Fathers Day: ಉತ್ತಮ ಆರೋಗ್ಯಕ್ಕೆ ಅಪ್ಪನಿಗೆ ರಾಶಿಚಕ್ರದ ಪ್ರಕಾರ ಗಿಫ್ಟ್ ನೀಡಿ

First Published | Jun 10, 2023, 6:09 PM IST

ಫಾದರ್ಸ್ ಡೇ  ಸಂದರ್ಭದಲ್ಲಿ, ಮಕ್ಕಳು ತಮ್ಮ ತಂದೆಗೆ ಉಡುಗೊರೆಗಳನ್ನು ನೀಡುತ್ತಾರೆ. ಜ್ಯೋತಿಷ್ಯದ ಪ್ರಕಾರ, ನೀವು ತಂದೆಯ ರಾಶಿಚಕ್ರ ಚಿಹ್ನೆಯ ಪ್ರಕಾರ ಅವರಿಗೆ ಉಡುಗೊರೆಯನ್ನು ನೀಡಿದ್ರೆ, ಅವರ ಆರೋಗ್ಯವು ದೀರ್ಘಕಾಲದವರೆಗೆ ಉತ್ತಮವಾಗಿರುತ್ತೆ. 

ನಮ್ಮ ಹೆತ್ತವರು ದೇವರ ಅತ್ಯಮೂಲ್ಯ ಉಡುಗೊರೆ. ತಾಯಿಯೊಂದಿಗೆ ನಾವು ಪ್ರತಿಯೊಂದು ಭಾವನೆ ಮತ್ತು ದುಃಖ ಹಂಚಿಕೊಳ್ಳಬಹುದು ಮತ್ತು ತಂದೆ ನಮ್ಮ ಕನಸುಗಳನ್ನು ಹಂಚಿಕೊಂಡ್ರೆ ಎಲ್ಲವೂ ಈಡೇರುತ್ತೆ. ತಂದೆಯ ಮೇಲಿನ ಪ್ರೀತಿ ವ್ಯಕ್ತಪಡಿಸಲು ಪ್ರತಿವರ್ಷ ಜೂನ್ ತಿಂಗಳ ಮೂರನೇ ಭಾನುವಾರದಂದು ತಂದೆಯ ದಿನವನ್ನು (fathers day) ಆಚರಿಸಲಾಗುತ್ತೆ. ಈ ವರ್ಷ, ಫಾದರ್ಸ್ ಡೇ  ಜೂನ್ 18 ರಂದು ಇದೆ. ಈ ದಿನವನ್ನು ವಿಶೇಷವಾಗಿಸಲು, ಮಕ್ಕಳು ತಮ್ಮ ತಂದೆಗೆ ಉಡುಗೊರೆಗಳನ್ನು ಸಹ ನೀಡುತ್ತಾರೆ. ರಾಶಿಚಕ್ರದ ಪ್ರಕಾರ ಯಾವ ಉಡುಗೊರೆಗಳನ್ನು ತಂದೆಗೆ ನೀಡಬಹುದು ಎಂದು ತಿಳಿಯೋಣ-

ಮೇಷ (Aires) ರಾಶಿ
ನಿಮ್ಮ ತಂದೆಯ ರಾಶಿಯು ಮೇಷ ಆಗಿದ್ದರೆ. ಈ ರಾಶಿಚಕ್ರದ ಅಧಿಪತಿ ಮಂಗಳ (Mars). ಈ ರಾಶಿಚಕ್ರದ ಜನರು ವ್ಯವಹಾರದಲ್ಲಿ ನುರಿತರು. ಅವರ ಗ್ರಹಗಳ ಸ್ಥಿತಿಯನ್ನು ಸುಧಾರಿಸಲು, ನೀವು ಅವರಿಗೆ ಕೆಂಪು ಬಣ್ಣದ ಉಡುಗೊರೆಗಳನ್ನು (red color gift) ನೀಡಬಹುದು. ತಂದೆಗೆ ಕೆಂಪು ಪೆನ್, ಕೆಂಪು ಟೀ ಶರ್ಟ್ ಅಥವಾ ಕೆಂಪು ಟೈ ಉಡುಗೊರೆಯಾಗಿ ನೀಡಿ. ಇದಲ್ಲದೆ, ಈ ವಿಶೇಷ ದಿನದಂದು ಅವರಿಗೆ ಯಾವುದೇ ಕೆಂಪು ಬಣ್ಣದ ಸಿಹಿತಿಂಡಿಗಳನ್ನು ಸಹ ನೀಡಬಹುದು.

Tap to resize

ವೃಷಭ (Taurus) ರಾಶಿ
ವೃಷಭ ರಾಶಿಯ ಅಧಿಪತಿ ಶುಕ್ರ. ಅಂತಹ ಜನರು ಸಹಿಷ್ಣು ಮತ್ತು ಸೌಮ್ಯ ಸ್ವಭಾವದವರು. ನಿಮ್ಮ ತಂದೆಯ ರಾಶಿಚಕ್ರ ಚಿಹ್ನೆ ವೃಷಭ ರಾಶಿಯಾಗಿದ್ದರೆ, ತಂದೆಯ ದಿನದಂದು ನೀವು ಅವರಿಗೆ ಬಿಳಿ ಶರ್ಟ್ ನೀಡಬಹುದು. ಇದಲ್ಲದೆ, ಅಪ್ಪನಿಗೆ ತೆಂಗಿನಕಾಯಿ ಅಥವಾ ಗೋಡಂಬಿ ಬರ್ಫಿಯನ್ನು ಉಡುಗೊರೆಯಾಗಿ ನೀಡಬಹುದು.

ಮಿಥುನ (Gemini) ರಾಶಿ
ಮಿಥುನ ರಾಶಿಯ ಅಧಿಪತಿ ಬುಧ ಗ್ರಹ. ಈ ರಾಶಿಚಕ್ರದ ಜನರು ಸ್ವೀಟ್ ಮತ್ತು ಬಹುಮುಖ ಪ್ರತಿಭೆವುಳ್ಳವರು. ನಿಮ್ಮ ತಂದೆಯ ರಾಶಿಚಕ್ರ ಚಿಹ್ನೆ ಮಿಥುನ ಆಗಿದ್ದರೆ, ಫಾದರ್ಸ್ ಡೇ ಗೆ ನೀವು ಅವರಿಗೆ ಹಸಿರು ಬಣ್ಣದ ಉಡುಗೊರೆಗಳನ್ನು ನೀಡಬಹುದು. ಈ ದಿನ, ತಂದೆಗಾಗಿ ಹಸಿರು ಸಸ್ಯಗಳೊಂದಿಗೆ ಮಡಕೆಗಳನ್ನು ಸಹ ನೀಡಬಹುದು. ಇದರಿಂದ, ಬುಧನು ನಿಮ್ಮ ತಂದೆಗೆ ಶುಭ ಪರಿಣಾಮವನ್ನು ನೀಡುತ್ತಾನೆ.

ಕರ್ಕಾಟಕ (Cancer) ರಾಶಿ
ಕರ್ಕಾಟಕ ರಾಶಿಯ ಅಧಿಪತಿ ಚಂದ್ರ. ಈ ರಾಶಿಚಕ್ರದ ಜನರು ಕಾಲ್ಪನಿಕರು. ಆದ್ದರಿಂದ, ನಿಮ್ಮ ತಂದೆಯ ರಾಶಿಯೂ ಕರ್ಕಾಟಕವಾಗಿದ್ದರೆ, ಅವರಿಗೆ ಬಿಳಿ ಬಣ್ಣದ ಉಡುಗೊರೆಗಳನ್ನು ನೀಡಬಹುದು.  ಈ ದಿನದಂದು ತಂದೆಗೆ ಉತ್ತಮ ಫೋಟೋ ಫ್ರೇಮ್ (photo frame) ಅನ್ನು ನೀಡಬಹುದು, ಇದು ಇಡೀ ಕುಟುಂಬದ ಫೋಟೋವನ್ನು ಹೊಂದಿರಲಿ. 

ಸಿಂಹ (Leo) ರಾಶಿ
ಸಿಂಹ ರಾಶಿಯ ಅಧಿಪತಿ ಸೂರ್ಯ ದೇವರು. ಜನರು ಮೇಲಿನಿಂದ ಹಠಮಾರಿಗಳಾಗಿ ಕಂಡರೂ,  ಒಳಗಿನಿಂದ ಹೆಚ್ಚು ಉದಾರರಾಗಿರುತ್ತಾರೆ. ನಿಮ್ಮ ತಂದೆಯ ರಾಶಿಚಕ್ರ ಚಿಹ್ನೆ ಸಿಂಹ ರಾಶಿಯಾಗಿದ್ದರೆ, ಅವರಿಗೆ ಕೆಂಪು ಮತ್ತು ಹಳದಿ ಸಿಹಿತಿಂಡಿಗಳನ್ನು ತರಬಹುದು. ಇದಲ್ಲದೆ, ನೀವು ಅವರಿಗೆ ಕೆಂಪು ಶರ್ಟ್ ಸಹ (red shirt) ನೀಡಬಹುದು. 

ಕನ್ಯಾರಾಶಿ (Virgo)
ಕನ್ಯಾರಾಶಿಯ ಅಧಿಪತಿ ಬುಧ ಗ್ರಹ. ಈ ರಾಶಿಯ ಜನರು ಕಠಿಣ ಪರಿಶ್ರಮಿಗಳು. ನಿಮ್ಮ ತಂದೆಯ ರಾಶಿಚಕ್ರ ಚಿಹ್ನೆ ಕನ್ಯಾರಾಶಿಯಾಗಿದ್ದರೆ,  ಅವರಿಗೆ ಹಸಿರು ಉಡುಗೊರೆಗಳನ್ನು ನೀಡಬಹುದು. ಜೊತೆಗೆ ಉತ್ತಮ ಡೈರಿ ಪೆನ್ ನೀಡಬಹುದು. 

ತುಲಾ (Libra)) ರಾಶಿ
ತುಲಾ ರಾಶಿಯ ಅಧಿಪತಿ ಶುಕ್ರ. ಈ ರಾಶಿಚಕ್ರದ ಜನರು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಇವರು ಸಾಧ್ಯವಾದಷ್ಟು ಜನರೊಂದಿಗೆ ಬೆರೆಯಲು ಇಷ್ಟಪಡುತ್ತಾರೆ. ನಿಮ್ಮ ತಂದೆಯ ರಾಶಿ ತುಲಾ ಆಗಿದ್ದರೆ, ಅವರಿಗೆ ಉತ್ತಮ ಪರ್ಸ್ ಅಥವಾ ಪರ್ಫ್ಯೂಮನ್ನು ಗಿಫ್ಟ್ ಆಗಿ ನೀಡಬಹುದು ಅಥವಾ ಬಿಳಿ ಬಣ್ಣದ ಉಡುಗೊರೆಗಳನ್ನು ನೀಡಬಹುದು. 
 

ವೃಶ್ಚಿಕ (Capricorn) ರಾಶಿ
ಮೇಷ ರಾಶಿಯಂತೆಯೇ ವೃಶ್ಚಿಕ ರಾಶಿಯ ಅಧಿಪತಿ ಮಂಗಳ. ಈ ಜನರು ತಮ್ಮದೇ ಆದ ರೀತಿಯಲ್ಲಿ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ. ಆದ್ದರಿಂದ, ನಿಮ್ಮ ತಂದೆಯ ರಾಶಿಚಕ್ರ ಚಿಹ್ನೆ ವೃಶ್ಚಿಕ ರಾಶಿಯಾಗಿದ್ದರೆ, ನೀವು ಅವರಿಗೆ ಕೆಂಪು ಬಣ್ಣದ ಹಣ್ಣುಗಳ ಬುಟ್ಟಿಯನ್ನು ಉಡುಗೊರೆಯಾಗಿ ನೀಡಬಹುದು ಅಥವಾ ಕೆಂಪು ಕರವಸ್ತ್ರವನ್ನು ಸಹ ನೀಡಬಹುದು.

ಧನು (Sagittarius) ರಾಶಿ
ನಿಮ್ಮ ತಂದೆಯ ರಾಶಿಚಕ್ರ ಚಿಹ್ನೆಯು ಧನುಸ್ಸು ಆಗಿದ್ದರೆ, ಅವರಿಗೆ ಹಳದಿ, ತಿಳಿ ನೀಲಿ, ತಿಳಿ ಹಸಿರು, ಗುಲಾಬಿ, ನೇರಳೆ ಬಣ್ಣದ ಉಡುಗೊರೆಗಳನ್ನು ನೀಡಬಹುದು. ಈ ಬಣ್ಣಗಳ ಕರವಸ್ತ್ರಗಳು ಅಥವಾ ಟಿ-ಶರ್ಟ್ ಗಳು (T shirt) ನಿಮ್ಮ ತಂದೆಗೆ ಶುಭವಾಗಬಹುದು.

ಮಕರ (Capricorn) ರಾಶಿ
ಮಕರ ರಾಶಿಯವರು ಕಠಿಣ ಪರಿಶ್ರಮಿ ಮತ್ತು ನಿಷ್ಠಾವಂತರು. ಶನಿ ಗ್ರಹ ಅವರ ಅಧಿಪತಿ. ನಿಮ್ಮ ತಂದೆಯ ರಾಶಿಚಕ್ರ ಚಿಹ್ನೆ ಮಕರ ಆಗಿದ್ದರೆ, ಅವರಿಗೆ ಕಪ್ಪು ಬೆಲ್ಟ್ ಅಥವಾ ಕಪ್ಪು ಬೂಟುಗಳು ಅಥವಾ ಬಟ್ಟೆಗಳನ್ನು ಉಡುಗೊರೆಯಾಗಿ ನೀಡಬಹುದು. ಇದರೊಂದಿಗೆ, ಶನಿ ದೇವರ ಅನುಗ್ರಹವು ನಿಮ್ಮ ತಂದೆಯ ಮೇಲೆ ಉಳಿಯುತ್ತೆ. 

ಕುಂಭ (Acquarious) ರಾಶಿ
ನಿಮ್ಮ ತಂದೆಯ ರಾಶಿಚಕ್ರ ಚಿಹ್ನೆ ಕುಂಭ ರಾಶಿಯಾಗಿದ್ದರೆ, ಕಪ್ಪು, ನೀಲಿ, ನೇರಳೆ ಮತ್ತು ಹಸಿರು ಬಣ್ಣಗಳು ಅವರಿಗೆ ಶುಭವಾಗಬಹುದು. ಆದ್ದರಿಂದ ನೀವು ನಿಮ್ಮ ತಂದೆಗೆ ಈ ಬಣ್ಣಗಳ ಟೀ ಶರ್ಟ್, ಶರ್ಟ್ ಅಥವಾ ಡೈರಿಯನ್ನು ನೀಡಬಹುದು.

ಮೀನ (Pisces) ರಾಶಿ
ಮೀನ ರಾಶಿಯ ಅಧಿಪತಿ ಗುರು. ಆದ್ದರಿಂದ, ನಿಮ್ಮ ತಂದೆಯ ರಾಶಿಚಕ್ರ ಚಿಹ್ನೆ ಮೀನ ರಾಶಿಯಾಗಿದ್ದರೆ,  ಅವರಿಗೆ ಹಳದಿ ಹೂವುಗಳು ಅಥವಾ ಬ್ಯಾಗನ್ನು ಉಡುಗೊರೆಯಾಗಿ ನೀಡಬಹುದು ಅಥವಾ ಈ ದಿನದಂದು ತಂದೆಗೋಸ್ಕರ ಹಳದಿ ಬಣ್ಣದ ಸಿಹಿತಿಂಡಿಗಳನ್ನು ನೀಡಿ.

Latest Videos

click me!