ಸಂಗಾತಿಗೆ ಮೆಸೇಜ್ ಮೂಲಕ ಯಾವತ್ತೂ ಈ ವಿಷ್ಯ ಹೇಳ್ಬೇಡಿ..

First Published | Mar 25, 2023, 3:43 PM IST

ಕಾಲ್ ಮಾಡೋದಕ್ಕಿಂತ ಹೆಚ್ಚಾಗಿ ನಾವು ಮೆಸೇಜಿಂಗ್ ಅಥವಾ ಚಾಟಿಂಗ್ ಮೂಲಕ ಸಂಗಾತಿ ಜೊತೆ ಕನೆಕ್ಟ್ ಆಗಿರ್ತೇವೆ ಅಲ್ವಾ? ಮೆಸೇಜ್ ಮೂಲಕ ಸುಲಭವಾಗಿ ಎಲ್ಲವನ್ನೂ ಹೇಳಬಹುದು ಅನ್ನೋ ಯೋಚನೆ ಕೂಡ ಇರುತ್ತೆ. ಆದರೆ ಕೆಲವೊಂದು ವಿಷಯಗಳನ್ನು ಮೆಸೇಜ್ ಮೂಲಕ ಸಂಗಾತಿ ಹೇಳಲೇಬಾರದು. ಇದರಿಂದ ಸಂಬಂಧ ಹಾಳಾಗುತ್ತೆ. 
 

ರಿಲೇಶನ್ ಶಿಪ್ ನಲ್ಲಿದ್ದಾಗ ಅಥವಾ ಮದ್ವೆ ಆದ ಬಳಿಕ ಸಂಗಾತಿ ಜೊತೆಗೇನೆ ಯಾವಾಗಲೂ ಇರಲು ಸಾಧ್ಯವಾಗೋದಿಲ್ಲ. ಅಂತಹ ಸಂದರ್ಭದಲ್ಲಿ ಕರೆ ಮತ್ತು ಸಂದೇಶ ಕಳುಹಿಸುವ ಮೂಲಕ ಇಬ್ಬರೂ ಕನೆಕ್ಟ್ ಆಗಬೇಕು. ಹೀಗಿರುವಾಗ ಕೆಲವೊಮ್ಮೆ ಸಂಗಾತಿ ನೀವು, ಮೆಸೇಜ್ ಮೂಲಕ ಕೆಲವೊಂದು ವಿಷಯಗಳನ್ನು ಹೇಳುತ್ತೀರಿ. ಇದು ಅವರ ಸಂಬಂಧದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಕೆಲವೊಂದು ವಿಷ್ಯಗಳೇ ಹಾಗೇ ನಾವು ಮುಖಾಮುಖಿಯಾಗಿ ಭೇಟಿ ನೀಡಿ ಹೇಳುವುದಕ್ಕೂ, ಮೆಸೇಜ್ ಮೂಲಕ ಹೇಳುವುದಕ್ಕೂ ವ್ಯತ್ಯಾಸವಿರುತ್ತೆ. ನಿಮ್ಮ ಸಂಗಾತಿಗೆ ಮೆಸೇಜ್ (message to partner) ಮೂಲಕ ಯಾವ ವಿಷ್ಯ ಹೇಳಬಾರದು ನೋಡೋಣ. . 
 

ಜಗಳದ ಬಳಿಕ ದೂರು ಹೇಳೊದು (complaining)
ಕೆಲವರು ಸಂಗಾತಿ ಮೇಲೆ ಕೋಪಗೊಂಡ ನಂತರ ಸಂದೇಶದಲ್ಲಿ ಕಂಪ್ಲೇಂಟ್ ಮಾಡಲು ಪ್ರಾರಂಭಿಸುತ್ತಾರೆ. ಹಾಗೆ ಮಾಡುವುದರಿಂದ ಸಂಬಂಧದ ಮೇಲೆ ನೆಗಟಿವ್ ಪರಿಣಾಮ ಬೀರುತ್ತದೆ ಮತ್ತು ಇದರಿಂದ ನೀವು ಪರಿಹರಿಸಲು ಪ್ರಯತ್ನಿಸುತ್ತಿರುವ ವಿಷಯವೂ ಬಗೆಹರಿಯುವುದಿಲ್ಲ. ಸಂಗಾತಿಯ ಕೋಪ ದೂರವಾದಾಗ, ನೀವು ಅವರನ್ನು ಕರೆದು ಮಾತನಾಡುವುದು ಉತ್ತಮ.. 

Tap to resize

ಒಂದೇ ಪದದಲ್ಲಿ ಉತ್ತರಿಸೋದು (answering in one word)
ನಿಮ್ಮ ಸಂಗಾತಿ ದೀರ್ಘ ಮೆಸೇಜ್ ಕಳುಹಿಸಿದಾಗ ನೀವು ಅವರಿಗೆ ಒಂದೇ ಪದದಲ್ಲಿ ಪ್ರತ್ಯುತ್ತರ ನೀಡಿದರೆ ಅಥವಾ ಕೇವಲ emoji ಕಳುಹಿಸಿದರೆ, ಸಂಗಾತಿಗೆ ಕೆಟ್ಟದಾಗಿ ಅನಿಸಬಹುದು. ಸಂಗಾತಿಯು ಅನೇಕ ಸಂದೇಶಗಳನ್ನು ಕಳುಹಿಸುತ್ತಿದ್ದರೆ, ಅವರು ನಿಮ್ಮೊಂದಿಗೆ ಮಾತನಾಡಲು ಬಯಸುತ್ತಾರೆ ಎಂದು ನೀವು ನೆನಪಿನಲ್ಲಿಡಬೇಕು. ಅಂತಹ ಪರಿಸ್ಥಿತಿಯಲ್ಲಿ, ಸರಿಯಾದ ಪ್ರತಿಕ್ರಿಯೆಯನ್ನು ನೀಡಬೇಕು.

ಎಲ್ಲದರ ಬಗ್ಗೆ ಚರ್ಚೆ (discussing everything)
ನಿಮ್ಮ ಸಂಗಾತಿಯ ಮೇಲೆ ನಿಮಗೆ ಕೋಪವಿದ್ದರೆ, ನೀವು ನಿಮ್ಮ ಅಂಶವನ್ನು ಅವರಿಗೆ ಒಟ್ಟಿಗೆ ಹೇಳಬೇಕು. ಇದು ನಿಮಗೆ ಪರಸ್ಪರ ಚೆನ್ನಾಗಿ ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ನಿಮ್ಮ ಬಂಧ ಉತ್ತಮವಾಗಿರುತ್ತದೆ, ಆದರೆ ಅದೇ ಸಮಯದಲ್ಲಿ, ನೀವು ಮೆಸೇಜ್ ಮೂಲಕ ವಾದಿಸಿದರೆ, ಅದು ನಿಮ್ಮ ಸಂಬಂಧವನ್ನು ದುರ್ಬಲಗೊಳಿಸುತ್ತದೆ. 

ಹಳೆಯ ವಿಷಯಗಳ ಬಗ್ಗೆ ಚರ್ಚೆ
ನೀವು ಹಳೆಯ ವಿಷಯವನ್ನು ಮುಂದಿಟ್ಟರೆ ಮತ್ತು ನಿಮ್ಮ ಸಂಗಾತಿಯೊಂದಿಗೆ ಮೆಸೇಜ್ ಮೂಲಕ ಆ ವಿಷಯದ ಬಗ್ಗೆ ಜಗಳವಾಡಿದರೆ, ಅದು ನಿಮ್ಮ ಸಂಗಾತಿಗೆ ಕೋಪ ತರಿಸಬಹುದು. ಹಳೆಯ ಗಾಯಗಳನ್ನು ಕೆದಕುವುದರಿಂದ ಯಾವುದೇ ಪ್ರಯೋಜನವಿಲ್ಲ ಮತ್ತು ಇದರಿಂದ ಸಂಬಂಧ ಹದಗೆಡುತ್ತದೆ. ಸಂಗಾತಿಯು ಕೋಪಗೊಂಡಿದ್ದರೆ, ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿ.
 

ಬ್ರೇಕ್ ಅಪ್ (breakup)
ನಿಮ್ಮಿಬ್ಬರ ನಡುವೆ ಸಾಕಷ್ಟು ಜಗಳವಿದ್ದರೆ ಮತ್ತು ನೀವು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಅಥವಾ ಸಂಬಂಧವನ್ನು ಕೊನೆಗೊಳಿಸುವ ಬಗ್ಗೆ ಯೋಚಿಸುತ್ತಿದ್ದರೆ, ನೀವು ಅವರೊಂದಿಗೆ ಬ್ರೇಕಪ್ ಮಾಡುವ ಬಗ್ಗೆ ಯೋಚಿಸಿದರೆ, ಮೊದಲಿಗೆ ಭೇಟಿಯಾಗಿ ಈ ಕುರಿತು ಚರ್ಚಿಸಿ, ಅದು ಬಿಟ್ಟು, ಮೆಸೇಜ್ ಮೂಲಕ ಬ್ರೇಕ್ ಅಪ್ ಮಾಡಿಕೊಳ್ಳೋದು ತಪ್ಪು. ಒಬ್ಬರಿಗೊಬ್ಬರು ಭೇಟಿಯಾಗಿ ಮಾತುಕತೆ ನಡೆಸಿದರೆ ಸಂಬಂಧ ಉಳಿಸಿಕೊಳ್ಳಬಹುದು.

ಸುಳ್ಳು ಹೇಳೋದು (lying in text)
ಆಗಾಗ್ಗೆ ಜನರು ಚಾಟ್ ಮಾಡುವಾಗ ಅಥವಾ ಸಂದೇಶ ಕಳುಹಿಸುವಾಗ ಸಂಗಾತಿಗೆ ಸುಳ್ಳು ಹೇಳುತ್ತಾರೆ ಮತ್ತು ಆ ಸುಳ್ಳು ನಂತರ ಹೊರಬಂದಾಗ, ಅದು ಸಂಬಂಧವನ್ನು ಹದಗೆಡಿಸುತ್ತದೆ. ಆದುದರಿಂದ ಯಾವತ್ತೂ ಸಂಗಾತಿಗೆ ಸುಳ್ಳು ಹೇಳೊದನ್ನು ಮಾಡಲೇಬೇಡಿ. 

ಕುಟುಂಬ ಸದಸ್ಯರ ಬಗ್ಗೆ ಕೆಟ್ಟದು ಮಾತನಾಡೋದು (talk bad about family)
ನಿಮ್ಮ ಸಂಗಾತಿಯ ಸ್ನೇಹಿತರು ಮತ್ತು ಸಂಬಂಧಿಕರನ್ನು ಮೆಸೇಜ್ ಮೂಲಕ ನೀವು ನಿಂದಿಸಿದರೆ, ಅದು ನಿಮ್ಮ ಸಂಬಂಧವನ್ನು ಅಪಾಯಕ್ಕೆ ತಳ್ಳಬಹುದು ಮತ್ತು ನಿಮ್ಮ ಸಂಗಾತಿಯು ನಿಮ್ಮ ಮಾತುಗಳ ಬಗ್ಗೆ ತುಂಬಾ ಕೆಟ್ಟದಾಗಿ ಭಾವಿಸಬಹುದು. ಹಾಗಾಗಿ ಈ ತಪ್ಪು ಮಾಡಬೇಡಿ. 

ಕೋಪದಿಂದ ಪ್ರತಿಕ್ರಿಯೆ ನೀಡೋದು (message with anger)
ನಿಮ್ಮ ಸಂಗಾತಿಗೆ ಕೋಪದಿಂದ ಸಂದೇಶ ಕಳುಹಿಸುವ ಮೂಲಕ ನೀವು ಅವರ ಮಾತುಗಳಿಗೆ ಪ್ರತಿಕ್ರಿಯಿಸಿದರೆ, ಅದು ನಿಮ್ಮ ಸಂವಹನದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ನೀವು ಸಮಾಧನದಿಂದ ಮೆಸೇಜ್ ಮಾಡಿ. 

Latest Videos

click me!