Chanakya Niti: ಚಾಣಕ್ಯರು ತಮ್ಮ ನೀತಿಯಲ್ಲಿ ಮುಖವಾಡ ಹಾಕಿಕೊಂಡು ಯಾಮಾರಿಸುತ್ತಿರುವವರು ಯಾರು?, ನೀತಿವಂತರು ಯಾರೆಂದು ವ್ಯತ್ಯಾಸ ಗುರುತಿಸಲು ಸರಳ ಮತ್ತು ಪರಿಣಾಮಕಾರಿ ಮಾರ್ಗ ತಿಳಿಸಿದ್ದಾರೆ. ಆದ್ದರಿಂದ ಇಂದು ನಿಜವಾದ ಸ್ನೇಹಿತರು ಮತ್ತು ಮೋಸಗಾರರ ನಡುವೆ ಇರುವ ವ್ಯತ್ಯಾಸವನ್ನು ನೋಡೋಣ..
ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ಮಾನವರ ನಡವಳಿಕೆ ಅರ್ಥಮಾಡಿಕೊಳ್ಳಲು ಮತ್ತು ಮೋಸ ಮಾಡುವ ಜನರನ್ನು ಗುರುತಿಸಲು ಕೆಲವು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ವೈಯಕ್ತಿಕ ಅಥವಾ ವೃತ್ತಿಪರ ಜೀವನದಲ್ಲಿ ಯಾವುದಾದರೂ ವ್ಯಕ್ತಿಯ ನಿಜವಾದ ಸ್ವರೂಪ ಅರ್ಥಮಾಡಿಕೊಳ್ಳುವುದು ನಿಮ್ಮ ಯಶಸ್ಸಿಗೆ ಮತ್ತು ಉತ್ತಮ ಜೀವನ ಮಾಡಲು ನಿರ್ಣಾಯಕವಾಗಿದೆ. ನಿಮಗೆ ಸೂಕ್ತವಲ್ಲದ ಜನರಿಂದ ನಿಮ್ಮನ್ನು ದೂರವಿರಿಸಲು ಸಹಾಯ ಮಾಡುವ ಚಾಣಕ್ಯ ನೀತಿಯ ಪರಿಣಾಮಕಾರಿ ವಿಧಾನಗಳನ್ನು ಓದಿ.
25
ನಂಬಲು ಸಾಧ್ಯವಿಲ್ಲ
*ಮೋಸಗಾರ ಜನರು ನಿಮ್ಮ ಮುಂದೆ ಹೊಗಳುತ್ತಾರೆ. ಆದರೆ ನೀವು ಇಲ್ಲದಿರುವಾಗ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ಅದೇ ಕಷ್ಟ ಅಥವಾ ಅನಾನುಕೂಲವಾಗಿದ್ದರೂ ಸಹ ಸತ್ಯವನ್ನು ಹೇಳುವವರೇ ನಿಜವಾದ ಸ್ನೇಹಿತರು. *ಒಬ್ಬ ವ್ಯಕ್ತಿಯ ನಿಜವಾದ ಗುಣ ಅವರ ಕ್ರಿಯೆಗಳಿಂದ ತಿಳಿದುಬರುತ್ತದೆ. ಅಂದರೆ ಕಷ್ಟದ ಸಮಯದಲ್ಲಿ ನಿಮ್ಮ ಜೊತೆ ನಿಲ್ಲುವವನೇ ನಿಜವಾದ ಸ್ನೇಹಿತ, ಮತ್ತು ದೂರ ಸರಿಯುವವನನ್ನು ನಂಬಲು ಸಾಧ್ಯವಿಲ್ಲ.
35
ನಿಜವಾದ ಸ್ವರೂಪ ಬಹಿರಂಗ
*ಒಬ್ಬರ ಪ್ರಾಮಾಣಿಕತೆಯನ್ನು ಪರೀಕ್ಷಿಸಲು ಒಂದು ಪರಿಣಾಮಕಾರಿ ಮಾರ್ಗವೆಂದರೆ ಅವರಿಗೆ ಒಂದು ಸಣ್ಣ ಜವಾಬ್ದಾರಿ ಅಥವಾ ಕೆಲಸವನ್ನು ನೀಡುವುದು. ಅವರ ನಡವಳಿಕೆಯು ಅವರ ನಿಜವಾದ ಸ್ವರೂಪವನ್ನು ಬಹಿರಂಗಪಡಿಸುತ್ತದೆ. *ಮೋಸಗಾರರು ನಿಮ್ಮ ದೌರ್ಬಲ್ಯ ಬಳಸಿಕೊಳ್ಳುತ್ತಾರೆ. ಆದ್ದರಿಂದ ಮಾನಸಿಕ ಶಕ್ತಿಯನ್ನು ಕಾಪಾಡಿಕೊಳ್ಳಲು ಮತ್ತು ನಿಮ್ಮ ಭಾವನೆಗಳನ್ನು ನಿಯಂತ್ರಿಸಲು ಇದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
*ಮಾನಸಿಕವಾಗಿ, ಆರ್ಥಿಕವಾಗಿ ಮತ್ತು ಭಾವನಾತ್ಮಕವಾಗಿ ಬಲಶಾಲಿಯಾಗಿರುವುದು ನಿಮ್ಮನ್ನು ವಂಚಕರಿಂದ ಸುರಕ್ಷಿತವಾಗಿರಿಸುತ್ತದೆ.
55
ಚಾಣಕ್ಯನ ಮಾತು ಈ ನೆನಪಿಡಿ
*ನೀವು ಇಲ್ಲದಿರುವಾಗ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವವನೇ ನಿಮ್ಮ ದೊಡ್ಡ ಶತ್ರು. *ನಿಮ್ಮ ಕಷ್ಟದ ಸಮಯದಲ್ಲಿ ನಿಮ್ಮನ್ನು ಬೆಂಬಲಿಸದವನು ಎಂದಿಗೂ ನಿಮ್ಮ ನಿಜವಾದ ಸ್ನೇಹಿತನಾಗಿರಲಿಲ್ಲ.