ಮಹಿಳೆಯರು ರೊಮ್ಯಾಂಟಿಕ್ ಪುರುಷರನ್ನು (romantic men) ಇಷ್ಟಪಡುತ್ತಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ, ಆದರೆ ಮಹಿಳೆಯರ ರೋಮ್ಯಾನ್ಸ್ ಆಯ್ಕೆ ಮಾತ್ರ ವಿಭಿನ್ನವಾಗಿದೆ. ಕೆಲವರು ಹೂವುಗಳನ್ನು ಇಷ್ಟಪಟ್ಟರೆ, ಇನ್ನೂ ಕೆಲವರು ಗಿಫ್ಟ್ ಇಷ್ಟಪಡುತ್ತಾರೆ. ಆದರೆ ಪುರುಷರಲ್ಲಿ ಮಹಿಳೆಯರು ಇಷ್ಟಪಡುವ ಕೆಲವು ವಿಷಯಗಳಿವೆ, ಪುರುಷರು ಅದನ್ನ ಮಾಡಿದ್ರೆ ಮಹಿಳೆಯರಿಗೆ ಅದು ರೋಮ್ಯಾಂಟಿಕ್ ಎಂದೆನಿಸುತ್ತೆ.
ಮಹಿಳೆಯರ ಪ್ರಕಾರ ಪುರುಷರು ಮಾಡುವ ಯಾವ ಕೆಲಸಗಳು ಮಹಿಳೆಯರಿಗೆ ರೊಮ್ಯಾಂಟಿಕ್ ಎಂದೆನಿಸುತ್ತೆ ಎಂಬುದನ್ನು ನಾವು ನಿಮಗೆ ಹೇಳುತ್ತಿದ್ದೇವೆ, ಈ ವಿಷಯಗಳು ಅವರಿಗೆ ತುಂಬಾ ರೊಮ್ಯಾಂಟಿಕ್ (romantic) ಎಂದು ಅನಿಸುತ್ತೆ. ಸಾಮಾನ್ಯವಾಗಿ, ಎಲ್ಲಾ ಮಹಿಳೆಯರು ಅದರ ಬಗ್ಗೆ ಒಂದೇ ಅಭಿಪ್ರಾಯವನ್ನು ಹೊಂದಿರುತ್ತಾರೆ. ಆ ವಿಷ್ಯಗಳು ಯಾವುವು ನೋಡೋಣ….
213
ಮಹಿಳೆಯರು ತಮ್ಮ ಜೀವನದ ರೊಮ್ಯಾಂಟಿಕ್ ಕ್ಷಣಗಳ (romantic moment) ಬಗ್ಗೆ ಮಾತನಾಡಿದಾಗಲೆಲ್ಲಾ, ಕೆಲವು ವಿಶೇಷ ಕ್ಷಣಗಳು, ಹಾವಭಾವಗಳು ಅವರ ಮುಂದೆ ಬರುತ್ತವೆ, ಅದು ಅವರ ಹೃದಯವನ್ನು ಸಂತೋಷಗೊಳಿಸುತ್ತದೆ. ಅದೇನು ದೊಡ್ಡ ವಿಷ್ಯ ಆಗಿರಬೇಕೆಂದೆನು ಇಲ್ಲ. ಸಣ್ಣ ಪುಟ್ಟ ವಿಷಯಗಳು ಸಹ ಮಹಿಳೆಯರಿಗೆ ರೊಮ್ಯಾಂಟಿಕ್ ಎಂದೆನಿಸುತ್ತೆ.
313
ಮಹಿಳೆಯರು ಯಾವಾಗಲೂ ಭಾವನೆಗಳ ಕಡೆಗೆ ಹೆಚ್ಚು ಒಲವು ತೋರಿಸುತ್ತಾರೆ ಮತ್ತು ಯಾರಾದರೂ ರೊಮ್ಯಾಂಟಿಕ್ ಆಗಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದಾಗ, ಅದು ಅವರ ಹೃದಯವನ್ನು ಬೇಗನೆ ಟಚ್ ಮಾಡುತ್ತೆ. ರೋಮ್ಯಾನ್ಸ್ ಎಂದರೆ ಕಿಸ್ಸಿಂಗ್, ಸೆಕ್ಸ್ ಎಂದೇನಲ್ಲ… ರೊಮ್ಯಾನ್ಸ್ ಎಂದರೆ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿ ಅಷ್ಟೇ…
413
ಕೆಲವು ಸಾಮಾನ್ಯ ವಿಷಯಗಳನ್ನು ಪುರುಷರು ಮಾಡಿದಾಗ ಅವರ ನಡವಳಿಕೆ ಮಹಿಳೆಯರಿಗೆ ರೋಮ್ಯಾಂಟಿಕ್ ಎಂದೆನಿಸುತ್ತೆ. ಆದ್ದರಿಂದ ಈ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ ಏಕೆಂದರೆ ಪ್ರತಿಯೊಬ್ಬ ಮನುಷ್ಯನು ಅವುಗಳ ಬಗ್ಗೆ ತಿಳಿದುಕೊಳ್ಳಬೇಕು. ನೀವು ರೋಮ್ಯಾಂಟಿಕ್ ಗಂಡ ಹೌದೋ, ಅಲ್ವೋ ಅಂತಾ ತಿಳ್ಕೊಲ್ಲಬಹುದು.
513
ಹಣೆಯ ಮೇಲೆ ಕಿಸ್ (kiss on forehead)
ಇದು ಅತ್ಯಂತ ರೊಮ್ಯಾಂಟಿಕ್ ಭಾವನೆಯಾಗಿದೆ. ಈ ಭಾವನೆಯು ಮಹಿಳೆಯರಿಗೆ ತುಂಬಾ ವಿಶೇಷವಾಗಿದೆ ಮತ್ತು ಇದು ಸಂಭವಿಸಿದಾಗ, ಮಹಿಳೆ ತನ್ನ ಸಂಗಾತಿಯನ್ನು ತುಂಬಾ ರೋಮ್ಯಾಂಟಿಕ್ ಆಗಿ ಕಾಣುತ್ತಾಳೆ. ಹಣೆಯ ಮೇಲೆ ಕಿಸ್ ಮಾಡುವ ಮೂಲಕ, ನಿಮ್ಮ ಅನೇಕ ಭಾವನೆಗಳು ಏಕಕಾಲದಲ್ಲಿ ವ್ಯಕ್ತವಾಗುತ್ತವೆ. ಇದು ಪ್ರೀತಿ, ಭದ್ರತೆ, ಗೌರವ ಮತ್ತು ಸಂತೋಷದ ಪ್ರಜ್ಞೆಯನ್ನು ವ್ಯಕ್ತಪಡಿಸುತ್ತದೆ.
613
ವಿಶೇಷ ದಿನಾಂಕಗಳನ್ನು ನೆನಪಿಟ್ಟುಕೊಳ್ಳುವುದು :
ವಿಶೇಷ ದಿನಾಂಕಗಳನ್ನು (special dates) ನೆನಪಿಟ್ಟುಕೊಳ್ಳುವುದು ತುಂಬಾ ಕಷ್ಟ. ಸಾಮಾನ್ಯವಾಗಿ ಪುರುಷರು ಅಂತಹ ದಿನಾಂಕಗಳನ್ನು ಮರೆತು ಬಿಡುತ್ತಾರೆ, ಆದರೆ ಆನಿವರ್ಸರಿ, ಬರ್ತ್ ಡೇ ಮೊದಲಾದ ದಿನಗಳನ್ನು ನೀವು ನೆನಪಿಟ್ಟುಕೊಳ್ಳಲು ಪ್ರಯತ್ನಿಸಿದರೆ, ಆಗ ನೀವು ನಿಮ್ಮ ಸಂಗಾತಿಯ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆಯಲು ಸಾಧ್ಯವಾಗುತ್ತದೆ.
713
ಮೊದಲ ಭೇಟಿಯ ದಿನಾಂಕ, ಪ್ರಪೋಸ್ ಮಾಡಿದ ದಿನಾಂಕ ಹೀಗೆ ಸಣ್ಣ ಪುಟ್ಟ ವಿಷಯಗಳೇ ಮಹಿಳೆಯರಿಗೆ ಸ್ಪೆಷಲ್ ಆಗಿರುತ್ತೆ. ನೀವು ಅದನ್ನು ನೆನಪಿಟ್ಟುಕೊಂಡು ವಿಶ್ ಮಾಡಿದಾಗ, ಮಹಿಳೆಯರು ಅದನ್ನು ತುಂಬಾ ರೋಮ್ಯಾಂಟಿಕ್ ಆಗಿ ಕಂಡುಕೊಳ್ಳುತ್ತಾರೆ. ಒಬ್ಬ ಮಹಿಳೆ ತನ್ನ ಸಂಗಾತಿ ತನ್ನನ್ನು ಸಂತೋಷಪಡಿಸಲು ಪ್ರಯತ್ನಿಸುತ್ತಿರುವುದನ್ನು ನೋಡಿದಾಗ ಅವಳು ಸೇಫ್ ಫೀಲ್ ಆಗುತ್ತಾಳೆ.
813
ಸರ್ಫ್ರೈಸ್ ವಿಸಿಟ್ (surprise visit)
ನೀವಿಬ್ಬರೂ ಪರಸ್ಪರ ದೂರವಿದ್ದರೆ, ಲಾಂಗ್ ಡಿಸ್ಟಂಟ್ ರಿಲೇಶನ್ ಶಿಪ್ ನಲ್ಲಿದ್ದಾಗ, ಒಂದು ದಿನ ನಿಮಗೆ ಸರ್ಫ್ರೈಸ್ ನೀಡಲು ನಿಮಗೆ ಹೇಳದೆ ನಿಮ್ಮ ಬಾಗಿಲಿನ ಎದುರು ಬಂದು ನಿಂತಾಗ ಸಂಗಾತಿಗೆ ಎಷ್ಟೊಂದು ಖುಷಿ ಆಗುತ್ತೆ ಗೊತ್ತಾ? ನಿಮ್ಮ ಹಠಾತ್ ಆಗಮನವು ಅವರಿಗೆ ತುಂಬಾ ರೋಮ್ಯಾಂಟಿಕ್ ಭಾವನೆಯನ್ನು ನೀಡುತ್ತದೆ.
913
ತನ್ನ ಕೈಗಳಿಂದಲೇ ಪತ್ರ ಬರೆಯೋ ಹುಡುಗ
ತನ್ನ ಕೈಯಿಂದ ಪತ್ರ (hand written letter)ಬರೆಯುವ ಹುಡುಗನಿಂದ ಯಾವ ಹುಡುಗಿಯೂ ತನ್ನನ್ನು ತಾನು ದೂರವಿಡಲು ಸಾಧ್ಯವಿಲ್ಲ. ಹಿಂದೆ ಪ್ರೇಮ ನಿವೇದನೆ ಎಲ್ಲವೂ ಪತ್ರಗಳ ಮೂಲಕವೇ ನಡೆಯುತ್ತಿತ್ತು , ಆದರೆ ಇಂದಿಗೂ ಸಹ ಇದು ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಅತ್ಯಂತ ರೋಮ್ಯಾಂಟಿಕ್ ಮಾರ್ಗವಾಗಿದೆ. ನೀವು ನಿಮ್ಮ ಸಂಗಾತಿಗೆ ಕೈಬರಹದ ಪತ್ರವನ್ನು ನೀಡಿದಾಗ, ಅವರು ಅದನ್ನು ತುಂಬಾ ರೋಮ್ಯಾಂಟಿಕ್ ಆಗಿ ಕಾಣುತ್ತಾರೆ.
1013
ಕೈ ಹಿಡಿದು ನಡೆಯೋದು
ಮಹಿಳೆಯರು ತಮ್ಮ ಸಂಗಾತಿಯ ಕೈಯನ್ನು ಹಿಡಿದುಕೊಂಡು (holding hand) ನಡೆಯುವುದು ತುಂಬಾ ರೋಮ್ಯಾಂಟಿಕ್ ಎಂದು ಅಂದುಕೊಳ್ಳುತ್ತಾರೆ. ನೀವು ಅವರ ಕೈಯನ್ನು ಯಾವುದೇ ಕಾರಣವಿಲ್ಲದೇ ಹಿಡಿದಾಗ, ಅದು ಅವರಿಗೆ ತುಂಬಾನೇ ಸಂತೋಷವನ್ನು ತರುತ್ತದೆ. ಇದು ಇಬ್ಬರ ನಡುವೆ ರೊಮ್ಯಾಂಟಿಕ್ ಕ್ಷಣ ಉಂಟಾಗುವಂತೆ ಮಾಡುತ್ತೆ.
1113
ಸರ್ಫ್ರೈಸ್ ಗಿಫ್ಟ್ )surprise gift)
ಮಹಿಳೆಯರು ಗಿಫ್ಟ್ ಮತ್ತು ಸರ್ಪ್ರೈಸ್ ಗಳನ್ನು ಇಷ್ಟಪಡುತ್ತಾರೆ ಮತ್ತು ನೀವು ಅವರಿಗಾಗಿ ಏನನ್ನಾದರೂ ಮಾಡಿದಾಗ, ಅವರು ನಿಮ್ಮನ್ನು ಹೊಗಳುವುದು ಮಾತ್ರವಲ್ಲದೆ, ಅವರು ಅದನ್ನು ತುಂಬಾ ರೋಮ್ಯಾಂಟಿಕ್ ಆಗಿ ಕಾಣುತ್ತಾರೆ. ನಿಮ್ಮ ಸಂಗಾತಿ ಏನು ಇಷ್ಟಪಡುತ್ತಾರೆಂದು ನೀವು ನೋಡಬೇಕು ಮತ್ತು ಅದಕ್ಕೆ ಅನುಗುಣವಾಗಿ ಅವರಿಗೆ ಸರ್ಫ್ರೈಸ್ ಗಿಫ್ಟ್ ನೀಡಬೇಕು. ಈ ಕ್ಷಣ ಅವರಿಗೆ ರೋಮ್ಯಾಂಟಿಕ್ ಎಂದೆನಿಸುತ್ತೆ.
1213
ಅವರಿಗಾಗಿ ಅಡುಗೆ ಮಾಡೋದು
ಮಹಿಳೆಯರು ನಿಮಗಾಗಿ ಪ್ರತಿದಿನ ನಿಮಗಾಗಿ ಅಡುಗೆ ಮಾಡುತ್ತಾರೆ, ಆದರೆ ಈ ಬಾರಿ ನೀವು ಅವರನ್ನು ಸಂತೋಷಪಡಿಸಲು ಅಡುಗೆ ಮಾಡಬೇಕು. ತಮ್ಮ ಸಂಗಾತಿಗಾಗಿ ಅಡುಗೆ ಮಾಡುವುದು ಮಹಿಳೆಯರಿಗೆ ತುಂಬಾ ರೋಮ್ಯಾಂಟಿಕ್ ಅನಿಸುತ್ತೆ. ಒಬ್ಬ ವ್ಯಕ್ತಿಯು ತನ್ನ ಸಂಗಾತಿಗಾಗಿ ಆಹಾರವನ್ನು ಕುಕ್ ಮಾಡಿದಾಗ, ಅದು ಅವನಿಗೆ ಸಾಕಷ್ಟು ಸಂತೋಷವನ್ನು ನೀಡುತ್ತದೆ.
1313
ಸಂಗಾತಿಗೆ ಇಷ್ಟವಾಗೋದನ್ನು ಮಾಡಿ
ನಿಮ್ಮ ಸಂಗಾತಿ ಪಬ್ ಗೆ ಹೋಗಲು ಬಯಸಿದರೆ, ನೀವು ಅವರನ್ನು ಅಲ್ಲಿಗೆ ಕರೆದೊಯ್ಯಬೇಕು. ಇದು ನಿಮ್ಮಿಬ್ಬರ ನಡುವಿನ ಸಂಬಂಧದಲ್ಲಿ ಸಂತೋಷ ಮತ್ತು ರೊಮ್ಯಾನ್ಸ್ ಹೆಚ್ಚಿಸುತ್ತದೆ. ಅವಳು ನಿಮ್ಮನ್ನು ತನ್ನ ಸ್ನೇಹಿತರಿಗೆ ಪರಿಚಯಿಸುತ್ತಾಳೆ ಮತ್ತು ನಿಮ್ಮ ಸ್ವಭಾವವು ಎಷ್ಟು ರೋಮ್ಯಾಂಟಿಕ್ ಆಗಿದೆ ಎಂದು ಅವರಿಗೆ ಹೇಳುತ್ತಾಳೆ. ಇದು ನಿಮ್ಮ ಸಂಬಂಧವನ್ನು ಸುಧಾರಿಸುತ್ತೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.