Chanakya Niti life lessons: ಸಹಾಯ ಮಾಡುವುದು ಪುಣ್ಯದ ಕೆಲಸ ನಿಜ, ಆದರೆ ತಪ್ಪು ವ್ಯಕ್ತಿಗಳಿಗೆ ಮಾಡುವ ಸಹಾಯ ನಿಮ್ಮನ್ನೇ ಸಂಕಷ್ಟಕ್ಕೆ ದೂಡಬಹುದು ಎನ್ನುತ್ತಾರೆ ಚಾಣಕ್ಯ. ತಮ್ಮ 'ಚಾಣಕ್ಯ ನೀತಿ'ಯಲ್ಲಿ ಅವರು ಕೆಲವು ನಿರ್ದಿಷ್ಟ ಗುಣವುಳ್ಳ ಜನರಿಗೆ ಸಹಾಯ ಮಾಡಬಾರದು ಎಂದು ಎಚ್ಚರಿಸಿದ್ದಾರೆ.
ಅವರು ಯಾರು? ಆಚಾರ್ಯ ಚಾಣಕ್ಯನ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಅವರು ಅತ್ಯಂತ ಕೌಶಲ್ಯ ಹೊಂದಿದ್ದ ಒಬ್ಬ ಮಹಾನ್ ವ್ಯಕ್ತಿ. ಅವರು ತಮ್ಮ ನೀತಿ ಶಾಸ್ತ್ರದಲ್ಲಿ ಜೀವನಕ್ಕೆ ಅಗತ್ಯವಾದ ಹಲವಾರು ವಿಷಯಗಳ ಬಗ್ಗೆ ತಿಳಿಸಿದ್ದಾರೆ. ಇಂದಿಗೂ ಸಹ ಅವರು ಹೇಳಿದ ವಿಷಯಗಳನ್ನು ತಿಳಿದುಕೊಳ್ಳಲು ಅನೇಕ ಜನರು ಆಸಕ್ತಿ ತೋರಿಸುತ್ತಾರೆ. ಚಾಣಕ್ಯನ ಪ್ರಕಾರ, ಕೆಲವು ನಿರ್ದಿಷ್ಟ ಗುಣವುಳ್ಳವರಿಗೆ ನಾವು ಎಂದಿಗೂ ಸಹಾಯ ಮಾಡಬಾರದು. ಅವರು ಯಾರು ಎಂಬ ವಿವರ ಇಲ್ಲಿದೆ.
25
ದುರಾಸೆಯುಳ್ಳವರಿಗೆ ಸಹಾಯ ಬೇಡ
ದುರಾಸೆಯುಳ್ಳವರಿಗೆ ಸಹಾಯ ಬೇಡ ಚಾಣಕ್ಯನ ನೀತಿಯ ಪ್ರಕಾರ, ಜೀವನದಲ್ಲಿ ಅತಿಯಾದ ದುರಾಸೆ ಹೊಂದಿರುವವರಿಗೆ ಎಂದಿಗೂ ಸಹಾಯ ಮಾಡಬಾರದು. ಅಂತಹವರು ತಮ್ಮ ಸ್ವಾರ್ಥಕ್ಕಾಗಿ ಮಾತ್ರ ನಿಮ್ಮ ಬಳಿ ಸಹಾಯವನ್ನು ಕೋರುತ್ತಾರೆ ಮತ್ತು ಕೆಲಸ ಮುಗಿದ ಮೇಲೆ ನಿಮ್ಮನ್ನು ಬಳಸಿಕೊಳ್ಳುತ್ತಾರೆ. ಇದರಿಂದಾಗಿ ನೀವು ಅನೇಕ ತೊಂದರೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ದುರಾಸೆಯ ವ್ಯಕ್ತಿಗಳಿಗೆ ಒಂದು ರೂಪಾಯಿಯನ್ನೂ ನೀಡಬೇಡಿ ಮತ್ತು ಅವರಿಂದ ದೂರವಿರಿ.
35
ಕೃತಘ್ನರಿಂದ ದೂರವಿರಿ
ಕೃತಘ್ನರಿಂದ ದೂರವಿರಿ ಮಾಡಿದ ಸಹಾಯವನ್ನು ಮರೆಯುವ ಅಥವಾ ಕೃತಜ್ಞತೆ ಇಲ್ಲದವರಿಗೆ ಅಪ್ಪಿತಪ್ಪಿಯೂ ಸಹಾಯ ಮಾಡಬೇಡಿ. ಮೌಲ್ಯ ನೀಡದವರು ಅತ್ಯಂತ ಸ್ವಾರ್ಥಿಗಳಾಗಿರುತ್ತಾರೆ. ನಿಮ್ಮ ಅಗತ್ಯದ ಸಮಯದಲ್ಲಿ ಅವರು ನಿಮ್ಮ ಜೊತೆ ಇರುವುದಿಲ್ಲ. ಆದ್ದರಿಂದ ಕೃತಘ್ನರಿಗೆ ಸಹಾಯ ಮಾಡಿ ನಂತರ ನೀವು ಪಶ್ಚಾತ್ತಾಪ ಪಡಬೇಡಿ.
ಪ್ರಾಮಾಣಿಕತೆ ಇಲ್ಲದವರಿಗೆ ಸಹಾಯ ಮಾಡಬೇಡಿ ತಮ್ಮ ಕೆಲಸದಲ್ಲಿ ಅಥವಾ ಜೀವನದಲ್ಲಿ ಪ್ರಾಮಾಣಿಕತೆ ಇಲ್ಲದವರಿಗೆ ಯಾವುದೇ ರೀತಿಯ ಸಹಾಯ ಮಾಡಬೇಡಿ. ಅಂತಹವರಿಂದ ನೀವು ಸಾಧ್ಯವಾದಷ್ಟು ದೂರವಿರುವುದು ಉತ್ತಮ. ಅಂತವರನ್ನು ನಿಮ್ಮ ಜೀವನದ ಒಳಗೆ ಸೇರಿಸಿಕೊಳ್ಳಬೇಡಿ. ಸದಾ ಸುಳ್ಳು ಹೇಳುವ ವ್ಯಕ್ತಿಗಳಿಗೆ ಯಾವುದೇ ಸಹಾಯ ಮಾಡಬಾರದು ಮತ್ತು ಅವರಿಂದ ಅಂತರ ಕಾಯ್ದುಕೊಳ್ಳಬೇಕು.
55
ಸೋಮಾರಿಗಳನ್ನು ದೂರವಿಡಿ
ಸೋಮಾರಿಗಳನ್ನು ದೂರವಿಡಿ ಸೋಮಾರಿಗಳಾಗಿರುವವರಿಂದ ನೀವು ಎಷ್ಟು ದೂರವಿದ್ದರೆ ಅಷ್ಟು ಒಳ್ಳೆಯದು. ಅಂತವರಿಗೆ ಸಹಾಯ ಮಾಡುವುದರಿಂದ ನಿಮ್ಮ ಹಣ ಮತ್ತು ಸಮಯ ಎರಡೂ ವ್ಯರ್ಥವಾಗುತ್ತವೆ. ಇಂತಹ ಜನರನ್ನು ಜೀವನದಲ್ಲಿ ದೂರ ಇಡುವುದೇ ಶ್ರೇಯಸ್ಕರ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.