ಬಿಟ್ಟು ಮನೆಗೆ ಹೋಗುವಾಗ ಕಣ್ಣೀರು ಹಾಕುತ್ತಿದ್ದ ಹುಡುಗಿ ಕೈ ಕೊಡುತ್ತಾಳೆಂದರೆ ಏನು ಕಾರಣ?

First Published | Feb 27, 2023, 5:54 PM IST

ನಾವು ತುಂಬಾ ಪ್ರೀತಿಸ್ತಿರೋ ವ್ಯಕ್ತಿ ನಮ್ಮನ್ನು ದೂರ ಮಾಡಿದ್ರೆ ಅದಕ್ಕಿಂತ ಬೇಜಾರು ಇನ್ನೊಂದು ಇರೋದಿಲ್ಲ. ಯಾಕೆ ಅವರು ನಮ್ಮಿಂದ ದೂರ ಹೋದ್ರು, ಅಂತಹ ತಪ್ಪು ನಾನೇನು ಮಾಡಿದೆ ಎಂದು ನಿಮಗೆ ನೀವೆ ಪ್ರಶ್ನೆ ಕೇಳಬಹುದು. ಆದ್ರೆ ಕೆಲವೊಮ್ಮೆ ಉತ್ತರ ಸಿಗೋದೆ ಇಲ್ಲ. 

ನಿಮ್ಮ ಸಂಗಾತಿಯು ಇತ್ತೀಚೆಗೆ ನಿಮ್ಮ ಮಾತನ್ನು ಕೇಳುತ್ತಲೇ ಇಲ್ಲ ಅಥವಾ ನಿಮಗೆ ಹೆಚ್ಚಿನ ಗಮನವನ್ನೇ ನೀಡುತ್ತಿಲ್ಲ ಎಂದು ನಿಮಗೆ ಅನಿಸ್ತಾ ಇದ್ಯಾ? ಅಂದ್ರೆ ನಿಮ್ಮ ಸಂಗಾತಿಗೆ ನಿಮ್ಮೊಂದಿಗೆ ಇರಲು ಇಷ್ಟವಿಲ್ಲದೇ ಇರಬಹುದು, ಅದಕ್ಕಾಗಿ ಅವರು ಆದಷ್ಟು ನಿಮ್ಮಿಂದ ದೂರ ಇರುವ ಸಲುವಾಗಿ ಹೀಗೆ ಮಾಡ್ತಿರಬಹುದು, ಏಕೆಂದರೆ ಅವರಿಗೆ ಮೊದಲು ಇದ್ದಂತೆ ನಿಮ್ಮ ಜೊತೆ ಇನ್ನು ಇರಲು ಸಾಧ್ಯವಾಗದೇ ಇರಬಹುದು. ನಿಮ್ಮ ಸಂಗಾತಿಯು (life partner) ನಿಮ್ಮನ್ನು ಬಿಟ್ಟು ಬಿಡುವ ಕೆಲವು ಸೂಕ್ಷ್ಮ ಸುಳಿವುಗಳನ್ನು ಸಹ ಬಿಡುತ್ತಿರಬಹುದು. 

ನಿಮ್ಮ ಸಂಗಾತಿಯು ನಿಮ್ಮನ್ನು ಏಕೆ ದೂರ ಮಾಡ್ತಿದ್ದಾರೆ ಎಂದು ಕಂಡುಹಿಡಿಯಲು ನೀವು ಪ್ರಯತ್ನಿಸುತ್ತಿದ್ದರೆ, ಕೆಳಗಿನ 3 ಪ್ರಮುಖ ಕಾರಣಗಳು ಅರ್ಥಮಾಡಿಕೊಳ್ಳಲು ಮತ್ತು ಸ್ಪಷ್ಟತೆಯನ್ನು ಪಡೆಯಲು ನಿಮಗೆ ಸಹಾಯ ಮಾಡಬಹುದು. ಇವುಗಳನ್ನು ಅರ್ಥ ಮಾಡಿಕೊಂಡರೆ, ನಿಮ್ಮ ಸಂಬಂಧವನ್ನು ಉಳಿಸುವ ಪ್ರಯತ್ನವನ್ನು ಸಹ ನೀವು ಮಾಡಬಹುದು. ಅವುಗಳ ಬಗ್ಗೆ ತಿಳಿಯೋಣ. 

Latest Videos


ವಿಶ್ವಾಸದ ಕೊರತೆ (Lack of trust)
ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ಯಾವುದೇ ರೀತಿಯ ನಂಬಿಕೆ ಇರದೇ ಇದ್ರೆ ಅವರು ನಿಮ್ಮನ್ನು ತೊರೆಯಬಹುದು. ಸಂಬಂಧಗಳು ಕೊನೆಗೊಳ್ಳಲು ಮೋಸವು ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ. ಒಬ್ಬ ಸಂಗಾತಿಯು ಇನ್ನೊಬ್ಬರಿಗೆ ಮೋಸ ಮಾಡಿದಾಗ ಅಥವಾ ಅವರನ್ನು ನಂಬಲು ಅಸಮರ್ಥರಾದಾಗ, ಅದು ದ್ರೋಹ, ಕೋಪ ಮತ್ತು ನೋವಿನ ಭಾವನೆಗಳನ್ನು ಉಂಟುಮಾಡಬಹುದು, ಅದನ್ನು ಸರಿಪಡಿಸಲು ಕಷ್ಟವಾಗಬಹುದು.

ನಂಬಿಕೆಗೆ ದ್ರೋಹ ಬಗೆದರೆ ಸಂಬಂಧ ಸರಿಪಡಿಸಲಾಗದಷ್ಟು ಹಾನಿಗೊಳಿಸುತ್ತದೆ. ನಂಬಿಕೆಯ ಕೊರತೆಯು ನಿಮ್ಮ ಸಂಗಾತಿಗೆ ನಿಮ್ಮೊಂದಿಗೆ ಇರಲು ತುಂಬಾ ಕಷ್ಟಕರವಾಗಿಸುತ್ತದೆ. ಆದ್ದರಿಂದ, ನಂಬಿಕೆಯನ್ನು ಪುನರ್ನಿರ್ಮಿಸುವತ್ತ ಕೆಲಸ ಮಾಡಿ ಮತ್ತು ನೀವು ಅವರಿಗೆ ಯಾವುದೇ ರೀತಿಯ ಮೋಸ ಮಾಡಿದ್ರೆ ಮೊದಲು ಮುಕ್ತವಾಗಿ ಕ್ಷಮೆ ಇರಲಿ. ಸಂಬಂಧ ಸರಿಯಾಗಲೂಬಹುದು. 
 

ನಿರಂತರ ತಪ್ಪು ತಿಳುವಳಿಕೆ (constant misunderstanding)
ಪ್ರತಿಯೊಬ್ಬ ವ್ಯಕ್ತಿಯು ಸಂಬಂಧದಲ್ಲಿ ಅರ್ಥಮಾಡಿಕೊಳ್ಳಲು ಬಯಸುತ್ತಾನೆ. ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವಿನ ಕಳಪೆ ಸಂವಹನವು ತಪ್ಪು ತಿಳುವಳಿಕೆಗಳು, ವಾದಗಳು ಮತ್ತು ಭಾವನಾತ್ಮಕ ಸಂಪರ್ಕದ ಕೊರತೆಗೆ ಕಾರಣವಾಗಬಹುದು. ಸಂಗಾತಿ ಜೊತೆ ಸರಿಯಾಗಿ ಮಾತು ಕತೆ ನಡೆಸಲು ಸಾಧ್ಯವಾಗದೇ ಇದ್ದಾಗ, ಅದು ಹತಾಶೆ, ಅಸಮಾಧಾನ ಮತ್ತು ಬ್ರೇಕ್ ಅಪ್ ಗೆ ಕಾರಣವಾಗಬಹುದು.

ಸಂಬಂಧ ಗಟ್ಟಿಯಾಗಿರಿಸಲು ಉತ್ತಮವಾದ ಸಂವಹನ ಪ್ರಮುಖ ಆಧಾರವಾಗಿದೆ. ಆದರೆ ಮಾತುಕತೆ ಸರಿಯಾಗಿ ನಡೆಯದೇ ಇದ್ದರೆ ಅಂತಿಮವಾಗಿ ಸಂಬಂಧವನ್ನು ನಾಶಪಡಿಸಲು ಕಾರಣವಾಗಬಹುದು. ಇದು ಸಂಬಂಧವನ್ನು ಅದರ ಅಂತ್ಯಕ್ಕೆ ತಳ್ಳುತ್ತದೆ. ಇದರಿಂದಾಗಿಯೇ ನಿಮ್ಮ ಸಂಗಾತಿಯು ನಿಮ್ಮನ್ನು ತೊರೆಯಲು ಬಯಸಬಹುದು. ಅದಕ್ಕಾಗಿ ಮೊದಲು ಸರಿಯಾಗಿ ಕೂತು ಮಾತನಾಡಿ.

ಹೊಂದಾಣಿಕೆಯಾಗದೇ ಇರೋದು ( Incompatibility issues)
ಹೊಂದಾಣಿಕೆಯಾಗದೇ ಇರೋದು ನಿಮ್ಮ ಸಂಗಾತಿಯು ನಿಮ್ಮನ್ನು ತೊರೆಯುವ ಸುಳಿವು ನೀಡಲು ದೊಡ್ಡ ಕಾರಣವಾಗಿರಬಹುದು. ಕೆಲವು ಜೋಡಿಗಳಲ್ಲಿ ಪರಸ್ಪರ ಹೊಂದಿಕೆಯಾಗುವ ಯಾವುದೇ ಗುಣ ಇರದೇ ಇರಬಹುದು. ಅವರು ವಿಭಿನ್ನ ಮೌಲ್ಯಗಳು, ಗುರಿಗಳು ಅಥವಾ ಜೀವನಶೈಲಿಯನ್ನು ಹೊಂದಿರಬಹುದು, ಆರೋಗ್ಯಕರ ಮತ್ತು ತೃಪ್ತಿದಾಯಕ ಸಂಬಂಧವನ್ನು ಕಾಪಾಡಿಕೊಳ್ಳಲು ವಿಭಿನ್ನತೆಯನ್ನು ಮರೆತು ಹೊಂದಾಣಿಕೆ ಮಾಡಿಕೊಳ್ಳಲು ಪ್ರಯತ್ನಿಸಬೇಕು. 

ಒಂದು ವೇಳೆ ಸಂಗಾತಿಗಳ ನಡುವೆ ಯಾವುದೇ ವಿಷ್ಯಕ್ಕೆ ಹೊಂದಾಣಿಕೆ ಮಾಡಲು ಸಾಧ್ಯವೇ ಆಗದಿದ್ದಾಗ ಇದು ಹತಾಶೆ, ಅತೃಪ್ತಿ ಮತ್ತು ದೂರವಾಗಲು ಕಾರಣವಾಗಬಹುದು. ನಿಮ್ಮಿಬ್ಬರ ನಡುವಿನ ಹೊಂದಾಣಿಕೆಯ ಸಮಸ್ಯೆಗಳ ವಿಷಯಕ್ಕೆ ಬಂದಾಗ ನೀವಿಬ್ಬರು ಪರಸ್ಪರ ಅರ್ಥ ಮಾಡಿಕೊಂಡು ಬಾಳೋದು ಹೇಗೆ ಅನ್ನೋದನ್ನು ತಿಳಿಯಬೇಕು. 

click me!