S*X ನಂತರ ಪುರುಷರೇಕೆ ಅಷ್ಟು ಗಾಢ ನಿದ್ರೆಗೆ ಜಾರುತ್ತಾರೆ?

First Published | Aug 31, 2023, 4:49 PM IST

ಪರಾಕಾಷ್ಠೆಯ ನಂತರ, ಪ್ರತಿಯೊಬ್ಬ ವ್ಯಕ್ತಿಯ ದೇಹದಲ್ಲಿ ಕೆಲವು ಹಾರ್ಮೋನ್ ಬಿಡುಗಡೆಯಾಗುತ್ತೆ. ಇದರ ನಂತರ, ದೇಹವು ಕ್ರಮೇಣ ವಿಶ್ರಾಂತಿ ಮೋಡ್ ಗೆ ಬರಲು ಪ್ರಾರಂಭಿಸುತ್ತದೆ. ಈ ಕಾರಣದಿಂದಾಗಿಯೇ ಜನರಿಗೆ ಸೆಕ್ಸ್ ನಂತರ ನಿದ್ರೆ ಬರಲು ಆರಂಭವಾಗುತ್ತೆ..
 

ಸೆಕ್ಸ್ ಅನ್ನೋ ಶಬ್ಧ ಕೇಳಿದ್ರೆ ಸಾಕು,  ಮುಖವೂ ನಾಚಿಕೆಯಿಂದ ಕೆಂಪಾಗುತ್ತದೆ. ವಾಸ್ತವವಾಗಿ ನಾವು ಅದರ ಬಗ್ಗೆ ಬಹಿರಂಗವಾಗಿ ಎಂದಿಗೂ ಮಾತನಾಡುವುದಿಲ್ಲ. ಇದು ಮಾತ್ರವಲ್ಲ, ಅನೇಕ ಜನರು ಸೆಕ್ಸ್ ಬಗ್ಗೆ ಅಪೂರ್ಣ ಮಾಹಿತಿ ಹೊಂದಿದ್ದಾರೆ. ಇನ್ನೂ, ಅನೇಕ ಜನರು ಅದರ ಬಗ್ಗೆ ತಿಳಿದುಕೊಳ್ಳಲು ಬಯಸೋದಿಲ್ಲ. ಹಾಗಾಗಿ ಸೆಕ್ಸ್ ಬಗ್ಗೆ ಜನರಲ್ಲಿ ಹಲವಾರು ತಪ್ಪು ಕಲ್ಪನೆಗಳಿವೆ.
 

ಲೈಂಗಿಕ ಸಂಬಂಧದ (Physical relationship) ವಿಷಯಕ್ಕೆ ಬಂದಾಗ ಸೆಕ್ಸ್ ಆದ ತಕ್ಷಣ ನಿಮ್ಮ ಸಂಗಾತಿ ಅಥವಾ ನೀವು ನಿದ್ರೆಗೆ ಜಾರೋದನ್ನು ಗಮನಿಸಿರಬಹುದು. ಇದು ಏಕೆ ಆಗುತ್ತೆ ಅಥವಾ ಲೈಂಗಿಕ ಕ್ರಿಯೆಯ ನಂತರ ಮಲಗುವುದು ಸರಿಯೇ ಎಂದು ತಿಳಿದಿದೆಯೇ? ದೈಹಿಕ ಸಂಬಂಧದ ನಂತರ, ನಮ್ಮ ದೇಹದಲ್ಲಿ ಅನೇಕ ರೀತಿಯ ರಾಸಾಯನಿಕಗಳು ಬಿಡುಗಡೆಯಾಗುತ್ತವೆ.
 

Tap to resize

ಸೆಕ್ಸ್ ನಂತರ ದೇಹದಲ್ಲಿ ಡೋಪಮೈನ್ (dopamine) ಮತ್ತು ಅಡ್ರಿನಾಲಿನ್ ನಂತಹ ಹಾರ್ಮೋನುಗಳ ಬಿಡುಗಡೆಯಿಂದಾಗಿ, ಜನರು ಸಂತೋಷವನ್ನು ಅನುಭವಿಸಲು ಪ್ರಾರಂಭಿಸುತ್ತಾರೆ ಜೊತೆಗೆ ದೇಹವು ವಿಶ್ರಾಂತಿಯ ಸ್ಥಿತಿಗೆ ಬರಲು ಪ್ರಾರಂಭಿಸುತ್ತದೆ. ಲೈಂಗಿಕ ಮತ್ತು ಇತರ ರೀತಿಯ ದೈಹಿಕ ಸಂಬಂಧವು ಆಯಾಸವನ್ನು ಉಂಟುಮಾಡುತ್ತದೆ ಮತ್ತು ಬೇಗನೆ ನಿದ್ರೆ ಬರುವಂತೆ ಮಾಡುತ್ತೆ.
 

ದೈಹಿಕ ಸಂಬಂಧದ ನಂತರ ಮಹಿಳೆಯ ದೇಹದಲ್ಲಿ ಈ ಬದಲಾವಣೆಗಳಾಗುತ್ತೆ
ಜನರಲ್ ಆಫ್ ವುಮೆನ್ಸ್ ಹೆಲ್ತ್ ನಡೆಸಿದ ಅಧ್ಯಯನದಲ್ಲಿ, ಸೆಕ್ಸ್ ನಂತರ ಈಸ್ಟ್ರೊಜೆನ್ ಮಟ್ಟವು (estrogen level) ವೇಗವಾಗಿ ಹೆಚ್ಚಾಗುತ್ತದೆ ಎಂದು ವರದಿಯಾಗಿದೆ. ಈಸ್ಟ್ರೊಜೆನ್ ದೇಹಕ್ಜೆ ನಿದ್ರೆ ಮಾಡಲು ಸಹಾಯ ಮಾಡುವ ಸಿರೊಟೋನಿನ್ ಮತ್ತು ಇತರ ನ್ಯೂರೋ ಕೆಮಿಕಲ್ಸ್ ಬಳಸಲು ಸಹಾಯ ಮಾಡುತ್ತದೆ.

ದೈಹಿಕ ಸಂಬಂಧದ ನಂತರ ಮಲಗುವುದು ಸರಿಯೇ?
ಹೌದು ಖಂಡಿತ! ಈ ಸಮಯದಲ್ಲಿ, ಆಕ್ಸಿಟೋಸಿನ್ ಹಾರ್ಮೋನ್ ಸಹ ಬಿಡುಗಡೆಯಾಗುತ್ತದೆ, ಇದು ಒತ್ತಡದ ಹಾರ್ಮೋನ್ ಅನ್ನು ನಿಯಂತ್ರಿಸುತ್ತದೆ. ಕಾರ್ಟಿಸೋಲ್ ಅನ್ನು ಒತ್ತಡದ ಹಾರ್ಮೋನ್ (stress hormones) ಎಂದು ಕರೆಯಲಾಗುತ್ತದೆ. ನಮ್ಮ ಮೆದುಳಿನಲ್ಲಿರುವ ಪಿಟ್ಯುಟರಿ ಗ್ರಂಥಿ ಕಾರ್ಟಿಸೋಲ್ ಉತ್ಪಾದನೆಯನ್ನು ನಿಯಂತ್ರಿಸುತ್ತದೆ. ಒತ್ತಡದ ಪ್ರತಿಕ್ರಿಯೆಯಲ್ಲಿ ಕಾರ್ಟಿಸೋಲ್ ಪ್ರಮುಖ ಪಾತ್ರ ವಹಿಸುತ್ತದೆ. ಕಾರ್ಟಿಸೋಲ್ ನ ಸರಿಯಾದ ಸಮತೋಲನವನ್ನು ಹೊಂದಿರುವುದು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ.
 

ಸೈಕೋನ್ಯೂರೋ ಎಂಡೋಕ್ರೈನಾಲಜಿಯಲ್ಲಿ ಪ್ರಕಟವಾದ ಅಧ್ಯಯನವು ಅನೇಕ ರೀತಿಯಲ್ಲಿ, ಆಕ್ಸಿಟೋಸಿನ್ ಮತ್ತು ಕಾರ್ಟಿಸೋಲ್ 'ಯಿಂಗ್-ಯಾಂಗ್' ಹಾರ್ಮೋನುಗಳ ಪಾತ್ರವನ್ನು ವಹಿಸುತ್ತವೆ, ಪರಸ್ಪರ ಸಮತೋಲನಗೊಳಿಸುತ್ತವೆ ಎಂದು ಕಂಡುಹಿಡಿದಿದೆ. ಸರಳವಾಗಿ ಹೇಳೋದಾದ್ರೆ, ನಮ್ಮ ದೇಹದಲ್ಲಿ ಆಕ್ಸಿಟೋಸಿನ್ ಮಟ್ಟವು ಹೆಚ್ಚಾದಂತೆ, ಒತ್ತಡದ ಕಾರ್ಟಿಸೋಲ್ ಮಟ್ಟವು ಕಡಿಮೆಯಾಗುತ್ತದೆ.

ಒತ್ತಡ ಕಡಿಮೆ ಮಾಡುವುದು ದೇಹದಲ್ಲಿ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಆದ್ದರಿಂದ ದೈಹಿಕ ಸಂಬಂಧದ ನಂತರ ಈ ಹಾರ್ಮೋನ್ ಬಿಡುಗಡೆಯಾದಾಗ, ಒತ್ತಡ ಕಡಿಮೆಯಾಗುತ್ತದೆ, ಇದರಿಂದ ನಿದ್ರೆ ಬರಲು ಪ್ರಾರಂಭವಾಗುತ್ತೆ. ಆದ್ದರಿಂದ, ಲೈಂಗಿಕ ಕ್ರಿಯೆಯ (sex) ಸಮಯದಲ್ಲಿ ನೀವು ಬೇಗ ನಿದ್ರೆಗೆ ಜಾರಿದರೆ, ಚಿಂತಿಸಬೇಕಾಗಿಲ್ಲ. ಆದರೆ ಇನ್ನೊಂದು ವಿಷ್ಯ ಏನಂದ್ರೆ. ಹೆಚ್ಚಿನ ಮಹಿಳೆಯರಿಗೆ ಸೆಕ್ಸ್ ನಂತರ ನಿದ್ರೆ ಬರೋದೆ ಇಲ್ಲ. ಬದಲಾಗಿ ಮಹಿಳೆಯರು ಸೆಕ್ಸ್ ನಂತರ ಹೆಚ್ಚಾಗಿ ಮುದ್ದಾಡಲು ಮತ್ತು ಮಾತುಕತೆ ನಡೆಸಲು ಆಸಕ್ತಿ ಹೊಂದಿರುತ್ತಾರೆ. ಇದರಿಂದ ಮಾತ್ರ ಅವರಿಗೆ ಖುಷಿ ಸಿಗುತ್ತೆ.

ದೈಹಿಕ ಸಂಬಂಧ ಹೊಂದಿದ ನಂತರ ಪುರುಷರು ಬೇಗನೆ ಏಕೆ ನಿದ್ರಿಸುತ್ತಾರೆ?
ಪುರುಷರಲ್ಲಿ ರಿಫ್ರಾಕ್ಟರಿ ಪಿರಿಯಡ್ಸ್ ನಿಯಂತ್ರಿಸುವ ಮತ್ತು ಲೈಂಗಿಕ ಕ್ರಿಯೆಯ ನಂತರ ನಿದ್ರೆ ಬರುವಂತೆ ಮಾಡುವ ಹಾರ್ಮೋನ್ ಪ್ರೊಲ್ಯಾಕ್ಟಿನ್ ಮಟ್ಟವು ಆರ್ಗಸಂ ನಂತರ ಹೆಚ್ಚಾಗುತ್ತದೆ. ಪ್ರೊಲ್ಯಾಕ್ಟಿನ್ ಪುರುಷರಲ್ಲಿ ರಿಫ್ರೆಕ್ಟರಿ ಪಿರಿಯೇಡನ್ನು (refrectory period) ನಿಯಂತ್ರಿಸುವ ಹಾರ್ಮೋನ್ ಆಗಿದೆ. ಜೊತೆಗೆ ನೊರ್ಪೈನ್ಫ್ರಿನ್, ಸೆರೊಟೋನಿನ್, ಆಕ್ಸಿಟೋಸಿನ್, ವ್ಯಾಸೊಪ್ರೆಸಿನ್ ಮತ್ತು ನೈಟ್ರಿಕ್ ಆಕ್ಸೈಡ್ನಂತಹ ಎಲ್ಲಾ ಹಾರ್ಮೋನುಗಳ ಬಿಡುಗಡೆಯೊಂದಿಗೆ ಆರ್ಗಸಂ ದೇಹ ಮತ್ತು ಮೆದುಳನ್ನು ತುಂಬುತ್ತದೆ. ಅನೇಕ ಉತ್ತಮ ಹಾರ್ಮೋನುಗಳು ನಿಮ್ಮಲ್ಲಿ ತೃಪ್ತಿಯ ಭಾವನೆಯನ್ನು ಸೃಷ್ಟಿಸುತ್ತವೆ. ಈ ಉತ್ತಮ ಹಾರ್ಮೋನುಗಳು ಮತ್ತು ನ್ಯೂರೋ ಕೆಮಿಕಲ್ಸ್ ಪರಿಣಾಮವಾಗಿ, ಸೆಕ್ಸ್ ನಂತರ ಜನರು ನೆಮ್ಮದಿ ಅನುಭವಿಸುತ್ತಾರೆ ಮತ್ತು ಕ್ರಮೇಣ ನಿದ್ರೆ ಮಾಡಲು ಪ್ರಾರಂಭಿಸುತ್ತಾರೆ. 

ಲೈಂಗಿಕ ಕ್ರಿಯೆಯ ನಂತರ ಪುರುಷರು ನಿದ್ರೆ ಮಾಡಲು ಮತ್ತೊಂದು ಕಾರಣವೆಂದರೆ ಆ ಸಮಯದಲ್ಲಿ ಚಟುವಟಿಕೆಯು ಸ್ನಾಯುಗಳಲ್ಲಿ ಶಕ್ತಿಯನ್ನು ಉತ್ಪಾದಿಸುವ ಗ್ಲೈಕೋಜೆನ್ ಅನ್ನು ಕಡಿಮೆ ಮಾಡುತ್ತದೆ. ಮಹಿಳೆಯರು ಪುರುಷರಿಗಿಂತ ಕಡಿಮೆ ಸ್ನಾಯುಗಳನ್ನು ಹೊಂದಿರುತ್ತಾರೆ, ಆದ್ದರಿಂದ ಸೆಕ್ಸ್ ನಂತರ ಪುರುಷರು ನಿದ್ರೆಗೆ ಜಾರುತ್ತಾರೆ, ಆದರೆ ಮಹಿಳೆಯರಿಗೆ ನಿದ್ರೆ ಬರೋದಿಲ್ಲ.
 

ಸೆಕ್ಸ್ ನಂತರ ಮಲಗೋದಕ್ಕೆ ಇತರ ಕಾರಣಗಳು ಇವೆ
ಹಾರ್ಮೋನುಗಳ ಬಿಡುಗಡೆಯ ಹೊರತಾಗಿ, ಸೆಕ್ಸ್ ನಂತರ ನಿದ್ರೆ ಮಾಡೋದಕ್ಕೆ ಮತ್ತೊಂದು ಕಾರಣವಿದೆ, ಈ ಕಾರಣದಿಂದಾಗಿ ನಾವು ನಿದ್ರೆ ಮಾಡಲು ಪ್ರಾರಂಭಿಸುತ್ತೇವೆ. ಹೆಚ್ಚಿನ ಜನರು ಕತ್ತಲೆಯಲ್ಲಿ ಅಥವಾ ದೀಪಗಳನ್ನು ಆಫ್ ಮಾಡುವ ಮೂಲಕ ಸೆಕ್ಸ್ ಮಾಡಲು ಇಷ್ಟಪಡ್ತಾರೆ. ಕತ್ತಲೆಯಿಂದಾಗಿ, ದೇಹವು ಸಂಕೇತಗಳನ್ನು ಪಡೆಯಲು ಪ್ರಾರಂಭಿಸುತ್ತದೆ. ಇದು ನಿದ್ರೆಯ ಸಮಯ ಎಂದು ದೇಹವು ಭಾವಿಸುತ್ತದೆ ಅಂತಹ ಪರಿಸ್ಥಿತಿಯಲ್ಲಿ, ಮೆಲಟೋನಿನ್ ಹಾರ್ಮೋನ್ ನಿದ್ರೆಯ ಚಕ್ರವನ್ನು ಉತ್ತೇಜಿಸಲು ಪ್ರಾರಂಭಿಸುತ್ತದೆ. ಈ ಕಾರಣದಿಂದಾಗಿ, ಸೆಕ್ಸ್ ಬಳಿಕ ಹೆಚ್ಚಿನ ಜನರು ನಿದ್ರೆಗೆ ಜಾರುತ್ತಾರೆ.

Latest Videos

click me!