ಅದು ಮಾಡೋ ಮೊದಲು ಇದೆಲ್ಲಾ ಗೊತ್ತಿರಲಿ: ಒಮ್ಮೆಗೆ ಎರಡೆರಡು ಕಾಂಡೋಮ್ ಬಳಸಿದ್ರೆ...?

First Published | Sep 29, 2023, 4:58 PM IST

ಅನೇಕ ದಂಪತಿ ಗರ್ಭಧಾರಣೆಯನ್ನು ತಡೆಯಲು ಗರ್ಭನಿರೋಧಕ ಬಳಸುತ್ತಾರೆ. ಅದರಲ್ಲೂ ಕಾಂಡೋಮ್‌ಗಳನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ಇದರ ಬಳಕೆಯ ಬಗ್ಗೆ ಅನೇಕರಿಗೆ ಹಲವು ಅನುಮಾನಗಳಿವೆ. ಕೆಲವೊಬ್ಬರು ಎರಡೆರಡು ಕಾಂಡೋಮ್ ಒಟ್ಟಿಗೆ ಬಳಸೋಕೆ ಹೋಗ್ತಾರೆ. ಇದರಿಂದ ಏನಾಗುತ್ತೆ ನಿಮ್ಗೆ ಗೊತ್ತಿದ್ಯಾ?

ಆರೋಗ್ಯ ತಜ್ಞರ ಪ್ರಕಾರ.. ಕಾಂಡೋಮ್ ಬಳಕೆ ತುಂಬಾ ಒಳ್ಳೆಯದು. ಏಕೆಂದರೆ ಇದು ವ್ಯಕ್ತಿಯನ್ನು ಅನೇಕ ಸೋಂಕುಗಳು ಮತ್ತು ಇತರ ಲೈಂಗಿಕವಾಗಿ ಹರಡುವ ರೋಗಗಳಿಂದ ದೂರವಿಡುತ್ತದೆ. ಎಲ್ಲಾ ರೀತಿಯ ಗರ್ಭನಿರೋಧಕಗಳಿಗಿಂತ ಅವು ಉತ್ತಮವಾಗಿವೆ.

ಕಾಂಡೋಮ್‌ಗಳನ್ನು ಬಳಸುವುದರಿಂದ ಲೈಂಗಿಕವಾಗಿ ಹರಡುವ ರೋಗಗಳ ಹರಡುವಿಕೆಯನ್ನು ಕಡಿಮೆ ಮಾಡಬಹುದು. ಮಾತ್ರವಲ್ಲ ಅನಪೇಕ್ಷಿತ ಗರ್ಭಧಾರಣೆಯ ಸಾಧ್ಯತೆಯನ್ನು ಕಡಿಮೆ ಮಾಡಲು ಕಾಂಡೋಮ್‌ಗಳು ತುಂಬಾ ಸಹಾಯ ಮಾಡುತ್ತವೆ.

Tap to resize

ಒಂದೇ ಸಮಯದಲ್ಲಿ ಎರಡು ಕಾಂಡೋಮ್ ಬಳಸಬಹುದೇ?
ಆದರೆ ಪ್ರತಿಯೊಬ್ಬರೂ ಗರ್ಭನಿರೋಧಕಗಳನ್ನು ಬಳಸುವಾಗ ಯಾವುದೇ ತೊಡಕುಗಳನ್ನು ತಪ್ಪಿಸಲು ಬಯಸುತ್ತಾರೆ. ಅದಕ್ಕಾಗಿಯೇ ಕೆಲವರು ಒಂದೇ ಸಮಯದಲ್ಲಿ ಎರಡು ಕಾಂಡೋಮ್‌ ಬಳಸುತ್ತಾರೆ. ಆದರೆ ವೈಜ್ಞಾನಿಕವಾಗಿ ಇದನ್ನು ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ

ಏಕೆಂದರೆ ಏಕಕಾಲದಲ್ಲಿ ಎರಡು ಕಾಂಡೋಮ್‌ ಬಳಸಿದರೆ, ಅವುಗಳ ನಡುವೆ ಸಾಕಷ್ಟು ಒತ್ತಡ ಮತ್ತು ಘರ್ಷಣೆ ಉಂಟಾಗುತ್ತದೆ. ಪರಿಣಾಮವಾಗಿ ಇದು ಹರಿದು ಉಪಯೋಗವಿಲ್ಲದಂತಾಗುತ್ತದೆ.

ಕಾಂಡೋಮ್‌ ಬಳಕೆ ಲೈಂಗಿಕ ಪ್ರಚೋದನೆ ಕಡಿಮೆ ಮಾಡುತ್ತದೆಯೇ?
ಹಲವು ವರ್ಷಗಳಿಂದ ಕಾಂಡೋಮ್ ಬಳಸುವ ಹಲವರಿಗೆ ಈ ಬಗ್ಗೆ ಅನುಮಾನವಿದೆ. ಕಾಂಡೋಮ್‌ಗಳ ಅತಿಯಾದ ಬಳಕೆಯು ಲೈಂಗಿಕ ಬಯಕೆಗಳು ಮತ್ತು ಲೈಂಗಿಕ ಸಂವೇದನೆಗಳನ್ನು ಕಡಿಮೆ ಮಾಡುತ್ತದೆ ಎಂದು ಹೇಳುತ್ತಾರೆ.

ಆದರೆ, 2007ರಲ್ಲಿ ಇಂಡಿಯಾನಾ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಅಧ್ಯಯನದಲ್ಲಿ, ಕಾಂಡೋಮ್‌ಗಳನ್ನು ಬಳಸುವುದರಿಂದ ಯಾವುದೇ ಲೈಂಗಿಕ ಸಂತೋಷ ಮತ್ತು ಭಾವನೆಗಳು ಕಡಿಮೆಯಾಗುವುದಿಲ್ಲ ಎಂದು ಕಂಡುಬಂದಿದೆ. 

ಕಾಂಡೋಮ್‌ಗಳು ಅನಗತ್ಯ ಗರ್ಭಧಾರಣೆ ಮತ್ತು ಲೈಂಗಿಕವಾಗಿ ಹರಡುವ ರೋಗಗಳನ್ನು ತಡೆಗಟ್ಟಲು ಮಾತ್ರ ಉಪಯುಕ್ತವೆಂದು ಗಮನಿಸಬೇಕು. ಅವುಗಳನ್ನು ಈ ಉದ್ದೇಶಕ್ಕಾಗಿ ಮಾತ್ರ ಬಳಸಲಾಗುತ್ತದೆ.

Latest Videos

click me!