ಇತ್ತೀಚಿನ ದಿನಗಳಲ್ಲಿ ಸಂಬಂಧಗಳು ಅರ್ಥವನ್ನೇ ಕಳೆದುಕೊಳ್ಳುತ್ತಿವೆ. ಹಿಂದೆ ರಿಲೇಶನ್ನ್’ಶಿಪ್ ಲವ್ವಲ್ಲಿ ಬಿದ್ದರೆ, ಅದು ಸಾಯೋವರೆಗಿನ ಸಂಬಂಧ ಎನಲಾಗುತ್ತಿತ್ತು. ಆದರೆ ಈಗ ಅದು ತಿಂಗಳಿಗೊಮ್ಮೆ ಬದಲಾಯಿಸುವ ಟ್ರೆಂಡ್ ಆಗಿದೆ. ಕೆಲವು ದಿನಗಳ ಹಿಂದೆ Dinks ಕಪಲ್ ಟ್ರೆಂಡ್ ಹೆಚ್ಚಾಗಿತ್ತು, Dinks ಅಂದ್ರೆ ದ್ಯುವಲ್ ಇನ್’ಕಮ್ ನೋ ಕಿಡ್ಸ್. ಅಂದರೆ ಈ ರಿಲೇಶನ್’ಶಿಪ್ ನಲ್ಲಿ ಜೋಡಿಗಳು ಮಕ್ಕಳನ್ನು ಮಾಡುವ ಬಗ್ಗೆ ಯೋಚನೆ ಮಾಡೋದಿಲ್ಲ. ಆದರೆ ಇಬ್ಬರು ದುಡಿದು ಹೆಚ್ಚು ಸಂಪಾದನೆ ಮಾಡುವ ಬಗ್ಗೆ ಗಮನ ಹರಿಸುತ್ತಾರೆ.
ಈ Dinks ಕಪಲ್ಸ್ ಹೆಚ್ಚಾಗಿ ತಮ್ಮ ಕರಿಯರ್ ಬಗ್ಗೆಯೇ ಯೋಚನೆ ಮಾಡ್ತಾರೆ, ಹಾಗಾಗಿ ನೋ ಕಿಡ್ಸ್ ಸೂತ್ರವನ್ನು (no kids formula) ಅಳವಡಿಸಿಕೊಳ್ಳುತ್ತಾರೆ. ಅವರ ಸಂಪೂರ್ಣ ಗಮನವು ಹಣ ಸಂಪಾದಿಸುವುದು ಮತ್ತು ಉತ್ತಮ ಜೀವನಶೈಲಿಯನ್ನು ಅನುಸರಿಸುವುದು. ಈ ಜೋಡಿಗಳು ಹೆಚ್ಚು ಹಣ ಸಂಪಾದನೆ ಮಾಡೋದನ್ನು ಹಾಗೂ ದೇಶ, ವಿದೇಶ ಸುತ್ತೋದನ್ನು ಇಷ್ಟಪಡ್ತಾರೆ.
ಇದೇ ಟ್ರೆಂಡ್ ಅನ್ನೇ ಜನ ಒಪ್ಪಿಕೊಳ್ಳೋದಕ್ಕೆ ಕಷ್ಟ ಪಡ್ತಿದ್ರೆ, ಇದೀಗ ಮತ್ತೊಂದು ರಿಲೇಶನ್ ‘ಶಿಪ್ ಟ್ರೆಂಡಿಂಗ್ ನಲ್ಲಿದೆ. ಅದುವೇ ಥ್ರೋನಿಂಗ್ (throning), ಈ ಪದವೇ ವಿಚಿತ್ರವಾಗಿದೆ. ಜೊತೆಗೆ ಈ ಸಂಬಂಧ ಮತ್ತಷ್ಟು ವಿಚಿತ್ರವಾಗಿದೆ. ಸಂಬಂಧ ಮತ್ತು ಡೇಟಿಂಗ್ ಟ್ರೆಂಡ್ ಪ್ರತಿದಿನ ಬದಲಾಗುತ್ತದೆ. ಥ್ರೋನಿಂಗ್ ಇವುಗಳಲ್ಲಿ ಒಂದಾಗಿದೆ, ಇದು ರಿಲೇಶನ್’ಶಿಪ್ ಡೇಟಿಂಗ್ಗೆ ಸಂಬಂಧಿಸಿದೆ. ನೀವು ಯಾರೊಂದಿಗಾದರೂ ಡೇಟಿಂಗ್ ಮಾಡುತ್ತಿದ್ದರೆ ಅಥವಾ ಅದನ್ನು ಮಾಡಲು ಹೊರಟಿದ್ದರೆ, ನೀವು ಥ್ರೋನಿಂಗ್ ಬಗ್ಗೆ ಎಲ್ಲವನ್ನೂ ತಿಳಿದಿದ್ರೆ ಒಳಿತು. ಇದರಿಂದ ನೀವು ಸಂಬಂಧವನ್ನು ಅರ್ಥಮಾಡಿಕೊಳ್ಳಬಹುದು ಮತ್ತು ಬರುವ ಸವಾಲುಗಳನ್ನು ಎದುರಿಸಬಹುದು.
ಥ್ರೋನಿಂಗ್ ಎಂದರೇನು?
ಮೊದಲನೆಯದಾಗಿ, ಥ್ರೋನಿಂಗ್ ಎಂದರೇನು ಅನ್ನೋದನ್ನ ತಿಳಿಯಿರಿ. ಥ್ರೋನಿಂಗ್ ಹೊಸ ಕಾಲನಿರ್ಣಯ ಪದವಾಗಿದೆ. ಇದರಲ್ಲಿ, ಸಂಬಂಧಗಳನ್ನು ಬಲಪಡಿಸುವ ಬದಲು, ಸಾಮಾಜಿಕ ಸ್ಥಾನಮಾನದ ಮೇಲೆ ಗಮನ ಹರಿಸಲಾಗುತ್ತದೆ. ಸಂಗಾತಿಯ ಭಾವನೆಗಳು ಮತ್ತು ಪ್ರೀತಿಯ ಬದಲು, ಅವನ ಹಣವನ್ನು ನೋಡುವ ಮೂಲಕ ಸಂಬಂಧವನ್ನು ಬೆಳೆಸೋದೆ ಥ್ರೋನಿಂಗ್. ಇಲ್ಲಿ ಪರಸ್ಪರ ಪ್ರಯೋಜನವನ್ನು ಮಾತ್ರ ನೋಡಲಾಗುತ್ತೆ. ಇದನ್ನ ರಿಲೇಶನ್ ಶಿಪ್ (relationship) ಅನ್ನೋದಕ್ಕಿಂತ ಶೋ ಆಫ್ ಅಂತಾನೆ ಹೇಳಬಹುದು.
ಥ್ರೋನಿಂಗ್ ನಿಂದ ಏನಾದ್ರೂ ಪ್ರಯೋಜನ ಇದ್ಯಾ?
ಥ್ರೋನಿಂಗ್ ನಿಂದ ಪ್ರಯೋಜನಗಳಿಗಿಂತ ಅಡ್ಡಪರಿಣಾಮಗಳೇ ಜಾಸ್ತಿ. ಸಮಾಜದ ಎದುರು ನಮ್ಮ ಬಳಿ ಹಣ ಇದೆ, ಅಂತಸ್ತು ಇದೆ ಅಂತ ಶೋ ಆಫ್ ಮಾತ್ರ ಮಾಡಬಹುದು, ಆದರೆ ಇದರಿಂದ ಸಂಬಂಧದ ಮೇಲೆ ನೆಗೆಟೀವ್ ಪರಿಣಾಮ ಬೀರುತ್ತೆ. ಒಬ್ಬ ವ್ಯಕ್ತಿಯು ತನ್ನನ್ನು ಇನ್ನೊಬ್ಬರಿಗಿಂತ ದೊಡ್ಡವನು, ರಿಚ್ ಎಂದು ಭಾವಿಸಲು ಪ್ರಾರಂಭಿಸುತ್ತಾನೆ. ಇದರಿಂದಾಗಿಯೇ ಸಂಬಂಧದ ಮೇಲೆ ಪೆಟ್ಟು ಬೀಳೋದಕ್ಕೆ ಶುರುವಾಗುತ್ತೆ.
ಸಂಬಂಧಗಳು ಬೇಗನೆ ಮುರಿದುಬೀಳುತ್ತವೆ
ಸಾಮಾಜಿಕ ಸ್ಥಾನಮಾನ ನೋಡಿ ರಚಿಸಲಾದ ಸಂಬಂಧಗಳು ಹೆಚ್ಚು ಕಾಲ ಉಳಿಯುವುದಿಲ್ಲ. ಯಾವುದೇ ಸಂಬಂಧವನ್ನು ಬಲಪಡಿಸಲು, ಪ್ರೀತಿ-ವಿಶ್ವಾಸ ಮತ್ತು ಭಾವನೆಗಳು ಅಗತ್ಯ. ಆದರೆ ಥ್ರೋನಿಂಗ್ ನಲ್ಲಿ, ಸಂಬಂಧ ಅನ್ನೋದೆ ಸುಳ್ಳು, ಇಲ್ಲಿ ಎಲ್ಲವೂ ಹಣ ಅಂತಸ್ತು ಆಗಿರುತ್ತೆ. ಅದು ಬೋರ್ ಅಂತ ಅನಿಸಿದ್ರೆ, ಇನ್ನೊಂದು ಕಡೆಗೆ ವಾಲುವಂತಹ ಸಂಬಂಧ ಇದಾಗಿದೆ.
ಥ್ರೋನಿಂಗ್ ನಿಂದ ಅನೇಕ ಅನಾನುಕೂಲತೆಗಳಿವೆ
ಥ್ರೋನಿಂಗ್ ರಿಲೇಶನ್’ಶಿಪ್ಸ್ ಅನೇಕ ಅನಾನುಕೂಲಗಳನ್ನು ಹೊಂದಿವೆ. ಇಲ್ಲಿ ಜೋಡಿಗಳಿಗೆ ನಾವು ಒಂದೇ ಅನ್ನೋ ಭಾವನೆ ಇರೋದೆ ಇಲ್ಲ, ನನ್ನ ಬಳಿ ಹಣ ಜಾಸ್ತಿ ಇದೆ, ಅವರ ಬಳಿ ಕಡಿಮೆ ಇದೆ, ಅದೊಂದೇ ತಲೆಯಲ್ಲಿ ಓಡಾಡುತ್ತೆ. ಈ ಅಸಮಾನತೆ ಇಬ್ಬರ ಮಧ್ಯದಲ್ಲಿ ಜಗಳ, ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತೆ. ಈ ಜೋಡಿಗಳು ಬಹಿರಂಗವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ, ಅಥವಾ ಪರಸ್ಪರ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯ ಮತ್ತು ಸಮಾನತೆಯ ಕೊರತೆಯಿಂದಾಗಿ ಈ ಸಂಬಂಧ ಬೇಗನೆ ಮುರಿದು ಬೀಳುತ್ತೆ.