ಈ ರಾಶಿಯವರು ಒಂಥರಾ ಬಿಬಿಸಿ ರೇಡಿಯೋ ಇದ್ಹಂಗೆ, ಗುಟ್ಟು ಹೇಳ್ಬೇಡಿ

Suvarna News   | Asianet News
Published : Jul 19, 2021, 04:30 PM IST

ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದೊಂದು ರೀತಿಯ ಗುಣ ಇರುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನ ಸ್ವಭಾವ, ವ್ಯಕ್ತಿತ್ವ ಮತ್ತು ಜಾತಕವನ್ನು ಹೊಂದಿದ್ದಾನೆ ಮತ್ತು ಅದನ್ನು ಅವರ ರಾಶಿ ಚಿಹ್ನೆಯನ್ನು ತಿಳಿಯುವ ಮೂಲಕ ಅಂದಾಜು ಮಾಡಲಾಗುತ್ತದೆ. ಪ್ರತಿಯೊಂದು ರಾಶಿಚಕ್ರದ ಚಿಹ್ನೆ ತನ್ನ ಮಾಸ್ಟರ್ ಗ್ರಹದಿಂದ ವಿಭಿನ್ನ ಸ್ವಭಾವವನ್ನು ಹೊಂದಿದೆ. ಜ್ಯೋತಿಷ್ಯದಲ್ಲಿ ಒಟ್ಟು 12 ರಾಶಿಚಕ್ರದವರ ಬಗ್ಗೆ ಉಲ್ಲೇಖಿಸಲಾಗಿದೆ. ಆದರೆ ಅದರಲ್ಲಿ ಕೆಲವೊಂದು ರಾಶಿಯ ಜನರ ಬಾಯಲ್ಲಿ ಗುಟ್ಟು ನಿಲ್ಲೋದೇ ಇಲ್ಲ. ಯಾರಾದರೂ ಹೇಳಿದ್ದನ್ನು ಇತರರಿಗೆ ಹೇಳಲು ಈ ಜನರು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಈ ಜನರು ಯಾರ ರಹಸ್ಯ ವಿಷಯಗಳನ್ನು ಸುತ್ತಲೂ ಸಾಗಿಸಲು ಹಿಂಜರಿಯುವುದಿಲ್ಲ. ಈ ರಾಶಿಚಕ್ರಚಿಹ್ನೆಗಳ ಬಗ್ಗೆ ತಿಳಿಯಿರಿ...

PREV
110
ಈ ರಾಶಿಯವರು ಒಂಥರಾ ಬಿಬಿಸಿ ರೇಡಿಯೋ ಇದ್ಹಂಗೆ, ಗುಟ್ಟು ಹೇಳ್ಬೇಡಿ

ಮೇಷರಾಶಿ.
ಮೇಷ ರಾಶಿಯವರು ಉತ್ಸಾಹ ಮತ್ತು ಶಕ್ತಿಯಿಂದ ತುಂಬಿದ್ದಾರೆ. ಈ ರಾಶಿಯ ಜನರೊಂದಿಗೆ ನಿಮ್ಮ ರಹಸ್ಯಗಳನ್ನು ಎಚ್ಚರಿಕೆಯಿಂದ ಹಂಚಿಕೊಳ್ಳಿ. 

210

ಮೇಷ ರಾಶಿಯವರು ಬಹು ಬೇಗನೆ ಉತ್ಸುಕರಾಗುತ್ತಾರೆ ಮತ್ತು ನಿಮ್ಮ ಮಾತುಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಮೇಷ ರಾಶಿಗಳಿಗೆ ನಿಮ್ಮ ರಹಸ್ಯಗಳನ್ನು ಹೇಳುವ ಮೊದಲು ಎಚ್ಚರಿಕೆಯಿಂದ ಯೋಚಿಸಿ. 

310

ಮಿಥುನ ರಾಶಿ
ಜ್ಯೋತಿಷ್ಯದ ಪ್ರಕಾರ ಬುಧ ಗ್ರಹ ಮಿಥುನ ರಾಶಿಯ ಮೇಲೆ ಪ್ರಭಾವ ಬೀರುತ್ತದೆ. ಈ ರಾಶಿಚಕ್ರದ ಜನರು ಸಾಕಷ್ಟು ಸ್ನೇಹಪರರಾಗಿದ್ದಾರೆ ಮತ್ತು ಯಾವುದೇ ರೀತಿಯ ಪರಿಸರದಲ್ಲಿ ತ್ವರಿತವಾಗಿ ಬೆರೆಯುತ್ತಾರೆ. 

410

ಮಿಥುನ ರಾಶಿಯವರಿಗೆ ಗಾಸಿಪ್‌ ಬಗ್ಗೆ  ವಿಶೇಷ ಬಾಂಧವ್ಯವಿದೆ. ನಿಮ್ಮ ಮನಸ್ಸಿನ ರಹಸ್ಯಗಳನ್ನು ಮಿಥುನ ರಾಶಿಯ ಜನರಿಗೆ ಹೇಳುವ ಮೊದಲು ಅದರ ಬಗ್ಗೆ ಯೋಚಿಸಿ. ಯಾಕೆಂದರೆ ರಹಸ್ಯವು ಕ್ಷಣಾರ್ಧದಲ್ಲಿ ಅನೇಕ ಜನರನ್ನು ತಲುಪಬಹುದು. 

510

ಕರ್ಕಾಟಕ 
ಕರ್ಕಾಟಕ  ರಾಶಿಯವರು ಸಾಮಾನ್ಯವಾಗಿ ಸಾಕಷ್ಟು ತಮಾಷೆ ಸ್ವಭಾವದವರಾಗಿರುತ್ತಾರೆ. ಕೆಲವೊಮ್ಮೆ ಇವರ ಬಳಿ ರಹಸ್ಯಗಳು ಬಂದಾಗ, ಅವರು ಇದನ್ನು ಯಾರಿಗೂ ಹೇಳಬೇಡಿ ಎಂದು ಹೇಳುತ್ತಲೇ ಇತರರ ಮುಂದೆ ವಿಷಯಗಳನ್ನು ಹೇಳುತ್ತಾರೆ. 

610

ಕರ್ಕಾಟಕ  ರಾಶಿಯವರು ತಮ್ಮನ್ನು ಎಷ್ಟೇ ನಿಗ್ರಹಿಸಿದರೂ ಸೀಕ್ರೆಟ್ ಮಾಡುತ್ತಲೇ ಒಂದು ರಹಸ್ಯ ವಿಷಯವನ್ನು, ತನಗೆ ಕ್ಲೋಸ್ ಇರುವ ಹಲವರ ಬಳಿ ಹೇಳುತ್ತಾರೆ. ನಂತರ ವಿಷಾದಿಸಿದರೂ, ಆ ವೇಳೆಗೆ ವಿಷಯಗಳು ಬಹಳ ದೂರ ಹೋಗಿರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಈ ರಾಶಿಚಕ್ರದವರು ನಿಮ್ಮ ಸ್ನೇಹಿತರಾಗಿದ್ದರೆ ದಯವಿಟ್ಟು ಅವರೊಂದಿಗೆ ಎಚ್ಚರಿಕೆಯಿಂದ ಮಾತನಾಡಿ. 

710

ತುಲಾ
ತುಲಾ ರಾಶಿ ಮೇಲೆ ಶುಕ್ರ ಗ್ರಹ ಹೆಚ್ಚಿನ ಪ್ರಭಾವ ಬೀರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ರಾಶಿಯ ಜನರು ಸಂಭಾಷಣೆಯಲ್ಲಿ ತುಂಬಾ ಉತ್ತಮರಾಗಿದ್ದಾರೆ. ತುಂಬಾ ಬೇಗ ಇವರು ಎಲ್ಲರೊಂದಿಗೆ ಬೆರೆಯುತ್ತಾರೆ. ಸ್ನೇಹ ಸಂಪಾದಿಸುತ್ತಾರೆ. ಆದರೆ ರಹಸ್ಯ ಮಾತ್ರ ಇವರ ಬಳಿ ಉಳಿಯುವುದಿಲ್ಲ. 

810

ತುಲಾ ರಾಶಿಯ ಜನರು ಜನರನ್ನು ಸುಲಭ ರೀತಿಯಲ್ಲಿ ತನ್ನ ಬಲೆಗೆ ಬೀಳಿಸುತ್ತಾರೆ. ಈ ಜನರು ಒಬ್ಬ ವ್ಯಕ್ತಿ ಹೇಳಿದ ಸೀಕ್ರೆಟ್ ಅನ್ನು ಮೂರನೇ ವ್ಯಕ್ತಿಯ ಎದುರು ಯಾವುದೇ ಅಳುಕು, ಅಂಜಿಕೆ ಇಲ್ಲದೇ ನಿರ್ಭಯವಾಗಿ ಹೇಳುತ್ತಾರೆ. 

910

ಧನು
ಧನು ರಾಶಿ ಜಾತಕರು ಗುರುಗ್ರಹದ ಪ್ರಭಾವಕ್ಕೆ ಒಳಗಾಗುತ್ತಾರೆ. ಅವರು ಯಾರನ್ನಾದರೂ ಸುಲಭವಾಗಿ ತಮ್ಮ ಬಳಿ ಸೆಳೆಯುತ್ತಾರೆ, ಅಂತಹ ಕೌಶಲ್ಯವನ್ನು ಹೊಂದಿದ್ದಾರೆ. 

1010

ಧನು ರಾಶಿ ಜನರು ನಿಮ್ಮ ರಹಸ್ಯಗಳನ್ನು ಇತರರೊಂದಿಗೆ ಏನಾದರೂ ವಿಷಯ ಮಾತನಾಡುವಾಗ ಯೋಚನೆ ಮಾಡದೆ ಅದನ್ನು ಹೇಳಿಬಿಡುತ್ತಾರೆ. ಇದರಿಂದ ನಿಮ್ಮ ಗುಟ್ಟು ಬೇಗನೆ ರಟ್ಟಾಗುತ್ತದೆ. 

click me!

Recommended Stories