ಇಂಟಿಮೆಸಿ ಕುರಿತು ಪ್ರತಿಯೊಬ್ಬರೂ ಕಲಿಯಬೇಕಾಗಿದ್ದಿಷ್ಟು

First Published May 28, 2021, 3:42 PM IST

ಆಕ್ಸ್ಫರ್ಡ್ ಇಂಗ್ಲಿಷ್ ನಿಘಂಟು 'ಇಂಟಿಮೆಸಿ' ಎಂಬ ಪದವನ್ನು 'ಯಾರೊಂದಿಗಾದರೂ ನಿಕಟ ವೈಯಕ್ತಿಕ ಸಂಬಂಧವನ್ನು ಹೊಂದಿರುವ ಸ್ಥಿತಿ' ಎಂದು ವ್ಯಾಖ್ಯಾನಿಸುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ವೈಯಕ್ತಿಕ ಸಂಬಂಧಗಳಲ್ಲಿ ಜನರ ನಡುವಿನ ನಿಕಟತೆಯನ್ನು 'ಇಂಟಿಮೆಸಿ' ಎನ್ನಬಹುದು. ನೀವು ಯಾರೊಂದಿಗಾದರೂ ಸಂಪರ್ಕ ಸಾಧಿಸುವಾಗ, ಪರಸ್ಪರ ಕಾಳಜಿ ವಹಿಸಿದಾಗ ಮತ್ತು ಅವರ ಜೊತೆಗೆ ಸಮಯ ಕಳೆಯುವಾಗ ಆರಾಮದಾಯಕ ಎಂದು ಅನಿಸುವುದೆಲ್ಲವೂ ಇಂಟಿಮೆಸಿಯ ಭಾಗ. ಇದಲ್ಲದೆ, ಇಂಟಿಮೆಸಿಯು ದೈಹಿಕ ಅಥವಾ ಭಾವನಾತ್ಮಕ ನಿಕಟತೆ ಅಥವಾ ಎರಡು ಮಿಶ್ರಣವನ್ನು ಒಳಗೊಂಡಿರಬಹುದು.

ಇಂಟಿಮೆಸಿಯ ಕೆಲವು ಮಟ್ಟಗಳಿವೆ ಎಂದು ಎಂದಾದರೂ ಕೇಳಿದ್ದೀರಾ? ಆಸ್ಟ್ರೇಲಿಯಾದ ಭಾಷಣಕಾರ ಮತ್ತು ವ್ಯವಹಾರ ಸಲಹೆಗಾರ ಮ್ಯಾಥ್ಯೂ ಕೆಲ್ಲಿ ತಮ್ಮ ಪುಸ್ತಕದಲ್ಲಿ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಏಳು ಹಂತಗಳ ಇಂಟಿಮೆಸಿ ಬಗ್ಗೆ ಬರೆದಿದ್ದಾರೆ. ಅವುಗಳ ಪುಟ್ಟ ವಿವರ ಇಲ್ಲಿದೆ...
undefined
ಮೃದು ಸಂಭಾಷಣೆ :ಮೊದಲನೆಯದಾಗಿ ಒಬ್ಬರಿಗೊಬ್ಬರು ಮಾತನಾಡುವುದು. 'ನೀವು ಹೇಗಿದ್ದೀರಿ' ಅಥವಾ 'ಈ ದಿನಗಳಲ್ಲಿ ನೀವು ಏನು ಮಾಡುತ್ತಿದ್ದೀರಿ' ಎಂಬಂತಹ ಪ್ರಶ್ನೆಗಳನ್ನು ಒಳಗೊಂಡಿದೆ. ಈ ರೀತಿಯಾಗಿ ಮಾತುಕತೆ ಆರಂಭಿಸಿ, ಮುಂದೆ ಅದನ್ನೇ ಮುಂದುವರೆಸಿ ಸ್ನೇಹ ಹೆಚ್ಚಿಸಬಹುದು.
undefined
ಜನರಲ್ ಟಾಕ್ಈ ಮಟ್ಟವು ಷೇರು ಮಾರುಕಟ್ಟೆ, ಹವಾಮಾನ ಮುಂತಾದ ವಿಷಯಗಳು ಸೇರಿದಂತೆ ವಾಸ್ತವಾಂಶಗಳ ಬಗ್ಗೆ ಸಂವಹನವನ್ನು ಒಳಗೊಂಡಿದೆ. ಕೆಲ್ಲಿಯ ಪ್ರಕಾರ, ಹೆಚ್ಚಿನ ಸಂಬಂಧಗಳು ಈ ಎರಡು ಆರಂಭಿಕ ಹಂತಗಳ ನಡುವೆ ತಿರುಗುತ್ತವೆ ಏಕೆಂದರೆ ಮೂರನೇ ಹಂತದ ಇಂಟಿಮೆಸಿಯ ಬಗ್ಗೆ ಹೆಚ್ಚಿನವರಿಗೆ ಭಯ ಇರುತ್ತದೆ.
undefined
ಅಭಿಪ್ರಾಯಗಳುಸಂಬಂಧಗಳಲ್ಲಿ ವಿಷಯಗಳು ನಿಜವಾಗಲು ಪ್ರಾರಂಭವಾಗುವುದು ಈಗ. ಇಲ್ಲಿ ಜನರು ವಿಭಿನ್ನ ವಿಷಯಗಳ ಬಗ್ಗೆ ತಮ್ಮ ಪ್ರಾಮಾಣಿಕ ಅಭಿಪ್ರಾಯವನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ಇದನ್ನು ಮಾಡಲು ನಂಬಿಕೆಯ ಅಗತ್ಯವಿದೆ ಮತ್ತು ನಮ್ಮ ನಡುವಿನ ವ್ಯತ್ಯಾಸಗಳನ್ನು ನಾವು ಅರ್ಥಮಾಡಿಕೊಳ್ಳಬೇಕು ಮತ್ತು ಒಪ್ಪಿಕೊಳ್ಳಬೇಕು.
undefined
ಭರವಸೆಗಳು ಮತ್ತು ಕನಸುಗಳುಈ ಹಂತದಲ್ಲಿ ನಮ್ಮ ಭರವಸೆಗಳು ಮತ್ತು ಕನಸುಗಳನ್ನು ಪರಸ್ಪರ ಹಂಚಿಕೊಳ್ಳುವ ಬಗ್ಗೆ ಆರಾಮದಾಯಕ ಭಾವನೆಯನ್ನು ಒಳಗೊಂಡಿರುತ್ತದೆ. ಅಲ್ಲದೆ, ಈ ಹಂತದಲ್ಲಿಯೇ ನಾವು ಕನಸುಗಳನ್ನು ಹಂಚಿಕೊಳ್ಳಲು ಮತ್ತು ಅವುಗಳನ್ನು ಒಟ್ಟಿಗೆ ಸಾಕಾರಗೊಳಿಸಲು ಜೋಡಿಯಲು ಆಲೋಚನೆ ಮಾಡುತ್ತಾರೆ.
undefined
ಭಾವನೆಗಳುಪರಸ್ಪರ ಭಾವನೆಗಳನ್ನು ಹಂಚಿಕೊಳ್ಳುವುದು. ಇತರ ವ್ಯಕ್ತಿಗೆ ತಮ್ಮ ಭಾವನೆಯನ್ನು ಹಂಚಿಕೊಳ್ಳಲು ಸ್ಥಳವನ್ನು ನೀಡುವುದು ಸ್ವಂತ ಭಾವನೆಯನ್ನು ಗುರುತಿಸಲು ಸಾಧ್ಯವಾಗುವುದು ಇಲ್ಲಿ ಮುಖ್ಯ. ಭಾವನೆಗಳನ್ನು ಹಂಚಿಕೊಳ್ಳುವುದರಿಂದ ಇಬ್ಬರ ನಡುವೆ ಹೆಚ್ಚಿನ ಅನ್ಯೋನ್ಯತೆ ಬೆಳೆಯುತ್ತದೆ.
undefined
ಆಲೋಚನೆಗಳು, ಭಯಗಳು ಮತ್ತು ಸೋಲುಈ ಹಂತದಲ್ಲಿ, ನಮ್ಮ ವ್ಯಕ್ತಿತ್ವದ ಕೆಲವು ಕರಾಳ ಭಾಗಗಳನ್ನು ಸುಲಭವಾಗಿ ಹಂಚಿಕೊಳ್ಳುತ್ತೇವೆ. ನಮ್ಮಲ್ಲಿ ಅನೇಕರು ಹಲವಾರು ಆಲೋಚನೆಗಳನ್ನು ಹೊಂದಿರುವುದರಿಂದ ನಾವು ಯಾರೊಂದಿಗೂ ಹಂಚಿಕೊಳ್ಳಲು ಬಯಸುವುದಿಲ್ಲ, ತುಂಬಾ ಆತ್ಮೀಯತೆ ಬೆಳೆದಾಗ ಮಾತ್ರ ನಾವು ನಮ್ಮಲ್ಲಿನ ಭಾವನೆಗಳನ್ನು ಹಂಚಿಕೊಳ್ಳುತ್ತೇವೆ.
undefined
ಅಗತ್ಯಗಳುಅತ್ಯುನ್ನತ ಮಟ್ಟದ ಅನ್ಯೋನ್ಯತೆ, ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಅಗತ್ಯಗಳ ಬಗ್ಗೆ ಈ ಹಂತದಲ್ಲಿ ಮಾತನಾಡಲಾಗುತ್ತದೆ. ಇಲ್ಲಿ ಇಬ್ಬರು ಕುಳಿತು ತಮ್ಮ ಅಗತ್ಯಗಳು ಯಾವುವು ಎಂಬುದನ್ನು ಪರಸ್ಪರ ಹಂಚಿಕೊಳ್ಳಬಹುದು. ಇದರಲ್ಲಿ ದೈಹಿಕ, ಮಾನಸಿಕ, ಶಾರೀರಿಕ ಜೊತೆಗೆ ಅಸೆ ಆಕಾಂಕ್ಷೆಗಳು ಸಹ ಸೇರಿದೆ.
undefined
click me!