ಟ್ರಿಕ್ಸ್ ಹಳೆಯದಾದರೇನು? ಪ್ರೀತಿಯನ್ನು ಗೆಲ್ಲಿಸೋದು ಇವೇ!

First Published | Jun 5, 2022, 2:56 PM IST

ಇಂದಿನ ಯುವಕರು ತುಂಬಾ ಫಾಸ್ಟ್ ಥಿಂಕಿಂಗ್ (Fast Thinking) ಹೊಂದಿದ್ದಾರೆ. ಎಲ್ಲಾ ವಿಷಯದಲ್ಲೂ ಅರ್ಜೆಂಟ್, ರಿಲೇಶನ್‌ಶಿಪ್‌ನಲ್ಲೂ ಅಷ್ಟೇ…. ಯಾವುದೇ ರಿಲೇಶನ್ ಶಿಪ್ ಗೆ (Relationship) ಗಟ್ಟಿಯಾಗಲು ಸಾಕಷ್ಟು ಆತುರವನ್ನು ತೋರಿಸುತ್ತಾರೆ. ಆದರೆ ರಿಲೇಶನ್ ಶಿಪ್ ನಲ್ಲಿ ಪ್ರತಿಯೊಬ್ಬರೂ ಯಶಸ್ವಿಯಾಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವೊಮ್ಮೆ ನಿಮ್ಮ ಅಪ್ರೋಚ್ ಸರಿಯಾಗಿಲ್ಲದ ಕಾರಣ ಸಂಬಂಧ ಮುರಿದು ಬೀಳುವ ಸಾಧ್ಯತೆ ಹೆಚ್ಚಾಗಿರುತ್ತೆ. 

ನೀವು ಯಾರೋ ಒಂದು ಹುಡುಗೀನ ಇಷ್ಟಪಟ್ಟಿದ್ದೀರಿ,ಆದರೆ ಅದನ್ನು ಹೇಳೋ ಧೈರ್ಯ ಮಾತ್ರ ಇರೋದಿಲ್ಲ. ಮನಸ್ಸಲ್ಲಿ ಇದ್ದದ್ದನ್ನು ಹೇಳಲು ಏನೇನೋ ಮಾಡ್ತಾರೆ, ಈ ಸಂದರ್ಭದಲ್ಲಿ ಡೇಟಿಂಗ್ (Dating) ಸಮಯದಲ್ಲಿ, ಹುಡುಗರು ಅವರಿಗೆ ವಿವಿಧ ರೀತಿಯ ದುಬಾರಿ ಗಿಫ್ಟ್ ನೀಡುವ ಮೂಲಕ ಅವರನ್ನು ಮೆಚ್ಚಿಸಲು ಪ್ರಯತ್ನಿಸುತ್ತಾರೆ. ಆದರೆ ಎಲ್ಲಾ ಹುಡುಗಿಯರು ದುಬಾರಿ ಗಿಫ್ಟ್ ಗಳಿಗೆ ಮನಸೋಲುತ್ತಾರೆ ಅಂತ ಹೇಳೋಕಾಗಲ್ಲ, ಯಾಕೆಂದ್ರೆ ಕೆಲವು ಹುಡುಗಿಯರು ಇನ್ನೂ ಹಳೇ ಕಾಲದ ಅಂದರೆ ಓಲ್ಡ್ ಸ್ಕೂಲ್ ರೊಮ್ಯಾನ್ಸ್ ಅನ್ನು ಇಷ್ಟ ಪಡ್ತಾರೆ. ನಿಮ್ಮ ಮಾಡರ್ನ್ ಹುಡುಗೀನಾ (modern girl) ಇಂಪ್ರೆಸ್ ಮಾಡುವ ಆ ಓಲ್ಡ್ ಸ್ಕೂಲ್ ರೊಮ್ಯಾನ್ಸ್ (old school romance) ಟ್ರಿಕ್ಸ್ ಯಾವುದು ಅನ್ನೋದನ್ನು ಇಲ್ಲಿದೆ ನೋಡೋಣ….

ರೆಸ್ಟೋರೆಂಟ್ ಗಳ ಬದಲು ಸ್ಟ್ರೀಟ್ ಫುಡ್ ಟ್ರೈ ಮಾಡಿ :

 ಯಾವಾಗಲೂ ಡೇಟಿಂಗ್ ದೊಡ್ಡ ದೊಡ್ಡ ಫ್ಯಾನ್ಸಿ ರೆಸ್ಟೋರೆಂಟ್ ನಲ್ಲೇ ನಡೆಯಬೇಕು ಎಂದೇನೂ ಇಲ್ಲ. ಈ ಬಾರಿ ಡೇಟಿಂಗ್ ಗೆ ಹೋಗುವಾಗ ರೆಸ್ಟೋರೆಂಟ್ ಬಿಟ್ಟು ಸ್ವಲ್ಪ ಡಿಫರೆಂಟ್ ಆಗಿ ಟ್ರೈ ಮಾಡಿ. ಸ್ಟೈಲಿಶ್ ಮತ್ತು ದುಬಾರಿ ರೆಸ್ಟೋರೆಂಟ್‌ಗೆ ಹೋಗುವ ಬದಲು, ಅವರೊಂದಿಗೆ ಸ್ಟ್ರೀಟ್ ಫುಡ್ ಡೇಟ್ ಗೆ ಹೋಗಿ. 

Tap to resize

ಹುಡುಗಿಯರು ಸಣ್ಣ ಸಣ್ಣ ವಿಷಯಗಳನ್ನು ಇಷ್ಟಪಡುತ್ತಾರೆ. ಚಾಟ್, ಪಕೋಡಾ, ಗೋಲ್-ಗಪ್ಪಾಸ್, ಐಸ್ ಕ್ರೀಮ್ ಅನ್ನು ನಿರಾಕರಿಸುವ ಹುಡುಗಿಯರಂತೂ ಇರೋದೆ ಇಲ್ಲ ಬಿಡಿ. ಶೋ ಆಫ್ ಮಾಡಲು ದೊಡ್ಡ ದೊಡ್ಡ ರೆಸ್ಟೋರೆಂಟ್‌ಗೆ ಹೋಗಬೇಡಿ, ಬದಲಾಗಿ ನೀವಿಬ್ಬರೂ ಎಂಜಾಯ್ ಮಾಡಲು, ಸಂತಸದ ಸಮಯ ಕಳೆಯಲು ಸ್ಟ್ರೀಟ್ ಫೂಡ್ ಸಿಗೋ ಕಡೆ ನಿಮ್ಮ ಹೆಜ್ಜೆಯನ್ನಿಡಿ. 

ಕೈಯಿಂದ ಬರೆದ ಪತ್ರಗಳು

ಪ್ರಸ್ತುತ ಸಮಯದಲ್ಲಿ ಅನೇಕ ಡೇಟಿಂಗ್ ಅಪ್ಲಿಕೇಶನ್ (Dating Application) ಗಳಿವೆ. ನಿಮ್ಮ ಕ್ರಶ್ ಅನ್ನು ಮೆಚ್ಚಿಸಲು ಅನೇಕ ಮಾರ್ಗಗಳಿವೆ. ಆದರೆ ನೀವು ಅವರನ್ನು ಹೃದಯವನ್ನು ಸಂಪೂರ್ಣವಾಗಿ ನಿಮ್ಮದನ್ನಾಗಿ ಮಾಡಲು ಬಯಸಿದರೆ, ಅವರಿಗೆ ಡಿಜಿಟಲ್ ಸಂದೇಶವನ್ನು ಕಳುಹಿಸುವ ಬದಲು, ನಿಮ್ಮ ಕೈಯಿಂದ ಬರೆದ ಕಾರ್ಡ್ ಅಥವಾ ಪತ್ರವನ್ನು ಅವರಿಗೆ ಕಳುಹಿಸಿ. 

ಕೈಯಿಂದ ಬರೆದ ಪತ್ರಗಳು (hand written letter) ಹೃದಯಕ್ಕೆ ಹತ್ತಿರವಾಗಿರುತ್ತವೆ. ಇದರಲ್ಲಿ ಮನಸ್ಸಿನ ಪ್ರತಿಯೊಂದು ಸಾಲುಗಳನ್ನು ಅಚ್ಚೊತ್ತಲು ಸಾಧ್ಯವಾಗುತ್ತೆ. ಅಲ್ಲದೇ ಈ ಪತ್ರ ಬೇಗ ಸಂಗಾತಿಯನ್ನು ಸೆಳೆಯುತ್ತೆ. ಸಂಗಾತಿ ಮಾಡಿದ ಈ ರೀತಿಯ ಪ್ರಯತ್ನವನ್ನು ಹುಡುಗಿಯರು ಇಷ್ಟಪಡದೇ ಇರೋದಾದರೂ ಹೇಗೆ ಅಲ್ವಾ?. ಜೊತೆಗೆ ಈ ಪತ್ರಗಳು ಸ್ಪೆಷಲ್ ಫೀಲಿಂಗ್ ನ್ನು ಸಹ ನೀಡುತ್ತೆ. 

ಸ್ನೇಹಿತರನ್ನು ಮರೆಯಬೇಡಿ

 ನಾವು ನಿಮ್ಮ ಸ್ನೇಹಿತರ ಬಗ್ಗೆ ಮಾತನಾಡುತ್ತಿಲ್ಲ, ಅಂದ್ರೆ ನಿಮ್ಮ ಗೆಳತಿಯ ಸ್ನೇಹಿತರ (friends) ಬಗ್ಗೆ ಮಾತನಾಡುತ್ತಿದ್ದೇವೆ. ಹಿಂದಿನ ಕಾಲದಲ್ಲಿ ಮಾತ್ರವಲ್ಲ, ಇಂದಿಗೂ ಸಹ, ಹುಡುಗಿಯರು ತಮ್ಮ ಸ್ನೇಹಿತರಿಗೆ ಎಲ್ಲವನ್ನೂ ಹೇಳುತ್ತಾರೆ ಮತ್ತು ಅವರ ಸಲಹೆಯಂತೆ ತಮ್ಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ನೀವು ಅವರ ಸ್ನೇಹಿತರ ಬಗ್ಗೆ ತಪ್ಪಿಯೂ ಜೋಕ್ ಮಾಡಬೇಡಿ. ನೀವು ಬಯಸಿದರೆ, ಅವರ ಸ್ನೇಹಿತರೊಂದಿಗೆ ಬೆರೆಯುವ ಮೂಲಕ ನೀವು ಅವರ ವಿಶ್ವಾಸವನ್ನು ಗೆಲ್ಲಬಹುದು.

ಹಾಡು ಹಾಡಿ ಇಂಪ್ರೆಸ್ ಮಾಡಿ

ಹಳೆಯ ಫಿಲಂಗಳಲ್ಲಿ, ನೀವು ನಾಯಕ-ನಾಯಕಿಯನ್ನು ಇಂಪ್ರೆಸ್ (impress) ಮಾಡಲು ಹಾಡು ಹಾಡುತ್ತಾ ಇದ್ರು. ಹುಡುಗಿಯರು ಹಾಡುಗಳನ್ನು, ತಮ್ಮ ಕುರಿತಾದ ಶಾಯರಿ, ಕವನವನ್ನು ಅವರು ಇಷ್ಟಪಡುತ್ತಾರೆ.  ನೀವ್ಯಾಕೆ ಅವರ ಬಗ್ಗೆ ಕವನ ಅಥವಾ ಶಾಯರಿ ಬರೆದು ಅವರಿಗೆ ಸೆಂಡ್ ಮಾಡಬಾರದು ಅಥವಾ ಅವರಿಗಾಗಿ ಹಾಡು ಡೆಡಿಕೇಟ್ ಮಾಡಿ ಹಾಡಿ. 

ಫಿಸಿಕಲ್ ರಿಲೇಶನ್ ಶಿಪ್ ಗಾಗಿ ಆತುರ ಬೇಡ ;

 ನೀವು ಅವರನ್ನು ನಿಜವಾಗಿಯೂ ಪ್ರೀತಿಸುತ್ತಿದ್ದರೆ ಮತ್ತು ಇದನ್ನು ನಿಮ್ಮ ಗೆಳತಿಗೆ ತಿಳಿಸಲು ಬಯಸಿದರೆ, ಎಲ್ಲದಕ್ಕೂ ಸಮಯವನ್ನು ನೀಡಿ. ಈ ವಿಷಯದಲ್ಲಿ ನೀವು ಅವರನ್ನು ಫಿಸಿಕಲ್ ರಿಲೇಶನ್ ಶಿಪ್ (Physical Relationship) ಹೊಂದುವಂತೆ ಆತುರ ತೋರಬೇಡಿ. ಅವರಿಗೆ ಹತ್ತಿರವಾಗಲು ಸಮಯ ತೆಗೆದುಕೊಳ್ಳಿ ಮತ್ತು ಸಮಯ ಬಂದಾಗ ಸಮ್ಮತಿಯೊಂದಿಗೆ ಮುಂದುವರಿಯಿರಿ.

Latest Videos

click me!