ಡಿಮಾರ್ಟ್ ಆನ್‌ಲೈನ್ ಶಾಪಿಂಗ್‌ನಲ್ಲಿ ಸ್ಟೋರ್‌ಗಿಂತ ಅತೀ ಕಡಿಮೆ ಬೆಲೆ ಸೇಲ್ ಆಫರ್
ಡಿಮಾರ್ಟ್ ಸ್ಟೋರ್ ಪ್ರತಿ ದಿನ ಗ್ರಾಹಕರಿಂದ ಗಿಜಿಗಿಡುತ್ತೆ. ಕಾರಣ ಅತೀ ಕಡಿಮೆ ಬೆಲೆಗೆ ಎಲ್ಲಾ ಅಗತ್ಯವಸ್ತಗಳು ಲಭ್ಯವಿದೆ. ವಿಶೇಷ ಅಂದರೆ ಡಿಮಾರ್ಟ್ ಆನ್‌ಲೈನ್ ಶಾಪಿಂಗ್‌ನಲ್ಲಿ ಸ್ಟೋರ್‌ಗಿಂತ ಕಡಿಮೆ ಬೆಲೆಗೆ ಲಭ್ಯ.

ಡಿಮಾರ್ಟ್ ಸ್ಟೋರ್ ಬೆಲೆ
ತಿಂಗಳ ಸಾಮಾನಿಗೆ ಡಿಮಾರ್ಟ್‌ಗೆ ಜನಸಂದಣಿ ಜಾಸ್ತಿ. ಬೇರೆ ಅಂಗಡಿಗಿಂತ ಇಲ್ಲಿ ಕಡಿಮೆ ಬೆಲೆ. ಮಧ್ಯಮ ವರ್ಗದವರಿಗೆ ಡಿಮಾರ್ಟ್ ವರದಾನ. ಹಬ್ಬದ ಸೀಸನ್‌ನಲ್ಲಿ ಅಂಗಡಿ ತುಂಬಿ ತುಳುಕುತ್ತೆ. ಶನಿವಾರ, ಭಾನುವಾರ ಡಿಮಾರ್ಟ್ ತುಂಬಿ ತುಳುಕುತ್ತದೆ. ಕೈಗೆಟುಕುವ ಬೆಲೆ, ಭಾರಿ ಡಿಸ್ಕೌಂಟ್ ಬೆಲೆಯಲ್ಲಿ ವಸ್ತುಗಳನ್ನು ಖರೀದಿಸಲು ಜನ ಡಿಮಾರ್ಟ್ ಸ್ಟೋರ್‌ಗೆ ಆಗಮಿಸುತ್ತಾರೆ.
ಡಿಮಾರ್ಟ ಆನ್‌ಲೈನ್ ಶಾಪಿಂಗ್
ಡಿಮಾರ್ಟ್ ದೂರ ಇದ್ರೆ ಆನ್‌ಲೈನ್‌ನಲ್ಲಿ ತಗೊಳ್ಳಿ. ಡಿಮಾರ್ಟ್ ಸ್ಟೋರ್ ಮಾತ್ರವಲ್ಲ ಆನ್‌ಲೈನ್ ಆಯ್ಕೆಯೂ ಲಭ್ಯವಿದೆ. ಅಂಗಡಿಗಿಂತ ಆನ್‌ಲೈನ್‌ನಲ್ಲಿ ಇನ್ನೂ ಕಡಿಮೆ ಬೆಲೆ. ಸ್ಪೆಷಲ್ ಸೇಲ್‌ನಲ್ಲಿ ರಿಯಾಯಿತಿ ಇನ್ನೂ ಜಾಸ್ತಿ. ಮನೆ ಬಾಗಿಲಿಗೆ ಡೆಲಿವರಿ.
ಡಿಮಾರ್ಟ್ ರೆಡಿ ಅಂದ್ರೆ ಡಿಮಾರ್ಟ್ ಆನ್‌ಲೈನ್ ಸ್ಟೋರ್. ಆನ್‌ಲೈನ್, ಆಫ್‌ಲೈನ್ ಎರಡರಲ್ಲೂ ಕಡಿಮೆ ಬೆಲೆ. ಆನ್‌ಲೈನ್‌ನಲ್ಲಿ ಸ್ಪೆಷಲ್ ಆಫರ್‌ಗಳು ಸಿಗುತ್ತೆ. ಹಲವು ಉತ್ಪನ್ನಗಳಿಗೆ ಆನ್‌ಲೈನ್ ಮೂಲಕ ಖರೀದಿಸಿದರೆ ಮತ್ತಷ್ಟು ಕಡಿಮೆ ಬೆಲೆಗೆ ಲಭ್ಯವಾಗಲಿದೆ. ಡೆಲಿವರಿ ಚಾರ್ಜ್ ಅಪ್ಲೈ ಆಗುವ ಸಾಧ್ಯತೆ ಇದೆ.
ಜಿಯೋ ಮಾರ್ಟ್ ಪೈಪೋಟಿ
ಜಿಯೋ ಮಾರ್ಟ್ ಡಿಮಾರ್ಟ್‌ಗೆ ಪೈಪೋಟಿ. ಡಿ ಮಾರ್ಟ್ ಆನ್‌ಲೈನ್ ಶಾಪಿಂಗ್ ಜಿಯೋ ಮಾರ್ಟ್‌ಗೆ ಪೈಪೋಟಿ ನೀಡುತ್ತಿದೆ. ಎರಡರಲ್ಲೂ ಕ್ವಾಲಿಟಿ ಚೆನ್ನಾಗಿದೆ, ಬೆಲೆ ಕಡಿಮೆ. ನಿಮಗೆ ಯಾವುದು ಸೂಟ್ ಆಗುತ್ತೋ ಅದನ್ನ ಆರಿಸಿಕೊಳ್ಳಿ.
2002 ರಲ್ಲಿ ರಾಧಾಕಿಶನ್ ದಮಾನಿ ಡಿಮಾರ್ಟ್ ಆರಂಭಿಸಿದ್ದರು. ಈಗ ದೇಶದಲ್ಲಿ 234 ಡಿಮಾರ್ಟ್ ಅಂಗಡಿಗಳಿವೆ. ಕಡಿಮೆ ಬೆಲೆ, ಉತ್ತಮ ಗುಣಮಟ್ಟದ ಸಾಮಾನುಗಳು ಸಿಗುತ್ತವೆ. ಡಿಮಾರ್ಟ್ ಭಾರತದ ಅತೀ ದೊಡ್ಡ ರೇಟಲ್ ಮಳಿಗೆಯಾಗಿ ಹೊರಹೊಮ್ಮಿದೆ.