ಇಂಥಾ ಅಭ್ಯಾಸಗಳಿಂದ್ಲೇ ಮದ್ವೆ ವಯಸ್ಸಾದ್ರೂ ನೀವಿನ್ನೂ ಸಿಂಗಲ್ ಆಗಿರೋದು

First Published Jan 29, 2023, 11:57 AM IST

ಸಂಗಾತಿಯನ್ನು ಹುಡುಕಲು ನಿಮಗೆ ತೊಂದರೆ ಆಗುತ್ತಿದೆಯೇ? ಅಥವಾ ನಿಮ್ಮ ಪ್ರತಿಯೊಂದು ಸಂಬಂಧವು ವೇಗವಾಗಿ ಕೊನೆಗೊಳ್ಳುತ್ತದೆಯೇ? ಹಾಗಿದ್ದರೆ, ನೀವು ನಿಮ್ಮೊಳಗೆ ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಅವುಗಳ ಬಗ್ಗೆ ತಿಳಿಯೋಣ.
 

ತಮ್ಮ ಜೀವನದುದ್ದಕ್ಕೂ ಸಿಂಗಲ್ ಆಗಿ ಹ್ಯಾಪಿಯಾಗಿರಲು (Happy single) ಇಷ್ಟಪಡುವ ಅನೇಕ ಜನರು ನಮ್ಮ ಸುತ್ತಲೂ ಇದ್ದಾರೆ ಎಂಬುದರಲ್ಲಿ ಡೌಟೇ ಇಲ್ಲ. ಏಕೆಂದರೆ ಅವರು ಸೀರಿಯಸ್ ರಿಲೇಶನ್ ಶಿಪ್ ನಲ್ಲಿರಲು ಇಷ್ಟ ಪಡೋದೆ ಇಲ್ಲ. ಆದರೆ ಕೆಲವು ಜನರು, ಕೆಲವು ಸಂದರ್ಭಗಳಿಂದಾಗಿ, ಕಾರಣಗಳಿಂದಾಗಿ ಜೀವನದುದ್ದಕ್ಕೂ ಅಥವಾ ತಮ್ಮ ಮದುವೆಯ ವಯಸ್ಸು ತಲುಪುವವರೆಗೂ ಅವಿವಾಹಿತರಾಗಿ ಉಳಿಯುತ್ತಾರೆ. ಅವರು ತಮ್ಮ ಆಯ್ಕೆಯ ಸಂಗಾತಿಯನ್ನು ಹುಡುಕುವಲ್ಲಿ ಸಾಕಷ್ಟು ತೊಂದರೆ ಎದುರಿಸುತ್ತಾರೆ. ಇದಕ್ಕೇನು ಕಾರಣ ಅನ್ನೋದನ್ನು ನೋಡೋಣ.

'ನಾನು ಇನ್ನೂ ಏಕೆ ಸಿಂಗಲ್ ಆಗಿದ್ದೇನೆ?' ಎಂಬ ಪ್ರಶ್ನೆಗೆ ಹೆಚ್ಚಿನ ಜನರು ಇನ್ನೂ ಉತ್ತರ ಹುಡುಕುತ್ತಿದ್ದಾರೆ. ಆದರೆ, ನೀವು ಸಿಂಗಲ್ ಆಗಿರೋದು ನಿಮ್ಮ ತಪ್ಪಲ್ಲ ಬಿಡಿ,  ಮತ್ತೆ ಯಾರ ತಪ್ಪು ಅಂತಾ ಕೇಳ್ತೀರಾ?, ನಿಮ್ಮಲ್ಲಿನ ಕೆಲವು ಅಭ್ಯಾಸಗಳಿಂದಾಗಿ ನೀವು ಕೊನೆವರೆಗೆ ಸಿಂಗಲ್ ಆಗಿ ಉಳಿಯುತ್ತೀರಿ. 

ತುಂಬಾ ನಿರೀಕ್ಷೆಗಳನ್ನು ಹೊಂದಿರೋದು (expecting)
ನಿಮ್ಮ ಸಂಗಾತಿಯಿಂದ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಳ್ಳೋದು ಯಾವುದೇ ಸಂಬಂಧಕ್ಕೆ ಸೂಕ್ತವಲ್ಲ. ಏಕೆಂದರೆ ಸ್ವಲ್ಪ ಸಮಯದ ನಂತರ ಸಂಗಾತಿಗೆ ನಿಮ್ಮ ನಿರೀಕ್ಷೆಗಳನ್ನು ಪೂರೈಸಲು ಸಾಧ್ಯವಾಗದೇ ಇರಬಹುದು. ಇದರಿಂದ ನಿಮಗೆ ಹೆಚ್ಚಿನ ಸಮಸ್ಯೆ ಉಂಟಾಗುತ್ತೆ.

ಎಲ್ಲಾ ಸಮಯದಲ್ಲೂ ನಿಮ್ಮ ಆಸೆಯನ್ನು ಪೂರೈಸುವ ವ್ಯಕ್ತಿಯನ್ನು ಕಂಡುಹಿಡಿಯುವುದು ತುಂಬಾ ಕಷ್ಟ. ಅದು ಪ್ರೀತಿಯಾಗಿರಲಿ ಅಥವಾ ಮದುವೆಯಾಗಿರಲಿ, ಜನರು ಯಾವಾಗಲೂ ತಮ್ಮ ಸಂಬಂಧದಲ್ಲಿ ಕೊಡು-ಕೊಳ್ಳುವಿಕೆಯ ನಿಯಮವನ್ನು ಅನುಸರಿಸುತ್ತಾರೆ. ನಿಮ್ಮ ಸಂಗಾತಿಗೆ ವಿಶೇಷ ಭಾವನೆ ಮೂಡಿಸಲು ನೀವು ಸಾಧ್ಯವಿರುವ ಎಲ್ಲವನ್ನೂ ಮಾಡಿದರೆ, ನಂಬಿ, ಅವರು ನಿಮ್ಮ ದಿನವನ್ನು ವಿಶೇಷವಾಗಿಸಲು ಯಾವುದೇ ಅವಕಾಶವನ್ನು ಬಿಡುವುದಿಲ್ಲ.

ಸಂಗಾತಿಯೊಂದಿಗೆ ಮುಕ್ತವಾಗಿರದಿರುವುದು 
ತಮ್ಮ ಸಂಗಾತಿಯೊಂದಿಗೆ ತುಂಬಾ ಓಪನ್ ಆಗಿರಲು ಸಾಧ್ಯವಾಗದ ಜನರು, ಅವರು ಬಯಸದಿದ್ದರೂ ಸಹ ಏಕಾಂಗಿಯಾಗಿರಬೇಕು. ನಿಮ್ಮ ಸಂಗಾತಿಯೊಂದಿಗೆ ನೀವು ಮುಕ್ತವಾಗಿ ಮನಸ್ಸು ಬಿಚ್ಚಿ ಮಾತನಾಡದೇ ಇದ್ದರೆ, ಇದರಿಂದ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಏಕೆಂದರೆ ತಮ್ಮ ಸಂಗಾತಿಯ ಮನಸ್ಸನ್ನು ಅರ್ಥ ಮಾಡಿಕೊಳ್ಳದ ವ್ಯಕ್ತಿಯನ್ನು ಯಾರೂ ಬಯಸುವುದಿಲ್ಲ. 
 

ಸಂಬಂಧದ ಬೆಳವಣಿಗೆಗೆ ದಂಪತಿಗಳ ನಡುವಿನ ಉತ್ತಮ ಮತ್ತು ಮುಕ್ತ ಮಾತುಕತೆ ಬಹಳ ಮುಖ್ಯ. ಹಾಗಾಗಿ, ನೀವು ಈ ಬದಲಾವಣೆಯನ್ನು ವಿರೋಧಿಸುತ್ತಿದ್ದರೆ, ನೀವು ಸಂಬಂಧದ ಆಳಕ್ಕೆ ಹೋಗುವುದನ್ನು ತಡೆಯುತ್ತಿದ್ದೀರಿ ಎಂದರ್ಥ. ಈ ಅಭ್ಯಾಸವನ್ನು ಬಿಟ್ಟು ಸಂಗಾತಿ ಜೊತೆ ಮನಸ್ಸು ಬಿಚ್ಚಿ ಮಾತನಾಡಿ ಸಂಬಂಧ ಗಟ್ಟಿಗೊಳಿಸಿ.

ಸಂಬಂಧದಲ್ಲಿ ರಾಜಿ ಮಾಡಿಕೊಳ್ಳುವುದು ತಪ್ಪಲ್ಲ
ಸಂಬಂಧವನ್ನು ಕಾಪಾಡಿಕೊಳ್ಳಲು ಇಬ್ಬರು ವ್ಯಕ್ತಿಗಳು ತಮ್ಮದೇ ಆದ ರೀತಿಯಲ್ಲಿ ರಾಜಿ ಮಾಡಿಕೊಳ್ಳಬೇಕು ಎಂದು ಯಾರೋ ಸರಿಯಾಗಿ ಹೇಳಿದ್ದಾರೆ. ಆದರೆ ಯಾವುದೇ ರಾಜಿಯಿಲ್ಲದ ಸಂಬಂಧದಲ್ಲಿ, ದಂಪತಿಗಳ ನಡುವೆ ಆರೋಗ್ಯಕರ ಸಂಬಂಧ (healthy relationship) ಕಾಪಾಡಿಕೊಳ್ಳುವುದು ತುಂಬಾ ಕಷ್ಟಕರವಾಗುತ್ತದೆ.

ಸಂಗಾತಿಯ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳದಿರುವುದು.
ಪ್ರತಿಯೊಬ್ಬರೂ ತಮ್ಮದೇ ಆದ ಅಗತ್ಯಗಳು ಮತ್ತು ಆಸೆಗಳನ್ನು ನೋಡಿಕೊಳ್ಳುತ್ತಾರೆ, ಆದರೆ ತಮ್ಮ ಸಂಗಾತಿ ಅವರಿಂದ ಏನು ಬಯಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳದವರಿಗೆ, ಆರೋಗ್ಯಕರ ಸಂಬಂಧವನ್ನು ಕಾಪಾಡಿಕೊಳ್ಳುವುದು ತುಂಬಾ ಕಷ್ಟ. ಅಂತಹ ಜನರು ತಮ್ಮ ಅಗತ್ಯಗಳನ್ನು ಪೂರೈಸಲು ಮಾತ್ರ ಉಳಿದಿದ್ದಾರೆ.

click me!