ಭಾವನಾತ್ಮಕ ಬೆಂಬಲ ಸಿಗದೇ ಇದ್ದಾಗ
ನಿಮ್ಮ ಗೆಳತಿಗೆ ನೀವು ಸಮಯ ನೀಡದಿದ್ದಾಗ, ಅಥವಾ ಅವರಿಗೆ ನಿಮ್ಮ ತುಂಬಾ ಅಗತ್ಯ ಇದ್ದಂತಹ ಸಮಯದಲ್ಲಿ ಅವರು ನಿಮಗೆ ತುಂಬಾ ಸಲ, ಕಾಲ್, ಮೆಸೇಜ್ ಮಾಡುತ್ತಿದ್ದರೂ ಸಹ ನೀವು ಉತ್ತರಿಸದೇ ಇದ್ದರೆ, ನಂತರ ಕ್ರಮೇಣ ಹುಡುಗಿಯರು ಬ್ರೇಕ್ ಅಪ್ ಮಾಡಿಕೊಳ್ತಾರೆ. ನೀವು ಇದನ್ನು ಪದೇ ಪದೇ ಮಾಡುವುದರಿಂದ ಆರಂಭದಲ್ಲಿ ಅವರು ತುಂಬಾನೆ ವೀಕ್ ಆಗ್ತಾರೆ, ಆದರೆ ಸ್ವಲ್ಪ ಸಮಯದ ನಂತರ ಅವರು ನಿಮ್ಮನ್ನು ಬಿಡಲು ನಿರ್ಧರಿಸುತ್ತಾರೆ. ಹುಡುಗರದ್ದೇ ತಪ್ಪಿನಿಂದಾಗಿ, ಹುಡುಗಿಯರು ಅವರನ್ನು ಬಿಡುತ್ತಾರೆ, ಆದರೆ ಮೋಸಗಾರ್ತಿ ಅನ್ನೋ ಟ್ಯಾಗ್ ಮಾತ್ರ ಹುಡುಗಿಯರಿಗೆ.