'ಕಾಮ' ಅಲ್ವಂತೆ, ಈ ವಯಸ್ಸಿನಲ್ಲಿ ಮಹಿಳೆಯರು ಸಂಗಾತಿಗೆ ಮೋಸ ಮಾಡಲು ಕಾರಣ ಇದಂತೆ!

Published : Oct 28, 2025, 02:03 PM IST

Relationship Coach Advice: ಈ ವಿಚಾರದಲ್ಲಿ ಪುರುಷರು, ಮಹಿಳೆಯರು ಇಬ್ಬರೂ ಮೋಸ ಮಾಡುತ್ತಾರೆ. ಆದರೆ ಮಹಿಳೆಯರ ವಿಷಯದಲ್ಲಿ ಮೋಸಕ್ಕೆ ಕಾರಣ ಕೇವಲ ಲೈಂಗಿಕತೆ ಅಥವಾ ಯಾರೊಬ್ಬರ ಮೇಲಿನ ಆಕರ್ಷಣೆಯಲ್ಲ. ಅದರ ಹಿಂದೆ ಬೇರೆ ಕೆಲವು ಕಾರಣವಿರಬಹುದು. ಸಂಬಂಧ ತರಬೇತುದಾರ ಕೋಮಲ್ ಈ ಬಗ್ಗೆ ಮಾತನಾಡಿದ್ದಾರೆ.  

PREV
16
ರಿಲೇಶನ್‌ಶಿಪ್ ಕೋಚ್ ಹೇಳಿದ್ದೇನು?

ಗಂಡ ಹೆಂಡತಿಗೆ, ಹೆಂಡತಿ ಗಂಡನಿಗೆ ಮೋಸ ಮಾಡುವ ಬಗ್ಗೆ ಆಗಾಗ್ಗೆ ಚರ್ಚೆ ಮಾಡುವುದನ್ನ ನೋಡಿರಬಹುದು. ಇತ್ತೀಚೆಗಂತೂ ಮದುವೆಗೂ ಮುನ್ನವೇ ಅಂದರೆ ಡೇಟಿಂಗ್ ಸಮಯದಲ್ಲಿ, ನಿಶ್ಚಿತಾರ್ಥದ ನಂತರ ಅಥವಾ ಮದುವೆಯಾದ ಕೆಲವು ವರ್ಷಕ್ಕೇ ಪರಸ್ಪರರು ಮೋಸ ಮಾಡವುದನ್ನ ನೋಡಿರಬಹುದು. ಈ ವಿಚಾರದಲ್ಲಿ ಪುರುಷರು ಮತ್ತು ಮಹಿಳೆಯರು ಇಬ್ಬರೂ ಮೋಸ ಮಾಡುತ್ತಾರೆ. ಆದರೆ ಮಹಿಳೆಯರ ವಿಷಯದಲ್ಲಿ ಅವರ ಮೋಸಕ್ಕೆ ಕಾರಣ ಕೇವಲ ಲೈಂಗಿಕತೆ ಅಥವಾ ಯಾರೊಬ್ಬರ ಮೇಲಿನ ಆಕರ್ಷಣೆಯಲ್ಲ. ಅದರ ಹಿಂದೆ ಬೇರೆ ಯಾವುದೋ ಕಾರಣವಿರಬಹುದು. ಸಂಬಂಧ ತರಬೇತುದಾರ (Relationship Coach) ಕೋಮಲ್ ಈ ಬಗ್ಗೆ ಮಾತನಾಡಿದ್ದು, ವಿಡಿಯೋವನ್ನ ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಶೇರ್ ಮಾಡಿದ್ದಾರೆ. ಇದರಲ್ಲಿ 34 ರಿಂದ 38 ವರ್ಷದೊಳಗಿನ ಮಹಿಳೆಯರು ಏಕೆ ಚೀಟ್ ಮಾಡ್ತಾರೆ ಎಂಬುದನ್ನು ಅವರು ವಿವರಿಸುತ್ತಾರೆ. 

26
ಮಹಿಳೆಯರು ಮೋಸ ಮಾಡುವುದೇಕೆ?

ಮಹಿಳೆ ತನ್ನ ಸಂಗಾತಿಗೆ ಮೋಸ ಮಾಡಲು ಅಥವಾ ದ್ರೋಹ ಮಾಡಲು ಕಾಮವು ಅಪರೂಪ ಎಂದು ಸಂಬಂಧ ತರಬೇತುದಾರರು ಹೇಳುತ್ತಾರೆ. ಒಂಟಿತನ, ಭಾವನಾತ್ಮಕತೆ ಮತ್ತು ಸೆಲ್ಫ್ ರಿಯಲೈಸೇಶನ್ ವಂಚನೆಗೆ ಪ್ರಮುಖ ಕಾರಣಗಳಾಗಿರಬಹುದು. ಈ ವಯಸ್ಸಿಗೆ ಬರುವ ಹೊತ್ತಿಗೆ ಮಹಿಳೆಯರು ಭಾವನಾತ್ಮಕವಾಗಿ ಕಳೆದುಹೋಗಿರುತ್ತಾರೆ. ತಾಯಿಯಾಗಿ, ಹೆಂಡತಿಯಾಗಿ ಮತ್ತು ಮನೆಯ ಪಾಲಕರಾಗಿ ಹೆಚ್ಚು ಸಮಯವನ್ನು ಕಳೆಯುತ್ತಾರೆ. ಆಗ ಅವರಿಗೆ ತಮ್ಮ ಕನಸುಗಳು ಮತ್ತು ಆಸೆಗಳಿಗೆ ಇನ್ನು ಮುಂದೆ ಬೆಲೆಯಿಲ್ಲ ಅನಿಸಬಹುದು.

36
ಒಂಟಿತನದ ಅನುಭವ

ಸಂಗಾತಿಗೆ ತನ್ನ ಬಗ್ಗೆ ಒಂಚೂರು ಭಾವನೆ ಇಲ್ಲದಿರುವುದು, ಸಾಮೀಪ್ಯ ಇಲ್ಲದಿರುವುದರಿಂದ ಸಹ ಒಂಟಿತನವನ್ನು ಅನುಭವಿಸಬಹುದು. ಮಹಿಳೆಯರಿಗೆ ವಿಶೇಷವಾಗಿ ಪ್ರೀತಿ, ತಿಳುವಳಿಕೆ ಮತ್ತು ತಮ್ಮ ಸಂಗಾತಿಯೊಂದಿಗೆ ಸುರಕ್ಷಿತ ಭಾವನಾತ್ಮಕ ಬಂಧದ ಅಗತ್ಯವಿದೆ.

46
ಸಮಸ್ಯೆಗಳು ಉದ್ಭವ

ಮಹಿಳೆಯರು ಸಾಮಾನ್ಯವಾಗಿ 30 ವರ್ಷಗಳ ನಂತರ ತಮಗೆ ಅಸ್ತಿತ್ವವೇ ಇಲ್ಲವೇನೋ ಎಂಬಂತಹ ಸಮಸ್ಯೆ ಅನುಭವಿಸುತ್ತಾರೆ. ಆಗಾಗ್ಗೆ ತಮ್ಮನ್ನು ತಾವು "ನನ್ನ ಕುಟುಂಬದಿಂದ ಹೊರಗೆ ನಾನು ಯಾರು?", "ನಾನು ನನ್ನ ಆಸೆಗಳನ್ನು ತ್ಯಜಿಸಿದ್ದೇನೆಯೇ?", ಮತ್ತು "ನಿಜವಾಗಿಯೂ ಪ್ರೀತಿ ಎಂದರೆ ಇದೇನಾ?" ಎಂದು ಕೇಳಿಕೊಳ್ಳುತ್ತಾರೆ.

56
ಪ್ರೀತಿ ಇಲ್ಲದ ಮೇಲೆ

ಮಹಿಳೆಯರು ತಮ್ಮ ಸಂಗಾತಿಯಿಂದ ಪ್ರೀತಿಯನ್ನು ಪಡೆಯದಿದ್ದಾಗ ಅಥವಾ ಸಂಗಾತಿ ಅವರನ್ನು ಗಮನಿಸುವುದನ್ನು ನಿಲ್ಲಿಸಿದಾಗ ಅವರ ಜೀವನದಲ್ಲಿ ಹೊಸಬರು ಬರುತ್ತಾರೆ. ಕೊನೆಗೆ ಅವರು ಅವರನ್ನು ಗಮನಿಸಲು, ಮೆಚ್ಚಿಸಲು ಪ್ರಾರಂಭಿಸುತ್ತಾರೆ. ಮಹಿಳೆಗೆ ಮೊದಲಿದ್ದ ಉಸಿರುಗಟ್ಟಿದ ವಾತವರಣ ಹೋಗಿ ಈಗ ಮತ್ತೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ತೋರುತ್ತದೆ.

66
ಕಳೆದುಹೋದ ಭಾವನೆ

ಮಹಿಳೆಯರು ವಯಸ್ಸಾದಂತೆ ಕಾಮಕ್ಕಿಂತ ಹೆಚ್ಚಾಗಿ ಪೂರೈಸದ ಅಗತ್ಯತೆಗಳು ಮತ್ತು ಕಳೆದುಹೋದ ಭಾವನೆ ಬರತೊಡಗುತ್ತದೆ. ಹಾಗಾಗಿ ಸಂಬಂಧ ತರಬೇತುದಾರರು ಈ ಪೋಸ್ಟ್ ಮೂಲಕ ಮಹಿಳೆಯರು ಏಕೆ ಮೋಸ ಮಾಡುತ್ತಾರೆ ಎಂಬುದನ್ನು ವಿವರಿಸಲು ಪ್ರಯತ್ನಿಸಿದ್ದಾರೆ.

Read more Photos on
click me!

Recommended Stories