ಭಯವಿಲ್ಲದೆ ಮಾತನಾಡಿ (Do not afraid)
ನಿಮ್ಮ ಸಂಗಾತಿ ಅಥವಾ ಯಾರಾದರೂ ನಿಮ್ಮ ಆಕ್ಷೇಪಾರ್ಹ ಚಿತ್ರ ಅಥವಾ ವೀಡಿಯೊವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರೆ, ಭಯವಿಲ್ಲದೆ ಅವರೊಂದಿಗೆ ಮಾತನಾಡಿ. ನೀವು ಹೆದರಿಕೊಂಡಷ್ಟು ಅವರು ನಿಮ್ಮನ್ನು ಹೆಚ್ಚು ಹೆದರಿಸುತ್ತಾರೆ. ಹಾಗಾಗಿ ಭಯವಿಲ್ಲದೆ ಧೈರ್ಯದಿಂದ ಮಾತನಾಡಿ.
ನಿಮ್ಮ ಕುಟುಂಬಕ್ಕೆ ಹೇಳಿ (talk with your family)
ಯಾರಾದರೂ ನಿಮ್ಮನ್ನು ಬೆದರಿಸಲು ಪ್ರಯತ್ನಿಸುತ್ತಿದ್ದರೆ, ಮೊದಲು ಇಡೀ ವಿಷಯವನ್ನು ನಿಮ್ಮ ತಾಯಿ ಅಥವಾ ವಿಶೇಷ ವ್ಯಕ್ತಿಯೊಂದಿಗೆ ಹಂಚಿಕೊಳ್ಳಿ. ಅವರು ಮೊದಲಿಗೆ ನಿಮ್ಮ ಬಗ್ಗೆ ಕೋಪ ಮಾಡಿಕೊಳ್ಳಬಹುದು, ನಿಮಗೆ ಬೈಯ್ಯಬಹುದು, ಆದರೆ ಅವರು ಎಂದಿಗೂ ನಿಮ್ಮ ಜೊತೆಯೇ ಇರುತ್ತಾರೆ.
ಯಾವುದೇ ರೀತಿಯ ಒಪ್ಪಂದ ಮಾಡಿಕೊಳ್ಳಬೇಡಿ ( do not make deal)
ನಿಮಗೆ ಬೆದರಿಕೆ ಹಾಕುವ ಅಥವಾ ಯಾವುದೇ ರೀತಿಯಲ್ಲಿ ಒಪ್ಪಂದ ಮಾಡುವಂತೆ ಕೇಳಿಕೊಂಡರೆ, ಆ ತಪ್ಪು ಯಾವತ್ತೂ ಮಾಡಬೇಡಿ. ಯಾಕಂದ್ರೆ ಇದರಿಂದ ನಿಮಗೆ ನಷ್ಟವಾಗುತ್ತೆ. ನೀವು ಒಂದು ಬಾರಿ ಹಣ ಪಾವತಿಸಲು ಒಪ್ಪಿಕೊಂಡರೆ, ಜೀವನ ಪರ್ಯಂತ ಅದನ್ನೇ ಮಾಡಬೇಕಾಗಿ ಬರುತ್ತೆ.
ಪೊಲೀಸರಿಗೆ ದೂರು ನೀಡಿ (police complaint)
ಮಾಜಿ ಗೆಳೆಯ ಆಗಿರಲಿ, ಯಾರೇ ಆಗಿರಲಿ ನಿಮ್ಮ ಪರ್ಸನಲ್ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರೆ, ಆ ವಿಷಯದಲ್ಲಿ ನೀವು ಮೌನ ವಹಿಸೋದು ತಪ್ಪು. ಬದಲಗೈ ನೀವು ಪೊಲೀಸರಿಗೆ ದೂರು ನೀಡಬಹುದು. ಅಥವಾ ಮಹಿಳಾ ಸಹಾಯವಾಣಿ ಸಂಖ್ಯೆಗೆ ದೂರು ನೀಡಬೇಕು.
ದೂರು ನೀಡಲು ಹಿಂಜರಿಯಬೇಡಿ (complaint)
ಇಂತಹ ಕೃತ್ಯಗಳಿಗೆ ಭಾರತದ ಕಾನೂನು ಸಾಕಷ್ಟು ಕಟ್ಟುನಿಟ್ಟಾಗಿದೆ. ಈ ಕಾರಣದಿಂದಾಗಿ, ನೀವು ಭಯಭೀತರಾಗಬೇಕಾಗಿಲ್ಲ. ಇಂತಹ ಸಂದರ್ಭ ಬಂದರೆ, ಒಂದು ನಿಮಿಷವೂ ತಡಮಾಡದೇ ದೂರು ನೀಡಿ. ಇದರಿಂದ ಮುಂದೆ ಆಗಬಹುದಾದಂತ ಅನಾಹುತ ತಪ್ಪುತ್ತೆ.
ಉನ್ನತ ಅಧಿಕಾರಿಗಳಿಗೆ ದೂರು ನೀಡಿ (Complaint to higher officer)
ಒಂದು ವೇಳೆ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಅಥವಾ ಸಹಾಯವಾಣಿಯಲ್ಲಿ ನಿಮ್ಮ ದೂರನ್ನು ನೋಂದಾಯಿಸದಿದ್ದರೆ, ನೀವು ಉನ್ನತ ಅಧಿಕಾರಿಗಳಿಗೆ ಅಥವಾ ಮಹಿಳಾ ಆಯೋಗಕ್ಕೆ ದೂರು ನೀಡಬಹುದು. ಅಲ್ಲಿ ಖಂಡಿತವಾಗಿಯೂ ನಿಮ್ಮ ದೂರನ್ನು ದಾಖಲಿಸುತ್ತಾರೆ.
ಜಾಗರೂಕರಾಗಿರಿ (be carefull)
ನೀವು ರಿಲೇಶನ್’ಶಿಪ್ ನಲ್ಲಿದ್ದರೆ, ಎಲ್ಲವನ್ನೂ ಹೃದಯದಿಂದ ಮಾಡಬೇಡಿ. ಸಂಗಾತಿಯು ನಿಮ್ಮ ಖಾಸಗಿ ಕ್ಷಣದ ವೀಡಿಯೊ ಮಾಡಲು ಬಯಸಿದರೆ, ಹಾಗೆ ಮಾಡಲು ನಿರಾಕರಿಸಿ. ಏಕೆಂದರೆ ಇದರಿಂದ ಮುಂದೊಂದು ದಿನ ನಿಮಗೆ ತೊಂದರೆಯಾಗಬಹುದು.
ಅಂತಹ ಚಿತ್ರಗಳನ್ನು ನಿಮ್ಮ ಫೋನ್ ನಲ್ಲಿ ಇಡಬೇಡಿ (do not take too personal photos)
ಅದು ನಿಮ್ಮ ಏಕಾಂಗಿ ಫೋಟೊ ಆಗಿರಲಿ ಅಥವಾ ಸಂಗಾತಿ ಜೊತೆಗಿನ ಖಾಸಗಿ ಫೋಟೊ ಆಗಿರಲಿ, ಯಾವುದನ್ನೂ ನಿಮ್ಮ ಫೋನ್ನಲ್ಲಿ ಎಂದಿಗೂ ಇಡಬೇಡಿ. ಇದು ದುರುಪಯೋಗವಾಗುವ ಸಾಧ್ಯತೆ ಇದೆ.
ಯಾರನ್ನೂ ಅತಿಯಾಗಿ ನಂಬಬೇಡಿ (do not believe anyone)
ಯಾರನ್ನೂ ಕುರುಡಾಗಿ ನಂಬಬೇಡಿ. ವಿಶೇಷವಾಗಿ ಸೋಶಿಯಲ್ ಮೀಡಿಯವಾಗಿರಲಿ ಅಥವಾ ನಿಮ್ಮ ಬಾಯ್ ಫ್ರೆಂಡ್ ಆಗಿರಲಿ, ಎಲ್ಲವನ್ನು ಕುರುಡಾಗಿ ನಂಬುವ ತಪ್ಪು ಮಾಡಬೇಡಿ. ಮೊದಲಿಗೆ ಅವರ ಬಗ್ಗೆ ಸರಿಯಾಗಿ ತಿಳಿದುಕೊಳ್ಳೋದು ಮುಖ್ಯ.