ಖುಷಿ ಕಪೂರ್ ವೇದಾಂಗ್ ಲವ್ ಸ್ಟೋರಿಗೆ ಬಂತು ರೆಕ್ಕೆ ಪುಕ್ಕ: ಒಬ್ಬರಾದ ನಂತರ ಒಬ್ಬರಂತೆ ವಿಮಾನವೇರಿದ ಲವ್‌ಬರ್ಡ್ಸ್‌

First Published | Dec 31, 2023, 5:39 PM IST

ಕಳೆದ ಕೆಲ ದಿನಗಳಿಂದ ಬಾಲಿವುಡ್ ನಟರು ಒಬ್ಬರಾದ ಮೇಲೆ ಒಬ್ಬರಂತೆ ಹೊಸ ವರ್ಷಾಚರಣೆಗಾಗಿ ವಿದೇಶಕ್ಕೆ ಹಾರುತ್ತಿದ್ದಾರೆ. ಪಪಾರಾಜಿಗಳಿಗೆ ತಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂಬ ವಿಚಾರ ತಿಳಿಸದೆ ಒಬ್ಬೊಬ್ಬರೇ ವಿಮಾನವೇರುತ್ತಿದ್ದಾರೆ. ಅದೇ ರೀತಿ ಈಗ ದಿ ಅರ್ಚೀಸ್ ಸಿನಿಮಾದ ಖುಷಿ ಕಪೂರ್ ಹಾಗೂ ವೇದಾಂಗ್ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದು, ಹೊಸ ಗಾಸಿಪೊಂದು ಹಬ್ಬಿದೆ. 

ದಿ ಆರ್ಚೀಸ್ ಸಿನಿಮಾದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ಸ್ಟಾರ್‌ ಕಿಡ್‌ಗಳಲ್ಲಿ  ಶ್ರೀದೇವಿ ಹಾಗೂ ಬೋನಿ ಕಪೂರ್ ಅವರ ಪುತ್ರಿ ಖುಷಿ ಕಪೂರ್ ಕೂಡ ಒಬ್ಬರು. ಇವರು ಈಗ ದಿ ಆರ್ಚೀಸ್‌ನಲ್ಲಿ ನಟಿಸಿದ್ದ ಮತ್ತೊರ್ವ ನಟ ಯುವ ಮಾಡೆಲ್ ವೇದಾಂಗ್ ರೈನಾ ಜೊತೆ ಡೇಟಿಂಗ್‌ನಲ್ಲಿದ್ದಾರೆ ಎಂಬ ಊಹಾಪೋಹಾಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಹರಿದಾಡುತ್ತಿದೆ. 

ಇದಕ್ಕೆ ಪುಷ್ಠಿ ನೀಡುವಂತೆ ಈ ಜೋಡಿ ಒಬ್ಬರ ನಂತರ ಒಬ್ಬರಂತೆ ಹೊಸವರ್ಷ ಆಚರಿಸಲು ವಿದೇಶಕ್ಕೆ ತೆರಳುವುದಕ್ಕೆ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದು ಈ ಗಾಸಿಪ್‌ಗೆ ಮತ್ತಷ್ಟು ರೆಕ್ಕೆಪುಕ್ಕ ಹುಟ್ಟಿಕೊಂಡಿದೆ. 

Tap to resize

ದಿ ಆರ್ಚೀಸ್ ಸಿನಿಮಾದಲ್ಲಿ ನಟಿಸಿರುವ ಮತ್ತೊಂದು ಸ್ಟಾರ್ ಕಿಡ್ ಜೋಡಿಯಾಗಿರುವ ಶಾರುಖ್ ಪುತ್ರಿ ಸುಹಾನ ಖಾನ್ ಹಾಗೂ ಅಮಿತಾಭ್ ಮೊಮ್ಮಗ ಅಗಸ್ತ್ಯ ನಂದ ಡೇಟಿಂಗ್‌ನಲ್ಲಿ ಇರುವ ವಿಚಾರ ಈಗಾಗಲೇ ಸಾಕಷ್ಟು ಸದ್ದು ಮಾಡಿತ್ತು.

ಈ ಮಧ್ಯೆ ಈಗ ಖುಷಿ ಕಪೂರ್ ಹಾಗೂ ವೇದಾಂಗ್ ರೈನಾ ಕೂಡ ಪರಸ್ಪರ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಆರ್ಚೀಸ್‌ ಸಿನಿಮಾದ ರೆಗ್ಗಿ ಪಾತ್ರಕ್ಕೆ ನಿರ್ದೇಶಕಿ ಜೋಯಾ ಅಖ್ತರ್ ಅವರು ವೇದಾಂಗ್ ರೈನಾ ಅವರನ್ನು ಆಯ್ಕೆ ಮಾಡಿದ್ದರು. 

ದಿ ಆರ್ಚೀಸ್‌ ಸಿನಿಮಾಗೆ ನೋಡುಗರು ಹಾಗೂ ಸಿನಿಮಾ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೂ ಖುಷಿ ಕಪೂರ್ ನಟನೆಗೆ ಒಳ್ಳೆ ಸ್ಪಂದನೆ ವ್ತಕ್ತವಾಗಿತ್ತು. ಈ ಸಿನಿಮಾದಲ್ಲಿ ರೆಗ್ಗಿ ಪಾತ್ರ ಮಾಡಿದ ವೇದಾಂಗ್ ರೈನಾ ಅಭಿನಯಕ್ಕೂ ಒಳ್ಳೆಯ ಸ್ಪಂದನೆ ವ್ಯಕ್ತವಾಗಿತ್ತು.  

 ಈ ಮಧ್ಯೆ ಈ ಕೋಸ್ಟಾರ್‌ಗಳು ಹಾಗೂ ಸುಹಾನಾ ಖಾನ್ ಹಾಗೂ ಅಗಸ್ತ್ಯ ನಂದಾ ಸ್ನೇಹಿತರು ಆಗಿರುವ  ವೇದಾಂಗ್, ಖುಷಿ ಜೊತೆ ಲವ್‌ನಲ್ಲಿ ಬಿದ್ದಿದ್ದಾರೆ ಎಂಬ ಗಾಸಿಪ್ ಬಾಲಿವುಡ್‌ನಲ್ಲಿ ಬಹಳ ಜೋರಾಗಿಯೇ ಸದ್ದು ಮಾಡ್ತಿದೆ.

ಇನ್ನು ಈ ವೇದಾಂಗ್ ರೈನಾ ಅವರು ಸೋಶಿಯಲ್ ಮೀಡಿಯಾದಲ್ಲಿ ಬಹಳ ಪ್ರಸಿದ್ಧ ಹೆಸರಾಗಿದ್ದು,  ಹಲವು ಬ್ರಾಂಡ್‌ಗಳಿಗೆ ಮಾಡೆಲ್ ಆಗಿ ಕೆಲಸ ಮಾಡಿದ್ದಾರೆ. 2 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. 

ಆದರೆ ತಮ್ಮ ಈ ಲವ್ ಗಾಸಿಪ್ ಬಗ್ಗೆ ಖುಷಿ ಕಪೂರ್ ಮಾತ್ರ ಮೌನವಾಗಿದ್ದರೆ, ವೇದಾಂಗ್ ರೈನಾ ಮಾತ್ರ ತಾನು ದಿ ಆರ್ಚೀಸ್ ಚಿತ್ರೀಕರಣದ ಸಮಯದಲ್ಲಿ ನಾನು ಖುಷಿಯೊಂದಿಗೆ ಖುಷಿಯಾಗಿದ್ದೆ ಎಂದು ಹೇಳಿಕೊಂಡಿದ್ದಾರೆ. 

ರೈನಾ ಹೇಳುವ ಪ್ರಕಾರ, ಈ ಶ್ರೀದೇವಿ ಪುತ್ರಿ ಖುಷಿ ಕಪೂರ್ ರೈನಾಗೆ ಉತ್ತಮ ಸ್ನೇಹಿತೆ ಆದರೆ ನಾವು ಡೇಟಿಂಗ್ ಮಾಡುತ್ತಿಲ್ಲ ಎಂದು ಹೇಳಲು ಬಯಸುತ್ತೇನೆ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾರೆ ವೇದಾಂಗ್ ರೈನಾ. ಪ್ರಸ್ತುತ ತಾನು ಸಿಂಗಲ್ ಆಗಿದ್ದೇನೆ ಎಂದಿದ್ದಾರೆ.

ಮುಂದೆ ನನ್ನ ಜೀವನದ ಲವ್ ನನಗೆ ಸಿಗಬಹುದು ಎಂಬ ಭರವಸೆಯಲ್ಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಭರವಸೆ ಯುವನಟ ವೇದಾಂಗ್ ರೈನಾ. ಅಲ್ಲದೇ ತಾನು ತನ್ನ ಸಂಗಾತಿಯಲ್ಲಿ ಮೃದುತ್ವ, ನಿಷ್ಠೆ, ಪ್ರಮಾಣಿಕತೆ ಹಾಗೂ ಕಠಿಣಶ್ರಮವನ್ನು ನಿರೀಕ್ಷಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

Vedang Rain & Khushi Kapoor

ಇನ್ನು ಆರ್ಚೀಸ್ ಅವರ ಪ್ರೀಮಿಯರ್ ಶೋದಲ್ಲಿ ಈ ನಟಿ ಖುಷಿ ಕಪೂರ್ ತನ್ನ ಅಮ್ಮ ಬಾಲಿವುಡ್ ಹಿರಿಯ ನಟಿ ಶ್ರೀದೇವಿ ಅವರ ಗವನ್ ಧರಿಸಿ ದಿ ಆರ್ಚೀಸ್ ಪ್ರೀಮಿಯರ್ ಶೋದಲ್ಲಿ ಭಾಗವಹಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಖುಷಿ ಕಪೂರ್  ಅಮ್ಮನ ಗೌರವಾರ್ಥ ಆಕೆಯ ಬಟ್ಟೆ ಧರಿಸಿ ಆಕೆಯನ್ನು ಆ ವಿಶೇಷ ದಿನದಂದು ನೆನೆಸಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ. 

Latest Videos

click me!