ಸೊಲೊಗಾಮಿಯ ಅರ್ಥ ನಿಮಗೆ ತಿಳಿದಿದೆಯೇ? ಯಾಕೆ ಈ ಟ್ರೆಂಡ್ ಹೆಚ್ಚುತ್ತಿದೆ?

First Published Jun 6, 2022, 7:55 PM IST

ಇತ್ತೀಚಿನ ದಿನಗಳಲ್ಲಿ ಸೊಲೊಗಾಮಿ ಎಂಬ ಪದವು ಭಾರಿ ಸದ್ದು ಮಾಡುತ್ತಿದೆ. ಗುಜರಾತಿನ ಕ್ಷಮಾ ಬಿಂದು (Kshama Bindu) ಸೊಲೋಗಾಮಿ ತನ್ನದಾಗಿಸಿಕೊಂಡಿದ್ದಾರೆ, ಆ ಮೂಲಕ ಸುದ್ದಿಗಳ ಕೇಂದ್ರ ಬಿಂದುವಾಗಿದ್ದಾರೆ. ಹಾಗಾದ್ರೆ ಸೊಲೊಗಾಮಿ ಎಂದರೇನು ಮತ್ತು ಅದು ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಏಕೆ ಹೆಚ್ಚು ಪ್ರಚಲಿತದಲ್ಲಿದೆ ಅನ್ನೋ ಕುತೂಹಲ ನಿಮಗಿದ್ದರೆ, ಮುಂದೆ ಓದಿ…

ನೀವು ಏಕಪತ್ನಿತ್ವ ಅಥವಾ ಬಹುಪತ್ನಿತ್ವದ ಬಗ್ಗೆ ಕೇಳಿರಬಹುದು, ಆದರೆ ನೀವು ಎಂದಾದರೂ ಸೊಲೊಗಾಮಿಯ (sologamy) ಬಗ್ಗೆ ಕೇಳಿದ್ದೀರಾ? ಇತ್ತೀಚಿನ ದಿನಗಳಲ್ಲಿ, ಸೊಲೊಗಾಮಿಯ ಬಗ್ಗೆ ಎಲ್ಲೆಡೆ ತುಂಬಾನೆ ಚರ್ಚೆಯಾಗುತ್ತಿದೆ. ಕ್ಷಮಾ ಬಿಂದು ಎಂಬ ಮಹಿಳೆ ಕೂಡ ಸೋಲೊಗಾಮಿಯಿಂದಾಗಿಯೇ ನಿರಂತರವಾಗಿ ಸುದ್ದಿಯಲ್ಲಿದ್ದಾಳೆ. ಆದರೆ, ಸೊಲೊಗಾಮಿ ಎಂದರೇನು ಮತ್ತು ಅದನ್ನು ಎಲ್ಲೆಡೆ ಏಕೆ ಚರ್ಚಿಸಲಾಗುತ್ತಿದೆ? ಹೆಚ್ಚಿನ ಮಹಿಳೆಯರು ಸೊಲೊಗಾಮಿಯನ್ನು ಏಕೆ ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಕೊಳ್ಳೋಣ.
 

ಸೊಲೊಗಾಮಿ ಎಂದರೇನು?
ಸೊಲೊಗಾಮಿ ಎಂದರೆ ಒಬ್ಬ ವ್ಯಕ್ತಿಯು ತನ್ನನ್ನು ತಾನೇ ಮದುವೆಯಾಗುವುದು ಎಂದರ್ಥ. ಸೊಲೊಗಾಮಿಯನ್ನು ಒಟೊಗಾಮಿ (otogamy) ಎಂದೂ ಸಹ ಕರೆಯಲಾಗುತ್ತದೆ. ಸೊಲೊಗಾಮಿ ಆಗುವವರು ಇದು ತಮ್ಮ ಮೌಲ್ಯವನ್ನು ಅರ್ಥಮಾಡಿಕೊಳ್ಳುವ ಮತ್ತು ತಮ್ಮನ್ನು ತಾವು ಪ್ರೀತಿಸುವ ಒಂದು ಮಹತ್ತರ ಹೆಜ್ಜೆ ಎಂದು ಅವರು ಹೇಳುತ್ತಾರೆ. ಇದನ್ನು ಸ್ವಯಂ-ವಿವಾಹ ಎಂದೂ ಕರೆಯಬಹುದು. 

 ಸೊಲೊಗಾಮಿ ಎಂಬುದು ಸೋಲೋ ಟ್ರಾವೆಲ್ ಇದ್ದ ಹಾಗೆ. ಇದೇನೂ ಹೊಸದಲ್ಲ. 1996ರಲ್ಲಿ ಡೆನ್ನಿಸ್ ರಾಡ್‌ಮನ್ ಎಂಬ ತಾರೆ ತನ್ನನ್ನೇ ತಾನು ಮದುವೆಯಾಗಿದ್ದ. ಆದರೆ ಇತ್ತೀಚಿನ ದಿನಗಳಲ್ಲಿ ಇದು ಮಹಿಳೆಯರಲ್ಲಿ ಇದು ಹೆಚ್ಚು ಪ್ರಚಲಿತದಲ್ಲಿದೆ. ಮಹಿಳೆಯರು ತಮ್ಮ ಕಂಪನಿಯನ್ನು ತಾವು ಎಂಜಾಯ್ ಮಾಡೋದನ್ನು ಇಷ್ಟಪಡುತ್ತಾರೆ, ಅದಕ್ಕಾಗಿಯೇ ಸೊಲೊಗಾಮಿಯನ್ನು ಹೆಚ್ಚಾಗಿ ಅಳವಡಿಸಿಕೊಳ್ಳುತ್ತಿದ್ದಾರೆ. 

ಜಾಗತಿಕವಾಗಿ, ಇದು ಹೆಚ್ಚಾಗಿ ಮಹಿಳೆಯರಲ್ಲಿ ಪ್ರಚಲಿತದಲ್ಲಿದೆ, ಅಂದರೆ ಮಹಿಳೆಯರು ಅದನ್ನು ಅಳವಡಿಸಿಕೊಳ್ಳುವಲ್ಲಿ ಹೆಚ್ಚು ಒಲವು ತೋರಿಸುತ್ತಿದ್ದಾರೆ ಎಂದು ಅರ್ಥ. ಸದ್ಯ ಸುದ್ದಿಯಲ್ಲಿರುವ ಕ್ಷಮಾ ಬಿಂದುವಿನ (kshama Bindu) ಬಗ್ಗೆ ನೀವು ಕೇಳಿರಬಹುದು, ಅದರ ಬಗ್ಗೆ ಅಚ್ಚರಿಯನ್ನು ವ್ಯಕ್ತಪಡಿಸಿರಬಹುದು, ಆದ್ರೆ ಯಾಕೆ ಈ ರೀತಿ ಮದುವೆಯಾಗಿರೋದು?

ಗುಜರಾತ್ ಮೂಲದ ಕ್ಷಮಾ ಬಿಂದುಗೆ 24 ವರ್ಷ, ಈಕೆ ಜೂನ್ 11 ರಂದು ಮದುವೆಯಾಗಲಿದ್ದಾಳೆ, ಅದಕ್ಕಾಗಿ ಕ್ಷಮಾ ಸಕಲ ಸಿದ್ಧತೆಯನ್ನು ಸಹ ಮಾಡುತ್ತಿದ್ದಾರೆ. ಮದುವೆಯಲ್ಲಿ ಎಲ್ಲ ಸಂಪ್ರದಾಯಗಳು ನಡೆಯಲಿವೆ. ಕ್ಷಮಾ, ಸಿಂಧೂರವನ್ನಿಟ್ಟುಕೊಳ್ಳಲಿದ್ದಾಳೆ. ಹಾಗೆಯೇ ಸಪ್ತಪದಿ ತುಳಿಯಲಿದ್ದಾಳೆ.  ಆದ್ರೆ ಮದುವೆಯಲ್ಲಿ ವರನಿರುವುದಿಲ್ಲ. ಜೊತೆಗೆ ವರನ ಮೆರವಣಿಗೆಯಿರೋದಿಲ್ಲ. ಬದಲಾಗಿ ಆಕೆ ತನ್ನನ್ನು ತಾನೆ ಮದುವೆಯಾಗುತ್ತಿದ್ದಾಳೆ. 
 

ಈ ಕುರಿತು ತನ್ನ ಮನದಾಳದ ಮಾತುಗಳನ್ನು ಹೇಳುವ ಕ್ಷಮಾ 'ನಾನು ಎಂದಿಗೂ ಮದುವೆಯಾಗಲು ಬಯಸಲಿಲ್ಲ. ಆದರೆ ವಧು ಆಗಬೇಕೆಂಬ ಬಯಕೆ ಇತ್ತು. ಹಾಗಾಗಿ ನನ್ನನ್ನು ನಾನೇ ಮದುವೆಯಾಗಲು ನಿರ್ಧರಿಸಿದೆ. ದೇಶದಲ್ಲಿ ಯಾವುದಾದ್ರೂ ಮಹಿಳೆ ತನ್ನನ್ನು ತಾನು ಮದುವೆಯಾಗಿದ್ದಾಳೆಯೇ ಎಂದು ನಾನು ಹುಡುಕುವ ಪ್ರಯತ್ನ ನಡೆಸಿದೆ. ಆದ್ರೆ ಯಾವುದೇ ಮಹಿಳೆ ಇದುವರೆಗೆ ಈ ಕೆಲಸ ಮಾಡಿಲ್ಲ. ಸ್ವ ವಿವಾಹ (self marriage) ಆಗುತ್ತಿರುವ ಭಾರತದ ಪ್ರಥಮ ಮಹಿಳೆ ನಾನು ಎನ್ನು ಖುಷಿಯಿಂದಲೇ ಹೇಳುತ್ತಾರೆ ಕ್ಷಮಾ. 

ಹಾಗಿದ್ರೆ ಮಹಿಳೆಯರು ಏಕೆ ಸೊಲೊಗಾಮಿ ಆಗ್ತಿದ್ದಾರೆ?
ಈಗ ಹೆಚ್ಚಿನ ಮಹಿಳೆಯರು ಸೊಲೊಗಾಮಿ ಕಡೆಗೆ ಏಕೆ ಒಲವು ತೋರುತ್ತಿದ್ದಾರೆ ಅಥವಾ ತಮ್ಮನ್ನು ತಾವು ಯಾಕೆ ಮದುವೆಯಾಗುತ್ತಿದ್ದಾರೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮಹಿಳೆಯರು ಸ್ವ ವಿವಾಹವಾಗಲು ಹಲವಾರು ಕಾರಣಗಳಿರಬಹುದು. ಅವುಗಳಲ್ಲಿ ಒಂದಿಷ್ಟನ್ನು ನಾವು ನಿಮಗಿಲ್ಲಿ ಹೇಳ್ತೀವಿ ಕೇಳಿ… 
 

ಅನೇಕ ಮಹಿಳೆಯರು ಸೊಲೊಗಾಮಿಯತ್ತ ಒಲವು ತೋರುತ್ತಿದ್ದಾರೆ ಏಕೆಂದರೆ ಅವರು ಸಂಗಾತಿಯ ಜೊತೆ ಇರುವಾಗ ಅನುಭವಿಸೋಕ್ಕಿಂತ ಹೆಚ್ಚಿನ ಸಂತೋಷವನ್ನು ಅವರು ಏಕಾಂಗಿಯಾಗಿ ಇದ್ದಾಗ ಅನುಭವಿಸುತ್ತಾರೆ ಎಂದು ಅಂದುಕೊಳ್ಳುತ್ತಾರೆ. ಆದುದರಿಂದ ಸೊಲೊಗಾಮಿಯತ್ತ ಒಲವು ತೋರುತ್ತಿದ್ದಾರೆ.

ಹುಡುಗನನ್ನು ಮದುವೆಯಾಗಲು ಬಯಸದ ಅನೇಕ ಹುಡುಗಿಯರು ಇದ್ದಾರೆ, ಅವರು ಸೊಲೊಗಾಮಿಯನ್ನು ಸ್ವೀಕರಿಸುತ್ತಿದ್ದಾರೆ.  ಇವರು ಯಾವುದೇ ವ್ಯಕ್ತಿ ಜೊತೆ ಅಲ್ಲ, ಬದಲಾಗಿ ತಮ್ಮಲ್ಲಿ ತಾವು ಹ್ಯಾಪಿಯಾಗಿರುವುದರಲ್ಲಿ (happy life) ನೆಮ್ಮದಿ ಕಂಡುಕೊಳ್ಳುತ್ತಿದ್ದಾರೆ. 

ಸರಿಯಾದ ಹುಡುಗನ ಹುಡುಕಾಟ ನಡೆಸಿ ಸೋತಾಗ, ಅನೇಕ ಮಹಿಳೆಯರು ತಮ್ಮನ್ನು ತಾವು ಮದುವೆಯಾಗುವ ಮೂಲಕ ನೆಮ್ಮದಿಯ ನಿಟ್ಟುಸಿರು ಬಿಡಬಹುದು ಎಂದು ಅಂದುಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹೆಚ್ಚಿನ ಫ್ರೀಡಮ್ ನ್ನು ಇಷ್ಟ ಪಡುತ್ತಿದ್ದು, ಅದಕ್ಕಾಗಿ ತಮ್ಮ ಕಂಪನಿಯನ್ನು ತಾವು ಎಂಜಾಯ್ ಮಾಡ್ತಾರೆ. 

ಹಲವಾರು ವರ್ಷಗಳಿಂದ ನಡೆಯುತ್ತಿರುವ ನಂಬಿಕೆಗಳಿಗೆ ಅಂಟಿಕೊಳ್ಳುವ ಬದಲು ಮಹಿಳೆಯರು ಎಲ್ಲಾ ಸಂಪ್ರದಾಯಗಳನ್ನ ದಾಟಿ ಮುಂದೆ ಸಾಗುತ್ತಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ, ಸೊಲೊಗಾಮಿ ಎಂಬುದು ಮದುವೆಯಂತಹ ಕುಟುಂಬದ ಒತ್ತಡವನ್ನು ನಿವಾರಿಸಲು ಅವರಿಗೆ ಮಾರ್ಗವಾಗಬಹುದು. 

click me!