ಈ ಗ್ರಾಮದಲ್ಲಿ ಒಬ್ಬೇ ಒಬ್ಬ ಗಂಡಸರಿಲ್ಲ, ಆದರೂ ಗರ್ಭಿಣಿಯಾಗ್ತಾರೆ ಮಹಿಳೆಯರು! ಹೆಂಗಪ್ಪಾ?

First Published | May 6, 2020, 9:55 PM IST

ಜಗತ್ತಿನಲ್ಲಿ ಅನೇಕ ರೀತಿಯ ಬುಡಕಟ್ಟು ಜನಾಂಗಗಳಿವೆ. ಆ  ಜನರು ಅನೇಕ ವಿಲಕ್ಷಣ ಸಂಪ್ರದಾಯಗಳನ್ನು ಸಹ ಹೊಂದಿರುತ್ತಾರೆ. ಹಾಗೇ ಕಿನ್ಯಾದ ಈ ಕುಲ ಅಥವಾ ಸಮುದಾಯವೂ ಸಹ ತುಂಬಾ ವಿಚಿತ್ರವಾಗಿದೆ. ಇಲ್ಲಿ ಒಬ್ಬ ಪುರುಷನೂ ಇಲ್ಲ, ಈ ಸಮುದಾಯದಲ್ಲಿ  ಮಹಿಳೆಯರನ್ನು ಮಾತ್ರ ಇರುವುದು. ಇಡೀ ಗ್ರಾಮದಲ್ಲಿ  ಇನ್ನೂರು ಐವತ್ತು ಮಹಿಳೆಯರು ಮಾತ್ರ ಇದ್ದಾರೆ. ಪುರುಷರ ಪ್ರವೇಶ ನಿಷೇಧವೂ ಇದೆ. ಆದರೆ ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ,  ಪುರುಷರ ಪ್ರವೇಶ ನಿಷೇಧವೂ ಇದೆ ಇಲ್ಲಿ .ಆದರೂ ಈ ಗ್ರಾಮದ ಮಹಿಳೆಯರು ಗರ್ಭಿಣಿಯಾಗುತ್ತಾರೆ.  ಹೇಗೆ ಮತ್ತು ಇಡೀ ಕಥೆ ಏನು?

ಕೀನ್ಯಾದ ಉಮೋಜಾ ಗ್ರಾಮ ಬಹಳ ದಿನಗಳಿಂದ ಚರ್ಚೆಯಲ್ಲಿದೆ.
undefined
ಈ ಹಳ್ಳಿಯ ದೊಡ್ಡ ವೈಶಿಷ್ಟ್ಯವೆಂದರೆ ಒಬ್ಬ ಗಂಡಸು ಕೂಡ ಇಲ್ಲಿ ವಾಸಿಸುವುದಿಲ್ಲ.ಈ ಊರ ತುಂಬಾ ಇರುವುದು ಮಹಿಳೆಯರು ಮಾತ್ರ.
undefined
Tap to resize

ಈ ಗ್ರಾಮದ ಸ್ಥಾಪನೆಯನ್ನು 1990ರಲ್ಲಿ ಹಳ್ಳಿಯಲ್ಲಿ ವಾಸಿಸುವ 15 ಮಹಿಳೆಯರು ಸೇರಿಕೊಂಡು ಮಾಡಿದ್ದಾಗಿದೆ. ಅವರು ಬ್ರಿಟಿಷ್‌ ಸೈನಿಕರಿಂದ ರೇಪ್‌ಗೆ ಒಳಗಾದ ಮಹಿಳೆಯರಾಗಿದ್ದರು.
undefined
ಕಳೆದ 30 ವರ್ಷಗಳಿಂದ ಈ ಹಳ್ಳಿಗೆ ಪುರುಷರ ಎಂಟ್ರಿ ಬ್ಯಾನ್‌ ಮಾಡಲಾಗಿದೆ. ಗ್ರಾಮದ ಗಡಿಯಲ್ಲಿ ಮುಳ್ಳುತಂತಿಗಳಿವೆ. ಒಬ್ಬ ಗಂಡಸೂ ಸಹ ಈ ಮಿತಿಯನ್ನು ಮೀರಲು ಪ್ರಯತ್ನಿಸಿದರೆ, ಶಿಕ್ಷೆ ಗ್ಯಾರಂಟಿ .
undefined
ಈ ಗ್ರಾಮದಲ್ಲಿ ಅತ್ಯಾಚಾರ, ಬಾಲ್ಯವಿವಾಹ, ಕೌಟುಂಬಿಕ ಹಿಂಸೆ ಮತ್ತು ಸುನ್ನತಿಯಂತಹ ಎಲ್ಲಾ ಹಿಂಸಾಚಾರಗಳಿಗೆ ಗುರಿಯಾಗಿರುವ ಮಹಿಳೆಯರು ವಾಸಿಸುತ್ತಿದ್ದಾರೆ.
undefined
ಪ್ರಸ್ತುತ, ಈ ಗ್ರಾಮದಲ್ಲಿ ಸುಮಾರು ಇನ್ನೂರು ಐವತ್ತು ಮಹಿಳೆಯರು ಮತ್ತು ಸುಮಾರು ಇನ್ನೂರು ಮಕ್ಕಳಿದ್ದಾರೆ.
undefined
ಪುರುಷರು ವಾಸಿಸದೆ ಈ ಹಳ್ಳಿಯ ಮಹಿಳೆಯರು ಗರ್ಭಿಣಿಯಾಗುತ್ತಾರೆ ಎಂಬುದು ಆಶ್ಚರ್ಯದ ವಿಷಯ. ಇದಕ್ಕೆ ಉತ್ತರ ಸಿಕ್ಕಿದ್ದು ಉಮೋಜಾ ಪಕ್ಕದಲ್ಲಿರುವ ಇತರ ಹಳ್ಳಿಯ ಪುರುಷರಿಂದ.
undefined
ಮಹಿಳೆಯರು ಪುರುಷರಿಲ್ಲದೆ ಬದುಕುತ್ತಾರೆ ಎಂದು ಭಾವಿಸುತ್ತಾರೆ, ವಾಸ್ತವವೆಂದರೆ ಆ ಮಹಿಳೆಯರಲ್ಲಿ ಅನೇಕರು ತಮ್ಮ ಹಳ್ಳಿಯ ಪುರುಷರನ್ನು ಪ್ರೀತಿಸುತ್ತಾರೆ ಎಂದು ನೆರೆ ಹಳ್ಳಿಯ ಹಿರಿಯರೊಬ್ಬರು ಹೇಳಿದರು.
undefined
ಮಹಿಳೆಯರು ಪುರುಷರೊಂದಿಗಿನ ತಮ್ಮ ಸಂಬಂಧವನ್ನು ಬಹಿರಂಗವಾಗಿ ಸ್ವೀಕರಿಸುವುದಿಲ್ಲ ಆ ಕಾರಣದಿಂದ, ಯಾವ ಮಹಿಳೆ ಯಾವ ಪುರುಷನೊಂದಿಗೆ ಸಂಬಂಧವನ್ನು ರೂಪಿಸಿಕೊಂಡಿದ್ದಾಳೆಂದು ಒಬ್ಬರಿಗೂ ತಿಳಿದಿಲ್ಲ. ಗರ್ಭನಿರೋಧಕ ವಿಧಾನವಿಲ್ಲದ ಕಾರಣ, ಮಹಿಳೆಯರು ಗರ್ಭಿಣಿಯಾಗುತ್ತಾರೆ.
undefined
ಆದರೆ ಈ ಮಹಿಳೆಯರು ತಮ್ಮ ಮಕ್ಕಳನ್ನು ಮಾತ್ರ ಅವರೇ ನೋಡಿಕೊಳ್ಳುತ್ತಾರೆ. ಹೆಣ್ಣು ಮಕ್ಕಳಿದ್ದರೆ, ಅವರಿಗೆ ಶಿಕ್ಷಣ ಕೊಡಿಸಿ ತಮ್ಮ ಕಾಲುಗಳ ಮೇಲೆ ನಿಂತುಕೊಳ್ಳುವಂತೆ ಮಾಡುತ್ತಾರೆ.
undefined
ಈ ಗ್ರಾಮವು ಪುರುಷರ ಪ್ರವೇಶವನ್ನು ನಿಷೇಧಿಸುವ ಮೂಲಕ ಸಾಕಷ್ಟು ಚರ್ಚೆಯನ್ನು ಸೃಷ್ಟಿಸಿದೆ.
undefined
ಈ ಕಾರಣದಿಂದಾಗಿ, ಅನೇಕ ಪ್ರವಾಸಿಗರು ಭೇಟಿ ನೀಡುತ್ತಾರೆ.ಹಳ್ಳಿ ಪ್ರವೇಶಿಸಲು ಪ್ರವಾಸಿಗರಿಂದ ಹಣವನ್ನು ತೆಗೆದುಕೊಳ್ಳಲಾಗುತ್ತದೆ.
undefined
ಅಲ್ಲದೆ, ಗ್ರಾಮದ ಮಹಿಳೆಯರು ವಿಶೇಷ ರೀತಿಯ ಆಭರಣಗಳನ್ನು ಸಹ ತಯಾರಿಸಿ ಮಾರಾಟ ಮಾಡುವ ಮೂಲಕ ಅವರು ಹಣವನ್ನು ಗಳಿಸಿ ಮಕ್ಕಳನ್ನು ಸಾಕುತ್ತಾರೆ.
undefined
ಏನೇ ಇರಲಿ, ಈ ಹಳ್ಳಿಯ ಮಹಿಳೆಯರಿಗೆ ತಮ್ಮ ಈ ಹಳ್ಳಿಯ ಬಗ್ಗೆ ತುಂಬಾ ಪ್ರೀತಿ. ಹೊರಗಿನ ಜಗತ್ತಿನಿಂದ ಮೋಸ ಹೋದಾಗ, ಈ ಗ್ರಾಮ ಮಾತ್ರ ನಮಗೆ ಬೆಂಬಲ ನೀಡಿತು ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.
undefined

Latest Videos

click me!