ಮುಚ್ಚುಮರೆ ಇಲ್ದೆ ಫಸ್ಟ್ ಪೀರಿಯಡ್ ಗೆ ಮಗಳನ್ನು ಹೀಗೆ ಸಿದ್ಧ ಮಾಡಿ

Published : Jun 18, 2026, 03:41 PM IST

Parenting Tips : ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಪೀರಿಯಡ್ಸ್ ಆಗ್ತಿದೆ. ಭಾರತೀಯ ಮನೆಗಳಲ್ಲಿ ಪೀರಿಯಡ್ಸ್ ಬಗ್ಗೆ ಈಗ್ಲೂ ಮುಚ್ಚುಮರೆ ಇದೆ. ಸಣ್ಣ ಮಕ್ಕಳಿಂದ ಇಂಥ ವಿಷ್ಯಗಳನ್ನು ಪಾಲಕರು ಮುಚ್ಚಿಡ್ತಾರೆ. ಇದ್ರ ಬಗ್ಗೆ ಜ್ಞಾನ ಇಲ್ದೆ ಏಕಾಏಕಿ ಪೀರಿಯಡ್ಸ್ ಆದ್ರೆ ಮಕ್ಕಳು ಭಯಗೊಳ್ತಾರೆ.  

PREV
17
ಫಸ್ಟ್ ಪೀರಿಯಡ್ಸ್ ಬಗ್ಗೆ ಹೀಗೆ ತಿಳಿಸಿ

ಹದಿಹರೆಯದ ಮಗಳ ಜೊತೆ ಪೀರಿಯಡ್ಸ್ ಬಗ್ಗೆ ಮಾತನಾಡೋದು ಮುಜುಗರವಾದ್ರೂ ಅದು ಅನಿವಾರ್ಯ. ತಾಯಿಯಾದವಳು ಈ ಬಗ್ಗೆ ಮಗಳಿಗೆ ಮಾಹಿತಿ ನೀಡ್ಲೇಬೇಕು. ವಿಶ್ವಾಸಾರ್ಹ ಮೂಲದಿಂದ ಈ ಬಗ್ಗೆ ಮಾಹಿತಿ ಸಿಕ್ಕಿದ್ರೆ ಮಕ್ಕಳು ನೆಮ್ಮದಿಯಾಗಿರ್ತಾರೆ. ಇಲ್ಲ ಅವರಲ್ಲಿ ಭಯ, ತಪ್ಪು ತಿಳುವಳಿಕೆ ಬರುವ ಸಾಧ್ಯತೆ ಇರುತ್ತೆ.

27
ಪ್ರಶ್ನೆಗಳೊಂದಿಗೆ ಮಾತು ಶುರು ಮಾಡಿ

ಮಗಳ ಜೊತೆ ಈ ಬಗ್ಗೆ ಮಾತನಾಡುವಾಗ ಮಾತು ಸರಳವಾಗಿರಲಿ. ಪೀರಿಯಡ್ಸ್ ಬಗ್ಗೆ ಆಕೆಗೆ ಮಾಹಿತಿ ಇದ್ಯಾ ಎಂಬುದನ್ನು ಮೊದಲು ತಿಳಿದ್ಕೊಳ್ಳಿ. ಅವಳು ಶಾಲೆ ಅಥವಾ ಸ್ನೇಹಿತರಿಂದ ಇದರ ಬಗ್ಗೆ ತಿಳಿದುಕೊಂಡಿರಬಹುದು. ಅವಳ ಉತ್ತರದ ನಂತ್ರ ನಿಮ್ಮ ಮಾತು ಮುಂದುವರೆಸಿ. ಅವಳಿಗೆ ಅಪೂರ್ಣ ಮಾಹಿತಿ ಇದ್ರೆ ಪೂರ್ಣ ಮಾಹಿತಿ ನೀಡೋದು ನಿಮ್ಮ ಕರ್ತವ್ಯ.

37
ಪುಸ್ತಕದಂತೆ ವಿವರಣೆ

ನೀವು ಒಂದೇ ಸಮನೆ ಎಲ್ಲ ವಿಷ್ಯ ಹೇಳಿದ್ರೆ ಆಕೆ ಕನ್ಫ್ಯೂಸ್ ಆಗ್ಬಹುದು. ಹಾಗಾಗಿ ನಿಧಾನವಾಗಿ, ಪುಸ್ತಕದಲ್ಲಿ ನೀಡುವ ಮಾಹಿತಿಯಂತೆ ಆಕೆಗೆ ಪೀರಿಯಡ್ಸ್ ವಿಷ್ಯ ವಿವರಿಸಿ. ಪೀರಿಯಡ್ಸ್ ಪ್ರತಿಯೊಬ್ಬ ಮಹಿಳೆಗೆ ಆಗುವಂತಹದ್ದು, ಇದು ಗರ್ಭಾಶಯಕ್ಕೆ ಸಂಬಂಧಿಸಿದ್ದು ಎಂಬುದನ್ನು ವಿವರಿಸಿ. ಪ್ರತಿ ತಿಂಗಳು ಗರ್ಭಾಶಯವು ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಇದು ಗರ್ಭಾಶಯದ ಸುತ್ತಲೂ ಒಳಪದರವನ್ನು ಸೃಷ್ಟಿಸುತ್ತದೆ. ಗರ್ಭಾಶಯದಲ್ಲಿ ಮೊಟ್ಟೆಗಳಿಲ್ಲದಿದ್ದಾಗ, ಈ ಒಳಪದರವು ರಕ್ತದ ರೂಪದಲ್ಲಿ ಯೋನಿಯ ಮೂಲಕ ಹೊರಗೆ ಬರುತ್ತದೆ ಎಂಬುದನ್ನು ತಿಳಿಸಿ.

47
ಇದು ಸಾಮಾನ್ಯ ಎಂಬುದನ್ನು ಮನದಟ್ಟು ಮಾಡಿ

ಪ್ರತಿ ಹುಡುಗಿಯ ಪ್ರೌಢಾವಸ್ಥೆಯಲ್ಲಿ ಆಗುವ ನೈಸರ್ಗಿಕ ಪ್ರಕ್ರಿಯೆ ಇದು ಎಂದು ಮಗಳಿಗೆ ಒತ್ತಿ ಹೇಳಿ. ಇದು ರೋಗ ಅಥವಾ ಗಾಯವಲ್ಲ. ದೀರ್ಘಕಾಲದವರೆಗೆ ಅನಿಯಮಿತ ಮುಟ್ಟು ದೈಹಿಕ ಸಮಸ್ಯೆಯ ಸಂಕೇತ ಎಂಬ ಮಾಹಿತಿಯನ್ನು ನೀಡಿ.

57
ನಿಮ್ಮ ಅನುಭವ ಮುಖ್ಯ

ನಿಮ್ಮ ಮೊದಲ ಪೀರಿಯಡ್ಸ್ ಅನುಭವವನ್ನು ಮಗಳ ಮುಂದೆ ಹಂಚಿಕೊಳ್ಳಿ. ಇದು ಮಗಳನ್ನು ಆರಾಮವಾಗಿಡಲು ಸಹಾಯ ಮಾಡುತ್ತದೆ. ಪೀರಿಯಡ್ಸ್ ಬಗ್ಗೆ ಮಗಳು ಕೇಳುವ ಎಲ್ಲ ಪ್ರಶ್ನೆಗೆ ಸರಿಯಾದ ಉತ್ತರ ನೀಡಿ.

67
ಹಾರ್ಮೋನ್ ಬಗ್ಗೆ ಮಾಹಿತಿ

ಪೀರಿಯಡ್ಸ್ ಮೊದಲು ಹಾಗೂ ಸಮಯದಲ್ಲಿ ಆಗುವ ಹಾರ್ಮೋನ್ ಬದಲಾವಣೆ ಬಗ್ಗೆ ನೀವು ಮಗಳಿಗೆ ಮಾಹಿತಿ ನೀಡಬೇಕು. ಬ್ರೆಸ್ಟ್ ನಲ್ಲಿ ಆಗುವ ಬದಲಾವಣೆ, ಕಾಲು, ಸೊಂಟ, ತೊಡೆ ಸಂಧಿಗಳ ನೋವು, ಹೊಟ್ಟೆ ನೋವು – ಸೆಳೆತ, ಮನಸ್ಸಿನಲ್ಲಿ ಆಗುವ ಬದಲಾವಣೆ ಎಲ್ಲವನ್ನೂ ಆಕೆಗೆ ವಿವರಿಸುವುದು ಬಹಳ ಮುಖ್ಯ.

77
ಸ್ವಚ್ಛತೆ

ಮಗಳಿಗೆ ಸ್ಯಾನಿಟರಿ ಪ್ಯಾಡ್ ಬಳಕೆ ಹಾಗೂ ಬದಲಾವಣೆ ಬಗ್ಗೆ ಜ್ಞಾನ ನೀಡುವುದು ಮುಖ್ಯ. ದೇಹದ ನೈರ್ಮಲ್ಯ ಮತ್ತು ಶಾಲೆಯಲ್ಲಿ ಅಥವಾ ಹೊರಗೆ ಇರುವಾಗ ಹೇಗೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂಬುದನ್ನು ಕಲಿಸಬೇಕು. ಹಾಗೆಯೇ ಪೀರಿಯಡ್ಸ್ ಚಾರ್ಟ್ ಬಗ್ಗೆಯೂ ವಿವರ ನೀಡಬೇಕು. ಪ್ರತಿ 28 ದಿನಗಳ ನಂತ್ರ ಪೀರಿಯಡ್ಸ್ ಬರುತ್ತೆ, ಅವಧಿ 28 ರಿಂದ 35 ದಿನಗಳ ಒಳಗೆ ಇರಬೇಕು ಎಂಬೆಲ್ಲ ಮಾಹಿತಿಯನ್ನು ಆಕೆಗೆ ನೀಡಿದಲ್ಲಿ ಆಕೆ ಪೀರಿಯಡ್ಸ್ ಗೆ ಸಿದ್ಧವಾಗ್ತಾಳೆ. ನೀವು ವಿಷ್ಯವನ್ನು ಮುಚ್ಚಿಡ್ತಾ ಹೋದಲ್ಲಿ ಅಥವಾ ನಿರ್ಲಕ್ಷ್ಯ ಮಾಡಿದಲ್ಲಿ ಆಕೆ ಅಪೂರ್ಣ ಅಥವಾ ತಪ್ಪು ಮಾಹಿತಿ ಪಡೆದು ಸಮಸ್ಯೆ ಎದುರಿಸಬೇಕಾಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories