ಮದುವೆಗೆ ಹುಡುಗ ಹುಡುಕೋ ಅವಸರದಲ್ಲಿ ಈ ತಪ್ಪು ಮಾಡ್ಬೇಡಿ…

First Published Nov 11, 2022, 4:06 PM IST

ಪ್ರೀತಿಯಲ್ಲಿ ಬೀಳೋದು ಮತ್ತು ನಂತರ ಅದನ್ನು ಮದುವೆ ಎಂಬ ಪ್ರಮುಖವಾದ ಬಂಧನದಲ್ಲಿ ಕಟ್ಟಿ ಹಾಕೋದು ಪ್ರತಿಯೊಬ್ಬ ಪ್ರೇಮಿಗಳ ಬಯಕೆಯಾಗಿರುತ್ತೆ. ಆದರೆ ಅನೇಕ ಬಾರಿ ನಾವು ಆತುರದಲ್ಲಿ ಮದುವೆಗೆ  ಅರ್ಹವಲ್ಲದ ವ್ಯಕ್ತಿಯನ್ನು ಮದುವೆಯಾಗುತ್ತೇವೆ. ಅಂದರೆ, ಅವರು ಮದುವೆಗೆ ಯೋಗ್ಯರಾಗಿರೋದಿಲ್ಲ. ಆತುರದಲ್ಲಿ ನೀವು ತೆಗೆದುಕೊಂಡಂತಹ ನಿರ್ಧಾರ ಮುಂದೆ ನೀವು ಜೀವನದುದ್ದಕ್ಕೂ ಪಶ್ಚಾತ್ತಾಪ ಪಡುವಂತೆ ಮಾಡುತ್ತದೆ.

ನೀವು ಡೇಟಿಂಗ್ ಮಾಡ್ತಾ ಇರೋ ವ್ಯಕ್ರಿಯನ್ನೆ ಮದ್ವೆ ಆಗ್ಬೇಕು ಅಂತಾ ಯೋಚ್ನೆ ಮಾಡಿದ್ದೀರಾ? ಹಾಕಿದ್ರೆ ನೀವು ಇನ್ನೊಂದು ಭಾರಿ ಯೋಚನೆ ಮಾಡಬೇಕಾಗುತ್ತೆ. ಯಾಕೆಂದರೆ ಮದುವೆ ಎಂಬುದು ಡೆಟಿಂಗ್ ನಂತೆ ಒಂದೆರಡು ದಿನಗಳ ಸಂಬಂಧವಲ್ಲ, ಇದು ಜನ್ಮ ಜನ್ಮಗಳ ಸಂಬಂಧ. ಆದುದರಿಂದ ಮದುವೆಯಾಗೋ(Marriage) ಮುನ್ನ ನೀವು ಮತ್ತೊಮ್ಮೆ ಯೋಚನೆ ಮಾಡಬೇಕಾಗುತ್ತೆ. 

ಡೇಟಿಂಗ್(Dating) ಸಮಯದಲ್ಲಿ ಅವರು ನಿಮ್ಮೊಂದಿಗೆ ಒಳ್ಳೆಯವರಾಗಿರ್ತಾರೆ ಆದರೆ ಜವಾಬ್ದಾರಿಗಳ ವಿಷಯಕ್ಕೆ ಬಂದಾಗ, ಅವರು ಓಡಿಹೋಗಲು ಪ್ರಾರಂಭಿಸುತ್ತಾರೆ. ನೀವು ಅವರನ್ನು ಬಲವಂತಪಡಿಸುವ ಮೂಲಕ ಅಥವಾ ಭಾವನಾತ್ಮಕವಾಗಿ ಬ್ಲಾಕ್ ಮೇಲ್ ಮಾಡೋ ಮೂಲಕ ಮದುವೆಯಾಗ್ಬಿಟ್ರೆ, ನಂತರ ತಲೆ ಚಚ್ಚಿಕೊಳ್ಳೋದು ಬಿಟ್ಟು ನಿಮಗೆ ಬೇರೆ ಆಯ್ಕೆಯಿರೋಲ್ಲ.

ಹಾಗಿದ್ರೆ ಎಂತಹ ವ್ಯಕ್ತಿಯನ್ನು ಮದುವೆಯಾಗಬೇಕು. ಡೇಟಿಂಗ್ ಮಾಡುತ್ತಿರುವ ವ್ಯಕ್ತಿಯ ಯಾವ ಗುಣವನ್ನು ನೋಡಬೇಕು. ಅವನು ಮದುವೆಯಾಗಲು ಸೂಕ್ತವಾದ ವ್ಯಕ್ತಿ ಹೌದೇ, ಅಲ್ಲವೇ? ಎಂದು ತಿಳಿದುಕೊಳ್ಳೋದು ಹೇಗೆ? ಇದಕ್ಕೆಲ್ಲಾ ಉತ್ತರ ಇಲ್ಲಿ ನೀಡಲಾಗಿದೆ. ಬನ್ನಿ ಅವುಗಳ ಬಗ್ಗೆ ನೋಡೋಣ.
 

ತಕ್ಷಣವೇ ಎಲ್ಲವನ್ನೂ ಯೋಚಿಸಲು ಪ್ರಾರಂಭಿಸುವ ವ್ಯಕ್ತಿ
ಸಪ್ತಪದಿ ತುಳಿಯೋ ಮೊದಲು ಮಗುವಿನ ಹೆಸರಿನ ಬಗ್ಗೆ ಯೋಚಿಸಲು ಪ್ರಾರಂಭಿಸುವ ಸಂಗಾತಿಯೊಂದಿಗೆ(Partner) ಮದುವೆಯ ಬಗ್ಗೆ ಯೋಚಿಸೋದು ಬುದ್ಧಿವಂತ ಆಯ್ಕೆಯಲ್ಲ. ಅಂತಹ ಜನರು ಶೀಘ್ರದಲ್ಲೇ ಹೌದು ಎಂದು ಹೇಳುತ್ತಾರೆ, ಆದರೆ ಅವರು ತಮ್ಮ ಉಳಿದ ಜೀವನವನ್ನು ನಿಮ್ಮೊಂದಿಗೆ ಕಳೆಯಬೇಕೇ ಅಥವಾ ಇಲ್ಲವೇ ಎಂದು ನಿಜವಾಗಿಯೂ ಯೋಚಿಸಲು ಸಾಧ್ಯವಾಗೋದಿಲ್ಲ. ಅವರು ಈ ಸಂಬಂಧದ ಬಗ್ಗೆ ಬಹಳ ಬೇಗ ಕ್ಯಾಶುಯಲ್ ಆಗಿರಬಹುದು. 

ತನ್ನ ಬಗ್ಗೆ ಮಾತ್ರ ಮಾತನಾಡುವ(Talk) ವ್ಯಕ್ತಿ.
ಡೇಟಿಂಗ್ ಸಮಯದಲ್ಲಿ, ಅವರು ತನ್ನ ಬಗ್ಗೆ ಮಾತ್ರ ಮಾತನಾಡುತ್ತಿದ್ದರೆ. ನಾನು ಹಾಗೆ ಇದ್ದೇನೆ.. ನಾನು ಹೀಗೆ ಇದ್ದೇನೆ, ಎಂದು ಹೇಳುತ್ತಲೇ ಇದ್ದರೆ, ನಿಮ್ಮ ಆಯ್ಕೆಬಗ್ಗೆ ಮತ್ತೊಮ್ಮೆ  ಯೋಚಿಸಿ. ಅವರು ನಿಮ್ಮ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳೋದಿಲ್ಲ... ಅಥವಾ ಅವರು ಮದುವೆಯ ನಂತರದ ಬದಲಾವಣೆಯ ಬಗ್ಗೆ ನಿಮ್ಮೊಂದಿಗೆ ಮಾತನಾಡೋದಿಲ್ಲ. ಅಂತಹ ವ್ಯಕ್ತಿಯನ್ನು ಮದುವೆಯಾಗುವ ಆಲೋಚನೆ ಕೈಬಿಡಬೇಕು. ಮದುವೆಯ ನಂತರವೂ, ಅವರು ತನ್ನ ಮೇಲೆ ಮಾತ್ರ ಕಾನ್ಸನ್ಟ್ರೇಟ್ರ್ ಮಾಡುವರು. ಅಂತಹ ಜನರು ಮದುವೆಗೆ ಯೋಗ್ಯರಲ್ಲ.

ಟೀಕೆ ಮಾಡೋದು ಮಾತ್ರ ತಿಳಿದಿರುವ ವ್ಯಕ್ತಿ
ಸಂಗಾತಿಯು ನಿಮ್ಮನ್ನು ನಿರಂತರವಾಗಿ ಟೀಕಿಸಿದರೆ ಮತ್ತು ಅಪಹಾಸ್ಯ ಮಾಡಿದರೆ, ನೀವು ಈ ವ್ಯಕ್ತಿಯನ್ನು ಮದುವೆಯಾಗಲು ಮತ್ತೊಮ್ಮೆ ಯೋಚಿಸಿ? ಈ ರೀತಿಯ ಜನರು ತುಂಬಾ ಕ್ರಿಟಿಸೈಸ್ ಮಾಡುತ್ತಿರುತ್ತಾರೆ ಮತ್ತು ನಿಮ್ಮ ಆತ್ಮಗೌರವವನ್ನು(Selfrespect) ಸಹ ತಳ್ಳಿಹಾಕಬಹುದು, ಇದು ನಿಮ್ಮ ಸಾಮರ್ಥ್ಯ ಪ್ರಶ್ನಿಸುವಂತೆ ಮಾಡುತ್ತೆ. ಆದ್ದರಿಂದ, ಅಂತಹ ವ್ಯಕ್ತಿಯನ್ನು ಮದುವೆಯಾಗುವ ಬಗ್ಗೆ ಯೋಚಿಸಲೇಬಾರದು.

ಯಾರು ತನ್ನನ್ನು ತಾನು ತಪ್ಪು ಎಂದು ಪರಿಗಣಿಸೋದಿಲ್ಲವೋ 
ನಿಮ್ಮ ಸಂಗಾತಿಯು ಯಾವಾಗಲೂ ತನ್ನನ್ನು ತಾನು ಸರಿ ಎಂದು ಭಾವಿಸಿದರೆ, ಅವರೊಂದಿಗೆ ಜೀವನ(Life) ಪರ್ಯಂತ ಬದುಕೋದು ಕಷ್ಟವಾಗಬಹುದು. ಅವರು ತಪ್ಪು ಮಾಡಿದರೂ, ಅವರು ತಮಗೆ ತಾವೇ ಸರಿ ಎಂದು ಹೇಳಿಕೊಳ್ಳುತ್ತಾರೆ. ಮದುವೆಯ ನಂತರ ಅವರು ನಿಮ್ಮ ಬಗ್ಗೆ ಯೋಚಿಸೋದಿಲ್ಲ. ಹಾಗಾಗಿ ಅಂತವರ ಜೊತೆ ಮದುವೆಯಾಗೋ ಯೋಚನೆ ಬಿಟ್ಟುಬಿಡಿ.   
 

ಅತಿಯಾಗಿ ಪ್ರತಿಕ್ರಿಯಿಸುವ ವ್ಯಕ್ತಿ
ಪ್ರತಿಯೊಂದು ಸನ್ನಿವೇಶದಲ್ಲೂ ಅತಿಯಾಗಿ ಪ್ರತಿಕ್ರಿಯಿಸುವ ವ್ಯಕ್ತಿ ಹೆಚ್ಚು ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತಾನೆ. ಅವರು ಖಂಡಿತವಾಗಿಯೂ ಮದುವೆಗೆ ಅರ್ಹರಲ್ಲ. ಅವರು ನಿಮ್ಮ ಸಣ್ಣ ವಿಷಯಗಳಿಗೆ ಅತಿಯಾಗಿ ಪ್ರತಿಕ್ರಿಯಿಸಿದರೆ,  ಅವರು ನಿಮ್ಮ ಮಾತನ್ನು ತಾಳ್ಮೆಯಿಂದ(Patience) ಕೇಳಿಸಿಕೊಳ್ಳುತ್ತಾರೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇರೋದಿಲ್ಲ. ಅಂತಹ ವ್ಯಕ್ತಿಯನ್ನು ಮದುವೆಯಾದ ನಂತರ, ನಿಮ್ಮ ಜೀವನದಲ್ಲಿ ಬಿರುಗಾಳಿ ಉಂಟಾಗಬಹುದು.ಹಾಗಾಗೇ ಅಂತವರನ್ನು ಆಯ್ಕೆ ಮಾಡಲೇಬೇಡಿ.  

click me!