ಅಪ್ಪನ ಕುಟುಂಬದೊಂದಿಗೆ ಅಕ್ಕ ತಮ್ಮನ ಸಖತ್ ಫೋಸ್‌: ಸೈಫ್ ಅಮೃತಾ ನ್ಯೂ ವರ್ಶನ್ ಎಂದ ನೆಟ್ಟಿಜನ್ಸ್

First Published | Mar 3, 2024, 3:06 PM IST

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಮಾರಂಭಕ್ಕೆ ಸೈಫ್ ಅಲಿಖಾನ್, ಪತ್ನಿ ಹಾಗೂ ನಟಿ ಕರೀನಾ ಕಪೂರ್, ಮಕ್ಕಳಾದ ಜೇಹ್ ಹಾಗೂ ತೈಮೂರ್, ಸೈಫ್ ಮೊದಲ ಪತ್ನಿ ಮಕ್ಕಳಾದ ಇಬ್ರಾಹಿಂ ಖಾನ್ ಹಾಗೂ ಸಾರಾ ಅಲಿಖಾನ್ ಜೊತೆಯಾಗಿ ಆಗಮಿಸುವ ಮೂಲಕ ಎಲ್ಲರ ಗಮನ ಸೆಳೆದರು.

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಮಾರಂಭದಲ್ಲಿ ಮಿಂಚಿದ ಮತ್ತೊಂದು ಬಾಲಿವುಡ್‌ ಕುಟುಂಬ ಎಂದರೆ ಅದು ಸೈಫ್ ಅಲಿ ಖಾನ್ ಅವರದ್ದು, ಮೊದಲ ಪತ್ನಿ ಅಮೃತಾ ಸಿಂಗ್‌ನಿಂದ ಸೈಫ್ ದೂರ ಆದರೂ ಮೊದಲ ಪತ್ನಿಯ ಮಕ್ಕಳನ್ನು ಮಾತ್ರ ದೂರ ಮಾಡಿಲ್ಲ,

ಹಾಗೆಯೇ 2ನೇ ಪತ್ನಿಯಾಗಿರುವ ಕರೀನಾ ಕೂಡ ಸೈಫ್ ಮೊದಲ ಮಕ್ಕಳೊಂದಿಗೆ ಒಳ್ಳೆಯ ಒಡನಾಟ ಹೊಂದಿದ್ದು, ಸ್ನೇಹಿತರಂತೆ ವರ್ತಿಸುತ್ತಿದ್ದಾರೆ. ಎಲ್ಲರೂ ಜೊತೆಯಾಗಿಯೇ ಅಂಬಾನಿ ಕುಟುಂಬದ ವಿವಾಹ ಸಮಾರಂಭಕ್ಕೆ ಆಗಮಿಸಿದ್ದು, ಇವರ ಫೋಟೋಗಳು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೊತೆಗೆ ಜನರು ಸಿಕ್ಕಾಪಟ್ಟೆ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

Tap to resize

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಮಾರಂಭಕ್ಕೆ ಸೈಫ್ ಅಲಿಖಾನ್, ಪತ್ನಿ ಹಾಗೂ ನಟಿ ಕರೀನಾ ಕಪೂರ್, ಮಕ್ಕಳಾದ ಜೇಹ್ ಹಾಗೂ ತೈಮೂರ್, ಸೈಫ್ ಮೊದಲ ಪತ್ನಿ ಮಕ್ಕಳಾದ ಇಬ್ರಾಹಿಂ ಖಾನ್ ಹಾಗೂ ಸಾರಾ ಅಲಿಖಾನ್ ಜೊತೆಯಾಗಿ ಆಗಮಿಸುವ ಮೂಲಕ ಎಲ್ಲರ ಗಮನ ಸೆಳೆದರು.

ಇದರ ಜೊತೆಗೆ ಮದ್ವೆ ಧಿರಿಸಿನಲ್ಲಿ ಇಬ್ರಾಹಿಂ ಅಲಿ ಖಾನ್ ಹಾಗೂ ಸಾರಾ ಅಲಿಖಾನ್ ಸಖತ್ ಫೋಟೋ ಶೂಟ್ ನಡೆಸಿದ್ದು, ಫೋಟೋಗಳಲ್ಲಿ ಇಬ್ರಾಹಿಂ ಅಲಿ ಖಾನ್ ಸೈಫ್ ಯಂಗರ್‌ ವರ್ಶನ್ ರೀತಿ ಕಾಣಿಸ್ತಿದ್ರೆ ಇತ್ತ ಸಾರಾ ಡಿಟ್ಟೋ ಅಮ್ಮ ಅಮೃತಾ ಸಿಂಗ್‌ ರಂತೆ ಕಾಣಿಸುತ್ತಿದ್ದಾರೆ.
 

ಇವರಿಬ್ಬರು ಜೊತೆಯಾಗಿರುವ ಫೋಟೋ ನೋಡಿದ ನೆಟ್ಟಿಗರು ಇಬ್ಬರೂ ತಮ್ಮ ಅಪ್ಪ ಅಮ್ಮನ ಯಂಗರ್ ವರ್ಶನ್‌ನಂತೆ (ಯುವ ಪ್ರತಿರೂಪ) ಕಾಣಿಸುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. 

ಫೋಟೋಗಳಲ್ಲಿ ಕರೀನಾ ಕಪ್ಪು ಬಣ್ಣದ ಶೋಲ್ಡರ್ ಇಲ್ಲದ ಕತ್ತಿಲ್ಲದ ಲಾಂಗ್ ಗವನ್‌ನಲ್ಲಿ ಶೈನ್ ಆಗುತ್ತಿದ್ದು, ಕತ್ತಿಗೆ ಹಸಿರು ಹಾಗೂ ಬಿಳಿ ಕಲ್ಲುಗಳ ಸಂಯೋಜನೆ ಇರುವ ನೆಕ್‌ ಫೀಸ್ ಧರಿಸಿದ್ದಾರೆ. ಇತ್ತ ಇಬ್ರಾಹಿಂ ಅಲಿ ಖಾನ್ ಬಿಳಿ ಬಣ್ಣ ಪ್ಯಾಂಟ್ ಹಾಗೂ ಕೋಟ್ ಧರಿಸಿದ್ದು, ಬಿಳಿ ಕಪ್ಪು ಬಣ್ಣದ ಕಾಂಬಿನೇಷನ್‌ನಲ್ಲಿ ಅಕ್ಕ ತಮ್ಮ ಮಿಂಚಿದ್ದಾರೆ. 

ಇನ್ನು ಮದ್ವೆಗೆ ಜೊತೆಯಾಗಿ ಆಗಮಿಸಿದ ವೇಳೆ ಈ ಸೈಫ್ ಹಾಗೂ ಕರೀನಾ ಮಕ್ಕಳಾದ ತೈಮೂರ್  ಹಾಗೂ ಜೇಹ್ ಬಿಳಿ ಪ್ಯಾಂಟ್ ನೀಲಿ ಬಣ್ಣದ ಜುಬ್ಬಾ ಧರಿಸಿದ್ದರೆ ಇತ್ತ ಸಾರಾ ಹಾಗೂ ಇಬ್ರಾಹಿಂ ಇಬ್ಬರೂ  ಬಿಳಿ ಶರ್ಟ್ ಹಾಗೂ ನೀಲಿ ಡೆನಿಮ್ ಜೀನ್ಸ್ ಧರಿಸಿದ್ದರು. ಕರೀನಾ ಮಾತ್ರ ಎಲ್ಲರಿಗಿಂತ ಭಿನ್ನವಾಗಿ ಪಿಂಕ್  ಹಾಗೂ ಬೂದಿ ಬಣ್ಣದ ಸಲ್ವಾರ್ ಕಮೀಜ್ ಧರಿಸಿದ್ದರು. 

Saif Family


ಸೈಫ್ ಮಕ್ಕಳಾದ ಇಬ್ರಾಹಿಂ ಅಲಿಖಾನ್, ತೈಮೂರ್ ಸೇಮ್ ಸೈಫ್ ರೀತಿ ಕಾಣಿಸುತ್ತಿದ್ದು, ಇವರೆಲ್ಲರನ್ನು ಜೊತೆಯಾಗಿ ನೋಡಿದ ನೆಟ್ಟಿಗರು ಸೈಫ್ ಲಾರ್ಜ್ ಸೈಫ್ ಮೀಡಿಯಂ, ಸೈಫ್ ಎಕ್ಸ್ಟ್ರಾ ಸ್ಮಾಲ್ ಎಂದು ಕಾಮೆಂಟ್ ಮಾಡಿದ್ದಾರೆ.

ಮತ್ತೆ ಕೆಲವರು ಸೈಫ್ ಕಿರಿಮಗ ಜೇಹ್ ಕರೀನಾ ರೀತಿ ಕಾಣಿಸುತ್ತಿದ್ದಾನೆ. ಈ ಫೋಟೋದಲ್ಲಿ ಮೂವರು ಸೈಫ್ ಇಬ್ಬರು ಕರೀನಾ ಕಪೂರ್, ಒಬ್ಬರು ಅಮೃತಾ ಸಿಂಗ್ ಕಾಣಬಹುದು ಎಂದು ಕಾಮೆಂಟ್ ಮಾಡಿದ್ದಾರೆ.

Latest Videos

click me!