ನಿಮ್ಮ ಸಂಗಾತಿಯೂ ಈ ತರ ಆಡ್ತಾರಾ? ಇನ್ನು ಲವ್ ಮಾಡೋದು ವೇಸ್ಟ್

First Published | May 1, 2023, 5:28 PM IST

ಪ್ರೀತಿ ಅಮೂಲ್ಯವಾದದ್ದು, ಆದರೆ ಪವಿತ್ರವಾದ ಪ್ರೀತಿ ಎಲ್ಲರಿಗೆ ಸಿಗೋದಿಲ್ಲ. ಹಾಗಾಗಿ ನಿಮ್ಮ ಪ್ರೀತಿಯ ಹುಡುಗ ನಿಮ್ಮನ್ನು ನಿಜವಾಗಿಯೂ ಮನಸ್ಸಾರೆ ಇಷ್ಟ ಪಡುತ್ತಿದ್ದಾರಾ ಎಂದು ತಿಳಿಯಲು ಈ ಟಿಪ್ಸ್ ಫಾಲೋ ಮಾಡಿ. ಇಲ್ಲಾಂದ್ರೆ ನಿಮ್ಮ ಜೀವನ ಹಾಳಾಗಬಹುದು, ಹುಷಾರಾಗಿರಿ.      
 

ಆಫ್ಫೆಕ್ಷನ್(Affection) ಇಲ್ಲದಿದ್ದರೆ 
ಒಬ್ಬ ಮನುಷ್ಯನು ನಿಮ್ಮನ್ನು ನಿಜವಾಗಿಯೂ ಪ್ರೀತಿಸಿದ್ರೆ, ಅವನು ನಿಮ್ಮ ಕಡೆಗೆ ಅನೇಕ ರೀತಿಯಲ್ಲಿ ವಾತ್ಸಲ್ಯ ತೋರಿಸುತ್ತಾನೆ. ಆದರೆ ಅವನು ಯಾವುದೇ ರೀತಿಯ ಅಫೆಕ್ಷನ್ ತೋರಿಸದೇ ಇದ್ರೆ  ನಿಜವಾದ ಪ್ರೀತಿ ಕಾಣೆಯಾಗಿದೆ ಎಂದರ್ಥ.

ನಿಮ್ಮ ಬಗ್ಗೆ ಆಸಕ್ತಿ (Interest) ಇಲ್ಲದಿರೋದು
ನೀವು ಏನೇ ಮಾತನಾಡಿದರೂ ಅಥವಾ ಮಾಡಿದರೂ, ಅವರು ಹೆಚ್ಚು ಗಮನ ಹರಿಸೋದಿಲ್ಲ ಅಥವಾ ಅವರಲ್ಲಿ ಆಸಕ್ತಿ ತೋರಿಸೋದಿಲ್ಲ, ಅಂದರೆ, ಅವರು ಸಂಬಂಧದಲ್ಲಿ ಇನ್ವೆಸ್ಟ್ ಮಾಡೋದಿಲ್ಲ ಎಂದರ್ಥ. ಅವರಿಂದ ಆದಷ್ಟು ದೂರ ಇರೋದೇ ಒಳ್ಳೇದು. 

Tap to resize

ನಿಮ್ಮ ಮಾತು(Talk) ಕೇಳದಿರೋದು
ನೀವು ಏನೇ ಹೇಳಿದರೂ, ಅವರು ಅದನ್ನು ಎಚ್ಚರಿಕೆಯಿಂದ ಕೇಳೋದಿಲ್ಲ ಮತ್ತು ಹೇಳಿದ ವಿಷಯಗಳನ್ನು ಮರೆತುಬಿಡುತ್ತಾರೆ, ಆಗ ಈ ಚಿಹ್ನೆಗಳು ನಿಮ್ಮ ಆಯ್ಕೆ ಸರಿಯಲ್ಲ ಎಂದು ಹೇಳುತ್ತಿದೆ ಎಂದು ಅರ್ಥ ಮಾಡಿಕೊಳ್ಳಿ.

ಭವಿಷ್ಯದ ಪ್ಲ್ಯಾನಿಂಗ್ (Planning)ಇಲ್ಲದೇ ಇರೋದು
ನಿಮ್ಮ ಸಂಗಾತಿ ನಿಮ್ಮೊಂದಿಗೆ ಭವಿಷ್ಯಕ್ಕಾಗಿ ಯಾವುದೇ ಯೋಜನೆಗಳನ್ನು ರೂಪಿಸುತ್ತಿಲ್ಲ ಎಂದಾದ್ರೆ ಆ ಸಂಬಂಧ ಉಳಿಸಿಕೊಳ್ಳೋದ್ರಲ್ಲಿ ಅರ್ಥವಿಲ್ಲ ಎಂದು ಈಗಲೇ ಅರ್ಥ ಮಾಡಿಕೊಳ್ಳಿ. ನಿಮ್ಮನ್ನು ಇಷ್ಟ ಪಡೋರು ತಮ್ಮ ಭವಿಷ್ಯದ ಎಲ್ಲಾ ಯೋಜನೆಗಳಲ್ಲಿ ನಿಮ್ಮನ್ನು ಸೇರಿಸಿಕೊಳ್ಳುತ್ತಾರೆ.

ವಿಶ್ವಾಸ ಗೆಲ್ಲಲು ಆಸಕ್ತಿ ಇರದಿದ್ರೆ 
ನಿಮ್ಮ ಸಂಗಾತಿ ತಮ್ಮ ಭರವಸೆಗಳನ್ನು ಉಳಿಸಿಕೊಳ್ಳದಿದ್ದರೆ ಮತ್ತು ನಿಮ್ಮ ನಂಬಿಕೆಯನ್ನು ಗೆಲ್ಲಲು ಆಸಕ್ತಿ ಹೊಂದಿಲ್ಲದಿದ್ದರೆ, ಅದು ಅವರು ಸಂಬಂಧದ(Relationship) ಬಗ್ಗೆ ಗಂಭೀರವಾಗಿಲ್ಲ ಎಂಬುದರ ಸಂಕೇತವಾಗಿದೆ.

ಯಾವುದೇ ಆದ್ಯತೆ (Priority)ಕೊಡದಿದ್ರೆ 
ನೀವು ಯಾವುದೇ ರೀತಿಯಲ್ಲಿ ಅವರ ಜೀವನದಲ್ಲಿ ಆದ್ಯತೆಯಲ್ಲದಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ನಿಜವಾದ ಪ್ರೀತಿ ಇರಲು ಹೇಗೆ ಸಾಧ್ಯ? ಹಾಗಾಗಿ ಸಾಧ್ಯವಾದಷ್ಟು ಅಂತಹ ಸಂಬಂಧದಿಂದ ದೂರವಿರಿ.  ಆದ್ಯತೆ ಕೊಟ್ಟರೆ ಮಾತ್ರ ಸಂಬಂಧದಲ್ಲಿ ಪ್ರೀತಿ ಇದೆ ಎಂದು ಅರ್ಥ. 

ಭಾವನೆಗಳನ್ನು(Feelings) ಹಂಚಿಕೊಳ್ಳದಿದ್ರೆ
ಸಂಬಂಧದಲ್ಲಿ ಗಂಭೀರವಾಗಿರುವ ಪುರುಷರು ಖಂಡಿತವಾಗಿಯೂ ಸಂಗಾತಿಯೊಂದಿಗೆ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ. ಅವರು ಇದನ್ನು ಮಾಡದಿದ್ದರೆ, ರಿಲೇಶನ್‌ಶಿಪ್ ಅನ್ನು ಅವರು ಹೆಚ್ಚು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಸೂಚಿಸುತ್ತೆ. 
 

ಹಣಕ್ಕಾಗಿ(Money) ನಿಮ್ಮ ಜೊತೆಗಿದ್ದರೆ
ನಿಮ್ಮ ಸಂಗಾತಿ ಕೇವಲ ಭೌತಿಕ ಅಥವಾ ಹಣಕ್ಕಾಗಿ ನಿಮ್ಮ ಹತ್ತಿರ ಬಂದರೆ, ಅವರಿಗೆ ಈ ಸಂಬಂಧವು ಕೇವಲ ಹಣಕ್ಕಾಗಿ ಪ್ರೀತಿಗಾಗಿ ಅಲ್ಲ ಎಂಬುದರ ಸ್ಪಷ್ಟ ಸಂಕೇತವಾಗಿದೆ. ಅಂತಹ ಸಂಗಾತಿಯಿಂದ ದೂರ ಇದ್ದರೆ ಉತ್ತಮ. 

ನೆಪಗಳನ್ನು ಹೇಳೋದು
ನೀವು ಸಂಬಂಧದ ಬಗ್ಗೆ ಗಂಭೀರವಾಗಿರಲು ಬಯಸಿದಾಗಲೆಲ್ಲಾ, ಅವರು ಪದೇ ಪದೇ ಕೆಲವು ನೆಪಗಳನ್ನು ನೀಡುತ್ತಾರೆ ಅಥವಾ ಭಾವನಾತ್ಮಕ(Emotional) ನಾಟಕವನ್ನು ಮಾಡುತ್ತಾರೆ ಎಂದಾದ್ರೆ, ಈ ಸಂಬಂಧವು ಅವರಿಗೆ ಮುಖ್ಯವಲ್ಲ ಎಂದು ಇದು ತೋರಿಸುತ್ತೆ .
 

Latest Videos

click me!