ಪುರುಷರು 12 AM ಬಳಿಕ ಹೆಚ್ಚು ರೊಮ್ಯಾಂಟಿಕ್ ಆಗೋದು ಯಾಕೆ?

Published : Jun 18, 2026, 10:02 AM IST

ದಿನವಿಡೀ ದುಡಿದು ದಣಿದು, ಹಲವು ಟೆನ್ಶನ್ ಗಳನ್ನು ಹೊತ್ತು ಮನೆಗೆ ಬರುವ ಪುರುಷರಿಗೆ ರಾತ್ರಿಯ ವೇಳೆ, ಅಂದರೆ ಮಧ್ಯರಾತ್ರಿ 12 AM ಬಳಿಕ ಮನಸ್ಸು ಹಗುರವಾಗುತ್ತದೆ. ಜೊತೆಗೆ ಸಡನ್ ಆಗಿ ಅವರು ರೊಮ್ಯಾಂಟಿಕ್ ಮೂಡ್ ಗೆ ತೆರಳುತ್ತಾರೆ. ಯಾಕೆ ಅದೇ ಸಮಯಕ್ಕೆ ಅವರು ರೊಮ್ಯಾಂಟಿಕ್ ಮೂಡ್ ಗೆ ತೆರಳುತ್ತಾರೆ ಗೊತ್ತಾ?

PREV
17
12 AM ಬಳಿಕ ಮನಸ್ಸು ರಿಲ್ಯಾಕ್ಸ್ ಆಗುತ್ತೆ

ಹೆಚ್ಚಿನ ಪುರುಷರು ದಿನವಿಡೀ ಜವಾಬ್ದಾರಿಗಳು, ಡೆಡ್ ಎಂಡ್, ಕುಟುಂಬ ಕರ್ತವ್ಯಗಳು ಮತ್ತು ಟೆನ್ಶನ್ ಮೇಲೆ ಕೇಂದ್ರೀಕರಿಸುತ್ತಾರೆ. ಅವರ ಮನಸ್ಸು ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ಕೆಲಸಗಳನ್ನು ಪೂರ್ಣಗೊಳಿಸುವುದರಲ್ಲಿ ನಿರತವಾಗಿರುತ್ತದೆ. ಮಧ್ಯರಾತ್ರಿಯ ಹೊತ್ತಿಗೆ, ಆ ಒತ್ತಡ ಕಡಿಮೆಯಾಗಿ, ಮನಸ್ಸು ರಿಲ್ಯಾಕ್ಸ್ ಆಗುತ್ತದೆ. ಈ ಸಮಯದಲ್ಲಿ ತಮ್ಮ ಸಂಗಾತಿಗೆ ಮೀಸಲಿಡಲು ಪರ್ಫೆಕ್ಟ್ ಆಗಿರುತ್ತದೆ.

27
ದೇಹ ವಿಶ್ರಾಂತಿ ಬಯಸಿದಾಗ ರೊಮ್ಯಾನ್ಸ್ ಹೆಚ್ಚುತ್ತೆ

ಮಧ್ಯರಾತ್ರಿಯಲ್ಲಿ ದೇಹವು ಸ್ವಾಭಾವಿಕವಾಗಿ ನಿದ್ರೆಗೆ ತಯಾರಿ ಆರಂಭಿಸುತ್ತದೆ. ಈ ಸಮಯದಲ್ಲಿ, ಸ್ಟ್ರೆಸ್ ಹಾರ್ಮೋನುಗಳು ಕ್ರಮೇಣ ಕಡಿಮೆಯಾಗುತ್ತವೆ ಮತ್ತು ವಿಶ್ರಾಂತಿ-ಸಂಬಂಧಿತ ಪ್ರಕ್ರಿಯೆಗಳು ಹೆಚ್ಚು ಸಕ್ರಿಯವಾಗುತ್ತವೆ. ಈ ಸಮಯದಲ್ಲಿ ಮನಸ್ಸು ರೊಮ್ಯಾಂಟಿಕ್ ಮೂಡ್ ಗೆ ತೆರಳುತ್ತದೆ.

37
ನಿದ್ರೆಯ ಹಾರ್ಮೋನ್ ನಿಂದ ಪ್ರೀತಿ

ಮೆಲಟೋನಿನ್ ನಿದ್ರೆಯನ್ನು ನಿಯಂತ್ರಿಸಲು ಸಹಾಯ ಮಾಡುವ ಹಾರ್ಮೋನ್ ಎಂದು ಹೆಚ್ಚಿನ ಜನ ತಿಳಿದಿದ್ದಾರೆ.. ಮೆಲಟೋನಿನ್ ಮಟ್ಟಗಳು ಹೆಚ್ಚಾದಂತೆ, ದೇಹ ಮತ್ತು ಮನಸ್ಸು ಶಾಂತ ಸ್ಥಿತಿಯನ್ನು ಪ್ರವೇಶಿಸುತ್ತವೆ. ಮಾನಸಿಕ ಉದ್ವೇಗ ಕಡಿಮೆಯಾಗುತ್ತದೆ. ಈ ಶಾಂತ ಸ್ಥಿತಿಯಲ್ಲಿ, ಅನೇಕ ಪುರುಷರು ಪ್ರೀತಿ ಮತ್ತು ಇಮೋಶನಲ್ ಇಂಟಿಮೆಸಿ ಕಡೆಗೆ ವಾಲುತ್ತಾರೆ. ಹಾಗಾಗಿ ಈ ಸಮಯದಲ್ಲಿ ಪುರುಷರು ಹೆಚ್ಚಾಗಿ ರೊಮ್ಯಾಂಟಿಕ್ ಆಗಿರುತ್ತಾರೆ.

47
ಕತ್ತಲಾದ ನಂತರ ಭಾವನೆಗಳು ಸ್ಟ್ರಾಂಗ್ ಆಗುತ್ತವೆ

ಜನರು ಲೇಟ್ ನೈಟ್ ನಡೆಸಿದ ಮಾತುಕತೆಗಳನ್ನು ಸ್ಪಷ್ಟವಾಗಿ ನೆನಪಿಸಿಕೊಳ್ಳಲು ಒಂದು ಕಾರಣವಿದೆ. ಶಾಂತ ಸಮಯದಲ್ಲಿ, ಮೆದುಳು ಸಂಬಂಧಗಳು, ವೈಯಕ್ತಿಕ ಅನುಭವಗಳು ಮತ್ತು ಪರಿಹರಿಸಲಾಗದ ಭಾವನೆಗಳ ಬಗ್ಗೆ ಯೋಚಿಸುತ್ತದೆ. ಈ ಸಂದರ್ಭದಲ್ಲಿ ತಮ್ಮ ಪ್ರೀತಿ ಪಾತ್ರರ ಬಗ್ಗೆ ಮನಸ್ಸು ಹೆಚ್ಚಾಗಿ ಯೋಚನೆ ಮಾಡಲು ಶುರು ಮಾಡುತ್ತದೆ.

57
ಲವ್ ಹಾರ್ಮೋನ್

ಆಕ್ಸಿಟೋಸಿನ್ ಅನ್ನು "ಪ್ರೀತಿಯ ಹಾರ್ಮೋನ್" ಎಂದು ಕರೆಯುತ್ತಾರೆ ಏಕೆಂದರೆ ಇದು ನಂಬಿಕೆ, ವಾತ್ಸಲ್ಯ ಮತ್ತುಇಮೋಶನಲ್ ಇಂಟಿಮೆಸಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒತ್ತಡ ಕಡಿಮೆಯಾದಾಗ ಮತ್ತು ಜನರು ಒಟ್ಟಿಗೆ ಕ್ವಾಲಿಟಿ ಟೈಮ್ ಕಳೆಯುವಾಗ, ಆಕ್ಸಿಟೋಸಿನ್ ರಿಲೀಸ್ ಆಗುತ್ತದೆ. ಮಧ್ಯರಾತ್ರಿ ಒತ್ತಡ ಕಡಿಮೆ ಇರುವುದರಿಂದ, ಸಂಗಾತಿ ಜೊತೆ ಏಕಾಂತ ಸಿಗುವುದರಿಂದ ಲವ್ ಹಾರ್ಮೋನ್ ಈ ಸಮಯದಲ್ಲಿ ಬಿಡುಗಡೆಯಾಗುತ್ತದೆ.

67
ಪುರುಷರು ರಾತ್ರಿಯಲ್ಲಿ ಎಚ್ಚರವಿರುತ್ತಾರೆ

ಅನೇಕ ಪುರುಷರು ಭಾವನೆಗಳನ್ನು ಖಾಸಗಿಯಾಗಿ ಮ್ಯಾನೇಜ್ ಮಾಡಲು ಕಲಿಯುತ್ತಾ ಬೆಳೆಯುತ್ತಾರೆ. ಹಗಲಿನಲ್ಲಿ, ಜವಾಬ್ದಾರಿಗಳು ಮತ್ತು ನಿರೀಕ್ಷೆಗಳು ಭಾವನೆಗಳೇ ಇಲ್ಲದಂತೆ ಮಾಡಬಹುದು. ಆದರೆ ತಡರಾತ್ರಿಯಲ್ಲಿ, ಆ ಒತ್ತಡಗಳು ಮಸುಕಾಗುತ್ತವೆ. ಆದರೆ ಮಧ್ಯರಾತ್ರಿ ಹೊತ್ತು, ಎಲ್ಲಾ ಒತ್ತಡ ನಿವಾರಣೆಯಾಗಿ ತಮ್ಮ ಪ್ರೀತಿಪಾತ್ರರು ಬಂಧನದಲ್ಲಿ ಸೇರಿಕೊಳ್ಳಲು ಮನಸು ಹಾತೊರಿಯುತ್ತದೆ.

77
ಮಿಡ್ ನೈಟ್ ರೊಮ್ಯಾನ್ಸ್ ಅದ್ಭುತವಾಗಿರುತ್ತದೆ

ಹಾರ್ಮೋನುಗಳು ಮಿಡ್ ನೈಟ್ ರೊಮ್ಯಾನ್ಸ್ ಹೆಚ್ಚಿಸಲು ಸಹಾಯ ಮಾಡುತ್ತದೆ ನಿಜ. ಆದರೆ ಇದಕ್ಕೆ ಭಾವನಾತ್ಮಕ ಸಂಬಂಧ, ನಂಬಿಕೆ, ಹಂಚಿಕೊಂಡ ಅನುಭವಗಳು ಮತ್ತು ಸಂಬಂಧದ ಗುಣಮಟ್ಟವೂ ಪ್ರಮುಖ ಪಾತ್ರ ವಹಿಸುತ್ತದೆ. ಮಧ್ಯರಾತ್ರಿ ಈ ಅಂಶಗಳು ಒಟ್ಟಿಗೆ ಸೇರಬಹುದಾದ ಪರ್ಫೆಕ್ಟ್ ವಾತಾವರಣವನ್ನು ಸೃಷ್ಟಿಸುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories