ಆಶ್ಚರ್ಯಕರ ಸಂಗತಿ ಏನು ಅಂದ್ರೆ ಒಡಹುಟ್ಟಿದವರೊಂದಿಗೆ ನಿರಂತರವಾಗಿ ಜಗಳವಾಡುವುದನ್ನು ಈಗ ಆರೋಗ್ಯಕರವೆಂದು ಪರಿಗಣಿಸಲಾಗಿದೆ, ಅದು ಹೇಗೆ?..... ನೋಡೋಣ ಬನ್ನಿ.
ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಸಂಶೋಧಕರ ಪ್ರಕಾರ , ಚಿಕ್ಕವರಿದ್ದಾಗ ನಮ್ಮ ಒಡಹುಟ್ಟಿದವರೊಂದಿಗೆ ನಾವು ಮಾಡಿದ ಜಗಳಗಳು ವಯಸ್ಕರಾದಂತೆ ನಮ್ಮ ಸೂಕ್ತ ಮತ್ತು ಮಾನಸಿಕ ಮತ್ತು ಭಾವನಾತ್ಮಕ ಬೆಳವಣಿಗೆಗೆ ಕಾರಣಗಳಾಗಿವೆ.
ಐದು ವರ್ಷಗಳವರೆಗೂ ನಡೆದ ಈ ಸಂಶೋಧನೆಗೆ 'ಟೋಡ್ಡ್ಬಾರ್ಸ್ ಅಪ್' ಎಂದು ಹೆಸರಿಸಲಾಗಿದೆ ಮತ್ತು ನೀವು ಚಿಕ್ಕವರಿದ್ದಾಗ ನಿಮ್ಮ ಒಡಹುಟ್ಟಿದವರೊಂದಿಗೆ ಮಾಡುತ್ತಿದ್ದ ಪೈಪೋಟಿ ನಿಮ್ಮ ಸಾಮಾಜಿಕ ಕೌಶಲ್ಯಗಳನ್ನು ಉತ್ತಮವಾಗಿ ಬೆಳೆಸಲು ಸಹಾಯ ಮಾಡುತ್ತದೆ ಎಂದು ಸಹ ತೀರ್ಮಾನಿಸಿದೆ.
ನಿಮ್ಮ ಹೆತ್ತವರಿಗೆ ಯಾರು ಸರಿ ಎಂದು ಸಾಬೀತುಪಡಿಸಲು ನೀವಿಬ್ಬರೂ ಸ್ಪರ್ಧಿಸಿದ್ದು ನೆನಪಿದೆಯಾ? ಕಿರಿಯರು ಪ್ರತಿಯೊಂದು ವಾಗ್ವಾದದಲ್ಲಿ ಗೆಲ್ಲಲು ತುಂಬಾ ಕಷ್ಟಪಟ್ಟು ಪ್ರಯತ್ನಿಸುತ್ತಿದ್ದರು, ಅಲ್ವಾ??.
ಅಧ್ಯಯನದ ಪ್ರಕಾರ, ಒಡಹುಟ್ಟಿದವರು ಜಗಳವಾಡುವಾಗ, ಅವರ ಮಾತುಕತೆಯು ಸರಿಯಾದ ಮಾನಸಿಕ ಬೆಳವಣಿಗೆಯನ್ನು ಹೆಚ್ಚಿಸಲು ಬಹಳ ಮುಖ್ಯವಾದ ಸಾಧನವಾಗಿದೆ. ಎಲ್ಲಿಯವರೆಗೆ ಜಗಳಗಳು ಹೆಚ್ಚು ವಸ್ತುನಿಷ್ಠ ರೀತಿಯಲ್ಲಿ ಪರಿಹರಿಸಲ್ಪಡುತ್ತವೆಯೋ ಅಲ್ಲಿಯವರೆಗೆ, ಇಬ್ಬರೂ ಒಡಹುಟ್ಟಿದವರು ತಮ್ಮ ಮಾನಸಿಕ ಬೆಳವಣಿಗೆ ಮತ್ತು ಅವರ ಅರಿವಿನ ಮೇಲೆ ಉತ್ತಮ ಹಿಡಿತ ಸಾಧಿಸುವ ಅವಕಾಶವಿದೆ.
ಈ ಅಧ್ಯಯನದ ಸಮಯದಲ್ಲಿ ಒಟ್ಟು 140 ಮಕ್ಕಳನ್ನು ಗಮನಿಸಲಾಯಿತು, ಮತ್ತು ಒಡಹುಟ್ಟಿದವರು ಒಟ್ಟಿಗೆ ಬೆಳೆಯುವಾಗ ಪರಸ್ಪರರ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಾರೆ ಎಂದು ತೀರ್ಮಾನಿಸಲಾಯಿತು. ಸಹಜವಾಗಿ, ಅದು ಇಬ್ಬರು ಒಡಹುಟ್ಟಿದವರ ನಡುವಿನ ಆರೋಗ್ಯಕರ ಗಡಿಯನ್ನು ನಿರ್ಧರಿಸುತ್ತದೆ.
ಅವರು ವಯಸ್ಸಾದಾಗ ಒಬ್ಬರನ್ನೊಬ್ಬರು ತುಂಬಾ ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಕಾರಿಯಾಗಿದೆ. ಆದ್ದರಿಂದ ಮಗುವಾಗಿದ್ದಾಗ ನೀವು ನಿಮ್ಮ ಒಡಹುಟ್ಟಿದವರಿಂದ ಪಡೆದ ಎಲ್ಲಾ ಪೆಟ್ಟುಗಳು ನೀವು ಈಗ ಸಮತೋಲಿತ ವ್ಯಕ್ತಿಯಾಗಿಸಲು ಸಹಾಯಮಾಡಿರಬಹುದು ಅಲ್ವಾ??
ಆದರೆ ಒಡಹುಟ್ಟಿದವರ ಪೈಪೋಟಿ ಪ್ರೌಢವಸ್ಥೆಗೆ ದಾಟಿದರೆ, ಇದರಿಂದ ಭಾವನಾತ್ಮಕವಾಗಿ ಬೆಳೆಯಲು ಸಾಧ್ಯವಿಲ್ಲ. ಆದರೆ ಅದು ಕಾಲಾನಂತರದಲ್ಲಿ ಪ್ರಬುದ್ಧವಾಗುವ ಸಂಬಂಧದ ಪ್ರಕಾರವಾಗಿದ್ದರೆ ಮತ್ತು ನೀವು ವಯಸ್ಸಾದಂತೆ ಎಲ್ಲಾ ವ್ಯತ್ಯಾಸಗಳನ್ನು ದೂರವಿಟ್ಟರೆ, ಖಂಡಿತವಾಗಿಯೂ ಉತ್ತಮ ವ್ಯಕ್ತಿಯಾಗುತ್ತೀರಿ ಮತ್ತು ಖಂಡಿತವಾಗಿಯೂ, ನಿಮ್ಮ ಒಡಹುಟ್ಟಿದವರ ಜೊತೆಯಾಗಿ ನಿಲ್ಲುತ್ತೀರಿ.
ಸಹಜವಾಗಿ, ಒಡಹುಟ್ಟಿದವರ ಪೈಪೋಟಿಗಳು ಮಿತಿ ಮೀರಿದರೆ,ಅವುಗಳು ಹೆಚ್ಚು ಪ್ರಬಲ ಮತ್ತು ಅಪಾಯಕಾರಿಯಾಗಿರುತ್ತದೆ. ಆದರೆ ನಿಮ್ಮ ಒಡಹುಟ್ಟಿದವರೊಂದಿಗೆ ನೀವು ಆರೋಗ್ಯಕರ ಜಗಳವಾಡುತ್ತಿದ್ದರೆ ಅಥವಾ ಬೆಳೆಯುತ್ತಿರುವಾಗ ಅವರನ್ನು ಹೊಂದಿಕೊಂಡು ಹೋದರೆ ನೀವು ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ಸದೃಡರಾಗುತ್ತೀರಿ .