70 ಲಕ್ಷ ಮಹಿಳೆಯರ ಗರ್ಭಕ್ಕೆ ಕಾರಣ ಲಾಕ್ ಡೌನ್! ಯಾವ ದೇಶಗಳಿಗೆ ಆತಂಕ?

First Published | Apr 29, 2020, 8:54 PM IST

ವಾಷಿಂಗ್‌ಟನ್(ಏ. 29)  ಲಾಕ್ ಡೌನ್ ಕಣ್ಣಿಗೆ ಕಾಣದ ಅದೆಷ್ಟೊ ಸಮಸ್ಯೆಗಳನ್ನು ತಂದಿಟ್ಟಿದೆ. ಇದೊಂದು ಊಹೆಗೂ ಮೀರಿದ ಸಮಸ್ಯೆ. ಲಾಕ್ ಡೌನ್ ಪರಿಣಾಮ ಜಗತ್ತಿನಲ್ಲಿ 70 ಲಕ್ಷ ಮಹಿಳೆಯರು ಗರ್ಭಿಣಿಯಾಗಲಿದ್ದಾರೆ!

ಗರ್ಭನಿರೋಧಕಗಳ ಪೂರೈಕೆಯಲ್ಲಿ ವ್ಯತ್ಯಯ ಮತ್ತು ಅವುಗಳು ಜನರಿಗೆ ಲಭಿಸದ ಕಾರಣ ಅನಪೇಕ್ಷಿತ ಗರ್ಭ ಧರಿಸಲಿದ್ದಾರೆ ಎಂದು ವಿಶ್ವಸಂಸ್ಥೆ ಜನಸಂಖ್ಯಾ ನಿದಿ (ಯುಎನ್‍ಎಫ್‍ಪಿಎ) ಬಿಡುಗಡೆ ಮಾಡಿರುವ ದತ್ತಾಂಶ ಮಾಹಿತಿಯಿಂದ ತಿಳಿದುಬಂದಿದೆ.
undefined
ಲಾಕ್‍ಡೌನ್ ಅವಧಿಯಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಗರ್ಭನಿರೋಧಕಗಳು ಲಭ್ಯವಾಗುತ್ತಿಲ್ಲ. ಹೀಗಾಗಿ ಕಡಿಮೆ ಮತ್ತು ಮಧ್ಯಮ ವರಮಾನದ ದೇಶಗಳಲ್ಲಿ 47 ದಶಲಕ್ಷ ಮಹಿಳೆಯರು (4 ಕೋಟಿ. 70 ಲಕ್ಷ ಮಹಿಳೆಯರು) ಅಧುನಿಕ ಗರ್ಭನಿರೋಧಕಗಳನ್ನು ಬಳಸಲು ಸಾಧ್ಯವಾಗಿಲ್ಲ. ಇದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
undefined

Latest Videos


ಲಾಕ್‍ಡೌನ್ ಬಿಕ್ಕಟ್ಟಿನಿಂದಾಗಿ ಮಹಿಳೆಯರು ಕುಟುಂಬ ಯೋಜನೆ ಪಾಲಿಸಲು ಸಾಧ್ಯವಾಗುತ್ತಿಲ್ಲ ಅವು ಅನಗತ್ಯವಾದ ಒಲ್ಲದ ಗರ್ಭಧಾರಣೆಗೆ ಅನಿವಾರ್ಯವಾಗಿ ಒಳಗಾಗಬೇಕಾದ ಪರಿಸ್ಥಿತಿ ಬಂದಿದೆ.
undefined
ಲಿಂಗ ತಾರತಮ್ಯ, ಕೌಟುಂಬಿಕ ದೌರ್ಜನ್ಯ, ಗೃಹ ಶೋಷಣೆ, ಲೈಂಗಿಕ ಹಿಂಸಾಚಾರ ಮತ್ತು ಇತರ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ ಎಂದು ಯುಎನ್‍ಎಫ್‍ಪಿಎ ಕಾರ್ಯಕಾರಿ ನಿರ್ದೇಶಕಿ ನಟಾಲಿಯಾ ಕನೇಮ್ ಒಂದು ಕಡೆ ಆತಂಕ ವ್ಯಕ್ತಪಡಿಸಿದ್ದಾರೆ.
undefined
ಲಾಕ್ ಡೌನ್ ಕಾರಣ ಗಂಡ-ಹೆಂಡತಿಯರ ನಡುವಿನ ಸಂಬಂಧ ಗಟ್ಟಿಯಾಗಿದೆ ಎಂದು ವರದಿಯೊಂದು ಹೇಳಿತ್ತು.
undefined
ಇಬ್ಬರ ನಡುವೆ ಮನಸ್ತಾಪಕ್ಕೂ ಕಾರಣವಾಗಿದೆ ಎಂದು ಮತ್ತೊಂದು ವರದಿ ಹೇಳಿತ್ತು.
undefined
click me!