ಮನೆ ಸಿಸಿಟಿವಿ ದೃಶ್ಯ ನೋಡಿ ಕೆರಳಿದ ಗಂಡ, ಮದುವೆಯಾದ 45 ದಿನಕ್ಕೆ ಪತ್ನಿ ದುರಂತ ಅಂತ್ಯ ಕಂಡಿದ್ದು ಯಾಕೆ?

Published : Jun 18, 2026, 03:10 PM IST

26ರ ಹರೆಯದ ಯುವತಿ ಮದುವೆಯಾದ 45 ದಿನಕ್ಕೆ ಯುವತಿ ದುರಂತ ಅಂತ್ಯಕಂಡ ಘಟನೆ ನಡೆದಿದೆ. ಮನೆಯ ಸಿಸಿಟಿವಿ ದೃಶ್ಯ ನೋಡಿ ಹೆಂಡತಿ ಮೇಲೆ ಹಲ್ಲೆ ಪತಿ ಹಲ್ಲೆ ಮಾಡಿದೆ. ಇದರ ಬೆನ್ನಲ್ಲೇ ಪತ್ನಿ ದುರಂತ ಅಂತ್ಯಕಂಡಿದ್ದಾಳೆ. ಅಷ್ಟಕ್ಕೂ ಸಿಸಿಟಿವಿಯಲ್ಲಿ ಏನಿತ್ತು?

PREV
16
ಮದುವೆಯಾದ ಒಂದೂವರೆ ತಿಂಗಳಿಗೆ ದುರಂತ ಅಂತ್ಯ

ಮದುವೆಯಾಗಿ ಕೇವಲ ಒಂದೂವರೆ ತಿಂಗಳಾಗಿದೆ. ಅಷ್ಟರಲ್ಲೇ ಯುವತಿ ಬಾಳಲ್ಲಿ ದುರಂತ ನಡೆದಿದೆ. ಪೋಷಕರು ತಮ್ಮ ಮಗಳು ಸುಖವಾಗಿರಲಿ ಎಂದು ಪ್ರತಿಷ್ಠಿತ ಕುಟುಂಬದ ಪ್ರಪೋಸಲ್‌ಗೆ ಒಕೆ ಎಂದು ಮದುವೆ ಮಾಡಿಕೊಟ್ಟಿದ್ದರು. ಆದರೆ ಮನೆಯ ಒಳಗೆ, ಹೊರಗೆ ಎಲ್ಲೆಡೆ ಸಿಸಿಟಿವಿ ಅಳವಡಿಸಿದ್ದ ಪತಿ, ಪ್ರತಿ ದಿನ ಸಿಸಿಟಿವಿ ಪರಿಶೀಲಿಸುತ್ತಿದ್ದ. ಹೀಗೆ ಸಿಸಿಟಿವಿ ಪರಿಶೀಲಿಸಿ ಪತ್ನಿ ಮೇಲೆ ಹಲ್ಲೆ ಮಾಡಿದ ಮರುದಿನವೇ ಪತ್ನಿ ಬದುಕು ಅಂತ್ಯಗೊಳಿಸಿದ ಘಟನೆ ಮಹಾರಾಷ್ಟ್ರದ ಅಂಬರನಾಥ ಬರೇಲಿಯಲ್ಲಿ ನಡೆದಿದೆ.

26
26 ವರ್ಷದ ವಿಶಾಖಾ ತಿಲ್ಕರ್ ದುರಂತ ಕತೆ

26 ವರ್ಷದ ವಿಶಾಖಾ ತಿಲ್ಕರ್ ಮದುವೆ ಡಾ.ನಿತಿನ್ ತಿಲ್ಕರ್ ಜೊತೆ ಎಪ್ರಿಲ್ 30ರಂದು ನಡೆತಿತ್ತು. ಮದುವೆಯಾದ ಬಳಿಕ ಪ್ರತಿ ದಿನ ವಿಶಾಖಾ ಮಾನಸಿಕ ಹಿಂಸೆ, ದೈಹಿಕ ಹಿಂಸೆ ಅನುಭವಿಸಿದ್ದಳು. ಗಂಡ ಮಾತ್ರವಲ್ಲ ಗಂಡನ ಮನೆಯವರಿಂದಲೂ ಹಿಂಸೆ, ಕಿರುಕುಳ ಅನುಭವಿಸಿದ್ದಳು ಎಂದು ವಿಶಾಖಾ ಕುಟುಂಬಸ್ಥರು ಆರೋಪಿಸಿದ್ದಾರೆ. ಪತ್ನಿ ಏನೇ ಮಾಡಿದರೂ ತಪ್ಪು ಹುಡುಕಿ ಹಿಂಸೆ ನೀಡಲಾಗುತ್ತಿತ್ತು. ಪತ್ನಿ ಚಲನವಲನ ಗಮನಿಸಲು ಪತಿ ಮನೆಯ ಒಳಗೆ ಹೊರಗೆ ಸಿಸಿಟಿವಿ ಅಳವಡಿಸಿದ್ದ.

36
ಸಿಸಿಟಿವಿಯಲ್ಲಿ ಏನಿತ್ತು?

ಮದುವೆಯಾದ ದಿನದಿಂದಲೇ ವಿಶಾಖ ಮೇಲೆ ಡಾ.ನಿತಿನ್ ತಿಲ್ಕರ್ ಸವಾರಿ ಮಾಡಲು ಆರಂಭಿಸಿದ್ದ. ಮದುವೆಗೆ ಬಂದ ಗಿಫ್ಟ್ ಚೀಪ್ ಆಗಿತ್ತು. ವರದಕ್ಷಿಣೆ ಕಡಿಮೆಯಾಗಿದೆ. ನಮ್ಮ ಮದುವೆ ಖರ್ಚು ಹೆಚ್ಚಾಗಿದೆ ಎಂದು ಪದೇ ಪದೇ ಹೇಳಿ ಪತ್ನಿಗೆಕಿರುಕುಳ ನೀಡುತ್ತಿದ್ದ. ಇದರ ನಡುವೆ ಪತ್ನಿ ಪಕ್ಕದ ಮನೆಯವರ ಜೊತೆ ಮಾತನಾಡಿದ ದೃಶ್ಯವನ್ನು ಸಿಸಿಟಿವಿ ಮೂಲಕ ಪರಿಶೀಲಿಸಿದ್ದ.ಇಲ್ಲಿಂದ ಜಗಳ ತಾರಕಕ್ಕೇರಿದೆ.

46
ದುರಂತ ಅಂತ್ಯ ಕಂಡ ವಿಶಾಖಾ

ಪಕ್ಕದ ಮನೆಯವರ ಜೊತೆ ಅದರಲ್ಲೂ ಮಹಿಳೆ ಜೊತೆ ಮಾತನಾಡಿದ್ದಕ್ಕೆ ನಿತಿನ್ ತಿಲ್ಕರ್ ಕೆರಳಿದ್ದ. ಇದೇ ವಿಚಾರವಾಗಿ ವಿಶಾಖ ಮೇಲೆ ಹಲ್ಲೆ ಮಾಡಿದ್ದ. ಈ ಕುರಿತು ಪೋಷಕರ ಜೊತೆ ಹೇಳಿಕೊಂಡಿದ್ದ ವಿಶಾಕ ಮರು ದಿನವೇ ಬದುಕು ಅಂತ್ಯಗೊಳಿಸಿದ್ದಾಳೆ. ಮಾಹಿತಿ ತಿಳಿದ ವಿಶಾಖ ಪೋಷಕರು ಕಂಗಾಲಾಗಿದ್ದಾರೆ.

56
ಮನೆಗೆ ಕರೆದುಕೊಂಡು ಬರಲು ಸಜ್ಜಾಗಿದ್ದ ಪೋಷಕರು

ಪತಿ ಹಲ್ಲೆ ಮಾಡಿರುವ ವಿಚಾರ ತಾಯಿಗೆ ಹೇಳಿದ ಬೆನ್ನಲ್ಲೇ ವಿಶಾಖ ಪೋಷಕರು ಮಗಳನ್ನು ಕರೆದುಕೊಂಡು ಬರಲು ನಿರ್ಧರಿಸಿದ್ದರು. ಈ ಕುರಿತು ಚರ್ಚಿಸಿ ಮರುದಿನ ನೇರವಾಗಿ ತೆರಳಿ ಕರೆದುಕೊಂಡು ಬರಲು ಪ್ಲಾನ್ ಮಾಡಿದ್ದರು. ಆದರೆ ಮರುದಿನ ಬೆಳಗ್ಗೆ ದುರಂತ ಸುದ್ದಿ ತಲುಪಿತ್ತು.

66
ಪತಿ ಅರೆಸ್ಟ್, ಅತ್ತೆ ಮಾವ ಎಸ್ಕೇಪ್

ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪ್ರಕರಣ ದಾಖಲಿಸಿದ ಪೊಲೀಸರು ಪತ್ನಿ ನಿತಿನ್ ತಿಲ್ಕರ್ ಅರೆಸ್ಟ್ ಮಾಡಿದ್ದಾರೆ.ನಿತಿನ್ ತಿಲ್ಕರ್ ಪೋಷಕರು ಪರಾರಿಯಾಗಿದ್ದಾರೆ. ವಿಶಾಖಾ ತಿಲ್ಕರ್ ಮೊಬೈಲ್ ಫೋನ್ ಸೇರಿದಂತೆ ಇತರ ಕೆಲ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories