ಸೋಷಿಯಲ್ ಮೀಡಿಯಾ ಬಿಡಿ… ಯಾಕೆ ನಿಮ್ಮ ಜೀವನವನ್ನು ಪ್ರೈವೆಟ್ ಆಗಿಡಬೇಕು ತಿಳಿಯಿರಿ!

First Published | Dec 23, 2023, 6:05 PM IST

ಇತ್ತಿಚೆಗಂತೂ ನಮ್ಮ ಜೀವನವೇ ಸೋಶಿಯಲ್ ಮೀಡಿಯಾಕ್ಕೆ ಅಡಿಕ್ಟ್ ಆಗಿದೆ. ಕುಂತರೂ, ನಿಂತರೂ, ಏನೇ ಮಾಡಿದರೂ ಜನಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲೇಬೇಕು. ಇಲ್ಲವಾದರೆ ಸಮಾಧಾನವೇ ಇಲ್ಲ. ಆದರೆ ಈ ರೀತಿಯಾಗಿ ಸೋಶಿಯಲ್ ಆಗಿರೋದರಿಂದ ನಿಮ್ಮ ಜೀವನದ ಮೇಲೆ ಎಷ್ಟು ಪರಿಣಾಮ ಬೀಳುತ್ತೆ ಗೊತ್ತಾ? 

ಸಾಮಾಜಿಕ ಮಾಧ್ಯಮದ (Social media) ಅತಿಯಾದ ಬಳಕೆ ಮತ್ತು ನಿರಂತರ ಸಂಪರ್ಕದಿಂದ  ಜನರು ತಾವು ಸೋಶಿಯಲ್ ಮೀಡಿಯಾದಲ್ಲೇ ಜೀವಿಸುತ್ತಿದ್ದೇವೆ ಎಂದು ಅಂದುಕೊಂಡಿದ್ದಾರೆ. ಎಲ್ಲವೂ ಈಗ ಸೋಶಿಯಲ್ ಮೀಡಿಯಾವೇ ಆಗಿರೋವಾಗ, ಎಲ್ಲವನ್ನೂ ಖಾಸಗಿಯಾಗಿಡಬೇಕು ಅನ್ನೋದು ವ್ಯರ್ಥ ಎಂದು ತೋರುತ್ತದೆ. ಯಾಕಂದ್ರೆ ಅದನ್ನ ಜನರು ಹೆಚ್ಚಾಗಿ ಮಾಡೋದೆ ಇಲ್ಲ. 

ಸೈಕಾಲಜಿಯಲ್ಲಿ ( psychology) ಹೇಳೋ ಪ್ರಕಾರ ನಿಮ್ಮ ವೈಯಕ್ತಿಕ ಜೀವನದ ವಿವರಗಳನ್ನು ಸಾಧ್ಯವಾದಷ್ಟು ಪ್ರೈವೆಟ್ ಆಗಿ ಇಡೋದು, ಸಂಬಂಧವನ್ನು ಉಳಿಸಲು ಸಹಾಯ ಮಾಡುತ್ತದೆ ಎಂದು ಹೇಳುತ್ತದೆ. ನಿಮ್ಮ ಪರ್ಸನಲ್ ವಿಷಯಗಳನ್ನು ಯಾಕೆ, ಪರ್ಸನಲ್ ಆಗಿಡಬೇಕು? ಯಾಕೆ ಸೋಶಿಯಲ್ ಮೀಡಿಯಾದಿಂದ ದೂರ ಇಡಬೇಕು ಅನ್ನೋದನ್ನು ತಿಳಿಯಿರಿ. 

Tap to resize

ಎಲ್ಲರೂ ನಿಮ್ಮ ಸ್ನೇಹಿತರಾಗಿರೋದಿಲ್ಲ: ಸೈಕಾಲಜಿ ಪ್ರಕಾರ ಹೇಳೋದಾದರೆ, ಮನುಷ್ಯರು ಯಾವಾಗ್ಲೂ ಇತರರೊಂದಿಗೆ ಕನೆಕ್ಟ್ ಆಗೋದಕ್ಕೆ ಹಂಬಲಿಸುವಂತಹ ಸಾಮಾಜಿಕ ಜೀವಿಗಳು. ಆದರೆ ನೀವು ಸಂಪರ್ಕ ಹೊಂದಿರುವ ಎಲ್ಲರೂ ನಿಮ್ಮ ಸ್ನೇಹಿತರಾಗೋದಕ್ಕೆ ಸಾಧ್ಯಾನೆ ಇಲ್ಲ. ನಿಮ್ಮ ಜೀವನದ ತುಂಬಾ ಪರ್ಸನಲ್ (personal) ವಿಷಯಗಳನ್ನು ವಿವೇಚನೆಯಿಲ್ಲದೆ ಶೇರ್ ಮಾಡೋದರಿಂದ ನಿಮ್ಮ ಬಗ್ಗೆ ಕೆಟ್ಟ ಭಾವನೆ ಮೂಡಬಹುದು, ಜೊತೆಗೆ ನಿಮಗೆ ಮಾನಸಿಕ ಕಿರುಕುಳ ಸಹ ಉಂಟಾಗಬಹುದು. 
 

ಮನೋವೈಜ್ಞಾನಿಕ ದೃಷ್ಟಿಕೋನದಿಂದ ಹೇಳೋದಾದರೆ, ಯಾವುದೇ ವಿಷಯ ಇರಲಿ ಅದನ್ನು ಎಲ್ಲರೊಂದಿಗೆ ಹಂಚಿಕೊಳ್ಳೋದು ನಿಜವಾಗಿಯೂ ಮುಖ್ಯವೇ? ನಿಮ್ಮ ಪರ್ಸನಲ್ ವಿಷಯವನ್ನು ಸೋಶಿಯಲ್ ಮೀಡೀಯಾದ ಜನರು ತಿಳಿದುಕೊಳ್ಳಬೇಕೇ? ಅದರಲ್ಲಿ ಶತ್ರುಗಳೂ ಇರಬಹುದು. ಇದರಿಂದ ನಿಮ್ಮ ಜೀವನಕ್ಕೆ ಹೊರೆಯಾಗಬಹುದು. 
 

ನೀವು ಯಾರಿಗೂ ಯಾವುದೇ ವಿವರಣೆಗಳನ್ನು ನೀಡಬೇಕಾಗಿಲ್ಲ: ಇತ್ತೀಚಿನ ದಿನಗಳಲ್ಲಿ ಜನರು ಸೋಶಿಯಲ್ ಮೀಡಿಯಾದಲ್ಲಿ ಎಷ್ಟೊಂದು ಕಳೆದು ಹೋಗಿದ್ದಾರೆ ಎಂದರೆ, ತಮ್ಮ ನಿರ್ಧಾರವನ್ನು ಸಹ ಅವರು ಸೋಶಿಯಲ್ ಮೀಡಿಯಾ ನೋಡಿ ತೆಗೆದುಕೊಳ್ಳುತ್ತಾರೆ, ಅಲ್ಲದೇ ತಾವು ಏನಾದರು ಮಾಡಿದರೆ, ಅದಕ್ಕೆ ವಿವರಣೆ ಕೊಡುತ್ತಾರೆ. ಇದರಿಂದ ನಿಮ್ಮ ನೆಮ್ಮದಿ ಹಾಳಾಗುತ್ತೆ ಅಷ್ಟೇ. ವಿಷಯಗಳನ್ನು ಪ್ರೈವೆಟ್ ಆಗಿಟ್ಟರೆ, ಯಾರಿಗೂ ಯಾವುದೇ ವಿವರಣೆ ನೀಡುವ ಅವಶ್ಯಕತೆ ಇರೋದಿಲ್ಲ. 

ಮನಶ್ಶಾಂತಿ ಸಿಗಲಿದೆ: ಸೀಕ್ರೆಟ್ ಮತ್ತು ಮನಸ್ಸಿನ ಶಾಂತಿ (mental peace) ಸೈಕಾಲಾಜಿಯಲ್ಲಿ ನಿಕಟ ಸಂಪರ್ಕವನ್ನು ಹೊಂದಿದೆ. ನಿಮ್ಮ ವೈಯಕ್ತಿಕ ಜೀವನದ ವಿವರಗಳನ್ನು ನಿರಂತರವಾಗಿ ಬಹಿರಂಗಪಡಿಸುವುದು ಒತ್ತಡದ ಮಟ್ಟ ಮತ್ತು ಆತಂಕಕ್ಕೆ ಕಾರಣವಾಗಬಹುದು. ವೈಯಕ್ತಿಕ ಗಡಿಗಳನ್ನು ಸ್ಥಾಪಿಸುವುದು ಮತ್ತು ಮಾಹಿತಿ ಹಂಚಿಕೆಯನ್ನು ಮಿತಿಗೊಳಿಸುವುದು ಮಾನಸಿಕ ನೆಮ್ಮದಿಯನ್ನು ನೀಡೋದು ನಿಜ. ನಿಮ್ಮ ಖಾಸಗಿ ಜೀವನ ಮತ್ತು ಬಾಹ್ಯ ಪರಿಶೀಲನೆಯ ನಡುವೆ ಮಾನಸಿಕ ತಡೆಗೋಡೆಯನ್ನು ಸೃಷ್ಟಿಸುವ ಮೂಲಕ, ನೆಮ್ಮದಿಯಾಗಿ ಜೀವನ ಸಾಗಿಸಬಹುದು. 
 

ಖಾಸಗಿ ಜೀವನವನ್ನು ಖಾಸಗಿಯಾಗಿಡುವುದು ಸುರಕ್ಷಿತ: ಸೈಕಾಲಜಿ ಅಧ್ಯಯನಗಳು ಮಾನಸಿಕ ಆರೋಗ್ಯಕ್ಕೆ (mental health) ಸುರಕ್ಷತೆ ಮತ್ತು ಭದ್ರತೆಯ ಮಹತ್ವವನ್ನು ಒತ್ತಿಹೇಳುತ್ತವೆ. ಸಾರ್ವಜನಿಕ ಡೊಮೇನ್ಗಳಲ್ಲಿ, ವಿಶೇಷವಾಗಿ ಸೋಶಿಯಲ್ ಮೀಡೀಯಾದಲ್ಲಿ ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಬಹಿರಂಗಪಡಿಸುವುದು, ಐಡೆಂಡಿಟಿ ಥೆಫ್ಟ್ ಸೈಬರ್ ಬೆದರಿಕೆ ಅಥವಾ ಬ್ಲ್ಯಾಕ್ ಮೇಲ್ ಮೊದಲಾದ ಅಪಾಯಕ್ಕೆ ಒಳಗಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತೆ. ಹಾಗಾಗಿ ನಿಮ್ಮ ಪರ್ಸನಲ್ ಲೈಫನ್ನು ಪರ್ಸನಲ್ ಆಗಿಡೋದೇ ಉತ್ತಮ. 
 

ಉತ್ತಮ ಸಂಬಂಧಕ್ಕಾಗಿ ಪರ್ಸನಲ್ ವಿಷ್ಯಗಳನ್ನು ಪರ್ಸನಲ್ ಆಗಿರಿಸಿ: ನಿಮ್ಮ ವೈಯಕ್ತಿಕ ಜೀವನವನ್ನು ಅತಿಯಾಗಿ ಬಹಿರಂಗಪಡಿಸುವುದು ನಿಮ್ಮ ಸಂಬಂಧಗಳನ್ನು ದುರ್ಬಲಗೊಳಿಸುತ್ತೆ. ನಿಮ್ಮ ಪರ್ಸನಲ್ ವಿಷಯಗಳನ್ನು ನಿಮ್ಮ ಆಪ್ತರೊಡನೆ ಹಂಚಿಕೊಳ್ಳೋದರಿಂದ ಸಂಬಂಧವು ಗಟ್ಟಿಯಾಗುತ್ತಾ ಹೋಗುತ್ತದೆ. ಅದು ಬಿಟ್ಟು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡರೆ, ನಿಮ್ಮ ಜೊತೆ ಆಪ್ತರು ಯಾರೂ ಇರಲಾರರು. ಹಾಗಾಗಿ ಜಾಸ್ತಿ ಸೋಶಿಯಲ್ ಆಗೋದು ಬೇಡ. 
 

Latest Videos

click me!