ರಾತ್ರಿ ಮಲಗುವ ಮುನ್ನ ಸಂಗಾತಿ ಇದನ್ನ ಮಾಡ್ತಿದ್ದಾರೆ ಅಂದ್ರೆ ಅವರು ಮೋಸ ಮಾಡ್ತಿದ್ದಾರೆ ಎಂದರ್ಥ…

Published : Aug 16, 2025, 05:56 PM IST

ಸಂಬಂಧದಲ್ಲಿ ಯಾವಾಗಲೂ ಬಲವಾದ ನಂಬಿಕೆಯ ಬಂಧವಿರುತ್ತದೆ, ಅದನ್ನು ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಆದಾರೂ ಕೂಡ, ಇಂದು ಸಂಬಂಧಗಳು ಬೇಗನೆ ಮುರಿದು ಬೀಳುತ್ತಿವೆ, ಇದಕ್ಕೆ ವಿಭಿನ್ನ ಕಾರಣಗಳಿವೆ. 

PREV
18

ಸಂಬಂಧಗಳಲ್ಲಿ ನಂಬಿಕೆ ಅತ್ಯಂತ ಮುಖ್ಯವಾದ ವಿಷಯ, ಆದರೆ ಕೆಲವು ಅಭ್ಯಾಸಗಳು ಮತ್ತು ನಡವಳಿಕೆಗಳು ಸಂಬಂಧದಲ್ಲಿ ಮೋಸ ಮಾಡುತ್ತಿದ್ದಾರೆ ಅನ್ನೊದನ್ನು ಸೂಚಿಸುತ್ತೆ. ನಿಮ್ಮ ಸಂಗಾತಿ ಮಲಗುವ ಮುನ್ನ ಕೆಲವು ವಿಚಿತ್ರ ಕೆಲಸಗಳನ್ನು ಮಾಡಿದರೆ, ನೀವು ಜಾಗರೂಕರಾಗಿರಬೇಕು. ಯಾಕಂದ್ರೆ ಅವರು ಮೋಸ ಮಾಡುತ್ತಿದ್ದಾರೆ ಅನ್ನೋದನ್ನು ನೀವು ಅರ್ಥ ಮಾಡಿಕೊಳ್ಳಬೇಕು.

28

ನಿಮ್ಮ ಸಂಗಾತಿ ಪ್ರತಿದಿನ ರಾತ್ರಿ ಮಲಗುವ ಮುನ್ನ ಮೊಬೈಲ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರೆ ಮತ್ತು ನಿಮಗೆ ಸ್ಕ್ರೀನ್ ನೋಡಲು ಬಿಡದಿದ್ದರೆ, ಅದು ಅನುಮಾನದ ಸಂಕೇತವಾಗಿರಬಹುದು. ಅವರು ಏನನ್ನು ಗುಟ್ಟು ಮಾಡುತ್ತಿದ್ದಾರೆ ಅನ್ನೋದನ್ನು ತಿಳಿಯಲು ಪ್ರಯತ್ನಿಸಿ.

38

ನಿಮ್ಮ ಸಂಗಾತಿ ಮಲಗುವ ಮುನ್ನ ಪ್ರತಿದಿನ ಕಾಲ್ ನಲ್ಲಿ ಅಥವಾ ಮೆಸೇಜ್ ಮಾಡುತ್ತಾ ಮೊಬೈಲ್ ನಲ್ಲಿ ಬ್ಯುಸಿಯಾಗಿರುತ್ತಿದ್ದರೆ, ನೀವು ಅವರ ಬಳಿ ಪ್ರಶ್ನಿಸಿದಾಗ ಕೆಲಸದ ವಿಷಯ ಎಂದು ಹೇಳುತ್ತಿದ್ದರೆ, ಅದು ಮೋಸದ ಸಂಕೇತವೂ ಆಗಿರಬಹುದು.

48

ನಿಮ್ಮ ಸಂಗಾತಿ ಮಲಗಲು ಹೋದ ತಕ್ಷಣ ಅವರ ಫೋನ್ ಅನ್ನು ಸೈಲೆಂಟ್ ಅಥವಾ ಫ್ಲೈಟ್ ಮೋಡ್‌ನಲ್ಲಿ ಇಟ್ಟರೆ, ಅದು ಏನನ್ನಾದರೂ ಮರೆಮಾಚುವ ಒಂದು ಮಾರ್ಗವಾಗಿರಬಹುದು. ಹಾಗಾಗಿ ಅವರು ಇದನ್ನು ಮಾಡುತ್ತಿದ್ದಾರೆಯೇ ಎನ್ನುವುದನ್ನು ನೀವು ಖಚಿತಪಡಿಸಿ.

58

ಮಲಗುವ ಮುನ್ನ ಹಠಾತ್ತನೆ ಬಾತ್ರೂಮ್‌ ಗೆ ಹೋಗಿ, ಅಲ್ಲಿ ದೀರ್ಘಕಾಲ ಇದ್ದು, ಫೋನ್ ತೆಗೆದುಕೊಂಡು ಹೋಗುವುದು, ಅಲ್ಲಿ ಮೊಬೈಲ್ ನಲ್ಲಿ ಸಮಯ ಕಳೆಯೋದು ಸಹ ಅನುಮಾನಕ್ಕೆ ಕಾರಣವಾಗಬಹುದು.

68

ನಿಮ್ಮ ಸಂಗಾತಿ ಇದ್ದಕ್ಕಿದ್ದಂತೆ ಮಲಗುವ ಮುನ್ನ ನಿಮ್ಮೊಂದಿಗೆ ಮಾತನಾಡುವುದನ್ನು ತಪ್ಪಿಸಲು ಪ್ರಾರಂಭಿಸಿದರೆ ಮತ್ತು ನೆಪಗಳನ್ನು ಹೇಳಲು ಪ್ರಾರಂಭಿಸಿದರೆ, ಅದು ಬೇರೊಬ್ಬರಲ್ಲಿ ಆಸಕ್ತಿಯ ಸಂಕೇತವಾಗಿರಬಹುದು.

78

ಮಲಗುವ ಸಮಯದಲ್ಲಿ ಹಠಾತ್ ಕೋಪ ಅಥವಾ ಸಂಭಾಷಣೆ ಬೇಗನೆ ಮುಗಿಯುವಂತೆ ಅನಗತ್ಯ ವಾದಗಳನ್ನು ಮಾಡುವುದು ಸಹ ಅವರು ನಿಮಗೆ ಮೋಸ ಮಾಡುತ್ತಿರುವ ಒಂದು ಸೂಚನೆಯಾಗಿರಬಹುದು. ಇಂತಹ ಸಂದರ್ಭದಲ್ಲಿ ನೀವು ಎಚ್ಚರಿಕೆಯಿಂದ ಇರೋದು ಮುಖ್ಯ.

88

ಈ ಚಿಹ್ನೆಗಳನ್ನು ನಿರ್ಲಕ್ಷಿಸಬೇಡಿ ಮತ್ತು ನಿಮ್ಮ ಸಂಬಂಧದ ಬಗ್ಗೆ ಮುಕ್ತವಾಗಿ ಚರ್ಚಿಸಿ, ಇದರಿಂದ ವಂಚನೆಯ ಸತ್ಯ ಹೊರಬರಬಹುದು. ನೀವು ಈ ಮಾಹಿತಿಯನ್ನು ಇಗ್ನೋರ್ ಮಾಡಿದಷ್ಟು, ಸಂಬಂಧದಲ್ಲಿ ನೀವು ಮೋಸ ಹೋಗುವಿರಿ ಹಾಗೂ ನಿಮ್ಮ ಸಂಗಾತಿ ನಿಮ್ಮಿಂದ ಸಂಪೂರ್ಣವಾಗಿ ದೂರವಾಗಿ, ನಂತರ ನೀವು ಅದನ್ನು ಅರಿತುಕೊಂಡರೆ ದೊಡ್ಡಮಟ್ಟದಲ್ಲೇ ಕೆಡುಕಾಗುತ್ತದೆ.

Read more Photos on
click me!

Recommended Stories