದ ವಸ್ತು ತೆಗೆದುಕೊಂಡು ಹೋಗುತ್ತೇನೆ. ಅದಕ್ಕೆ ಹೀಗೆ ಬರೆದಿದ್ದಾರೆ ಎಂದು ಹೇಳುತ್ತಾರೆ.

ಇದನ್ನೂ ಓದಿ: ನಿಮ್ಮ ಸ್ಥಳದಲ್ಲಿ ಡಿ ಮಾರ್ಟ್ ಬ್ರ್ಯಾಂಚ್ ಆರಂಭಿಸಬಹುದು, ಅರ್ಜಿ ಸಲ್ಲಿಸೋದು ಹೇಗೆ?

55
ಯಾಕೆ ಅಧಿಕ ಶಾಪಿಂಗ್?

ಡಿಮಾರ್ಟ್‌ನಲ್ಲಿ ಕಡಿಮೆ ಬೆಲೆ ಜೊತೆಯಲ್ಲಿ ಹೆಚ್ಚುವರಿ ರಿಯಾಯ್ತಿಗಳನ್ನು ನೀಡಲಾಗಿರುತ್ತದೆ. ಹಾಗಾಗಿ ಗ್ರಾಹಕರು ಆಕರ್ಷಕ ಆಫರ್ ಲಾಭ ತಮ್ಮದಾಗಿಸಿಕೊಳ್ಳಲು ಕೆಲವೊಂದು ವಸ್ತುಗಳನ್ನು ಖರೀದಿಸುತ್ತಾರೆ. ಮನೆಗೆ ತಂದ್ಮೇಲೆ ಆ ವಸ್ತುಗಳನ್ನು ಏನು ಮಾಡಬೇಕೆಂದು ತೋಚದೇ ಹಾಗೆಯೇ ಉಳಿದುಕೊಂಡಿರುತ್ತವೆ. ಹಾಗಾಗಿ ಗಂಡನಿಗೆ ಈ ಸಂದೇಶ ಕಳುಹಿಸಿರಬಹುದು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ವೈರಲ್ ವಿಡಿಯೋ ಲಿಂಕ್ ಕೆಳಗೆ ನೀಡಲಾಗಿದೆ 

https://www.instagram.com/p/DPJiu9ED5KW/

ಇದನ್ನೂ ಓದಿ: D Martನಲ್ಲಿ ಯಾವಾಗ ಶಾಪಿಂಗ್ ಮಾಡಿದ್ರೆ ಹೆಚ್ಚು ಲಾಭ ಸಿಗುತ್ತೆ? ಇಲ್ಲಿದೆ ಸೂಪರ್ ಟಿಪ್ಸ್

Read more Photos on
click me!

Recommended Stories