Relationship Tips: ಯಾವಾಗ್ಲೂ ಹ್ಯಾಪಿ, ಹ್ಯಾಪಿಯಾಗಿರೋ ಜೋಡಿ ನೀವಾಗ್ಬೇಕಾ? ಈ ಟಿಪ್ಸ್ ಫಾಲೋ ಮಾಡಿ

First Published | Dec 3, 2022, 1:13 PM IST

ಮದುವೆಯಾದ ಎಲ್ಲಾ ದಂಪತಿಗಳು ಸಂತೋಷವಾಗಿರೋದಿಲ್ಲ. ಕಾರಣ ಆರಂಭದಲ್ಲಿ ಎಲ್ಲವನ್ನೂ ಹೊಂದಾಣಿಸಿಕೊಂಡು ಹೋಗುತ್ತಿದ್ದವರು ನಂತರದ ದಿನಗಳಲ್ಲಿ ಒಬ್ಬರಿಗೊಬ್ಬರು ಸಮಯ ನೀಡದಷ್ಟು ಬ್ಯುಸಿಯಾಗಿರ್ತಾರೆ. ನೀವು ಹ್ಯಾಪಿ ಕಪಲ್ಸ್ ಆಗಬಯಸಿದ್ರೆ ಅದಕ್ಕಾಗಿ ಏನು ಮಾಡಬೇಕು ಅನ್ನೋದನ್ನು ನೋಡೋಣ. 
 

ಪ್ರತಿ ದಂಪತಿಗಳು ತಮ್ಮ ವೈವಾಹಿಕ ಜೀವನವು ಸಂತೋಷವಾಗಿರಬೇಕೆಂದು (Happy Married Life) ಬಯಸುತ್ತಾರೆ. ಆದರೆ ಅನೇಕ ಬಾರಿ ನಾವು ಜೀವನದ ಅವಸರದಲ್ಲಿ ಎಷ್ಟು ಸಿಕ್ಕಿಹಾಕಿಕೊಳ್ಳುತ್ತೇವೆಂದರೆ, ನಮ್ಮ ಸಂಬಂಧಕ್ಕೆ ಸಮಯವನ್ನು ನೀಡಲು ನಮಗೆ ಸಾಧ್ಯವಾಗುವುದಿಲ್ಲ. ದೈನಂದಿನ ಕೆಲಸ, ಮನೆ-ಕಚೇರಿ ಜವಾಬ್ದಾರಿಗಳು ಮತ್ತು ಒತ್ತಡದ ನಡುವೆ ಪ್ರೀತಿಯನ್ನು ಜೀವಂತವಾಗಿಡುವುದು ಕಷ್ಟ. ಈ ಕಾರಣಗಳಿಂದಾಗಿ, ಸಂಬಂಧದ ಬಂಧವು ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ಪ್ರತಿ ದಂಪತಿಗಳ ನಡುವೆ ಸಣ್ಣ ಜಗಳಗಳು ನಡೆಯುತ್ತವೆ. ಆದರೆ ಕೆಲವು ದಂಪತಿಗಳು ಈ ಸಣ್ಣ ವಿಷಯಗಳನ್ನು ನಿರ್ಲಕ್ಷಿಸುವ ಮೂಲಕ ತಮ್ಮ ಸಂಬಂಧಕ್ಕೆ ಪ್ರಾಮುಖ್ಯತೆ ನೀಡುತ್ತಾರೆ. ಉತ್ತಮ ಸಂಗಾತಿಯೊಂದಿಗೆ ಎಲ್ಲವೂ ಸುಲಭವೆಂದು ತೋರುತ್ತದೆ. ಅಂದಹಾಗೆ, ಪ್ರತಿಯೊಬ್ಬರೂ ಸಂಬಂಧವನ್ನು ಕಾಪಾಡಿಕೊಳ್ಳಲು ವಿಭಿನ್ನ ಮಾರ್ಗವನ್ನು ಹೊಂದಿದ್ದಾರೆ. ಆದರೆ ಹ್ಯಾಪಿ ಕಪಲ್ಸ್ ಗಳಲ್ಲಿ ಕಂಡುಬರುವ ಕೆಲವು ಅಭ್ಯಾಸಗಳಿವೆ. ಅವುಗಳ ಬಗ್ಗೆ ತಿಳಿಯೋಣ.

ಅನ್ ಕಂಡೀಶನಲ್ ಲವ್:  ಸಂತೋಷದಿಂದ ಇರುವ ಕಪಲ್ಸ್ ಒಬ್ಬರನ್ನೊಬ್ಬರು ಬೇಷರತ್ತಾಗಿ ಪ್ರೀತಿಸುತ್ತಾರೆ. ನೀವು ಯಾರನ್ನಾದರೂ ಪ್ರೀತಿಸಿದರೆ, ಅವರು ಪ್ರತಿಯಾಗಿ ನಿಮಗಾಗಿ ಏನನ್ನಾದರೂ ಮಾಡುತ್ತಾರೆ ಎಂದು ನಿರೀಕ್ಷಿಸುವುದು ನಿಜವಾದ ಪ್ರೀತಿಯಲ್ಲ. ಹ್ಯಾಪಿ ಕಪಲ್ಸ್ ಯಾವುದೇ ಬೇಡಿಕೆಯಿಲ್ಲದೆ ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ. ಅವರು ಪರಸ್ಪರರ ಸಂತೋಷವನ್ನು ನೋಡಿಕೊಳ್ಳುತ್ತಾರೆ ಮತ್ತು ಇತರರಿಗಿಂತ ತಮ್ಮ ಸಂಬಂಧಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಅವರು ಪರಸ್ಪರರ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಗೌರವಿಸುತ್ತಾರೆ.  
 

Tap to resize

ಒಬ್ಬರಿಗೊಬ್ಬರು ಸಮಯ ಕೊಡಿ: ಯಾವುದೇ ಸಂಬಂಧದಲ್ಲಿ ಒಬ್ಬರಿಗೊಬ್ಬರು ಸಮಯ ನೀಡುವುದು ಬಹಳ ಮುಖ್ಯ. ಒಟ್ಟಿಗೆ ಸಮಯ ಕಳೆಯುವುದು ಸಂಬಂಧವನ್ನು ಬಲಪಡಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ದಿನವಿಡೀ ಮನೆ ಮತ್ತು ಕಚೇರಿ ಕೆಲಸದಲ್ಲಿ ನಿರತರಾಗಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ಸಂಗಾತಿಗಾಗಿ ಸಮಯವನ್ನು ತೆಗೆದುಕೊಳ್ಳುತ್ತಿದ್ದರೆ, ಅದು ಸಂತೋಷದ ಸಂಬಂಧದ ಲಕ್ಷಣವಾಗಿದೆ. ಹ್ಯಾಪಿ ಕಪಲ್ಸ್, ತಮ್ಮ ಬಿಡುವಿಲ್ಲದ ವೇಳಾಪಟ್ಟಿಯಲ್ಲಿಯೂ ಸಹ, ತಮ್ಮ ಸಂಗಾತಿಗಾಗಿ ಸಮಯ ಕಂಡುಕೊಳ್ಳುತ್ತಾರೆ.  

ಅಹಂ ದೂರವಿಡಿ: ಹ್ಯಾಪಿ ಲೈಫ್ ಲೀಡ್ ಮಾಡ್ತಾ ಇರೋ ಪ್ರತಿ ಕಪಲ್ಸ್ ವಿಶೇಷತೆಯೆಂದರೆ ಅವರು ತಮ್ಮ ಅಹಂ ಅನ್ನು ತಮ್ಮ ಸಂಬಂಧದ ಮಧ್ಯದಲ್ಲಿ ಬರಲು ಎಂದಿಗೂ ಬಿಡುವುದಿಲ್ಲ. ಪ್ರತಿ ದಂಪತಿಗಳಲ್ಲಿಯೂ ಜಗಳಗಳು ಸಂಭವಿಸುತ್ತವೆ, ಆದರೆ, ಜಗಳದ ನಂತರ ನೀವು ನಿಮ್ಮ ತಪ್ಪನ್ನು ಒಪ್ಪಿಕೊಂಡರೆ, ನೀವು ಹ್ಯಾಪಿ ಕಪಲ್ಸ್ ಆಗಬಹುದು. ಯಾವುದಾದರೂ ವಿಷಯದ ಬಗ್ಗೆ ಕೆಟ್ಟದಾಗಿ ಭಾವಿಸಿದರೆ, ಅದನ್ನು ಸಂಗಾತಿಗೆ ಮುಕ್ತವಾಗಿ ಹೇಳಿ, ಆದರೆ ಪ್ರೀತಿಯಿಂದ ಹೇಳಿ. ಇದು ಯಾವಾಗಲೂ ಸಂಬಂಧದಲ್ಲಿ ಪ್ರೀತಿಯನ್ನು ಉಳಿಸಿಕೊಳ್ಳುತ್ತದೆ. 

ಫ್ರೀಡಂ ಮತ್ತು ಸ್ಪೇಸ್ ನೀಡಿ: ಒಬ್ಬರಿಗೊಬ್ಬರು ಜೊತೆಗಿದ್ದರೂ, ಇತರ ವ್ಯಕ್ತಿಗೆ ಫ್ರೀಡಂ ಮತ್ತು ಸ್ಪೇಸ್ ನೀಡುವುದು ಹ್ಯಾಪಿ ದಾಂಪತ್ಯ ಜೀವನದ ಲಕ್ಷಣವಾಗಿದೆ. ಹ್ಯಾಪಿ ಕಪಲ್ಸ್ ಪರಸ್ಪರರ ವೈಯಕ್ತಿಕ ಸ್ಪೇಸ್ ಗೌರವಿಸುತ್ತಾರೆ. ಮಧ್ಯಪ್ರವೇಶಿಸುವುದು, ಫೋನ್ ಚೆಕ್ ಮಾಡೋದು ಅಥವಾ ಎಲ್ಲವನ್ನೂ ಅನುಮಾನಿಸುವುದು, ಈ ಅಭ್ಯಾಸಗಳು ಇವರಲ್ಲಿ ಎಂದಿಗೂ ಕಂಡುಬರುವುದಿಲ್ಲ.ಈ ದಂಪತಿಗಳು ಎಂದಿಗೂ ಒಬ್ಬರನ್ನೊಬ್ಬರು ಬದಲಾಯಿಸಲು ಪ್ರಯತ್ನಿಸುವುದಿಲ್ಲ.  
 

Image: Getty Images

ಸಪೋರ್ಟ್: ಹ್ಯಾಪಿ ಕಪಲ್ಸ್ ಯಾವಾಗಲೂ ಒಬ್ಬರನ್ನೊಬ್ಬರು ಬೆಂಬಲಿಸುತ್ತಾರೆ. ನಿಮ್ಮ ಸಂಬಂಧ ಸಂತೋಷದಿಂದ ಕೂಡಿರಬೇಕು ಎಂದು ನೀವು ಬಯಸಿದರೆ, ಸಂಗಾತಿಯ ಉತ್ತಮ ಸ್ನೇಹಿತನಾಗಿರಿ. ಹ್ಯಾಪಿ ಕಪಲ್ಸ್ ಯಾವಾಗಲೂ ಪರಸ್ಪರರ ಸ್ನೇಹಿತರಾಗಿರುತ್ತಾರೆ. ನಿಮ್ಮ ಸಂಗಾತಿಯ ಬೆಳವಣಿಗೆಯಲ್ಲಿ ಅವರಿಗೆ ಸಹಾಯ ಮಾಡಿ ಮತ್ತು ಬೆಂಬಲಿಸಿ. ನಿಮ್ಮ ನಡುವೆ ಸ್ಪರ್ಧೆಯ ಭಾವನೆ ಬರಲು ಎಂದಿಗೂ ಬಿಡಬೇಡಿ. 

ಪ್ರತಿ ದಂಪತಿಗಳು ತಮ್ಮ ಸಂಬಂಧವನ್ನು ವಿಭಿನ್ನವಾಗಿ ತೂಗಿಸಿಕೊಂಡು ಹೋಗುತ್ತಾರೆ. ಆದರೆ, ನೀವು ನಿಮ್ಮ ಸಂಗಾತಿಯ ಉತ್ತಮ ಸ್ನೇಹಿತನಾಗಿದ್ದರೆ, ಪರಸ್ಪರರ ಬೆಂಬಲಕ್ಕೆ ನಿಂತರೆ ಆವಾಗ ಮಾತ್ರ ನೀವು ಹ್ಯಾಪಿ ಕಪಲ್ಸ್ ಆಗಲು ಸಾಧ್ಯ.. ಈ ಎಲ್ಲಾ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ, ನೀವು ಸಂತೋಷದ ದಾಂಪತ್ಯ ಜೀವನ ನಿಮ್ಮದಾಗಿಸಬಹುದು

Latest Videos

click me!