ಮುಕೇಶ್ ಅಂಬಾನಿ ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ. ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷರಾಗಿದ್ದಾರೆ. ಇದು 1842000 ಕೋಟಿ ರೂ. ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ಕಂಪನಿಯಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಭಾರತದ ಅತಿದೊಡ್ಡ ಉದ್ಯಮಗಳಲ್ಲಿ ಒಂದಾಗಿದೆ.
ರಿಲಯನ್ಸ್ ಹಲವಾರು ಅಂಗ ಸಂಸ್ಥೆಗಳು ಒಂದು ದಿನಕ್ಕೆ ಕೋಟಿಗಟ್ಟಲೆ ಗಳಿಸುತ್ತದೆ. ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ, ಮಕ್ಕಳಾದ ಆಕಾಶ್ ಅಂಬಾನಿ, ಅನಂತ್ ಅಂಬಾನಿ, ಇಶಾ ಅಂಬಾನಿ ಹಲವಾರು ಅಂಗಸಂಸ್ಥೆಗಳನ್ನು ನಿರ್ವಹಿಸುತ್ತಾರೆ.
ಕೋಟಿ ಉದ್ಯಮವನ್ನು ನಿರ್ವಹಿಸೋ ನೀತಾ ಅಂಬಾನಿ ಅಲ್ಟ್ರಾ ಲಕ್ಸುರಿಯಸ್ ಲೈಫ್‌ಸ್ಟೈಲ್‌ನ್ನು ಹೊಂದಿದ್ದಾರೆ. ಕೋಟಿ ಕೋಟಿ ಬೆಲೆಯ ಡ್ರೆಸ್, ಆಭರಣಗಳನ್ನು ಧರಿಸುತ್ತಾರೆ. ಆದರೆ ಇಂಥಾ ಬಿಲಿಯನೇರ್‌ನ್ನು ಮದುವೆಯಾಗೋ ಮೊದಲು ನೀತಾ ಅಂಬಾನಿ ಕೆಲವು ಕಂಡೀಷನ್ಸ್ ಹಾಕಿದ್ದರು ಅನ್ನೋದು ನಿಮ್ಗೆ ಗೊತ್ತಿದ್ಯಾ?
ಹೌದು ನೀತಾ, ಮುಕೇಶ್ ಅವರನ್ನು ಮದುವೆಯಾಗುವ ಮೊದಲು ತನಗೆ ಒಂದು ಷರತ್ತು ಇತ್ತು ಎಂದು ಹೇಳಿದರು. ಅದು ಮದುವೆಯಾದ ನಂತರವೂ ಶಿಕ್ಷಕಿಯಾಗಿ ಕೆಲಸ ಮಾಡುವುದನ್ನು ಮುಂದುವರಿಸುವ ಬಗ್ಗೆಯಾಗಿತ್ತು.
ನೀತಾ ಅಂಬಾನಿ, ಅಂಬಾನಿ ಕುಟುಂಬದ ಪ್ರಮುಖ ಭಾಗವಾಗುವ ಮೊದಲು, ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ನೀತಾ ತನ್ನ ಮದುವೆಯ ನಂತರ ಹಲವಾರು ವರ್ಷಗಳ ಕಾಲ ಬೋಧನೆಯನ್ನು ಮುಂದುವರೆಸಿದರು.
ಧೀರೂಭಾಯಿ ಅಂಬಾನಿ ಮತ್ತು ಕೋಕಿಲಾಬೆನ್ ಅಂಬಾನಿಯವರ ಹಿರಿಯ ಮಗ ಮುಕೇಶ್ ಅಂಬಾನಿಯನ್ನು ಮದುವೆಯಾಗುವ ಮೊದಲು ನೀತಾ ಅಂಬಾನಿ ಅವರು ನಾರ್ಸಿ ಮೊಂಜಿ ಕಾಲೇಜ್ ಆಫ್ ಕಾಮರ್ಸ್ ಅಂಡ್ ಎಕನಾಮಿಕ್ಸ್‌ನಿಂದ ಪದವಿ ಪಡೆದರು. ನಂತರ ಶಿಕ್ಷಕಿಯಾದರು.
ದೇಶದಲ್ಲಿ ಹಲವಾರು ಶಾಲೆಗಳನ್ನು ತೆರೆಯುವಲ್ಲಿ ನೀತಾ ಅಂಬಾನಿ ಪ್ರಮುಖ ಪಾತ್ರ ವಹಿಸಿದ್ದಾರೆ. ನವೆಂಬರ್ 2023ರಲ್ಲಿ, ನೀತಾ ಮುಖೇಶ್ ಅಂಬಾನಿ ಜೂನಿಯರ್ ಸ್ಕೂಲ್ (NMAJS) ಅನ್ನು ಮುಂಬೈನಲ್ಲಿ ಸ್ಥಾಪಿಸಲಾಯಿತು.
ಇದು ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ (DAIS) ಕ್ಯಾಂಪಸ್‌ಗೆ ಸಮೀಪದಲ್ಲಿದೆ.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ರಿಲಯನ್ಸ್ ಫೌಂಡೇಶನ್ ಶಾಲೆಗಳನ್ನು ಸ್ಥಾಪಿಸುವಲ್ಲಿ ನೀತಾ ಅಂಬಾನಿ ಯಶಸ್ವಿಯಾದರು. 14 ರಿಲಯನ್ಸ್ ಫೌಂಡೇಶನ್ ಶಾಲೆಗಳು ಜಾಮ್‌ನಗರ, ಸೂರತ್, ವಡೋದರಾ, ದಹೇಜ್, ಲೋಧಿವಾಲಿ, ನಾಗೋಥೇನ್, ನಾಗ್ಪುರ ಮತ್ತು ನವಿ ಮುಂಬೈನಲ್ಲಿವೆ.