ಕಲೀಗ್ ಜೊತೆ ಲವ್…. ನೆನಪಿಡಬೇಕಾದ ಐದು ವಿಷಯಗಳಿವು..

First Published Mar 10, 2023, 5:30 PM IST

ಲವ್ ಯಾವಾಗ, ಯಾರ ಮೇಲೆ ಬೇಕಾದ್ರೂ ಆಗಬಹುದು ಅನ್ನೋದನ್ನು ನೀವು ಕೇಳಿದ್ದೀರಿ ಅಲ್ವಾ? ಇದು ನಿಜ. ಆಫೀಸಿನಲ್ಲಿ ಕೂಡ ಯಾರ್ ಮೇಲೆ ಬೇಕಾದ್ರೂ ಲವ್ ಆಗಬಹುದು. ನಿಮ್ಮ ಕಚೇರಿಯಲ್ಲಿ ಸಹೋದ್ಯೋಗಿಯೊಂದಿಗೆ ಡೇಟಿಂಗ್ ಮಾಡುವುದೇನೋ ಸರಿ. ಆದರೆ ಇದರಿಂದ ಏನೆಲ್ಲಾ ಸಮಸ್ಯೆ ಆಗಬಹುದು ಅನ್ನೋದರ ಬಗ್ಗೆಯೂ ತಿಳಿದುಕೊಂಡಿರಬೇಕು. ಸಂಬಂಧವು ನಿಮ್ಮ ಉದ್ಯೋಗ ಅಥವಾ ವೃತ್ತಿಜೀವನದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನೀವು ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.
 

ಪ್ರೀತಿಯಲ್ಲಿ ಬಿದ್ದಾಗ ಜನರು ಜಗತ್ತನ್ನೆ ಮರೆತು ಬಿಡ್ತಾರಂತೆ, ಇನ್ನು ಈ ರೂಲ್ಸ್ ಎಲ್ಲಾ ಯಾರಿಗೆ ನೆನಪಿನಲ್ಲಿರುತ್ತೆ ಅಲ್ವಾ? ನೀವು ಪ್ರೀತಿಯಲ್ಲಿದ್ದಾಗ ಪ್ರಾಯೋಗಿಕತೆ ಮತ್ತು ತರ್ಕವನ್ನು ಮರೆಯುವುದು ತುಂಬಾ ಸಾಮಾನ್ಯ. ಆದರೆ ಆಫೀಸ್ ಕಲೀಗ್ ಜೊತೆ ಲವ್ ಆದಾಗ, ಕೆಲವೊಂದು ನಿಯಮಗಳನ್ನು ನೀವು ಮರೆತರೆ ಅದರಿಂದ ಮುಂದೆ ನಿಮ್ಮ ಕರಿಯರ್ ಲೈಫ್ ಗೆ ತೊಂದರೆ ಆಗೋದಂತೂ ಖಚಿತ.

ಸಾಮಾನ್ಯವಾಗಿ, ಕಾರ್ಪೊರೇಟ್ ಕಂಪನಿಗಳು ಸಹೋದ್ಯೋಗಿಗಳು ಪರಸ್ಪರ ಡೇಟಿಂಗ್ ಮಾಡಬಾರದು ಎಂಬ ಷರತ್ತನ್ನು ಹೊಂದಿರುತ್ತವೆ. ಆದರೆ ಲವ್ ಲ್ಲಿ ಬಿದ್ದ ಜನರು ಆ ಎಲ್ಲಾ ಷರತ್ತುಗಳನ್ನು ಮರೆತುಬಿಡುತ್ತಾರೆ ಮತ್ತು ಕೆಲವೊಮ್ಮೆ ಇದುವೇ ಅವರ ಉದ್ಯೋಗಗಳು ಮತ್ತು ವೃತ್ತಿಜೀವನವನ್ನು ಅಪಾಯಕ್ಕೆ ತಳ್ಳುತ್ತಾರೆ.

ಕಚೇರಿಯಲ್ಲಿ ಸಹೋದ್ಯೋಗಿಯೊಂದಿಗೆ ಡೇಟಿಂಗ್ ಮಾಡುವಾಗ ನೀವು ನೆನಪಿನಲ್ಲಿಡಬೇಕಾದ ಕೆಲವು ವಿಷಯಗಳು ಇಲ್ಲಿವೆ:

ಕಂಪನಿಯ ನೀತಿಗಳ ಬಗ್ಗೆ ತಿಳಿಯಿರಿ (know about company rules)
ಕಂಪನಿಯ ಕೆಲಸದ ಒಪ್ಪಂದಕ್ಕಾಗಿ ನೀವು ಡಾಕ್ಯುಮೆಂಟ್ ಮೇಲೆ ಸಹಿ ಮಾಡಿದಾಗ ನೀವು ಪ್ರತಿ ರೂಲ್ಸ್  ಸರಿಯಾಗಿ ಓದುವುದಿಲ್ಲ. ಹೆಚ್ಚಿನ ಉನ್ನತ ಕಾರ್ಪೊರೇಟ್ ಕಂಪನಿಗಳು ಕಚೇರಿಗಳಲ್ಲಿ ಡೇಟಿಂಗ್ ಮಾಡುವುದನ್ನು ಒಪ್ಪೋದಿಲ್ಲ. ಕಚೇರಿಯಲ್ಲಿ ಕಲೀಗ್ ಗಳನ್ನು ಲವ್ ಮಾಡ್ಲೇ ಬಾರದು ಅನ್ನೋ ರೂಲ್ಸ್ ಕೂಡ ಇರುತ್ತೆ..

 

ಸಾಂದರ್ಭಿಕ ಚಾಟ್ ಮಾಡುವುದು, ನಡುವೆ ತಮಾಷೆ ಮಾಡುವುದು, ಅಥವಾ ಮೋಜು ಮಾಡುವುದು, ಜೊತೆಯಾಗಿ ತಿಂಡಿ ತಿನ್ನಲು ಹೋಗೋದು ಎಲ್ಲವೂ  ಸ್ವೀಕಾರಾರ್ಹ ಆದರೆ ಪ್ರೀತಿ ಗಂಭೀರವಾಗಿದೆ ಅಂದ್ರೆ ಅದು ತಪ್ಪಾಗುತ್ತೆ. ಅನೇಕ ಕಂಪನಿಗಳು ಅಂತಹ ಭಾವನೆಗಳಿಗೆ ಕಟ್ಟುನಿಟ್ಟಾದ ನೀತಿಗಳನ್ನು ಹೊಂದಿವೆ.

ಇಬ್ಬರೂ ಲವ್ ಮಾಡ್ತಿದ್ದೀರಾ? (mutual love)
ಪ್ರೀತಿ ಅಂದ್ರೆ ಇಬ್ಬರಿಗೂ ಒಂದೇ ರೀತಿಯ ಭಾವನೆ ಇರಬೇಕು. ಒಬ್ಬ ನಿರ್ದಿಷ್ಟ ವ್ಯಕ್ತಿಯ ಬಗ್ಗೆ ನೀವು ಹೇಗೆ ಭಾವಿಸುತ್ತೀರಿ ಎಂದು ನಿಮ್ಮ ಇತರ ಸಹೋದ್ಯೋಗಿಗಳಿಗೆ ಹೇಳುವ ಮೊದಲು, ನಿಮ್ಮ ಭಾವನೆಗಳನ್ನು ನೀವು ಇಷ್ಟ ಪಡುತ್ತಿರುವ ವ್ಯಕ್ತಿಗೆ ಹೇಳಿದ್ದೀರೋ ಇಲ್ಲವೋ ಅನ್ನೋದು ಮುಖ್ಯ. 

ತಪ್ಪು ಸಂಕೇತಗಳನ್ನು ನೀಡಲು ಪ್ರಯತ್ನಿಸುವುದು ಅಥವಾ ಇತರ ವ್ಯಕ್ತಿಗೆ ಆಸಕ್ತಿಯಿಲ್ಲದಿದ್ದರೂ ಕಮೆಂಟ್ ಪಾಸ್ ಗಳನ್ನು ಮಾಡುವುದು, ಅಗತ್ಯಕ್ಕಿಂತ ಹೆಚ್ಚಾಗಿ ಫ್ಲರ್ಟ್ ಮಾಡೋದು, ಇರೀಟೇಟ್ ಅನಿಸುವಷ್ಟು ಹಿಂದೆ ಬೀಳೋದು, ಹೀಗೆ ಮಾಡಿದರೆ ನಿಮ್ಮ ಕೆಲಸದ ಸ್ಥಳದಲ್ಲಿ ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು.

ಸಾರ್ವಜನಿಕವಾಗಿ ತೋರಿಸಿಕೊಳ್ಳೋದು ಬೇಡ
ನೀವಿಬ್ಬರೂ ಪ್ರೀತಿಯಲ್ಲಿದ್ದಾಗ ಮತ್ತು ನಿಮ್ಮ ಭಾವನೆಗಳನ್ನು ಪರಸ್ಪರ ಹಂಚಿಕೊಂಡ ನಂತರ, ನಿಮಗೆ ಜಗತ್ತಿನ ಟಾಪ್ ನಲ್ಲಿದ್ದೇವೆ ಎನ್ನುವ ಭಾವನೆ ಬರಬಹುದು. ಜೊತೆಗೆ ನಿಮ್ಮ ಸಂಪರ್ಕದಲ್ಲಿರುವ ಇತರ ಜನರಿಗೆ , ಆಫೀಸ್ ಕಲೀಗ್ಸ್ ಗಳಿಗೆ (office colleague) ಅದರ ಬಗ್ಗೆ ತಿಳಿಸಲು ನೀವು ಬಯಸಬಹುದು.

ಪ್ರೀತಿಯನ್ನು ಸಾರ್ವಜನಿಕವಾಗಿ ತೋರಿಸುವ ಮುನ್ನ ಎಚ್ಚರ ಅಗತ್ಯ. ಯಾಕಂದ್ರೆ ಕಚೇರಿಯಲ್ಲಿ ನೀವು ಕೆಲಸ ಮಾಡಬೇಕೆಂದು ನಿರೀಕ್ಷಿಸಲಾಗುತ್ತದೆ ಮತ್ತು ಆದ್ದರಿಂದ ಸರಸವಾಡುವುದು ಅಥವಾ ಯಾವುದೇ ರೀತಿಯ ಪ್ರೀತಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು ಕಚೇರಿಯಲ್ಲಿ ನಿಮ್ಮ ಇಮೇಜ್ ಹಾಳಾಗುತ್ತೆ (image damage), ಜೊತೆಗೆ ಕರಿಯರ್ ಮೇಲೆಯೂ ಪರಿಣಾಮ ಬೀರುತ್ತೆ.

ಪ್ರೀತಿ ಮತ್ತು ಕೆಲಸವನ್ನು ಮ್ಯಾನೇಜ್ ಮಾಡೋದು ಕಷ್ಟ (manage work and love life)
ನಿಮ್ಮ ಸಂಗಾತಿ ಆಫೀಸ್ ನಲ್ಲಿ ಜೊತೆಯೇ ಇರೋದು ನಿಮಗೆ ಖಂಡಿತವಾಗಿಯೂ ನಿಮಗೆ ಸಾಕಷ್ಟು ಸಂತೋಷವನ್ನು ನೀಡುತ್ತದೆ. ಆದರೆ ಕೆಲವೊಮ್ಮೆ ಕೆಲಸದ ಲೋಡ್ ಜಾಸ್ತಿ ಇದ್ದಾಗ, ಡೆಡ್ ಲೈನ್ ಇರೋವಾಗ, ನೀವು ತುಂಬಾನೆ ಬ್ಯುಸಿಯಾಗಿರುತ್ತಾರೆ, ಆದ್ರೆ ಈ ಸಮಯದಲ್ಲಿ ನಿಮ್ಮ ಸಂಗಾತಿಗೆ ನೀವು ಸಮಯ ನೀಡಲು ಸಾಧ್ಯವಾಗದಿದ್ದರೆ, ಇದರಿಂದ ತೊಂದರೆ ಉಂಟಾಗಬಹುದು.

ಆಫೀಸ್ ನಲ್ಲಿ ಎಲ್ಲರ ಮುಂದೆ ಜಗಳ ಮಾಡಬೇಡಿ (do not fight in office)
ಹೆಚ್ಚಾಗಿ ವಿಷಯಗಳು ಯೋಜಿಸಿದಂತೆ ನಡೆಯುವುದಿಲ್ಲ. ಸಂಬಂಧವು ಹುಳಿಯಾಗಬಹುದು ಅಥವಾ ನೀವು ಕೆಲವು ವಿಷಯದ ಬಗ್ಗೆ ಜಗಳವನ್ನು ಹೊಂದಿರಬಹುದು. ಆದರೆ ಅಂತಹ ಸಂದರ್ಭಗಳಲ್ಲಿ ನಿಮ್ಮ ಇತರ ಸಹೋದ್ಯೋಗಿಗಳ ಮುಂದೆ ಜಗಳವಾಡುವುದು ಮತ್ತು ಕಚೇರಿಯಲ್ಲಿ ಅದನ್ನು ಪ್ರದರ್ಶಿಸುವುದು ಕೆಟ್ಟ ವಿಷಯವಾಗಿದೆ. ಬದಲಾಗಿ, ಸೌಹಾರ್ದಯುತವಾಗಿ ಮತ್ತು ಗೌರವಯುತವಾಗಿ ಬೇರ್ಪಡುವುದು ಮತ್ತು ಸಹೋದ್ಯೋಗಿಯಾಗಿ ನಿಮ್ಮ ಮಾಜಿಗೆ ಘನತೆಯನ್ನು ನೀಡುವುದು ಉತ್ತಮ..

click me!