ಇಂದಿನ ಯುವ ಜೋಡಿಗಳಲ್ಲಿ ಕ್ಷುಲ್ಲಕ ವಿಚಾರಗಳಿಗೆ ಮನಸ್ತಾಪಗಳು ಸಾಮಾನ್ಯ. ಹುಡುಗಿಯರ ಕೆಲವು ವರ್ತನೆಗಳು ಹುಡುಗರ ಕೋಪಕ್ಕೆ ಕಾರಣವಾಗುತ್ತವೆ. ಸಮಯಪಾಲನೆ, ಸ್ಪಷ್ಟ ಸಂವಹನ, ಮತ್ತು ಕಾಳಜಿಯ ಕೊರತೆ ಮುಂತಾದವುಗಳು ಜಗಳಕ್ಕೆ ಕಾರಣ.
ಇಂದಿನ ಯುವ ಸಮುದಾಯದವರು ಸಣ್ಣ ಸಣ್ಣ ವಿಚಾರಗಳಿಗೂ ಕೋಪ ಮಾಡಿಕೊಳ್ಳುತ್ತಾರೆ. ಅದರಲ್ಲಿ ಜನರೇಷನ್ Z ಯುಥ್ಸ್ ರಿಲೇಶನ್‌ಶಿಪ್ ಕ್ಯೂಟ್ ಜಗಳಗಳಿಂದಲೇ ತುಂಬಿರುತ್ತದೆ. ಹುಡುಗೀರು ಹೀಗೆಲ್ಲಾ ಮಾಡಿದ್ರೆ ಹುಡುಗರಿಗೆ ಕೆಟ್ಟ ಕೋಪ ಬರುತ್ತೆ.
28
1.ನಿಗಧಿತ ಸ್ಥಳಕ್ಕೆ ಯುವತಿಯರು ಸಮಯಕ್ಕೆ ಸರಿಯಾಗಿ ಬಾರದೇ ಲೇಟ್ ಮಾಡಿದ್ರೆ ಹುಡುಗರಿಗೆ ಕೋಪ ಬರುತ್ತಂತೆ. ಲೇಟ್ ಆಗಿ ರೆಡಿಯಾಗೋ ಮತ್ತು ಎಲ್ಲದಕ್ಕೂ ಲೇಟ್ ಮಾಡೋ ಸ್ಲೋ ಹುಡುಗಿಯರಿಂದ ಅಂತರ ಕಾಯ್ದುಕೊಳ್ಳಲು ಹುಡುಗರು ಬಯಸ್ತಾರಂತೆ.
38
2.ಕೆಲ ಹುಡುಗರು ತಮ್ಮ ಸಂಗಾತಿ ಸುಂದರ ಮೈಕಟ್ಟು ಮತ್ತು ಫ್ಯಾಶನ್ ಬಗ್ಗೆ ತಿಳುವಳಿಕೆ ಹೊಂದಿರಬೇಕೆಂದು ಬಯಸುತ್ತಾರೆ. ಈ ಎರಡು ವಿಷಯಗಳಿಂದ ದೂರವಿರೋ ಹುಡುಗಿಯರನ್ನು ಹುಡುಗರು ಸಂಗಾತಿಯನ್ನು ಮಾಡಿಕೊಳ್ಳಲು ಇಷ್ಟಪಡಲ್ಲ. ಇದನ್ನು ಹುಡುಗಿಯರು ಬಾಡಿ ಶೇಮಿಂಗ್ ಎಂದು ಟೀಕೆ ಮಾಡುತ್ತಾರೆ.
3.ಸ್ಟ್ರೇಟ್ ಫಾರ್ವಡ್ ಗುಣ ಹೊಂದಿರುವ ಹುಡುಗಿಯರು ಅಂದ್ರೆ ಹುಡುಗರಿ ಇಷ್ಟ. ಯಾವುದೇ ವಿಷಯವನ್ನು ಮುಕ್ತವಾಗಿ ಹಂಚಿಕೊಳ್ಳದ ಮತ್ತು ಸೀಕ್ರೆಟ್ ಮೇಂಟೈನ್ ಮಾಡೋರನ್ನು ಕಂಡ್ರೆ ಹುಡುಗರಿಗೆ ಇಷ್ಟವಾಗಲ್ಲ. ಕೆಲವೊಮ್ಮೆ ಹುಡುಗರು ಪದೇ ಪದೇ ಏನು ಅಂತ ಕೇಳಿದರೂ ಹುಡುಗಿಯರು ಉತ್ತರಿಸಲ್ಲ.
58
4.ಹುಡುಗಿಯರಂತೆ ಇಂದಿನ ಜನರೇಷನ್ Z ಹುಡುಗರಿಗೆ ತಮ್ಮ ಡ್ರೆಸಿಂಗ್, ಹೇರ್ ಸ್ಟೈಲ್ ಕುರಿತು ಮೆಚ್ಚುಗೆ ಮಾತುಗಳನ್ನು ಕೇಳಲು ಬಯಸುತ್ತಾರೆ. ತನ್ನಲ್ಲಾದ ಬದಲಾವಣೆಯನ್ನು ಗುರುತಿಸದ ಸಂಗಾತಿ ಬಗ್ಗೆ ಹುಡುಗರು ಬೇಸರ ವ್ಯಕ್ತಪಡಿಸುತ್ತಾರೆ. ಈ ರೀತಿ ನಿರ್ಲಕ್ಷ್ಯದ ಹುಡುಗಿಯರಂದ್ರೆ ಹುಡುಗರಿಗೆ ಇಷ್ಟವಾಗಲ್ಲ.
68
5. ಪ್ರತಿ ಮೆಸೇಜ್‌ಗೂ ಲೇಟ್ ಆಗಿ ರಿಪ್ಲೈ ಮಾಡೋದು ಇಂದಿನ ಹುಡುಗಿಯರ ಗುಣ. ಆದ್ರೆ ಈ ರೀತಿ ವರ್ತನೆ ಹುಡುಗರಲ್ಲಿನ ಕೋಪಕ್ಕೆ ಕಾರಣವಾಗುತ್ತದೆ. ಸಂಗಾತಿ ಎಲ್ಲದಕ್ಕೂ ಆ ಕ್ಷಣಕ್ಕೆ ಉತ್ತರಿಸಬೇಕು ಎಂದು ಹುಡುಗರು ಬಯಸುತ್ತಾರೆ.
78
6. ಇಂದಿನ ಹುಡುಗರಿಗೆ ತಮ್ಮ ಸಂಗಾತಿ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿರುತ್ತಾರೆ. ಆದ್ದರಿಂದ ತಮ್ಮ ಸಂಗಾತಿ ಎಲ್ಲಿದ್ದಾಳೆ ಮತ್ತು ಹೇಗಿದ್ದಾಳೆ ಎಂದು ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ಆದ್ರೆ ಯುವತಿಯರು ಇದು ತಮ್ಮ ಪ್ರೈವೇಸಿ ಅಡ್ಡಿ ಎಂದು ಹೇಳುತ್ತಾರೆ. ಈ ಗುಣ ಹುಡುಗರಿಗೆ ಇಷ್ಟವಾಗಲ್ಲ.
88
7. ಹೊರಗೆ ಹೋಗಿದ್ದಾಗ ಒಂದೇ ರೀತಿಯ ಆಹಾರ ಸೇವಿಸಬೇಕೆಂದು ಬಯಸುತ್ತಾರೆ. ಆದ್ರೆ ಕೆಲ ಯುವತಿಯರು ಆಹಾರ ವಿಷಯದಲ್ಲಿ ತುಂಬಾನೇ ಶಿಸ್ತು ಕಾಪಾಡಿಕೊಂಡಿರುತ್ತಾರೆ. ಈ ವಿಷಯವೂ ಇಂದಿನ ಜೋಡಿಗಳ ಮನಸ್ತಾಪಕ್ಕೆ ಕಾರಣವಾಗುತ್ತದೆ.