ಯಾವುದೇ ಸಂಬಂಧದಲ್ಲಿ (Relationship) ಪ್ರೀತಿಯನ್ನು ಕಾಪಾಡಿಕೊಳ್ಳಲು ಇಬ್ಬರು ವ್ಯಕ್ತಿಗಳು ಬೇಕಾಗುತ್ತಾರೆ. ಪರಸ್ಪರರ ಸಂತೋಷ (Happiness) ಮತ್ತು ದುಃಖಗಳನ್ನು (Sarrow) ಹಂಚಿಕೊಳ್ಳಬಲ್ಲ ಇಬ್ಬರು ವ್ಯಕ್ತಿಗಳು ಜೊತೆ ಇದ್ದಾಗ ಸಂಬಂಧ ಚೆನ್ನಾಗಿರುತ್ತೆ. ಆದರೆ, ಬದಲಾಗುತ್ತಿರುವ ಯುಗದಲ್ಲಿ, ಸಂಬಂಧಗಳ ಅರ್ಥವೂ ಬದಲಾಗಲು ಪ್ರಾರಂಭಿಸಿದೆ. ಈಗ ಇತರರಲ್ಲಿ ತಮ್ಮ ಸಂತೋಷವನ್ನು ಕಂಡುಕೊಳ್ಳದ ಅನೇಕರಿದ್ದಾರೆ. ಹಾಗಾಗಿ ಸೋಲೋ ಡೇಟಿಂಗ್ ಟ್ರೆಂಡ್ ಗಮನಾರ್ಹವಾಗಿ ಹೆಚ್ಚಾಗಲು ಬಹುಶಃ ಇದು ಕಾರಣ. ನಿಮಗೆ ನೀವೇ ಸಂಗಾತಿಯಾಗಿ, ಜೀವನವನ್ನು ಎಂಜಾಯ್ ಮಾಡೋದೇ ಸೋಲೋ ಡೇಟಿಂಗ್.