ವಿಶ್ವಾಸವೇ ಇಲ್ಲದಿದ್ದಲ್ಲಿ ಮನುಷ್ಯ ಏನೂ ಸಾಧಿಸಲಾರ, ಅದೂ ಸೆಕ್ಸ್ ಲೈಫ್‌ಗಾದರೂ ಸರಿ!

First Published | Mar 1, 2023, 3:37 PM IST

ಕೆಲವೊಮ್ಮೆ ಆತ್ಮವಿಶ್ವಾಸ ಕೊರತೆಯಿಂದ ಸೆಕ್ಸ್ ಲೈಫ್ ನಲ್ಲಿ ಸಮಸ್ಯೆ ಉಂಟಾಗಬಹುದು. ವೈಯಕ್ತಿಕ ಕ್ಷಣಗಳ ಬಗ್ಗೆ ಸಂಗಾತಿಗಳ ನಡುವೆ ಅಹಿತಕರ ಮತ್ತು ಸಂಕೋಚದ ಭಾವನೆ ಮೂಡಿದರೆ, ಇಲ್ಲಿ ನೀಡಿರುವ ಸಲಹೆಗಳು ನಿಮಗೆ ಉಪಯುಕ್ತವಾಗಬಹುದು. ದೈಹಿಕ ಸಂಬಂಧವನ್ನು ನಿರ್ಮಿಸುವಾಗ ಆತ್ಮವಿಶ್ವಾಸವನ್ನು ಹೇಗೆ ಹೆಚ್ಚಿಸುವುದು 
 

ದೈಹಿಕ ಸಂಬಂಧಗಳಿಗೆ (physical relationship) ಸಂಬಂಧಿಸಿದಂತೆ ಸಮಾಜದಲ್ಲಿ ವಿಭಿನ್ನ ಗ್ರಹಿಕೆಗಳಿವೆ, ಆದರೆ ಸತ್ಯವೆಂದರೆ ಸೆಕ್ಸ್ ಲೈಫ್ ವೈವಾಹಿಕ ಜೀವನದಲ್ಲಿ ತುಂಬಾ ಮುಖ್ಯ. ಸೆಕ್ಸ್ ಲೈಫ್ ಚೆನ್ನಾಗಿರಬೇಕು ಅಂದ್ರೆ ಆತ್ಮವಿಶ್ವಾಸ ಹೆಚ್ಚಿರಬೇಕು. ಆದ್ದರಿಂದ ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸವನ್ನು ಹೇಗೆ ಹೆಚ್ಚಿಸಬಹುದು ಎಂದು ತಿಳಿಯೋಣ. 
 

ಆತ್ಮವಿಶ್ವಾಸ ಏಕೆ ಮುಖ್ಯ? 
ದೈಹಿಕ ಸಂಬಂಧಗಳು ಮತ್ತು ಆತ್ಮವಿಶ್ವಾಸದ (confidence) ಬಗ್ಗೆ ಅನೇಕ ರೀತಿಯ ಸಂಶೋಧನೆಗಳನ್ನು ಮಾಡಲಾಗಿದೆ. ದೈಹಿಕ ಸಂತೋಷ ಸಿಗಬೇಕು ಅನ್ನೋದಾದ್ರೆ ಆತ್ಮವಿಶ್ವಾಸ ಹೆಚ್ಚಿರಬೇಕು ಎಂದು ತಿಳಿದುಬಂದಿದೆ. ಇದು ಸಂಬಂಧವನ್ನು ಸುಧಾರಿಸಲು ಒಳ್ಳೆಯದು.

Tap to resize

ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಹೇಗೆ? 
ಸ್ವತಂತ್ರ ಸಂಶೋಧಕ ಡಾ.ಲೋರಿ ಬ್ರೋಟೊ ಅವರ 2014 ರ ಸಂಶೋಧನೆಯು ಮಹಿಳೆಯರಿಗೆ ಮೈಂಡ್ ಫುಲ್ ಸ್ಕಿಲ್ಸ್ (mindfull skills) ಕಲಿಸೋದ್ರಿಂದ ಅವರ ಕಾಮಾಸಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.. ಜೊತೆಗೆ ಪ್ರತಿಯೊಬ್ಬ ಮಹಿಳೆ ಲೈಂಗಿಕತೆಯ ಬಗ್ಗೆ ತಿಳಿದಿರಬೇಕು ಮತ್ತು ಆ ಬಗ್ಗೆ ಎಂದಿಗೂ ಹೆದರಬಾರದು ಎನ್ನುತ್ತಾರೆ ಸಂಶೋಧಕರು. ಅದಕ್ಕಾಗಿ ಏನೇನು ಮಾಡಬಹುದು ?

ಲೈಂಗಿಕತೆಯ ಬಗ್ಗೆ ಮಾತನಾಡಿ
ಸಂಗಾತಿಯ ಬಳಿ ಸೆಕ್ಸ್ ಬಗ್ಗೆ ಮಾತನಾಡಲು (talk about sex) ನಾಚಿಕೆ ಪಡಬೇಡಿ, ಮನಸ್ಸು ಬಿಚ್ಚಿ ಮಾತನಾಡಿ. ನೀವು ಅದರ ಬಗ್ಗೆ ಹೆಚ್ಚು ಮುಕ್ತವಾಗಿ ಮಾತನಾಡಲು ಸಾಧ್ಯವಾದರೆ, ಆ ವಿಷಯಗಳ ಬಗ್ಗೆ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಇದರಿಂದ ಸೆಕ್ಸ್ ಲೈಫ್ ಚೆನ್ನಾಗಿರುತ್ತೆ.

ಇಷ್ಟಗಳ ಬಗ್ಗೆ ಚರ್ಚಿಸಿ
ನೀವು ಸಂಗಾತಿ ಜೊತೆ ಸೆಕ್ಸ್ ಲೈಫ್ ಬಗ್ಗೆ ಮುಕ್ತವಾಗಿ ಮಾತನಾಡಿದರೆ, ನಿಮ್ಮ ಮತ್ತು ಸಂಗಾತಿಯ ಇಷ್ಟಾನಿಷ್ಟಗಳ ಬಗ್ಗೆಯೂ ನೀವು ಚರ್ಚಿಸಬೇಕು. ನೀವು ಇದನ್ನು ಮಾಡಿದರೆ, ಯಾವುದರಿಂದ ಹೆಚ್ಚು ಸಂತೋಷ ಸಿಗುತ್ತದೆ, ಯಾವ ಸಮಯದಲ್ಲಿ ಮಾಡಿದರೆ ಉತ್ತಮ ಎನ್ನುವ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಸಿಗುತ್ತವೆ.   

ಮಲಗುವ ಕೋಣೆಯ ಬೆಳಕನ್ನು ಕಡಿಮೆ ಮಾಡಿ    
ಸಮೀಕ್ಷೆಯ ಪ್ರಕಾರ, ಹೆಚ್ಚಿನ ಜನರು ತಮ್ಮ ದೇಹದ ಬಗ್ಗೆ ನಿರಾಶೆಗೊಳ್ಳಬಹುದು ಮತ್ತು ಅಂತಹ ಪರಿಸ್ಥಿತಿಯಲ್ಲಿ, ಮಲಗುವ ಕೋಣೆಯ ಬೆಳಕನ್ನು ಮಂದವಾಗಿರಿಸುವುದರಿಂದ (dim light), ನಾವು ದೇಹದ ಸಮಸ್ಯೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿರೋದಿಲ್ಲ ಮತ್ತು ನಮ್ಮ ಸ್ವಂತ ಸಂತೋಷಕ್ಕೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗುತ್ತೆ.   

ಒಬ್ಬರನ್ನೊಬ್ಬರು ಸ್ಪರ್ಶಿಸುವುದು ಮುಖ್ಯ. 
ಮ್ಯಾಜಿಕ್ ಸ್ಪರ್ಶ (magical touch) ಬಹಳ ಮುಖ್ಯ ಮತ್ತು ಆತ್ಮವಿಶ್ವಾಸ ಹೆಚ್ಚಿಸಲು ಅಪ್ಪುಗೆಗಳನ್ನು ಮುಖ್ಯವೆಂದು ಪರಿಗಣಿಸಬಹುದು. ಗಂಡ ಮತ್ತು ಹೆಂಡತಿ ಒಟ್ಟಿಗೆ ಕುಳಿತಾಗ ಸುಮ್ಮನೆ ಪರಸ್ಪರ ಸ್ಪರ್ಶಿಸುವುದು ಯಾವಾಗಲೂ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಇದರಿಂದ ಇಬ್ಬರ ನಡುವೆ ರೊಮ್ಯಾಂಟಿಕ್ ಕಿಡಿ ಹತ್ತೋದು ಗ್ಯಾರಂಟಿ. 

ಕ್ಷಣವನ್ನು ಆನಂದಿಸಿ 
ಅನೇಕ ಬಾರಿ ನಾವು ದೈಹಿಕ ಸಂಬಂಧಗಳ ಸಮಯದಲ್ಲಿ ಆನಂದಿಸುವ ಬದಲು ಯೋಚಿಸುತ್ತೇವೆ, ಇದು ಆತ್ಮವಿಶ್ವಾಸವನ್ನು ಅಲುಗಾಡಿಸುತ್ತದೆ. ಈ ಸಮಯದಲ್ಲಿ ಈ ಕ್ಷಣವನ್ನು ಆನಂದಿಸಲು ಯತ್ನಿಸಿ, ಬೇರೆಲ್ಲಾ ಯೋಚನೆ, ನೋವುಗಳನ್ನು ಮರೆತು ಬಿಡಿ. ಹೀಗೆ ಮಾಡಿದ್ರೆ ಆತ್ಮವಿಶ್ವಾಸ ಹೆಚ್ಚೋದು ಖಚಿತ. 

Latest Videos

click me!