ಮದ್ವೆಯಾಗ್ಬೇಕಾ, ಬೇಡ್ವಾ ಅನ್ನೋ ಕನ್‌ಫ್ಯೂಶನ್‌ನಲ್ಲಿದ್ದೀರಾ? ರವಿಶಂಕರ್ ಗುರೂಜಿ ಏನ್ ಹೇಳ್ತಾರೆ ಕೇಳಿ

First Published Mar 25, 2023, 1:47 PM IST

ಭಾರತೀಯ ಸಂಸ್ಕೃತಿಯಲ್ಲಿ ಮದುವೆ ಎಂಬ ಸಂಬಂಧಕ್ಕೆ ಹೆಚ್ಚಿನ ಪ್ರಾಧಾನ್ಯತೆಯಿದೆ. ಆದರೆ ಇತ್ತೀಚಿಗೆ ಮದುವೆ ಬೇಡ ಎನ್ನುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಿದ್ರೆ ಜೀವನದಲ್ಲಿ ಮದುವೆ ಅನ್ನೋದು ಅನಿವಾರ್ಯವೇ. ಈ ಬಗ್ಗೆ ಶ್ರೀ ರವಿಶಂಕರ್ ಗುರೂಜಿ ಏನು ಹೇಳ್ತಾರೆ ತಿಳಿಯೋಣ.

ಸಂಬಂಧ ಎನ್ನುವುದು ಇತ್ತೀಚಿನ ಕೆಲ ವರ್ಷಗಳಲ್ಲಿ ಹೆಚ್ಚು ಅರ್ಥಹೀನವಾಗುತ್ತಿದೆ. ಸಂಬಂಧಗಳಲ್ಲೂ ಮೋಸ, ಅನ್ಯಾಯವೇ ಹೆಚ್ಚಾಗುತ್ತಿದೆ. ಆದರೂ ಮತ್ತೂ ಇಷ್ಟೊಂದು ಮದುವೆಗಳು ಏಕೆ ನಡೆಯುತ್ತಿವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಅದೂ ಕೂಡ ವಿಚ್ಛೇದನ, ವಂಚನೆ, ಸಂಗಾತಿ ಕೊಲೆಯಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವಾಗ. ಹಾಗಿದ್ದರೆ ಜೀವನದಲ್ಲಿ ಮದುವೆಯೆಂಬುದು ಅತ್ಯಗತ್ಯವೇ? ಮದುವೆಯಿಲ್ಲದೆ ಜೀವನ ಅರ್ಥಹೀನವೇ? ಇಲ್ಲಿದೆ ಮಾಹಿತಿ.

ಆಧ್ಯಾತ್ಮಿಕ ಗುರು ಮತ್ತು ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ  ರವಿಶಂಕರ್ ಗುರೂಜಿಯವರು ಮದುವೆಯ ಬಗ್ಗೆ ಕೆಲವೊಂದು ವಿಚಾರಗಳನ್ನು ತಿಳಿಸಿಕೊಟ್ಟಿದ್ದಾರೆ. ಪ್ರವಚನವೊಂದರಲ್ಲಿ ಮಹಿಳೆಯೊಬ್ಬರು ಮದುವೆಯಾಗುವ ಅಗತ್ಯತೆಯ ಬಗ್ಗೆ ಪ್ರಶ್ನಿಸಿದಾಗ ಗುರೂಜಿ ಇದಕ್ಕೆ ಉತ್ತರ ನೀಡಿದ್ದಾರೆ. ನೀವು ಮದುವೆಯಾಗಬೇಕೆ ಅಥವಾ ಬೇಡವೇ ಎಂಬ ಗೊಂದಲದಲ್ಲಿದ್ದರೆ, ಈ ಲೇಖನವು ನಿಮಗೆ ಸಹಾಯಕವಾಗಿದೆ. ಮುಂದೆ ಓದಿ.

ಮದುವೆ ಎಂದರೇನು?
ಮದುವೆಯು ಒಂದು ಸಾಮಾಜಿಕ ವ್ಯವಸ್ಥೆಯಾಗಿದ್ದು, ಇದರಲ್ಲಿ ಇಬ್ಬರು ವ್ಯಕ್ತಿಗಳು ಜೀವನಕ್ಕಾಗಿ ಒಟ್ಟಿಗೆ ವಾಸಿಸಲು ಮತ್ತು ಕುಟುಂಬವನ್ನು ಪ್ರಾರಂಭಿಸಲು ನಿರ್ಧರಿಸುತ್ತಾರೆ. ಈ ಒಕ್ಕೂಟವು ಕಾನೂನುಗಳು, ನಿಯಮಗಳು, ಪದ್ಧತಿಗಳು, ನಂಬಿಕೆಗಳು ಮತ್ತು ಆಚರಣೆಗಳಿಂದ ನಿಯಂತ್ರಿಸಲ್ಪಡುತ್ತದೆ. ಇದು ಪಾಲುದಾರರ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಪರಸ್ಪರ ನಿರ್ಧರಿಸುತ್ತದೆ.

ಮದುವೆಯ ಉದ್ದೇಶವೇನು?
ಮದುವೆಯಲ್ಲಿ ಇಬ್ಬರು ವ್ಯಕ್ತಿಗಳು ಪರಸ್ಪರ ಒಟ್ಟಿಗೆ ಬಾಳಲು ನಿರ್ಧರಿಸುತ್ತಾರೆ. ಪ್ರತಿ ದುಃಖ ಮತ್ತು ಸಂತೋಷದಲ್ಲಿ ಜೊತೆಯಾಗಿ ಸಾಗಲು ತೀರ್ಮಾನಿಸಿಉತ್ತಾರೆ. ನ್ಯೂನ್ಯತೆಗಳೊಂದಿಗೇ ಇಬ್ಬರನ್ನು ಪರಸ್ಪರ ಒಪ್ಪಿಕೊಂಡು ಸಮಾಜದ ಶ್ರೇಯೋಭಿವೃದ್ಧಿಗೆ ಕೊಡುಗೆ ನೀಡುವ ಕುಟುಂಬವನ್ನು ನಿರ್ಮಿಸುತ್ತಾರೆ. ಹಿಂದೂ ಧರ್ಮದಲ್ಲಿ ಮದುವೆಯ ಸಂಬಂಧವನ್ನು ಒಂದು ಜನ್ಮಕ್ಕೆ ಮಾತ್ರವಲ್ಲದೆ ಏಳು ಜನ್ಮಗಳಿಗೆಂದು ಪರಿಗಣಿಸಲಾಗುತ್ತದೆ.

ಮದುವೆಯಾಗುವುದು ಕಡ್ಡಾಯವೇ?
ಈ ಪ್ರಶ್ನೆಯನ್ನು ಶ್ರೀ ರವಿಶಂಕರ್ ಅವರನ್ನು ಕೇಳಿದಾಗ, ಒಬ್ಬ ವ್ಯಕ್ತಿ ಜೀವನದಲ್ಲಿ ಮದುವೆಯಾಗುವುದು ಅನಿವಾರ್ಯವಲ್ಲ ಎಂದು ಉತ್ತರಿಸಿದರು. ಮದುವೆಯಾಗುವ ಅಥವಾ ಮದುವೆಯಾಗದಿರುವ ನಿರ್ಧಾರವು ಸಂಪೂರ್ಣವಾಗಿ ನಿಮಗೆ ಬಿಟ್ಟದ್ದು ಎಂದು ತಿಳಿಸಿದರು.

ಮದುವೆ ಮುಖ್ಯವಾದ ವಿಷಯವಲ್ಲ
ಮದುವೆಯಾಗಿ ಸಂಸಾರ ಆರಂಭಿಸುವುದಕ್ಕಿಂತ ಸಂತೋಷವಾಗಿರುವುದು ಮುಖ್ಯ ಎನ್ನುತ್ತಾರೆ ಶ್ರೀ ರವಿಶಂಕರ್. ನೀವು ಯಾರನ್ನಾದರೂ ಮದುವೆಯಾಗಿ ಸಂತೋಷವಾಗಿರಬಹುದು ಎಂದು ನೀವು ಭಾವಿಸಿದರೆ, ಖಂಡಿತವಾಗಿಯೂ ಮದುವೆಯಾಗಿ. ಆದರೆ ಮದುವೆಯಿಂದ ನಿಮಗೆ ಖುಷಿ ಸಿಗಲಾರದು ಎಂದು ನೀವು ಭಾವಿಸಿದರೆ ನೀವು ಮದುವೆಯಾಗಬೇಕಿಲ್ಲ ಎಂದವರು ಹೇಳುತ್ತಾರೆ. 

ಭಾರತದಲ್ಲಿ ಮದುವೆಯಾಗದವರ ಸಂಖ್ಯೆ ಹೆಚ್ಚುತ್ತಿದೆ.
ಇಂದಿನ ಯುವಕರಿಗೆ ಮದುವೆಯ ಮೇಲೆ ನಂಬಿಕೆ ಇಲ್ಲ. ಹೀಗಾಗಿ ಭಾರತದಲ್ಲಿ ಮದುವೆಯಾದವರ ಸಂಖ್ಯೆ ಹೆಚ್ಚುತ್ತಿದೆ. ವಿಶೇಷವಾಗಿ ವಿದ್ಯಾವಂತರು ಮದುವೆಯಿಂದ ಹೆಚ್ಚು ವಿಮುಖರಾಗುತ್ತಿದ್ದಾರೆ. ಹದಗೆಡುತ್ತಿರುವ ಸಂಬಂಧಗಳು, ಹಣದುಬ್ಬರ ಮತ್ತು ಫ್ರೀಡಂ ಕಳೆದುಕೊಳ್ಳುವ ಭಯದಿಂದ ಜನರು ಮದುವೆಯಾಗಲು ಇಷ್ಟಪಡುವುದಿಲ್ಲ ಎಂದು ತಿಳಿದುಬಂದಿದೆ.

click me!