ಭಾರತೀಯ ಮದುವೆಗಳಲ್ಲಿ, ವಿಶೇಷವಾಗಿ ಮೊದಲ ರಾತ್ರಿಯಂದು ನವದಂಪತಿಗೆ ಎಲೆ-ಅಡಿಕೆ ನೀಡುವ ಸಂಪ್ರದಾಯವಿದೆ. ಇದು ಪ್ರೀತಿ ಮತ್ತು ಅನ್ಯೋನ್ಯತೆಯ ಸಂಕೇತವೆಂದು ಪರಿಗಣಿಸಲಾಗಿದ್ದು, ಬಾಯಿಯ ಸುವಾಸನೆಗೂ ಸಹಕಾರಿ. ಆದರೆ, ತಂಬಾಕುಯುಕ್ತ ಪಾನ್ ಸೇವನೆಯು ಆರೋಗ್ಯಕ್ಕೆ ಹಾನಿಕಾರಕ ಎಂಬ ಎಚ್ಚರಿಕೆಯೂ ಈ ಲೇಖನದಲ್ಲಿದೆ.
ಮದುವೆ ಅಂದ್ರೆ ಅದು ಹಲವು ಶಾಸ್ತ್ರಗಳನ್ನೊಳಗೊಂಡಿರುವ ಕಾರ್ಯಕ್ರಮ. ಮಾಂಗಲ್ಯಧಾರಣೆ ಮುನ್ನ ಮತ್ತು ನಂತರ ಅನೇಕ ಶಾಸ್ತ್ರಗಳನ್ನು ಆಚರಣೆ ಮಾಡಲಾಗುತ್ತದೆ. ಅಂತಹ ಪದ್ದತಿಗಳಲ್ಲಿ ಒಂದು ವಧು-ವರ ಜೊತೆಯಾಗಿ ಎಲೆ-ಅಡಿಕೆ (ಪಾನ್/ಬೀಡಾ). ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಇದನ್ನು ಆಚರಣೆ ಮಾಡಲಾಗುತ್ತದೆ. ಮದುವೆಯ ನಂತರ ದಂಪತಿಯ ಮೊದಲರಾತ್ರಿಯಲ್ಲಿ ಹಾಲು, ಹಣ್ಣುಗಳ ಜೊತೆಯಲ್ಲಿ ಎಲೆ-ಅಡಿಕೆ ನೀಡಲಾಗುತ್ತದೆ.
25
ಫಸ್ಟ್‌ನೈಟ್‌ನಲ್ಲಿ ಪಾನ್ ಏಕೆ ಕೊಡ್ತಾರೆ?
ಭಾರತೀಯ ಸಂಸ್ಕೃತಿಯಲ್ಲಿ ಎಲೆಯನ್ನು ಶುಭ ಎಂದು ಪರಿಗಣಿಸಲಾಗುತ್ತದೆ. ಯಾವುದೇ ಶುಭ ಸಮಾರಂಭಗಳು ನಡೆದ್ರೂ ಅಲ್ಲಿ ಎಲೆ ನೀಡಲಾಗುತ್ತದೆ. ಮನೆಯಲ್ಲಿ ಏನಾದ್ರೂ ಸಮಾರಂಭ ನಡೆದ್ರೂ ಊಟದ ಬಳಿಕ ಅತಿಥಿಗಳಿಗೆ ಎಲೆ-ಅಡಿಕೆ ನೀಡಲಾಗುತ್ತದೆ. ಎಲೆ-ಅಡಿಕೆ ಹಂಚಿಕೊಳ್ಳೋದರಿಂದ ಅನೋನ್ಯತೆ ಬೆಳೆಯುತ್ತೆ ಎಂಬ ಮಾತಿದೆ. ಹಾಗಾಗಿಯೇ ಫಸ್ಟ್‌ನೈಟ್‌ನಲ್ಲಿ ನವದಂಪತಿಗೆ ಎಲೆ-ಅಡಿಕೆ ತಿನ್ನುವಂತೆ ಹಿರಿಯರು ಸಲಹೆ ನೀಡುತ್ತಾರೆ.
35
ಪ್ರೀತಿ ಮತ್ತು ಅನ್ಯೋನ್ಯತೆಯ ಸಂಕೇತ
ಫಸ್ಟ್‌ನೈಟ್‌ನಲ್ಲಿ ಜೋಡಿ ಹಂಚಿಕೊಂಡು ಸುಣ್ಣ, ಎಲೆ ಮತ್ತು ಅಡಿಕೆಯನ್ನು ತಿನ್ನೋದು ಪ್ರೀತಿ ಮತ್ತು ಅನ್ಯೋನ್ಯತೆಯನ್ನು ಬಿಂಬಿಸುತ್ತದೆ ಎಂಬ ಮಾತುಗಳನ್ನು ಹಿರಿಯರು ಹೇಳುತ್ತಾರೆ. ಆದ್ರೆ ಮದುವೆಯ ಮೊದಲರಾತ್ರಿಯಲ್ಲಿ ಪಾನ್ ನೀಡುವ ಆಚರಣೆ ಎಲ್ಲಾ ಭಾಗದಲ್ಲಿಯೂ ಇಲ್ಲ. ಸಂಪ್ರದಾಯ ಮತ್ತು ಆಚರಣೆಗಳು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತಿರುತ್ತವೆ. ಇನ್ನು ಕೆಲವರ ಪ್ರಕಾರ, ಪಾನ್ ಸೇವನೆಯೂ ಜೋಡಿಯುಲ್ಲಿ ಕಾಮಾಸಕ್ತಿ ಹೆಚ್ಚಿಸುತ್ತೆ. ಆದ್ರೆ ಇದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ.
ಮದುವೆಯ ರಾತ್ರಿ ಪಾನ್ ತಿನ್ನುವ ಸಂಪ್ರದಾಯವು ಪ್ರಾಥಮಿಕವಾಗಿ ಹಳೆಯ ನಂಬಿಕೆಗಳು ಮತ್ತು ಸಾಂಸ್ಕೃತಿಕ ಆಚರಣೆಗಳೊಂದಿಗೆ ಸಂಬಂಧ ಹೊಂದಿದೆ. ಹಾಗಾಗಿ ಇಂದಿಗೂ ಈ ಆಚರಣೆ ಮುಂದುವರಿದುಕೊಂಡು ಬಂದಿದೆ. ಆಯುರ್ವೇದ ಪದ್ಧತಿಗಳಲ್ಲಿ ವೀಳ್ಯದ ಎಲೆಗಳನ್ನು ಬಹಳ ಹಿಂದಿನಿಂದಲೂ ಬಳಸಲಾಗುತ್ತಿದೆ. ಬಾಯಿಯ ಸುವಾಸನೆಗಾಗಿ ಎಲೆ-ಅಡಿಕೆ ತಿನ್ನಲಾಗುತ್ತದೆ. ಊಟದ ಬಳಿಕ ಪಾನ್ ತಿಂದ ನಂತರ ಬಾಯಿಯಲ್ಲಿ ಫ್ರೆಶ್ ಫೀಲ್ ಬರುತ್ತದೆ.
55
ಆರೋಗ್ಯ ಸಲಹೆ
ಎಲ್ಲಾ ರೀತಿಯ ಪಾನ್‌ಗಳು ಆರೋಗ್ಯಕ್ಕೆ ಒಳ್ಳೆಯದು ಅಲ್ಲ ಎಂಬ ಅಂಶ ನಿಮ್ಮ ಗಮನದಲ್ಲಿರಲಿ. ವಿಳ್ಯದೆಲೆ ಜೊತೆ ಕೆಲವರು ಅತಿಯಾಗಿ ತಂಬಾಕು, ಅಡಿಕೆ, ಸುಣ್ಣ ಸೇರಿದಂತೆ ಹಲವು ಪದಾರ್ಥಗಳನ್ನು ಸೇರಿಸಿಕೊಳ್ಳುತ್ತಾರೆ. ತಂಬಾಕು, ಗುಟ್ಕಾ ಅಂತ ಪ್ರಮಾಣಗಳನ್ನು ಅತಿಯಾಗಿ ಬಳಸೋದರಿಂದ ಆರೋಗ್ಯಕ್ಕೆ ತುಂಬಾನೇ ಅಪಾಯಕಾರಿ. ಈ ಪದಾರ್ಥಗಳು ಬಾಯಿಯ ಆರೋಗ್ಯಕ್ಕೆ ಹಾನಿ ಮಾಡುತ್ತದೆ ಮತ್ತು ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.