ಹೀಗೆ ಮಾಡ್ತಿದ್ರೆ ಸಂಗಾತಿಯ ಸೂತ್ರದ ಬೊಂಬೆ ಆಗ್ತೀರಿ…. ಖಿನ್ನತೆಗೆ ಜಾರೋ ಮುನ್ನ ಜಾಗೃತರಾಗಿ

First Published | Mar 26, 2024, 4:24 PM IST

ಯಾರನ್ನಾದರೂ ಪ್ರೀತಿಸುತ್ತಿದ್ದಾಗ, ಅವರನ್ನು ಬೆಂಬಲಿಸುವುದು ಮತ್ತು ಅವರ ಆಯ್ಕೆಯ ಹೊಸದನ್ನು ಪ್ರಯತ್ನಿಸುವುದು, ಎಲ್ಲವೂ ಸಹಜವೇ, ಆದರೆ ಎಲ್ಲದರಲ್ಲೂ ಸಂಗಾತಿಯನ್ನು ಮಾತ್ರ ಮೆಚ್ಚಿಸಲು ಪ್ರಯತ್ನಿಸುವುದು ಭವಿಷ್ಯದಲ್ಲಿ ನಿಮ್ಮನ್ನು ಖಿನ್ನತೆಗೆ ದೂಡಬಹುದು.
 

ಲವ್ ಮಾಡೋವಾಗ, ಡೇಟಿಂಗ್ (dating) ಮಾಡುವಾಗ ಸಾಕಷ್ಟು ತ್ಯಾಗ ಮಾಡೋರನ್ನು ನೀವು ನೋಡಿರುತ್ತೀರಿ. ಅನೇಕರು ತಮ್ಮ ಆಸೆಗಳನ್ನು ಕೊಂದು ಒಳಗಿನಿಂದ ಸಾಯುವವರೆಗೂ ನಾವು ಮಾಡ್ತಿರೋದು ತಪ್ಪು ಅನ್ನೋದನ್ನು ಅರಿತುಕೊಳ್ಳುವುದಿಲ್ಲ. ದುರದೃಷ್ಟವಶಾತ್, ರಿಲೇಶನ್ ಶಿಪ್‌ನಲ್ಲಿದ್ದಾಗ (relationship) ಮಹಿಳೆಯರು ತಮ್ಮ ಗುರುತನ್ನು ಕಳೆದುಕೊಳ್ಳುವುದು ಸಾಮಾನ್ಯ. ನೀವು ನಿಮಗಿಂತ ಹೆಚ್ಚಾಗಿ ಇನ್ನೊಬ್ಬರನ್ನು ಪ್ರೀತಿಸಿದಾಗ ಅದು ಸಂಭವಿಸುತ್ತದೆ. ಸಂಬಂಧವನ್ನು ಮುಂದುವರಿಸಲು ರಾಜಿ ಮಾಡಿಕೊಳ್ಳುವುದು ಮತ್ತು ಹೆಚ್ಚು ತ್ಯಾಗ ಮಾಡುವುದರ ನಡುವೆ ಸಣ್ಣ ವ್ಯತ್ಯಾಸವಿದೆ. ಈ ಬಗ್ಗೆ ನೀವು ತಿಳಿದಿರೋದು ಮುಖ್ಯ.
 

ಸಂಬಂಧದಲ್ಲಿ ನೀವು ಸಾಕಷ್ಟು ತ್ಯಾಗ ಮಾಡುತ್ತಿದ್ದೀರಿ ಎಂದು ತೋರಿಸುವ 5 ಚಿಹ್ನೆಗಳು
ನಿಮ್ಮ ಆಲೋಚನೆಗಳನ್ನು ಬಹಿರಂಗವಾಗಿ ಮಾತನಾಡದಿರುವುದು

ಅವರು ನನ್ನನ್ನು ಜಡ್ಜ್ ಮಾಡಿದ್ರೆ ಅಥವಾ ನನ್ನ ಮಾತನ್ನು ತಪ್ಪಾಗಿ ಅರ್ಥೈಸಿದರೆ ಎನ್ನುವ ಭಯದಿಂದಾಗಿ, ಅನೇಕ ಜನರು ತಮ್ಮ ನೈಜ  ಆಲೋಚನೆಗಳು ಮತ್ತು ಭಾವನೆಗಳನ್ನು ಹೇಳುವುದಿಲ್ಲ. ಇದು ಹಿಂದಿನ ಟಾಕ್ಸಿಕ್ ರಿಲೇಶನ್‌ಶಿಪ್ (Toxic Relationship), ಸಾಮಾಜಿಕ ನಿಯಮಗಳು ಅಥವಾ ಸಂಬಂಧಗಳಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ತಮ್ಮ ಆಸೆಗಳನ್ನು ತಮ್ಮೊಳಗೆ ಇಟ್ಟುಕೊಳ್ಳುತ್ತಾರೆ. 

Tap to resize

ಆದರೆ ಈ ರೀತಿ ಮಾಡೋದು ತಪ್ಪು. ಮುಕ್ತ ಸಂಭಾಷಣೆಯನ್ನು (Open Conversation) ಬೆಳೆಸುವುದು ಅಂದರೆ ಮನಸ್ಸು ಬಿಚ್ಚಿ ಮಾತನಾಡೋದರಿಂದ (communication) ವ್ಯಕ್ತಿಗಳನ್ನು ಬೇಗನ ಅರ್ಥ ಮಾಡಿಕೊಳ್ಳಲು ಸುಲಭ. ಜನರು ಯಾವುದೇ ಭಯವಿಲ್ಲದೆ ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸುವುದು ಬಹಳ ಮುಖ್ಯ. ಯಾರು ಏನು ಹೇಳುತ್ತಾರೆ ಅನ್ನೋದರ ಬಗ್ಗೆ ಭಯ ಇರಬಾರದು. 
 

ಸಂಗಾತಿಯ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸುವುದು
ಯಾವುದೇ ಸಂಬಂಧವು ಸಾಮಾನ್ಯವಾಗಿ ಜವಾಬ್ದಾರಿಗಳನ್ನು (responsibility) ಹಂಚಿಕೊಳ್ಳುವುದು ಮತ್ತು ಸಾಧ್ಯವಿರುವಲ್ಲೆಲ್ಲಾ ನಿಮ್ಮ ಸಂಗಾತಿಗೆ ಸಹಾಯ ಮಾಡುವುದನ್ನು ಒಳಗೊಂಡಿರುತ್ತದೆ. ಆದರೆ ನೀವು ನಿಮ್ಮ ಸಂಗಾತಿಯ ಎಲ್ಲಾ ಜವಾಬ್ದಾರಿಗಳನ್ನು ತೆಗೆದುಕೊಳ್ಳುವ ವ್ಯಕ್ತಿಯಾಗಬಾರದು. ನೀವು ಬೆಂಬಲ ನೀಡಬೇಕು ನಿಜ. ಆದರೆ ನಿಮ್ಮ ಸಂಗಾತಿ ನಿಮ್ಮ ತ್ಯಾಗದ ಲಾಭವನ್ನು ಪಡೆಯುವಂತವರಾಗಬಾರದು. ನಿಮ್ಮ ಬಗ್ಗೆ ಯೋಚಿಸದೆ ನಿಮ್ಮ ಸಂಗಾತಿಯ ಕೆಲಸವನ್ನು ಮಾತ್ರ ಮಾಡುತ್ತೀರಿ ಎಂದು ನಿಮಗೆ ಅನಿಸಿದರೆ, ಇಲ್ಲಿ ನೀವು ಜಾಗರೂಕರಾಗಿರಬೇಕು.

ಸಂಗಾತಿಯನ್ನು ಸಂತೋಷಪಡಿಸಲು ನಿಮ್ಮ ಮೌಲ್ಯಗಳೊಂದಿಗೆ ಹೊಂದಿಕೊಳ್ಳೋದು
ನಿಮ್ಮ ಸಂಗಾತಿಗೆ ಸಂತೋಷ ನೀಡಲು ನೀವು ನಿಮ್ಮ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳಬಹುದು. ತಿರಸ್ಕಾರದ ಭಯ ಅಥವಾ ಅವರಿಗೆ ನಾನು ಮಾಡೋದು ಇಷ್ಟವಾಗದೇ ಇದ್ದರೆ ಎನ್ನುವ ಭಯದಿಂದ ಹೀಗೆ ಮಾಡುತ್ತಿರಬಹುದು. ಆದರೆ, ಆರೋಗ್ಯಕರ ಸಂಬಂಧವನ್ನು (healthy relationship) ಕಾಪಾಡಿಕೊಳ್ಳಲು ಪರಸ್ಪರ ಗೌರವ ಮತ್ತು ಪರಸ್ಪರರ ಮೌಲ್ಯವನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಅದಕ್ಕೆ ಮುಕ್ತ ಮಾತುಕತೆ ಮುಖ್ಯ. ಸಂಬಂಧದಲ್ಲಿ ತೃಪ್ತಿ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಲು ನಿಮ್ಮ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳದೇ ಇರೋದು ಮುಖ್ಯ.

ಸ್ನೇಹಿತರು ಮತ್ತು ಕುಟುಂಬದಿಂದ ದೂರ
ಕೆಲವೊಂದು ಡೇಟಿಂಗ್ ಅಥವಾ ಲವ್ ಮಾಡೋ ಸಂದರ್ಭದಲ್ಲಿ ನಾವು ನಮ್ಮ ಸ್ನೇಹಿತರು ಮತ್ತು ಕುಟುಂಬದಿಂದ ದೂರವಾಗುವ ಸಾಧ್ಯತೆಯೂ ಇದೆ. ನಿಮ್ಮ ಸಂಗಾತಿಯನ್ನು ಮೆಚ್ಚಿಸಲು ನೀವು ನಿಮ್ಮ ಸ್ನೇಹಿತರು ಮತ್ತು ಕುಟುಂಬದಿಂದ ದೂರವಿದ್ದರೆ ಅಥವಾ ಅವರು ನಿಮ್ಮ ಪ್ರೀತಿಪಾತ್ರರನ್ನು ಇಷ್ಟಪಡದ ಕಾರಣ, ನೀವು ಅವರಿಂದ ದೂರವಿದ್ದರೆ  ಇದು ತ್ಯಾಗವೇ ಹೌದು. ಆರೋಗ್ಯಕರ ಸಂಬಂಧಗಳಲ್ಲಿ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಬಂಧಗಳನ್ನು ಕಾಪಾಡಿಕೊಳ್ಳುವುದು ಸೇರಿದೆ, ಮತ್ತು ನಿಮ್ಮನ್ನು ನೀವು ಇತರರಿಂದ ದೂರ ಮಾಡಿದರೆ ಒಂಟಿತನ ಕಾಡುವುದು ಖಚಿತ.

ನಿಮ್ಮನ್ನು ಅನುಮಾನಿಸುವುದು
ನೀವು ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಸಂಗಾತಿಯ ಒಪ್ಪಿಗೆಗೆ ಆದ್ಯತೆ ನೀಡಿದಾಗ, ನಿಮ್ಮ ಸ್ವಂತ ತೀರ್ಪುಗಳು ಮತ್ತು ನಂಬಿಕೆಗಳ ಬಗ್ಗೆ ನೀವು ಅನುಮಾನ (doubt) ಪಡಲು ಪ್ರಾರಂಭಿಸಬಹುದು. ಅತ್ಯಂತ ಕ್ಷುಲ್ಲಕ ಆಯ್ಕೆಗಳಿಗೆ ಸಹ ನೀವು ನಿಮ್ಮ ಸಂಗಾತಿಯಿಂದ ಒಪ್ಪಿಗೆ ಪಡೆಯುವುದರಿಂದ ನಿರಂತರ ಅನುಮಾನಗಳು ಉದ್ಭವಿಸಬಹುದು. ನೀವು ನಿರಂತರವಾಗಿ ಭರವಸೆಯನ್ನು ಹುಡುಕುತ್ತಿದ್ದರೆ, ನಿಮ್ಮ ಸಂಗಾತಿಯ ಅಭಿಪ್ರಾಯದ ಆಧಾರದ ಮೇಲೆ ನಿಮ್ಮ ಆಯ್ಕೆಗಳನ್ನು ಬದಲಾಯಿಸಿದರೆ, ನಿಮ್ಮ ಸಂಬಂಧದ ಬಗ್ಗೆ ಮತ್ತೊಮ್ಮೆ ಯೋಚಿಸುವ ಸಮಯ ಇದು.

Latest Videos

click me!