ವಿವಾಹಿತ ದಂಪತಿಗಳನ್ನ (married couples) ಕೇಳಿದ್ರೆ ತಮ್ಮ ಪತಿ ಯಾವಾಗ್ಲೂ ಬಾತ್ ರೂಮಲ್ಲಿ ಗಂಟೆಗಳಿಂದ ಹೆಚ್ಚು ಸಮಯ ಕಳೆಯುತ್ತಾರೆ ಎಂದು ದೂರು ಹೇಳುತ್ತಾರೆ. ಹೆಚ್ಚಿನ ಎಲ್ಲಾ ಹೆಂಡತಿಯರದ್ದು ಇದೇ ದೂರು. ಆದ್ರೆ ಯಾಕೆ ಅವರು ಬಾತ್ ರೂಮಲ್ಲಿ ಸಮಯ ಕಳೆಯೋಕೆ ಇಷ್ಟ ಪಡ್ತಾರೆ ಗೊತ್ತಾ? ಈ ಕುರಿತು ಕೆಲವು ಗಂಡಸರು ತಿಳಿಸಿದ್ದಾರೆ. ಬನ್ನಿ ಯಾಕೆ ಅನ್ನೋದನ್ನು ನೋಡೋಣ..
ಮನೆಕೆಲಸಗಳಿಂದ ತಪ್ಪಿಸಿಕೊಳ್ಳಲು
ಕೆಲವು ಪುರುಷರು ಮನೆ ಕೆಲಸಗಳಿಂದ ತಪ್ಪಿಸಿಕೊಳ್ಳಲು ಗಂಟೆಗಟ್ಟಲೆ ಬಾತ್ ರೂಮಲ್ಲಿ (bathroom) ಮೊಬೈಲ್ ಹಿಡಿದು ಕುತ್ಕೋತ್ತಾರಂತೆ. ಅವರಿಗೆ ಮನೆ ಕೆಲಸ ಮಾಡಲು ಇಷ್ಟವಿರೋದಿಲ್ಲ, ಆದರೆ ಹೆಂಡತಿ ಯಾವಾಗ್ಲೂ ಕೆಲಸದಲ್ಲಿ ಸಹಾಯ ಮಾಡಬೇಕೆಂದು ಹೇಳೊದ್ರಿಂದ ಹೀಗೆ ಮಾಡ್ತಾರಂತೆ.
ಧೂಳು ಹೊಡೆಯುವುದು, ಪಾತ್ರೆ ತೊಳೆಯುವುದು ಈ ಕೆಲಸಗಳು ಗಂಡಸರಿಗೆ ಇಷ್ಟವಾಗೋದಿಲ್ಲ. ಆದರೆ ಹೆಂಡತಿ ಎಲ್ಲಾ ಕೆಲಸವನ್ನು ಮಾಡುವಾಗ ಪತಿ ತನಗಾಗಿ ಪಾತ್ರೆ ತೊಳೆಯಲು ಸಹಾಯ ಮಾಡಬೇಕು ಎಂದು ಅಂದುಕೊಳ್ಳುತ್ತಾಳೆ. ಆದರೆ ಇದರಿಂದ ತಪ್ಪಿಸಿಕೊಳ್ಳಲು ಪುರುಷರು ಬಾತ್ ರೂಮ್ ನೆಪ ಹೇಳುತ್ತಾರೆ.
ನಿದ್ರೆ ಮಾಡ್ತಾರಂತೆ
ಕೆಲವು ಗಂಡಸರಿಗೆ ರಾತ್ರಿ ಸರಿಯಾಗಿ ನಿದ್ರೆಯಾಗದೇ ಇದ್ದಾಗ ಬಾತ್ ರೂಮ್ ನಲ್ಲಿ ಕಾಮೋಡ್ ಮೇಲೆ ಕುಳಿತು ಒಂದರ್ಧ ಗಂಟೆ ಕಿರುನಿದ್ದೆ (nap in bathroom) ಮಾಡ್ತಾರಂತೆ, ಇದರಿಂದ ಮೈಂಡ್ ಫ್ರೆಶ್ ಆಗುತ್ತೆ, ಯಾರು ತಡೆಯೋರು ಇರೋದಿಲ್ಲ ಎಂದು ಹೇಳುತ್ತಾರೆ.
ಈ ಬಗ್ಗೆ ಮಾತನಾಡಿದ ಒಬ್ಬ ವ್ಯಕ್ತಿ ತಾವು ಮಕ್ಕಳನ್ನು ಪಡೆದ ಮೇಲೆ ರಾತ್ರಿ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗಲ್ಲ. ಹಾಗಾಗಿ ಬೆಳಗ್ಗೆ ವಾಶ್ ರೂಮ್ ನಲ್ಲಿ ನಿದ್ರೆ ಮಾಡ್ತೀನಿ. ಆವಾಗ ಹೆಂಡತಿ, ಮಕ್ಕಳು, ಯಾರೂ ಕರೆಯೋದಿಲ್ಲ. ನೆಮ್ಮದಿಯಾಗಿ ನಿದ್ರೆ ಮಾಡಬಹುದು ಅಂತಾರೆ.
ಟಿಂಡರ್ ಸ್ವೈಪ್ ಮಾಡ್ತಾರಂತೆ
ಇನ್ನೂ ಕೆಲವರು ಟಿಂಡರ್ ಸ್ವೈಪ್ ಮಾಡುತ್ತಾ ಬಾತ್ ರೂಮ್ ನಲ್ಲಿ ಸಮಯ ಕಳೆಯುತ್ತಾರಂತೆ. ಸುಮ್ಮನೆ ಟೈಮ್ ಪಾಸ್ ಮಾಡಲು ಹೀಗೆ ಮಾಡ್ತಾರಂತೆ ಹೊರಗಡೆ ಹೆಂಡತಿ ಎದುರು ಇದನ್ನೆಲ್ಲಾ ಮಾಡಲು ಸಾಧ್ಯವಿಲ್ಲ ಅಲ್ವಾ? ಅದಕ್ಕಾಗಿ ಬಾತ್ ರೂಮ್ ನಲ್ಲಿ ಮಾಡ್ತಾರಂತೆ.
ಸೋಶಿಯಲ್ ಮೀಡಿಯಾ
ಇನ್ನೂ ಕೆಲವು ಪುರುಷರು ಯೂಟ್ಯೂಬ್, ರೀಲ್ಸ್ , ಇನ್ಸ್ಟಾಗ್ರಾಂ, ಫೇಸ್ ಬುಕ್ ಎನ್ನುತ್ತಾ ಸೋಶಿಯಲ್ ಮೀಡಿಯಾಗಳಲ್ಲಿ ಒಂದರ ನಂತರ ಒಂದು ವಿಡಿಯೋ ನೋಡಿ ಎಂಜಾಯ್ ಮಾಡ್ತಾರಂತೆ. ಬಾತ್ ರೂಮ್ ನಲ್ಲಿದ್ರೆ ಯಾರು ಅವರಿಗೆ ಡಿಸ್ಟರ್ಬ್ ಮಾಡಲ್ಲ ಎನ್ನುತ್ತಾರೆ ಅವರು.