ಪುರುಷರ ಲೈಂಗಿಕ ಜೀವನಕ್ಕೆ ಮಾರಕ ಈ ಆಹಾರಗಳು

First Published | Jul 20, 2021, 11:19 AM IST

ಈ ಗಡಿಬಿಡಿಯ ಜೀವನದಲ್ಲಿ, ಹೆಚ್ಚಿನ ಪುರುಷರು ಕೆಲಸದ ಒತ್ತಡದಿಂದಾಗಿ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಲು ಸಾಧ್ಯವಾಗುವುದಿಲ್ಲ. ಅಸಮರ್ಪಕ ಆಹಾರ ಸೇವನೆ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಪುರುಷರ ಆರೋಗ್ಯಕ್ಕೆ ಹಾನಿಕರವಾದ ಅನೇಕ ಆಹಾರಗಳಿವೆ. ಈ ಆಹಾರಗಳನ್ನು ಸೇವಿಸುವುದರಿಂದ ದೌರ್ಬಲ್ಯದ ಜೊತೆಗೆ ಬೊಜ್ಜು, ಲೈಂಗಿಕ, ಹೃದಯ ಸಮಸ್ಯೆ, ಮೂತ್ರಪಿಂಡದ ಸಮಸ್ಯೆಯಂತಹ ಸಮಸ್ಯೆಗಳು ಉಂಟಾಗಬಹುದು. 

ಕಳೆದ ಕೆಲವು ವರ್ಷಗಳಲ್ಲಿಸರಿಯಾದ ಆಹಾರ ಮತ್ತು ಪೌಷ್ಠಿಕಾಂಶದ ಕೊರತೆಯಿಂದಾಗಿ ಪುರುಷರ ಫಲವತ್ತತೆ ಮೇಲೆ ಪರಿಣಾಮ ಬೀರಿದೆ. ಆಲ್ಕೋಹಾಲ್ ಮತ್ತು ಸಿಗರೇಟುಗಳಂತಹ ಅನಾರೋಗ್ಯಕರ ಅಭ್ಯಾಸಗಳು ಇದಕ್ಕೆ ಕಾರಣವಾಗಿದೆ. ಮಾಧ್ಯಮ ವರದಿಗಳ ಪ್ರಕಾರನಿಮ್ಮ ತಪ್ಪು ಆಹಾರವು ಲೈಂಗಿಕ ಜೀವನಕ್ಕೆ ಹಾನಿ ಮಾಡುವುದಲ್ಲದೆತಂದೆಯಾಗುವ ನಿಮ್ಮ ಕನಸು ಛಿದ್ರಗೊಳಿಸುತ್ತದೆ.
undefined
ಆರೋಗ್ಯಕ್ಕೆ ಹಾನಿಕಾರಕವಾದ ಪುರುಷರು ಸೇವಿಸುವ ಆಹಾರ ಉತ್ಪನ್ನಗಳು ಯಾವುವು ಎಂದು ನೋಡೋಣ.ಸೋಡಿಯಂ ಸಮೃದ್ಧ ಆಹಾರ ತಿನ್ನುವುದನ್ನು ತಪ್ಪಿಸಿ:ಆಹಾರ ತಜ್ಞರ ಪ್ರಕಾರಪುರುಷರು ಸೋಡಿಯಂ ಹೆಚ್ಚಿರುವ ಆಹಾರಗಳ ಸೇವನೆಯನ್ನು ಕಡಿಮೆ ಮಾಡಬೇಕುಇಲ್ಲದಿದ್ದರೆ ಅವು ಪುರುಷರ ಫಲವತ್ತತೆಯ ಮೇಲೆ ಪರಿಣಾಮ ಬೀರಬಹುದು.
undefined

Latest Videos


ಸೋಡಿಯಂ ದೇಹದಲ್ಲಿ ರಕ್ತ ಪರಿಚಲನೆ ಕಡಿಮೆ ಮಾಡುತ್ತದೆ. ಇದು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಗೆ ಕಾರಣವಾಗುತ್ತದೆ. ಅದಕ್ಕಾಗಿಯೇ ಪುರುಷರು ಚೀಸ್, ತಿಂಡಿ, ಉಪ್ಪಿನಕಾಯಿ, ಸೋಯಾ ಸಾಸ್ ಮತ್ತು ಅಡುಗೆ ಸೋಡಾಬಳಕೆಯನ್ನು ಕಡಿಮೆ ಮಾಡಬೇಕು.
undefined
ಈ ಪಾನೀಯಗಳನ್ನು ಸೇವಿಸಬೇಡಿ:ಸಕ್ಕರೆ ಪಾನೀಯಗಳು ಪುರುಷರ ಆರೋಗ್ಯಕ್ಕೂ ಹಾನಿ ಮಾಡುತ್ತವೆ. ಸೋಡಾ, ಎನರ್ಜಿ ಡ್ರಿಂಕ್ಸ್ ಮತ್ತು ಕಾರ್ಬೋಹೈಡ್ರೇಟ್ ಪಾನೀಯಗಳನ್ನು ಸಹ ಕುಡಿದರೆ ಜಾಗರೂಕರಾಗಿರಿ.
undefined
ಸಕ್ಕರೆಯುಕ್ತ ಪಾನೀಯಗಳ ಅತಿಯಾದ ಸೇವನೆಯು ಜನರಲ್ಲಿ ಹೃದ್ರೋಗ, ರಕ್ತದ ಹರಿವು ಮತ್ತು ರಕ್ತದೊತ್ತಡಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದರಿಂದ ದೈಹಿಕವಾಗಿ ಸದೃಢರಾಗಿರಲು ಸಾಧ್ಯವಿಲ್ಲ.
undefined
ಸಿಗರೇಟು ಸೇದಬೇಡಿ:ಸಿಗರೇಟು ಸೇವನೆ ಪುರುಷರಿಗೆ ಹಾನಿಕಾರಕ ಎಂದು ಹೇಳುತ್ತಾರೆ. ಇದರ ಬಗ್ಗೆ ಪ್ರತಿಯೊಬ್ಬರಿಗೂ ಅರಿವಿದೆ. ಇದರ ಸೇವನೆ ದೇಹದಲ್ಲಿ ಆಮ್ಲಜನಕದ ಮಟ್ಟವನ್ನು ಕಡಿಮೆ ಮಾಡುತ್ತದೆ.
undefined
ನಿರಂತರವಾಗಿ ಸಿಗರೇಟ್ ಸೇದುವುದರಿಂದ ಪುರುಷರ ಫಲವತ್ತತೆಯನ್ನು ದುರ್ಬಲಗೊಳಿಸುತ್ತದೆ, ಇದರಿಂದ ಮಗು ಆಗುವ ಸಾಧ್ಯತೆ ಕಡಿಮೆ ಮಾಡುತ್ತದೆ. ಆದ್ದರಿಂದ ಪುರುಷರು ಸಿಗರೇಟುಗಳನ್ನು ಸೇದಬಾರದು.
undefined
ಹೆಚ್ಚಿನ ಟ್ರಾನ್ಸ್ ಕೊಬ್ಬುಗಳಿರುವ ಆಹಾರವನ್ನು ಸೇವಿಸಬೇಡಿ:ಟ್ರಾನ್ಸ್ ಕೊಬ್ಬುಗಳು ಅಪಧಮನಿಗಳಲ್ಲಿ ತಡೆಗಳನ್ನು ಉಂಟುಮಾಡುತ್ತವೆ ಮತ್ತು ಕ್ರಮೇಣ ಹೃದ್ರೋಗದ ಅಪಾಯವನ್ನು ಉಂಟುಮಾಡುತ್ತವೆ. ಇದು ಪುರುಷರ ಫಲವತ್ತತೆಯ ಮೇಲೂ ಪರಿಣಾಮ ಬೀರುತ್ತದೆ.
undefined
ಹೆಚ್ಚಿನ ಟ್ರಾನ್ಸ್ ಕೊಬ್ಬುಗಳನ್ನು ಹೊಂದಿರುವ ಆಹಾರ ಎಂದರೆ ಚಿಪ್ಸ್, ಕುಕೀಸ್, ಫ್ರೆಂಚ್ ಫ್ರೈಸ್, ಮಫಿನ್ ಗಳು ಮತ್ತು ಕೇಕ್ ಗಳಂತಹ ಆಹಾರಗಳನ್ನು ಸೇವಿಸೋದನ್ನು ತಪ್ಪಿಸಿ.
undefined
ಮಾಂಸ ಬಗ್ಗೆ ಎಚ್ಚರವಹಿಸಬೇಕು :ಸಂಸ್ಕರಿಸಿದ ಮಾಂಸವು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ಏಕೆಂದರೆ ಇದು ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಹಾನಿಗೊಳಿಸುವ ಹಾರ್ಮೋನ್ ಅವಶೇಷಗಳನ್ನು ಹೊಂದಿರುತ್ತದೆ. ಆದ್ದರಿಂದಲೇ ಪುರುಷರಿಗೆ ಹೆಚ್ಚು ಮಾಂಸ ಸೇವಿಸದಂತೆ ಸೂಚಿಸಲಾಗಿದೆ.
undefined
click me!