ಸೆಕ್ಸ್ ಲೈಫನ್ನು ಸಂಪೂರ್ಣವಾಗಿ ಹಾಳು ಮಾಡುತ್ತೆಂಬ ಆತಂಕವೂ ಕಾಡುತ್ತೆ ಮನುಷ್ಯನಿಗೆ!

First Published | Jun 23, 2023, 4:16 PM IST

ನೀವು ಆತಂಕ, ಒತ್ತಡದ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಅದು ನಿಮ್ಮ ಲೈಂಗಿಕ ಜೀವನದ ಮೇಲೂ ಪರಿಣಾಮ ಬೀರಬಹುದು. ಇದರಿಂದಾ ದಾಂಪತ್ಯ ಜೀವನ ಹದಗೆಡಬಹುದು. ಇದನ್ನು ತಡೆಗಟ್ಟಲು ಕೆಲವು ಪ್ರಮುಖ ಕ್ರಮಗಳನ್ನು ತಿಳಿದುಕೊಳ್ಳೋಣ.

ಕೋಣೆಯ ಲಾಕ್ ಹಾಕಿ, ಲೈಟ್ ಆಫ್ ಮಾಡಿ, ಆಗಷ್ಟೆ ಸಂಗಾತಿ ಜೊತೆ ರೊಮ್ಯಾನ್ಸ್ ಮಾಡೋಕೆ ಆರಂಭಿಸಿದ್ದೀರಿ. ಆದರೆ ಅಷ್ಟರಲ್ಲೇ ನಕಾರಾತ್ಮಕ ಆಲೋಚನೆಗಳು (neagtive thoughts) ಬಂದು ನಿಮ್ಮ ರೊಮ್ಯಾಂಟಿಕ್ ಮೂಡನ್ನು ಹಾಳುಮಾಡುತ್ತವೆ. ನಿಮ್ಮ ಮನಸ್ಸು ಈಗಾಗಲೇ ಯಾವುದೋ ವಿಷಯದ ಬಗ್ಗೆ ಹೆಚ್ಚು ಚಿಂತೆ ಮಾಡ್ಕೊಂಡಿದ್ರೆ ಮಾತ್ರ ಹೀಗಾಗುತ್ತೆ. ಆತಂಕವು ಭಾವನಾತ್ಮಕ, ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.ಇದು ರೊಮ್ಯಾಂಟಿಕ್ ಲೈಫ್ ಮೇಲೆ ಸಹ ಹೆಚ್ಚಿನ ಪರಿಣಾಮ ಬೀರುತ್ತದೆ. 

ಆತಂಕ, ಭಯ, ಒತ್ತಡ (Stress) ಮತ್ತು ಚಡಪಡಿಕೆಯಿಂದ ಜೀವನದಲ್ಲಿ ಸಮಸ್ಯೆ ಹೆಚ್ಚುತ್ತೆ. ಇದು ಜೀವನದ ಪ್ರತಿಯೊಂದೂ ಹಂತದಲ್ಲೂ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಪ್ರಾಬಲ್ಯ ಸಾಧಿಸುತ್ತದೆ. ಆತಂಕವು ರೊಮ್ಯಾಂಟಿಕ್ ಲೈಫ್ ಮೇಲೂ ಪರಿಣಾಮ ಬೀರಬಹುದು. ಆತಂಕದಿಂದ ಸೆಕ್ಸ್ ಲೈಫ್ (Sex life)ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ನೋಡೋಣ.
 

Tap to resize

ಆತಂಕದೊಂದಿಗೆ (anxiety)  ಬದುಕುವುದು ಎಂದರೆ ನೀವು ಲೈಫ್ ನಲ್ಲಿ ಏನೇ ಮಾಡಿದರೂ, ನಿಮ್ಮೊಂದಿಗೆ ಒಂದು ವಿಚಿತ್ರ ಭಯ ಆವೃತವಾಗಿದೆ ಎಂದು. ಲೈಂಗಿಕತೆ ಮತ್ತು ಆತಂಕ ಎರಡೂ ಪರಸ್ಪರ ವಿರುದ್ಧವಾಗಿವೆ. ಆತಂಕ ಹೆಚ್ಚಾದ್ರೆ ಮೂಡ್ ಚೆನ್ನಾಗಿರೋದಿಲ್ಲ. ಮೂಡ್ ಸರಿಯಾಗಿಲ್ಲ ಅಂದ್ರೆ ಸೆಕ್ಸ್ ಲೈಫ್ (Sexual Life) ಚೆನ್ನಾಗಿರಲು ಹೇಗೆ ಸಾಧ್ಯ.

ಆತಂಕವು ಲೈಂಗಿಕ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ, ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ :

ಆತ್ಮವಿಶ್ವಾಸದ ಕೊರತೆ (lack of confidance)
ಯಾವುದೋ ವಿಷಯದ ಬಗ್ಗೆ ಚಿಂತಿತರಾಗಿರುವ ಜನರಿಗೆ ಆತ್ಮವಿಶ್ವಾಸದ ಕೊರತೆ (Lack of Confidence)ಇರುತ್ತದೆ. ಅವರು ಹೇಗೆ ಕಾಣುತ್ತಾರೆ ಎಂಬ ಚಿಂತೆ ಅವರ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆತ್ಮವಿಶ್ವಾಸದ ಕೊರತೆಯು ಲೈಂಗಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅದನ್ನು ತಪ್ಪಿಸಲು ಪ್ರಯತ್ನಿಸಿ.

ಇಂಟಿಮೆಸಿಗೆ ತಡೆ (less intimacy)
ನಿಮ್ಮ ಸಂಗಾತಿಗೆ ಹತ್ತಿರವಾದಾಗ ನೀವು ಯಾವುದರ ಬಗ್ಗೆ ಚಿಂತಿಸುತ್ತೀರಿ ಎಂದು ನೀವು ಎಂದಾದರೂ ಅರಿತುಕೊಂಡಿದ್ದೀರಾ? ಸೆಕ್ಸುಯಲ್ ಮೆಡಿಸಿನ್ ಸೊಸೈಟಿ ಆಫ್ ನಾರ್ತ್ ಅಮೆರಿಕಾದಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಒಬ್ಬ ವ್ಯಕ್ತಿಯು ಈ ಹಿಂದೆ ಯಾವುದೋ ಸಮಸ್ಯೆ ಹೊಂದಿದ್ರೆ, ಅವರು ಸೆಕ್ಸ್ ಸಮಯದಲ್ಲಿ ಆತಂಕಕ್ಕೆ ಒಳಗಾಗುತ್ತಾರೆ. ಇದರಿಂದ ಹೊರಬರಲು ಸಾಧ್ಯವಾಗದಿದ್ದರೆ ಕೌನ್ಸೆಲಿಂಗ್ ಗೆ ಹೋಗಿ.

ಸಂಗಾತಿಯೊಂದಿಗೆ ಮಾತನಾಡದಿರುವುದು (less communication)
ಸಂವಹನವು ಸಂಬಂಧವನ್ನು ಬೆಸೆಯುವ ಕೊಂಡಿ ಎಂದೇ ಹೇಳಬಹುದು.  ಸೆಕ್ಸ್ ಸಮಯದಲ್ಲಿ ಮಾತನಾಡುವುದು ಅಥವಾ ಸೆಕ್ಸ್ ಬಗ್ಗೆ ಸಂಗಾತಿ ಜೊತೆ ಮಾತನಾಡಬೇಕು. ಯಾವಾಗಲೂ ನಿಮ್ಮ ಸಂಗಾತಿಯೊಂದಿಗೆ ಏನನ್ನಾದರೂ ಚರ್ಚಿಸಿ. ನೀವು ಆತಂಕವನ್ನು ಅನುಭವಿಸುತ್ತಿದ್ದರೆ, ಸಂಗಾತಿ ಜೊತೆ ಆ ಬಗ್ಗೆ ಮಾತನಾಡಿ, ಇದರಿಂದ ಸಮಸ್ಯೆ ಬಗೆಹರಿಯಬಹುದು.

ಆರ್ಗಸಂ ಪಡೆಯಲು ಸಾಧ್ಯವಾಗದೇ ಇರೋದು
ಆರ್ಗಸಂ (orgasm) ಆಗುತ್ತಲೇ ಇಲ್ಲ ಅನ್ನೋದಾದ್ರೆ, ಯಾಕೆ ಆಗ್ತಿಲ್ಲ, ಪರಾಕಾಷ್ಠೆ ಪಡೆಯಲು ಏನು ಮಾಡಬೇಕು? ಅನ್ನೋ ಆತಂಕವೇ ಹೆಚ್ಚಾಗಿರುತ್ತೆ. ಸಂಶೋಧನೆಯ ಪ್ರಕಾರ, ಆತಂಕವನ್ನು ಅನುಭವಿಸುವುದು ಪರಾಕಾಷ್ಠೆಯನ್ನು ಸಾಧಿಸುವಲ್ಲಿ ತೊಂದರೆಗೆ ಕಾರಣವಾಗುತ್ತದೆ ಎಂದು ಕಂಡುಬಂದಿದೆ. ಆತಂಕವು ಹೆಚ್ಚು ನಕಾರಾತ್ಮಕ ಆಲೋಚನೆಗಳನ್ನು ಸೃಷ್ಟಿಸುತ್ತದೆ, ಇದು ಆರ್ಗಸಂ ಆಗೋದನ್ನು ತಡೆಯುತ್ತೆ. 

ಕಾಮಾಸಕ್ತಿ ಕಡಿಮೆ
ನೀವು ಯಾವುದರ ಬಗ್ಗೆಯಾದರೂ ಚಿಂತಿತರಾಗಿದ್ದರೆ, ಲೈಂಗಿಕ ಜೀವನವು (Sex life) ತೊಂದರೆಗೊಳಗಾಗುತ್ತದೆ. ಆತಂಕ ಹೆಚ್ಚಿದ್ದರೆ, ಲೈಂಗಿಕ ಕ್ರಿಯೆ ನಡೆಸುವ ಬಯಕೆ ಇರುವುದಿಲ್ಲ. ಅಂದಾರೆ ಆತಂಕದಿಂದ ಕಾಮಾಸಕ್ತಿ ಕೊರತೆ ಉಂಟಾಗುತ್ತೆ. 

ಔಷಧಿಗಳ ಸೇವನೆ (medication)
ಹಲವಾರು ಕಾರಣದಿಂದಾಗಿ ನೀವು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಅದು ಸಹ ನಿಮ್ಮ ಲೈಂಗಿಕ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾರ್ವರ್ಡ್ ಹೆಲ್ತ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಖಿನ್ನತೆ-ಶಮನಕಾರಿಗಳಂತಹ ಔಷಧಿಗಳು ಲೈಂಗಿಕ ಬಯಕೆಯನ್ನು ಕಡಿಮೆ ಮಾಡುತ್ತವೆ.

ಆತಂಕವನ್ನು ನಿವಾರಿಸುವುದು ಹೇಗೆ?
ಕೌನ್ಸಲಿಂಗ್‌ಗೆ ಹೋಗಿ.
ನಿಮ್ಮ ಸಮಸ್ಯೆಯನ್ನು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳಿ, ಇದರಿಂದ ಸಂಗಾತಿ ನಿಮಗೆ ಸಹಾಯ ಮಾಡಬಹುದು
ವೈದ್ಯರನ್ನು ಸಂಪರ್ಕಿಸಿ ಮತ್ತು ಅದನ್ನು ಹೇಗೆ ತಡೆಗಟ್ಟಬಹುದು ಎಂಬುದನ್ನು ಅರ್ಥಮಾಡಿಕೊಳ್ಳಿ
ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುವ ಚಿಕಿತ್ಸೆಗಳನ್ನು ಪಡೆಯಿರಿ
 

Latest Videos

click me!