ಲೈಂಗಿಕ ಜೀವನ ಬೋರ್ ಅನಿಸುತ್ತಿದ್ಯಾ? ಸಂಗಾತಿಗೆ ಹೀಗೆ ಮನವರಿಕೆ ಮಾಡಿ!

First Published | Sep 30, 2023, 10:11 AM IST

ನಿಮ್ಮ ಲೈಂಗಿಕ ಜೀವನವು ನೀರಸವಾಗುತ್ತಿದ್ದರೆ ಮತ್ತು ಸಂಗಾತಿಯು ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆಂದು ನಿಮಗೆ ತಿಳಿದಿಲ್ಲ. ನಿಮ್ಮ ಸೆಕ್ಸ್ ಲೈಫ್ ಉತ್ತೇಜಿಸಲು ನೀವು ಏನೆಲ್ಲಾ ಮಾಡಬಹುದು ನೊಡೋಣ. 
 

ಲೈಂಗಿಕ ಜೀವನದ (sex life) ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಮಾತನಾಡುವುದು ಸ್ವಲ್ಪ ಭಯ ಹುಟ್ಟಿಸಬಹುದು, ಏಕೆಂದರೆ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆಂದು ನಿಮಗೆ ತಿಳಿದಿಲ್ಲ. ಹೆಚ್ಚಿನ ಜನ ಇದರ ಬಗ್ಗೆ ಮಾತನಾಡಲು ಬಯಸಿದ್ರೂ ಸಹ, ಅವರಿಗೆ ಅದನ್ನು ಹೇಳೋ ಧೈರ್ಯ ಇರೋದಿಲ್ಲ. ಈ ಕಾರಣದಿಂದಾಗಿ ಅವರ ಸಂಬಂಧದಲ್ಲಿ ಕ್ರಮೇಣ ಅಂತರ ಉಂಟಾಗುತ್ತೆ ಮತ್ತು ಪ್ರಣಯವು ಅಂತ್ಯವಾಗುತ್ತೆ. ನಿಮ್ಮ ವೈವಾಹಿಕ ಜೀವನವೂ (married life)  ಈ ಹಂತದ ಮೂಲಕ ಸಾಗುತ್ತಿದ್ದರೆ, ಅದನ್ನು ಸರಿಪಡಿಸೋ ಉತ್ತಮ ಮಾರ್ಗಗಳು ಇಲ್ಲಿವೆ. ಅವುಗಳ ಬಗ್ಗೆ ತಿಳಿಯೋಣ. 
 

ನಿಮ್ಮ ಸಂಗಾತಿಯೊಂದಿಗೆ ಮುಕ್ತ ಮನಸ್ಸಿನಿಂದ ಮಾತನಾಡಿ: ಸಂಭಾಷಣೆ ನಡೆಸುವುದು ಯಾವಾಗಲೂ ಒಳ್ಳೆಯದು. ನಿಮ್ಮ ಲೈಂಗಿಕ ಜೀವನದ ವಿಷಯಕ್ಕೆ ಬಂದಾಗ, ಅದರ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಮಾತನಾಡುವುದಕ್ಕಿಂತ ಉತ್ತಮವಾದುದು ಯಾವುದೂ ಇಲ್ಲ. ನಿಮ್ಮ ಲೈಂಗಿಕ ಜೀವನದಲ್ಲಿ (sex life) ನೀವು ಎಷ್ಟು ಬೇಸರಗೊಂಡಿದ್ದೀರಿ ಎಂದು ಅವರಿಗೆ ತಿಳಿಸಿ ಮತ್ತು ಮತ್ತೆ ಸೆಕ್ಸ್ ಬಗ್ಗೆ ಆಸಕ್ತಿ ಮೂಡಲು ನೀವಿಬ್ಬರು ಏನೇನು ಮಾಡಬಹುದು ಅನ್ನೋದನ್ನು ಸಹ ತಿಳಿಯೋಣ. 

Tap to resize

ನಿಮ್ಮ ಲೈಂಗಿಕ ಆದ್ಯತೆಗಳನ್ನು ಹಂಚಿಕೊಳ್ಳಿ: ಸಂಗಾತಿಯೊಂದಿಗೆ ನಿಮಗೆ ಯಾವ ರೀತಿಯ ಸೆಕ್ಸ್ ಇಷ್ಟವಾಗುತ್ತದೆ (sex desire), ಅನ್ನೋದನ್ನು ವ್ಯಕ್ತಪಡಿಸುವುದರಲ್ಲಿ ಯಾವುದೇ ಹಾನಿ ಇಲ್ಲ. ಇಬ್ಬರು ಈ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ರೆ, ಎಲ್ಲಿ ತಪ್ಪಾಗುತ್ತಿದೆ ಅನ್ನೋದು ನಿಮಗೆ ತಿಳಿಯುತ್ತೆ. ನಂತರ ಅದನ್ನು ಸರಿಪಡಿಸಬಹುದು. 

ವೃತ್ತಿಪರ ಸಹಾಯವನ್ನು ಪಡೆಯುವುದು ಸರಿ: ಯಾರ ಲೈಂಗಿಕ ಜೀವನವೂ ಪರಿಪೂರ್ಣವಾಗಿರೋದಿಲ್ಲ. ಆದರೆ, ನಿಮ್ಮ ಬಯಕೆಗಳು ಮತ್ತು ಅಗತ್ಯಗಳ ಬಗ್ಗೆ ಮಾತನಾಡುವ ಮೂಲಕ ನೀವು ಗುರಿಗಳನ್ನು ತಲುಪಬಹುದು. ಆದರೆ ನಿಮ್ಮ ಸಂಗಾತಿಯೊಂದಿಗೆ ಮಾತನಾಡಲು ನೀವು ಹೆಣಗಾಡುತ್ತಿದ್ದರೆ,  ಯಾವಾಗಲೂ ಸಲಹೆಗಾರರೊಂದಿಗೆ (sex experts) ಮಾತನಾಡುವುದು ಉತ್ತಮ.  

ಸಂಗಾತಿಯೊಂದಿಗೆ ಸಂಬಂಧವನ್ನು ಸರಿಪಡಿಸಲು ಪ್ರಯತ್ನಿಸಿ: ನಿಮ್ಮ ಸಂಬಂಧದ ಕಳೆದುಹೋದ ಹೊಳಪನ್ನು ಸುಧಾರಿಸುವ ಅಗತ್ಯವಿದೆ ಎಂಬ ಅಂಶವನ್ನು ನಿಮ್ಮ ಸಂಗಾತಿಗೆ ಚೆನ್ನಾಗಿ ತಿಳಿದಿರಲಿ. ನೀವು ಪರಸ್ಪರ ಎಲ್ಲಿ ಭಿನ್ನರಾಗಿದ್ದೀರಿ ಎಂಬುದನ್ನು ಕಂಡುಕೊಳ್ಳಿ. ಆ ವಿಷ್ಯವನ್ನು ಇಬ್ಬರು ಜೊತೆ ಸೇರಿ ಸರಿಪಡಿಸಿ. ಇದು ನಿಮ್ಮ ಸಂಬಂಧದಲ್ಲಿ ಲೈಂಗಿಕ ಉತ್ಸಾಹವನ್ನು ಮರಳಿ ತರುವುದಲ್ಲದೆ, ಮತ್ತೊಮ್ಮೆ ಉತ್ತಮ ಸಂಬಂಧವನ್ನು ನಿರ್ಮಿಸಲು ಸಹಾಯ ಮಾಡುತ್ತದೆ.

ಯಾವ ರೀತಿ ಸೆಕ್ಸ್ ಬಗ್ಗೆ ಮಾತನಾಡಬೇಕು ಅನ್ನೋದನ್ನು ನಿಮಗೆ ನೀವೆ ಹೇಳಿ: ನಿಮ್ಮ ತೃಪ್ತಿಕರವಲ್ಲದ ಲೈಂಗಿಕ ಜೀವನದ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಮಾತನಾಡುವ ಮೊದಲು, ಹೇಗೆಲ್ಲಾ ಮಾತನಾಡಬಹುದು ಅನ್ನೋದನ್ನು ಕಲ್ಪಿಸಿಕೊಳ್ಳಲು ಪ್ರಯತ್ನಿಸಿ. ಇದರಿಂದ ಹಾಗೆ ಮಾತನಾಡಿದಾಗ ಏನಾಗಬಹುದು ಅನ್ನೋದು ತಿಳಿಯುತ್ತೆ ಇದು ನಿಮ್ಮ ಆಲೋಚನೆಗಳನ್ನು ಸಂಗ್ರಹಿಸಲು ಮತ್ತು ಅವುಗಳನ್ನು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಸಂಗಾತಿ ಎದುರು ಪ್ರಸ್ತಾಪಿಸಲು ಸಾಧ್ಯವಾಗುತ್ತೆ. 

Latest Videos

click me!