Valentine's week: ಇನ್ನೇನು ವ್ಯಾಲೆಂಟೈನ್ಸ್ ವೀಕ್ ಶುರುವಾಗಲಿದೆ. ಫೆಬ್ರುವರಿ 7ರಿಂದ ಫೆಬ್ರುವರಿ 14ರವರೆಗೆ ಪ್ರೇಮಿಗಳಿಗೆ ಹಬ್ಬ ಅಂತಾನೆ ಹೇಳಬಹುದು. ಈ ವಾರ ನಿಮ್ಮ ದಿನಚರಿ ಹೇಗಿರಬೇಕು, ನಿಮ್ಮ ಸಂಗಾತಿಗೆ ಏನೆಲ್ಲಾ ಗಿಫ್ಟ್ ನೀಡಬಹುದು, ಯಾವ ರೀತಿ ದಿನ ಕಳೆಯಬಹುದು ಇಲ್ಲಿದೆ ಮಾಹಿತಿ.
ಟೆಡ್ಡಿ ಡೇ ಚೈಲ್ಡಿಶ್ ಅಂತ ನಿಮಗೆ ಅನಿಸಬಹುದು,ಆದರೆ ಈ ಸಾಫ್ಟ್ ಟಾಯ್ ನಿಮ್ಮ ಜೀವನದಲ್ಲೂ ಮೃದುವಾದ ಮಧುರವಾದ ಪ್ರೀತಿಯನ್ನು ಹರಡುತ್ತದೆ. .
ಏನು ಮಾಡಬೇಕು: ಟೆಡ್ಡಿ ಬೇರ್ ಅಥವಾ ಅವರಿಗೆ ನಿಮ್ಮನ್ನು ನೆನಪಿಸುವ ಯಾವುದೇ ಗೊಂಬೆಯನ್ನು ಉಡುಗೊರೆಯಾಗಿ ನೀಡಿ.
ಉಡುಗೊರೆ: ಸಾಫ್ಟ್ ಟಾಯ್ಸ್, ಹೂಡಿಗಳು, ಕಂಬಳಿಗಳು ಅಥವಾ ಮುದ್ದಾದ ಸಂದೇಶವಿರುವ ಕುಶನ್.
58
ಪ್ರಾಮಿಸ್ ಡೇ (ಫೆಬ್ರವರಿ 11)
ಪ್ರಾಮಿಸ್ ಡೇ ಉಡುಗೊರೆಗಳಿಂದ ಬದ್ಧತೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ. ಇದು ನಂಬಿಕೆಯನ್ನು ಬೆಳೆಸುವುದು ಮತ್ತು ನಿಮ್ಮ ಬಾಂಧವ್ಯವನ್ನು ಬಲಪಡಿಸುವುದರ ದಿನ.
ಏನು ಮಾಡಬೇಕು: ಒಟ್ಟಿಗೆ ಹೆಚ್ಚು ಸಮಯ ಕಳೆಯುವುದು ಅಥವಾ ಪರಸ್ಪರರ ಗುರಿಗಳನ್ನು ಬೆಂಬಲಿಸುವಂತಹ ಸಣ್ಣ, ಭರವಸೆಗಳನ್ನು ನಿಮ್ಮವರಿಗೆ ನೀಡಬಹುದು.
ಉಡುಗೊರೆ: ಯಾವಾಗಲೂ ಜೊತೆಯಾಗಿರುವುದನ್ನು ಸಂಕೇತಿಸುವ ಪ್ರಾಮಿಸ್ ಕಾರ್ಡ್‌ಗಳು, ಜರ್ನಲ್‌ಗಳು ಅಥವಾ ಒಂದೇ ರೀತಿಯ ಕೀಚೈನ್‌ಗಳು.
68
ಹಗ್ ಡೇ (ಫೆಬ್ರವರಿ 12)
ಒಂದು ಅಪ್ಪುಗೆಯು ದೀರ್ಘ ಭಾಷಣಕ್ಕಿಂತ ಹೆಚ್ಚಿನ ಮಾತುಗಳನ್ನು, ಪ್ರೀತಿಯನ್ನು ನೀಡುತ್ತೆ. ನಿಮ್ಮವರನ್ನು ಗಟ್ಟಿಯಾಗಿ ತಬ್ಬಿಕೊಳ್ಳುವ ಮೂಲಕ ವಿಶ್ ಮಾಡೀ.
ಏನು ಮಾಡಬೇಕು: ಸಾಧ್ಯವಾದರೆ ವೈಯಕ್ತಿಕವಾಗಿ ಭೇಟಿ ಮಾಡಿ. ಜೊತೆಯಾಗಿ ಸಿನಿಮಾ ನೋಡಿ, ಮಾತನಾಡಿ, ಜೊತೆಗೆ ಸಮಯ ಕಳೆಯಿರಿ.
ಉಡುಗೊರೆ: ಆರಾಮದಾಯಕ ಸಂಜೆಗಾಗಿ ಸ್ಕಾರ್ಫ್‌ಗಳು, ಸ್ವೆಟ್‌ಶರ್ಟ್‌ಗಳು ಅಥವಾ ಪರಿಮಳಯುಕ್ತ ಮೇಣದಬತ್ತಿಗಳು. ಇವು ನಿಮ್ಮ ಸನಿಹವನ್ನು ಫೀಲ್ ಮಾಡಿಸುತ್ತೆ.
78
ಕಿಸ್ ಡೇ (ಫೆಬ್ರವರಿ 13)
ಕಿಸ್ ಡೇ ಎಂದರೆ ರೊಮ್ಯಾನ್ಸ್ ಮತ್ತು ಕನೆಕ್ಷನ್ ಗೆ ಸಂಬಂಧಿಸಿದ ದಿನ. ಪ್ರೇಮಿಗಳ ದಿನದ ಹಿಂದಿನ ದಿನ ಬರುವ ಈ ದಿನವನ್ನು ರೊಮ್ಯಾಂಟಿಕ್ ಆಗಿಯೇ ಆಚರಿಸಬಹುದು.
ಏನು ಮಾಡಬೇಕು: ಡೇಟಿಂಗ್ ನೈಟ್, ಕ್ಯಾಂಡಲ್‌ಲೈಟ್ ಡಿನ್ನರ್ ಅಥವಾ ಲಾಂಗ್ ಡ್ರೈವ್ ಮಾಡಿ. ಒಂದು ಮುದ್ದಾದ ಕಿಸ್ ಎಕ್ಸ್ ಚೇಂಜ್ ಮಾಡಿ.
ಉಡುಗೊರೆ: ಸುಗಂಧ ದ್ರವ್ಯ, ಲವ್ ಲೆಟರ್ ಅಥವಾ ಪರಸ್ಪರ ನೆನಪಿಸುವ ಹಾಡುಗಳ ಪ್ಲೇ ಲಿಸ್ಟ್ ಉಡುಗೊರೆಯಾಗಿ ನೀಡಿ.
88
ಪ್ರೇಮಿಗಳ ದಿನ (ಫೆಬ್ರವರಿ 14)
ಪ್ರೇಮಿಗಳ ದಿನವನ್ನು ಸಂಪೂರ್ಣವಾಗಿ ರೊಮ್ಯಾಂಟಿಕ್ ಆಗಿ ಕಳೆಯಿರಿ. ದುಬಾರಿ ಪ್ಲ್ಯಾನಿಂಗ್ ಬದಲು, ಆರಾಮದಾಯಕ ಕ್ಷಣಗಳನ್ನು ಜೊತೆಯಾಗಿ ಕಳೆಯಿರಿ.
ಏನು ಮಾಡಬೇಕು: ಒಟ್ಟಿಗೆ ಊಟ ಮಾಡಿ, ಪಿಕ್ನಿಕ್ ಯೋಜಿಸಿ, ನಿಮ್ಮ ನೆಚ್ಚಿನ ಸ್ಥಳಕ್ಕೆ ಮತ್ತೆ ಭೇಟಿ ನೀಡಿ, ಅಥವಾ ಇಡಿ ದಿನ ಮಾತನಾಡುತ್ತಾ ಮತ್ತು ನಗುತ್ತಾ ಸಮಯವನ್ನು ಕಳೆಯಿರಿ.
ಉಡುಗೊರೆ: ಆಭರಣಗಳು, ಪುಸ್ತಕಗಳು, ಫೋಟೋ ಆಲ್ಬಮ್‌ಗಳು, ಕೈಬರಹದ ಪತ್ರಗಳು ಅಥವಾ ಸರ್ಪ್ರೈಸ್ ಟೂರ್ ಪ್ಲ್ಯಾನ್ ಮಾಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.