ಸೆಕ್ಸ್‌ಗಾಗಿ ಪದೆ ಪದೇ ಫ್ಲೇವರ್ಡ್ ಕಾಂಡೋಮ್ ಬಳಸ್ತೀರಾ? ಅಪಾಯದ ಬಗ್ಗೆಯೂ ಇರಲಿ ಅರಿವು

First Published | Jun 30, 2024, 5:47 PM IST

ಪರಿಮಳಯುಕ್ತ ಅಥವಾ ಫ್ಲೇವರ್ಡ್ ಕಾಂಡೋಮ್ಸ್ ಸಾಮಾನ್ಯವಾಗಿ ಲ್ಯಾಟೆಕ್ಸ್ ಅಥವಾ ಪಾಲಿಯುರೆಥೇನ್ನಿಂದ ತಯಾರಿಸಲಾಗುತ್ತೆ. ಹಾಗಾಗಿ ಇದನ್ನ ನೀವು ಯಥೆಚ್ಚವಾಗಿ ಬಳಸಿದ್ರೆ ಸಮಸ್ಯೆ ಗ್ಯಾರಂಟಿ. 
 

ಮಧುರ ದಾಂಪತ್ಯ ಜೀವನಕ್ಕೆ ಲೈಂಗಿಕತೆ ಅನ್ನೋದು ತುಂಬಾನೆ ಮುಖ್ಯ. ಇಂದಿನ ಜನರಂತೂ ತಮ್ಮ ಸೆಕ್ಸ್ ಲೈಫನ್ನು ಬೇರೆ ಬೇರೆ ರೀತಿಯಲ್ಲಿ ಎಂಜಾಯ್ ಮಾಡೋದಕ್ಕೆ ಇಷ್ಟ ಪಡ್ತಾರೆ. ಅದರಲ್ಲೂ ಮೌಖಿಕ ಲೈಂಗಿಕತೆಗೆ (oral sex) ಆಹ್ಲಾದಕರ ರುಚಿ ಮತ್ತು ವಾಸನೆಯನ್ನು ಸೇರಿಸಲು ಹೆಚ್ಚಾಗಿ ಜನ ಫ್ಲೇವರ್ಡ್ ಕಾಂಡೋಮ್ ಗಳನ್ನ ಬಳಸ್ತಾರೆ, ಇದು ಜೋಡಿಗಳಿಬ್ಬರಿಗೂ ಅಹ್ಲಾದಕರ ಅನುಭವ ನೀಡುತ್ತೆ. ಆದರೆ ಇದನ್ನ ಪದೇ ಪದೇ ಬಳಕೆ ಮಾಡೋದು ಒಳ್ಳೆಯದೇ ಎನ್ನುವ ಪ್ರಶ್ನೆ ಬಂದರೆ, ಖಂಡಿತಾ ಅದಕ್ಕೆ ಉತ್ತರ ನೋ ಆಗಿರುತ್ತೆ. 

ನಿಮ್ಮ ಸೆಕ್ಸ್ ಅನಂದವನ್ನು ಇಮ್ಮಡಿಗೊಳಿಸುವ ಈ ಫ್ಲೇವರ್ಡ್ ಕಾಂಡೋಮ್ಸ್ (flavoured condoms) ಯೀಸ್ಟ್ ಸೋಂಕುಗಳು ಅಥವಾ ಇತರ ಯೋನಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅಪಾಯಗಳನ್ನು ಅರ್ಥಮಾಡಿಕೊಳ್ಳಲು, ಪರಿಮಳಯುಕ್ತ ಕಾಂಡೋಮ್‌ಗಳಲ್ಲಿರುವ ಪದಾರ್ಥಗಳು ಮತ್ತು ವಸ್ತುಗಳನ್ನು ನೋಡುವುದು ಅತ್ಯಗತ್ಯ.
 

Latest Videos


ಫ್ಲೇವರ್ಡ್ ಕಾಂಡೋಮ್ ಗಳು ಸಾಮಾನ್ಯ ಕಾಂಡೋಮ್ ಗಳಿಗಿಂತ ಹೇಗೆ ಭಿನ್ನವಾಗಿವೆ?
ಫ್ಲೇವರ್ಡ್ ಕಾಂಡೋಮ್ ಅನ್ನು ಸಾಮಾನ್ಯವಾಗಿ ಲ್ಯಾಟೆಕ್ಸ್ ಅಥವಾ ಪಾಲಿಯುರೆಥೇನ್ನಿಂದ ತಯಾರಿಸಲಾಗುತ್ತೆ ಮತ್ತು ಅದಕ್ಕೆ ಫ್ಲೇವರ್ಡ್ ಏಜೆಂಟ್ ಇರೋ ಅಂಟನ್ನು ಸವರುತ್ತಾರೆ, ಇದು ಹೆಚ್ಚಾಗಿ ಒಂದು ರೀತಿಯ ಸಕ್ಕರೆ ಅಥವಾ ಕೃತಕ ಸಿಹಿ. ಈ ಕಾಂಡೋಮ್ ಗಳನ್ನು ಮುಖ್ಯವಾಗಿ ಮೌಖಿಕ ಲೈಂಗಿಕತೆಗಾಗಿ ವಿನ್ಯಾಸಗೊಳಿಸಲಾಗಿದೆ, ಇದು ಹೆಚ್ಚು ಆಹ್ಲಾದಕರ ರುಚಿ ಮತ್ತು ಫ್ಲೇವರ್ ನೀಡುತ್ತದೆ. ರುಚಿಕರವಾದ ಹಣ್ಣು, ಚಾಕ್ಸೆಟ್ ಮತ್ತು ಕ್ಯಾಂಡಿಯಿಂದ ಹಿಡಿದು ಅನೇಕ ವಿಧದ ಫ್ಲೇವರ್ಸ್ ಸದ್ಯ ಮಾರ್ಕೆಟಲ್ಲಿ ಲಭ್ಯವಿದೆ. ಇವುಗಳನ್ನ ಲ್ಯಾಟೆಕ್ಸ್ ವಾಸನೆ ಬಾರದಿರಲು ಮತ್ತು ಲೈಂಗಿಕ ಅನುಭವವನ್ನು ಹೆಚ್ಚಿಸಲು ಬಳಸಲಾಗುತ್ತೆ.

ಫ್ಲೇವರ್ಡ್ ಕಾಂಡೋಮ್ ಬಳಸೋದ್ರಿಂದ ಏನೆಲ್ಲಾ ಸಮಸ್ಯೆ ಕಾಡುತ್ತೆ ನೊಡೋಣ
ಯೋನಿಯ pH ತೊಂದರೆಗೊಳಗಾಗಬಹುದು

ಫ್ಲೇವರ್ಡ್ ಕಾಂಡೋಮ್ ರುಚಿಯನ್ನು ನೀಡಲು ಗ್ಲೂಕೋಸ್ ಅಥವಾ ಫ್ರಕ್ಟೋಸ್ನಂತಹ ಸಕ್ಕರೆಗಳನ್ನು ಬಳಸಲಾಗುತ್ತೆ. ಈ ಸಕ್ಕರೆಗಳು ಯೋನಿಯ ಸುತ್ತಮುತ್ತಲೂ ಸಂಪರ್ಕಕ್ಕೆ ಬಂದಾಗ, ಅವು ಅಸಮತೋಲನಕ್ಕೆ ಕಾರಣವಾಗಬಹುದು. ಯೋನಿಯು ಸೂಕ್ಷ್ಮ ಪಿಎಚ್ ಸಮತೋಲನ ಮತ್ತು ನಿರ್ದಿಷ್ಟ ಸೂಕ್ಷ್ಮಜೀವಿಯನ್ನು ಹೊಂದಿದೆ, ಇದು ಸಕ್ಕರೆಯಿಂದ ಅಡ್ಡಿಯಾಗಬಹುದು, ಇದು ಯೀಸ್ಟ್ ಅತಿಯಾದ ಬೆಳವಣಿಗೆಗೆ ಕಾರಣವಾಗುತ್ತೆ ಮತ್ತು ಯೀಸ್ಟ್ ಸೋಂಕಿಗೂ (yeast infection) ಕಾರಣವಾಗುತ್ತೆ.

ಯೋನಿ ತುರಿಕೆ ಮತ್ತು ಸೋಂಕು
ಕೆಲವು ಫ್ಲೇವರ್ಡ್ ಕಾಂಡೋಮ್ಸ್ ಸಕ್ಕರೆ ಬದಲು ಕೃತಕ ಸಿಹಿಯನ್ನು ಬಳಸುತ್ತೇವೆ. ಆದರೆ, ಅವು ಯೀಸ್ಟ್ ಸೋಂಕನ್ನು ಪಡೆಯುವ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು. ಅವು ವಜೈನಾದ ಸುತ್ತಲೂ ಸೂಕ್ಷ್ಮ ಚರ್ಮ ಮತ್ತು ಲೋಳೆಯ ಪೊರೆಗಳನ್ನು ಕಿರಿಕಿರಿಗೊಳಿಸಬಹುದು. ಇದರಿಂದ ಇನ್ ಫೆಕ್ಷನ್ ಉಂಟಾಗೋ ಎಲ್ಲಾ ಸಾಧ್ಯತೆ ಇದೆ. 

ಅಲರ್ಜಿ ಕೂಡ ಆಗಬಹುದು
ಫ್ಲೇವರ್ಡ್ ಕಾಂಡೋಮಿನಲ್ಲಿ ಬಳಸುವ ಫ್ಲೇವರ್ ಏಜೆಂಟ್ಗಳು ಮತ್ತು ಇತರ ರಾಸಾಯನಿಕಗಳು ಕೆಲವು ವ್ಯಕ್ತಿಗಳಲ್ಲಿ ಅಲರ್ಜಿ (allergy) ಉಂಟು ಮಾಡಬಹುದು. ತುರಿಕೆ, ಕೆಂಪಾಗುವಿಕೆ, ಊತ ಮತ್ತು ಉರಿ ಮೊದಲಾದ ರೋಗ ಲಕ್ಷಣಗಳು ಕಾಣಿಸಿಕೊಳ್ಳಬಹುದು, ಇದು ಯೀಸ್ಟ್ ಸೋಂಕುಗಳು ಸೇರಿದಂತೆ ಇತರ ಸೋಂಕುಗಳಿಗೆ ಕಾರಣವಾಗಬಹುದು.

ಫ್ಲೇವರ್ಡ್ ಕಾಂಡೋಮ್ ನಿಂದಾಗುವ ಅಪಾಯ ತಪ್ಪಿಸೋದು ಹೇಗೆ? 
ಇದಕ್ಕಾಗಿ ಮಾತ್ರ ಬಳಸಿ

ಫ್ಲೇವರ್ಡ್ ಕಾಂಡೋಮ್ ಓರಲ್ ಸೆಕ್ಸಿಗಾಗಿ ಡಿಸೈನ್ ಮಾಡಲಾಗಿದೆ. ಯೋನಿ ಅಥವಾ ವಜೈನಲ್ ಪೆನೆಟ್ರೇಶನ್‌ಗೆ ಅಲ್ಲ. ಹಾಗಾಗಿ ಇವುಗಳನ್ನು ಬಳಸುವುದನ್ನು ತಪ್ಪಿಸಿ, ಇದರಿಂದ ಸಕ್ಕರೆಗಳು ಮತ್ತು ಇತರ ಕಿರಿಕಿರಿ ಉಂಟುಮಾಡುವ ವಸ್ತುಗಳು ವಜೈನಲ್ ಇನ್’ಫೆಕ್ಷನ್ ಉಂಟು ಮಾಡಲ್ಲ. 

ಬಳಸುವ ಮೊದಲು ಪದಾರ್ಥಗಳನ್ನು ಪರಿಶೀಲಿಸಿ
ಫ್ಲೇವರ್ಡ್ ಕಾಂಡೋಮ್ ಗಳನ್ನು ಬಳಸುವ ಮೊದಲು, ಅವುಗಳಲ್ಲಿ ಯಾವ ರೀತಿಯ ವಸ್ತುಗಳನ್ನು ಬಳಸಲಾಗಿದೆ ಅನ್ನೋದನ್ನು ಖಚಿತಪಡಿಸಿ. ಕಿರಿಕಿರಿ ಉಂಟುಮಾಡದ ಸಿಹಿಕಾರಕಗಳನ್ನು ಹೊಂದಿರುವ ಅಥವಾ ಅಗತ್ಯವಿದ್ದಾಗ ಯೋನಿ ಬಳಕೆಗೆ ಸುರಕ್ಷಿತವೆಂದು ಲೇಬಲ್ ಮಾಡಲಾದ ಉತ್ಪನ್ನಗಳನ್ನ ಮಾತ್ರ ಆರಿಸಿ.

ಪರ್ಸನಲ್ ಹೈಜಿನ್ ಮುಖ್ಯ
ಫ್ಲೇವರ್ಡ್ ಕಾಂಡೋಮ್ ಬಳಸಿದ ನಂತರ, ಪರ್ಸನಲ್ ಹೈಜಿನ್ (personal hygine) ಕಾಪಾಡಿಕೊಳ್ಳೋದು ಬಹಳ ಮುಖ್ಯ. ಯಾವುದೇ ಶೇಷವನ್ನು ತೆಗೆದುಹಾಕಲು ನಿಮ್ಮ ಬಾಯಿ ಮತ್ತು ಜನನಾಂಗದ ಪ್ರದೇಶವನ್ನು ನೀರಿನಿಂದ ತೊಳೆಯಿರಿ. ಇದು ನೈಸರ್ಗಿಕ ಪಿಹೆಚ್ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಕಿರಿ ಕಿರಿ ಉಂಟಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತೆ. 

ಫ್ಲೇವರ್ ಲೆಸ್ ಕಾಂಡೋಮ್ ಆಯ್ಕೆ ಮಾಡಿ
ಸೋಂಕಿನ ಅಪಾಯದ ಬಗ್ಗೆ ನಿಮಗೆ ಕಾಳಜಿ ಇದ್ದರೆ, ಸೆಕ್ಸ್ ಮಾಡೋದಕ್ಕೆ ಫ್ಲೇವರ್ ಲೆಸ್ ಕಾಂಡೋಮ್ (flavourless condom) ಬಳಸೋದು ಉತ್ತಮ. ಯಾವುದೇ ಹೆಚ್ಚುವರಿ ರುಚಿಯಿಲ್ಲದೆ ಸುರಕ್ಷಿತ ಮತ್ತು ಎಫೆಕ್ಟೀವ್ ಸೆಕ್ಸ್ ಗಾಗಿಯೇ ತಯಾರಿಸಿದಂತಹ ಹಲವು ಕಾಂಡೋಮ್ ಗಳು ಲಭ್ಯವಿದೆ. 
 

click me!